Smartphones: ₹50 ಸಾವಿರದೊಳಗೆ ಜೂನ್‌ನಲ್ಲಿ ಖರೀದಿಸಬಹುದಾದ ಟಾಪ್ 5 ಮೊಬೈಲ್ಸ್ ! ಅಧ್ಭುತ ಕ್ಯಾಮೆರಾ ಅನುಭವ
ಸ್ಮಾರ್ಟ್‌ಫೋನ್ (Smartphones) ತಯಾರಿಕಾ ಕಂಪನಿಗಳು ಪ್ರತೀ ವಾರ ಒಂದಿಲ್ಲೊಂದು ಹೊಸ ಫೋನ್‌ಗಳನ್ನು ಲಾಂಚ್ ಮಾಡುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಇದೀಗ ₹50,000 ದೊಳಗಿನ ಮೊಬೈಲ್‌ಗಳೂ ಕೂಡ ಹೆಚ್ಚಾಗಿಯೇ ಮಾರುಕಟ್ಟೆಗೆ ಬರುತ್ತಿವೆ. ಆದಾಗ್ಯೂ, ಬಳಕೆದಾರರ ಅನುಕೂಲತೆಗಾಗಿ, ಅವರಿಗೆ ಸಹಾಯವಾಗಲೆಂದು ನಾವು ಹೊಸದಾಗಿ ಜೂನ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾದ Motorola Edge 50 Ultra ಮತ್ತು Google ನ Pixel 8a ನಂತಹ ಆಯ್ದ ಕೆಲವು ಆಯ್ಕೆಗಳೊಂದಿಗೆ ₹50,000 ಬೆಲೆ ಒಳಗೆ ಗ್ರಾಹಕರು ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಈ ಲೇಖನದಲ್ಲಿ ಸಂಗ್ರಹಿಸಿದ್ದೇವೆ.
2024ರ ಜೂನ್‌ನಲ್ಲಿ ₹50,000 ದೊಳಗೆ ಖರೀದಿಸಬಹುದಾದ ಉತ್ತಮ ಸ್ಮಾರ್ಟ್‌ಫೋನ್:
1-Motorola Edge 50 Ultra:
ಈ ಮೊಬೈಲ್ ಅನ್ನು ಭಾರತದಲ್ಲಿ ₹59,999 ಬೆಲೆಗೆ ಬಿಡುಗಡೆ ಮಾಡಲಾಗಿದೆ, ಹೊಸದಾಗಿ ಬಿಡುಗಡೆ ಮಾಡಿರುವ ಹಿನ್ನೆಲೆ ಆರಂಭಿಕ ರಿಯಾಯಿತಿ ನೀಡಲು ಸಂಸ್ಥೆ ನಿರ್ಧರಿಸಿದೆ. ಈ ಹಿನ್ನೆಲೆ ಗ್ರಾಹಕರು ₹49,999 ಕ್ಕೆ ಖರೀದಿಸಬಹುದಾಗಿದೆ. ಇದು ಸೀಮಿತ ಅವಧಿಯ ಕೊಡುಗೆಯ ಭಾಗವಾಗಿ ಬೆಲೆಯ ಮೇಲೆ ₹5,000 ಫ್ಲಾಟ್ ರಿಯಾಯಿತಿ ಹಾಗೂ ICICI ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಸಿದರೆ ₹5,000 ಬ್ಯಾಂಕ್ ರಿಯಾಯಿತಿ ಪಡೆಯಬಹುದಾಗಿದೆ.

ಫಿಚರ್ಸ್: ಇದು 6.7 ಇಂಚಿನ ಫುಲ್ HD+ 10 ಬಿಟ್ OLED ಪ್ಯಾನೆಲ್,144Hz ರಿಫ್ರೆಶ್ ರೇಟ್, 2500 nits ಪೀಕ್ ಬ್ರೈಟ್‌ನೆಸ್ ಮತ್ತು ಮುಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಹೊಂದಿದೆ. Qualcomm Snapdragon 8s Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಎಲ್ಲಾ ಗ್ರಾಫಿಕ್ಸ್ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸಲು Adreno 735 GPU ನೊಂದಿಗೆ ಜೋಡಿಸಲಾಗಿದೆ.
ಕ್ಯಾಮರಾಕ್ಕಾಗಿ ಇದು ಟ್ರಿಪಲ್ ಕ್ಯಾಮೆರಾ ಸೆನ್ಸಾರ್ ಹೊಂದಿದೆ. ಇದರಲ್ಲಿ OIS ಜೊತೆಗೆ 50MP ಪ್ರಾಥಮಿಕ ಶೂಟರ್, 50MP ಅಲ್ಟ್ರಾ ವೈಡ್-ಆಂಗಲ್ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 64MP ಟೆಲಿಫೋಟೋ ಲೆನ್ಸ್ ಸೇರಿವೆ. ಸೆಲ್ಫಿಗಾಗಿ ಮತ್ತು ವೀಡಿಯೊ ಕರೆಗಳಿಗಾಗಿ 50MP ಮುಂಭಾಗದ ಶೂಟರ್ ಕೂಡ ಇದೆ.
2-Google Pixel 8a: ಈ ಮೊಬೈಲ್‌ನ 8GB RAM/128GB ಸ್ಟೋರೇಜ್ ವೇರಿಯಂಟ್ ₹52,999 ಬೆಲೆಯಲ್ಲಿ ಲಭ್ಯವಿದೆ. ಅದಾಗ್ಯೂ ₹ 3,000 ಬ್ಯಾಂಕ್ ರಿಯಾಯಿತಿಯೊಂದಿಗೆ ₹ 50,000 ಕ್ಕಿಂತ ಕಡಿಮೆಗೆ ದೊರೆಯಲಿದೆ.
ಫೀಚರ್ಸ್: ಈ ಮೊಬೈಲ್ 120Hz ರಿಫ್ರೆಶ್ ರೇಟ್‌ನೊಂದಿಗೆ 6.1 ಇಂಚಿನ ಫುಲ್ HD+ OLED HDR ಡಿಸ್‌ಪ್ಲೇ, 2,000 ನಿಟ್ಸ್‌ಗಳ ಗರಿಷ್ಠ ಬ್ರೈಟ್‌ನೆಸ್ ಮತ್ತು ಮುಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಇದು ಗೂಗಲ್‌ನ ಸ್ವಂತ Tensor G3 ಚಿಪ್‌ಸೆಟ್‌ನಲ್ಲಿ 8GB LPDDR5X RAM ಮತ್ತು 256 GB ವರೆಗಿನ UFS 3.1 ಸಂಗ್ರಹಣೆ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.
ಕ್ಯಾಮರಾಕ್ಕಾಗಿ ಇದು ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ, OIS ಜೊತೆಗೆ 64MP ಪ್ರಾಥಮಿಕ ಸೆನ್ಸಾರ್ ಮತ್ತು 13MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಕ್ಯಾಮೆರಾ ಹೊಂದಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 13MP ಶೂಟರ್ ಹೊಂದಿದೆ. ಹಿಂದಿನ ಕ್ಯಾಮೆರಾಗಳಿಂದ 4K 60fps ವೀಡಿಯೊಗಳನ್ನು ಮತ್ತು ಸೆಲ್ಫಿ ಶೂಟರ್‌ನಿಂದ 4k 30fps ವರೆಗೆ ಚಿತ್ರೀಕರಣ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
3-OnePlus 12R: ಈ ಸ್ಮಾರ್ಟ್‌ಫೋನ್ LTPO 4.0 ತಂತ್ರಜ್ಞಾನದ ಬೆಂಬಲದೊಂದಿಗೆ 6.78 ಇಂಚಿನ AMOLED ProXDR ಡಿಸ್‌ಪ್ಲೇ ಹೊಂದಿದೆ. ಎಲ್ಲಾ ಗ್ರಾಫಿಕ್ಸ್ ತೀವ್ರ ಕಾರ್ಯಗಳಿಗಾಗಿ Adreno 740 GPU ನೊಂದಿಗೆ ಜೋಡಿಸಲಾದ Qualcomm Snapdragon 8 Gen 2 ಚಿಪ್‌ಸೆಟ್‌ನಿಂದ ಸ್ಮಾರ್ಟ್‌ಫೋನ್ ಚಾಲಿತವಾಗಿದೆ.
ಇದು 16GB LPDDR5X RAM ಮತ್ತು 256GB UFS 3.1 ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಪ್ರೀಮಿಯಂ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ 5,500mAh ಬ್ಯಾಟರಿಯಿಂದ ಚಾಲಿತವಾಗಿದ್ದು, 100W SUPERVOOC ಚಾರ್ಜರ್ ಮೂಲಕ ವೇಗವಾಗಿ ಚಾರ್ಜ್ ಮಾಡಬಹುದಾಗಿದೆ.
ಕ್ಯಾಮೆರಾಕ್ಕಾಗಿ ಈ ಫೋನ್ OIS ಮತ್ತು EIS ಗೆ ಬೆಂಬಲದೊಂದಿಗೆ 50MP Sony IMX890 ಪ್ರಾಥಮಿಕ ಸೆನ್ಸಾರ್ ಕ್ಯಾಮರಾ, 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16MP ಮುಂಭಾಗದ ಕ್ಯಾಮೆರಾ ಹೊಂದಿದೆ.
4-Xiaomi 14 CIVI: ಇದು 1.5K ರೆಸಲ್ಯೂಶನ್‌ನೊಂದಿಗೆ 6.55 ಇಂಚಿನ ಕ್ವಾಡ್-ಕರ್ವ್ಡ್ AMOLED ಡಿಸ್‌ಪ್ಲೇ ಹೊಂದಿದೆ, 120Hz ರಿಫ್ರೆಶ್ ರೇಟ್, HDR10+ ಮತ್ತು ಸುಂದರ ದೃಶ್ಯದ ಅನುಭವಕ್ಕಾಗಿ ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತದೆ. ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ನೊಂದಿಗೆ ಬಾಳಿಕೆ ಖಾತ್ರಿಪಡಿಸಲಾಗಿದೆ, ದೈಹಿಕ ಹಾನಿಯ ವಿರುದ್ಧ ದೃಢವಾದ ರಕ್ಷಣೆ ನೀಡುತ್ತದೆ.
ಫೀಚರ್ಸ್: HOOD ಅಡಿಯಲ್ಲಿ ಈ ಸ್ಮಾರ್ಟ್‌ಫೋನ್ Qualcomm Snapdragon 8s Gen 3 SoC ಅನ್ನು ಹೊಂದಿದೆ. ಬಳಕೆದಾರರು 12GB RAM ಮತ್ತು 512GB ವರೆಗೆ ನೀಡುವ ಕಾನ್ಫಿಗರೇಶನ್‌ಗಳ ನಡುವೆ ಆಯ್ಕೆ ಮಾಡಬಹುದು.
ಛಾಯಾಗ್ರಹಣಕ್ಕಾಗಿ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಲೈಕಾದೊಂದಿಗೆ ನೀಡಲಾಗಿದೆ. ಇದು 25mm ಸಿನಿಮೀಯ HDR ನೊಂದಿಗೆ 50MP ಲೈಕಾ ಸಮ್ಮಿಲಕ್ಸ್ ಮುಖ್ಯ ಕ್ಯಾಮೆರಾ, 2x ಆಪ್ಟಿಕಲ್ ಜೂಮ್‌ನೊಂದಿಗೆ 50MP ಲೈಕಾ ಪೋಟ್ರೇಟ್ ಟೆಲಿಫೋಟೋ ಲೆನ್ಸ್ ಮತ್ತು 12MP ಲೈಕಾ ಅಲ್ಟ್ರಾ ವೈಡ್ ಲೆನ್ಸ್ ಅನ್ನು ಒಳಗೊಂಡಿದೆ. ಸೆಲ್ಫಿಗಾಗಿ 32MP ಡ್ಯುಯಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ
5-iQOO Neo 9 Pro: ಇದು 6.78 ಇಂಚಿನ 1.5K AMOLED ಪ್ಯಾನೆಲ್ ಅನ್ನು 120Hz ರಿಫ್ರೆಶ್ ರೇಟ್ ಮತ್ತು 3,000 nits ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಗೇಮಿಂಗಾಗಿ 144Hz ರಿಫ್ರೆಶ್ ರೇಟ್ ಹೊಂದಿದೆ. ಇದು Qualcomm Snapdragon 8+ Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು Adreno 740 GPU ಸಹ ಹೊಂದಿದೆ. ಈ ಮೊಬೈಲ್ 12GB RAM ಮತ್ತು 256GB UFS 4.0 ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತದೆ.
ಕ್ಯಾಮೆರಾಕ್ಕಾಗಿ OIS ಗೆ ಬೆಂಬಲದೊಂದಿಗೆ 50MP Sony IMX 920 ಸೆನ್ಸಾರ್, 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌ನೊಂದಿಗೆ ಹಿಂಭಾಗದಲ್ಲಿ ಡ್ಯುಯಲ್ ಸೆನ್ಸಾರ್ ಕ್ಯಾಮರಾ ಹೊಂದಿದೆ. ಸೆಲ್ಫಿಗಾಗಿ 16MP ಮುಂಭಾಗದ ಶೂಟರ್ ಕೂಡ ಇದೆ.


Click it and Unblock the Notifications








