ಪಾಸ್‌ವರ್ಡ್‌ ಬಳಕೆಯನ್ನು ಸ್ಟಾಪ್‌ ಮಾಡಲು ಮುಂದಾದ ಮೈಕ್ರೋಸಾಫ್ಟ್‌!

|

ಜನಪ್ರಿಯ ಸಾಫ್ಟ್‌ವೇರ್‌ ದೈತ್ಯ ಮೈಕ್ರೋಸಾಫ್ಟ್ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಲು ಮುಂದಾಗಿದೆ. ಈ ಫೀಚರ್ಸ್ ಇನ್ಮುಂದೆ ಬಳಕೆದಾರರು ತಮ್ಮ ಮೈಕ್ರೋಸಾಫ್ಟ್‌ ಅಕೌಂಟ್‌ ಅನ್ನು ಪಾಸ್‌ವರ್ಡ್‌ ಇಲ್ಲದೆ ಬಳಸುವುದಕ್ಕೆ ಅವಕಾಶ ನೀಡಲಿದೆ. ಮೈಕ್ರೋಸಾಫ್ಟ್‌ನಲ್ಲಿ ಪಾಸ್‌ವರ್ಡ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ಮುಂದಾಗಿದೆ. ಇದಕ್ಕೆ ಬದಲಾಗಿ ಮೈಕ್ರೋಸಾಫ್ಟ್ ಅಥೆಂಟಿಕೇಟರ್ ಆಪ್ ಅಥವಾ ವಿಂಡೋಸ್ ಹಲೋ, ಸೆಕ್ಯುರಿಟಿ ಕೀ ಅಥವಾ ನಿಮ್ಮ ಫೋನ್‌ಗೆ ಕಳುಹಿಸಲಾದ ವೆರಿಫಿಕೇಶನ್ ಕೋಡ್‌ ಅನ್ನು ಬಳಸಿಕೊಂಡು ಲಾಗ್ ಇನ್ ಮಾಡುವ ಅವಕಾಶವನ್ನು ನೀಡಲು ಮುಂದಾಗಿದೆ. ಈ ಹೊಸ ಫೀಚರ್ಸ್‌ ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆ.

ಮೈಕ್ರೋಸಾಫ್ಟ್‌

ಹೌದು, ಮೈಕ್ರೋಸಾಫ್ಟ್‌ ಸಂಸ್ಥೆ ಪಾಸ್‌ವರ್ಡ್‌ ಬಳಸದೆ ನಿಮ್ಮ ಅಕೌಂಟ್‌ ಅನ್ನು ತೆರೆಯುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಇದರಿಂದ ಪಾಸ್‌ವರ್ಡ್‌ ಮರೆತುಹೋದವರು ಎದುರಿಸುತ್ತಿದ್ದ ಕಿರಿಕಿರಿಯನ್ನು ತಪ್ಪಿಸಬಹುದಾಗಿದೆ. ಇದೇ ಕಾರಣಕ್ಕೆ ಮೈಕ್ರೊಸಾಫ್ಟ್‌ ಪಾಸ್‌ವರ್ಡ್‌ ಬಳಕೆಯ ಬಗ್ಗೆ ಸಾಕಷ್ಟು ಬೇಸತ್ತಿದ್ದು, ಪಾಸ್‌ವರ್ಡ್‌ ಇಲ್ಲದೆ ಲಾಗಿನ್‌ ಮಾಡುವ ಅವಕಾಶ ನೀಡಲಿದೆ. ಆದರೆ ಪಾಸ್‌ವರ್ಡ್‌ ಬದಲಿಗೆ ನಿಮ್ಮ ಫೋನ್‌ಗೆ ಕಳುಹಿಸುವ ವೆರಿಫಿಕೇಶನ್‌ ಕೋಡ್‌ ಬಳಸಬೇಕಾಗಬಹುದು. ಹಾಗಾದ್ರೆ ಮೈಕ್ರೋಸಾಫ್ಟ್‌ನ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪಾಸ್‌ವರ್ಡ್‌

ಇತ್ತೀಚಿನ ದಿನಗಳಲ್ಲಿ ಸೈಬರ್‌ ದಾಳಿಗಳನ್ನು ತಪ್ಪಿಸಲು ಪಾಸ್‌ವರ್ಡ್‌ ಪ್ರೊಟೆಕ್ಷನ್‌ ಅತ್ಯಗತ್ಯ. ಆದರೆ ಮೈಕ್ರೋಸಾಫ್ಟ್‌ ಪಾಸ್‌ವರ್ಡ್‌ಗಳ ಬಳಕೆಯನ್ನೆ ಕಂಪ್ಲೀಟ್‌ ಕ್ಲೋಸ್‌ ಮಾಡಲು ಮುಂದಾಗಿದೆ. ಪ್ರತಿಯೊಂದಕ್ಕೂ ಪಾಸ್‌ವರ್ಡ್‌ ಬಳಸುವ ಬಳಕೆದಾರರು ಕೆಲವೊಮ್ಮೆ ಪಾಸ್‌ವರ್ಡ್‌ಗಳನ್ನು ಮರೆತು ಸಾಕಷ್ಟು ಕಿರಿಕಿರಿ ಅನುಭವಿಸುತ್ತಾರೆ. ಅಗತ್ಯ ಸಮಯದಲ್ಲಿ ಪಾಸ್‌ವರ್ಡ್‌ ನೆನಪಾಗದೇ ಕಷ್ಟು ಎದುರಿಸಿದ್ದಾರೆ. ಇಂತಹ ಕಾರಣಗಳಿಂದ ಬಳಕೆದಾರರು ತಮ್ಮ ಖಾತೆಗಳನ್ನು ಬ್ಲಾಕ್‌ ಮಾಡುತ್ತಿದ್ದಾರೆ.

ಪಾಸ್‌ವರ್ಡ್

ಇದರ ನಡುವೆ ದುರ್ಬಲ ಪಾಸ್‌ವರ್ಡ್‌ಗಳು ಸುಲಭವಾಗಿ ಹ್ಯಾಕರ್‌ಗಳ ಪಾಲಿಗೆ ಸಿಗುತ್ತಿವೆ. ಇದರಿಂದ ಗ್ರಾಹಕ ಖಾತೆಗಳ ಮೇಲೆ ಹ್ಯಾಕರ್‌ಗಳು ದಾಳಿ ಮಾಡುತ್ತಿದ್ದಾರೆ. ಅದರಲ್ಲೂ ಪ್ರತಿ ಸೆಕೆಂಡಿಗೆ 579 ಪಾಸ್‌ವರ್ಡ್ ದಾಳಿಗಳು ನಡೆಯುತ್ತಿವೆ. ಇದು ಪ್ರತಿ ವರ್ಷ 18 ಬಿಲಿಯನ್, ಪಾಸ್‌ವರ್ಡ್‌ ದಾಳಿಗಳು ನಡೆಯುತ್ತಿವೆ. ಅದರಲ್ಲೂ ಮೈಕ್ರೋಸಾಫ್ಟ್ ಸಂಸ್ಥೆ ಇತ್ತೀಚಿಗೆ ನಿಯೋಜಿಸಿದ ಹೊಸ ಯುಗೊವ್ ಸಮೀಕ್ಷೆಯಲ್ಲಿ ಶೇಕಡಾ 30 ರಷ್ಟು ಜನರು ತಮ್ಮ ಪಾಸ್‌ವರ್ಡ್ ಅನ್ನು ನೆನಪಿಟ್ಟುಕೊಳ್ಳದ ಕಾರಣ ಖಾತೆ ಅಥವಾ ಸೇವೆಯನ್ನು ಬಳಸುವುದನ್ನು ನಿಲ್ಲಿಸಿದ್ದಾರೆ. ಅಲ್ಲದೆ ಪಾಸ್‌ವರ್ಡ್ ರಿಸೆಟ್‌ ಮಾಡುವ ಗೋಜಿಗೆ ಹೋಗದೆ ಅವರ ಅಕೌಂಟ್‌ ಅನ್ನೇ ಕ್ಲೋಸ್‌ ಮಾಡಿದ್ದಾರೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

ಪಾಸ್‌ವರ್ಡ್

ಪಾಸ್‌ವರ್ಡ್ ಇಲ್ಲದೆ ಮೈಕ್ರೋಸಾಫ್ಟ್ ಖಾತೆ ಬಳಸುವುದು ಹೇಗೆ?
ನಿಮ್ಮ ಪಾಸ್‌ವರ್ಡ್ ಡ್ರಾಪ್ ಮಾಡುವುದಕ್ಕೆ ಮೈಕ್ರೋಸಾಫ್ಟ್‌ ಅವಕಾಶ ನೀಡಲು ಮುಂದಾಗಿದೆ ನಿಜ. ಆದರೆ ಸುಲಭವಾಗಿ ನಿಮ್ಮ ಖಾತೆಯನ್ನು ನೀವು ಒಪನ್‌ ಮಾಡುವುದಕ್ಕೆ ಅವಕಾಶವಿಲ್ಲ. ಬದಲಾಗಿ ಮೈಕ್ರೋಸಾಫ್ಟ್ ಅಥೆಂಟಿಕೇಟರ್ ಆಪ್ ಅನ್ನು ಬಳಸುವ ಮೂಲಕ ನಿಮ್ಮ ಖಾತೆಯನ್ನು ತೆರೆಯಬಹುದಾಗಿದೆ. ಇದಕ್ಕಾಗಿ ಬಳಕೆದಾರರು ಮೊದಲು ಮೈಕ್ರೋಸಾಫ್ಟ್ ಅಥೆಂಟಿಕೇಟರ್ ಆಪ್ ಅನ್ನು ಇನ್‌ಸ್ಟಾಲ್ ಮಾಡಬೇಕಾಗುತ್ತದೆ. ಮುಂದೆ, ನಿಮ್ಮ ಮೈಕ್ರೋಸಾಫ್ಟ್ ಖಾತೆಗೆ ಭೇಟಿ ನೀಡಿ, ಸೈನ್ ಇನ್ ಮಾಡಿ ಮತ್ತು ಸುಧಾರಿತ ಭದ್ರತಾ ಆಯ್ಕೆಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಹೆಚ್ಚುವರಿ ಭದ್ರತಾ ಆಯ್ಕೆಗಳ ಅಡಿಯಲ್ಲಿ, ನೀವು ಪಾಸ್‌ವರ್ಡ್ ರಹಿತ ಅಕೌಂಟ್‌ ಕಾಣಲಿದೆ. ಇದರಲ್ಲಿ 'ಆನ್' ಅನ್ನು ಆಯ್ಕೆ ಮಾಡಿದರೆ ಸಾಕು ನಿಮ್ಮ ಅಕೌಂಟ್‌ ಪಸ್‌ವರ್ಡ್‌ ಇಲ್ಲದೆ ತೆರೆಯಲು ಅವಕಾಶ ನೀಡಲಿದೆ. ನೀವು ಎಂದಾದರೂ ಪಾಸ್‌ವರ್ಡ್‌ ಅನ್ನು ಮತ್ತೆ ಸೆಟ್‌ ಮಾಡಲು ಬಯಸಿದರೆ ಮತ್ತೊಮ್ಮೆ ಪಾಸ್‌ವರ್ಡ್ ಸೇರಿಸಲು ನಿಮ್ಮ ಸೆಟ್ಟಿಂಗ್‌ಗಳ ಈ ವಿಭಾಗಕ್ಕೆ ನೀವು ಭೇಟಿ ನೀಡಬಹುದು.

Best Mobiles in India

English summary
Microsoft is adding the ability to log into your account without a password. Here's how it will work.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X