4K ರೆಸಲ್ಯೂಶನ್‌ ಹೊಂದಿರುವ ಐದು ಅತ್ಯುತ್ತಮ ಸ್ಮಾರ್ಟ್‌ಟಿವಿಗಳು!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಟಿವಿ ಮಾರುಕಟ್ಟೆ ಸಾಕಷ್ಟು ಕಲರ್‌ಫುಲ್‌ ಆಗಿದೆ. ಥೀಯೆಟರ್‌ ಫೀಲ್‌ ಕೊಡುವ ಬಿಗ್‌ಸ್ಕ್ರೀನ್‌ ಮಾದರಿಯ ಸ್ಮಾರ್ಟ್‌ಟಿವಿಗಳು ಕೂಡ ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅತ್ಯುತ್ತಮ ಸ್ಕ್ರೀನ್‌ ರೆಸಲ್ಯೂಶನ್‌, ಸೌಂಡ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಟಿವಿಗಳು ಗ್ರಾಹಕರನ್ನ ಇಂದು ಸೆಳೆಯುತ್ತಿವೆ. ಸದ್ಯ ಇದೀಗ ಟೆಕ್‌ ಮಾರುಕಟ್ಟೆಯಲ್ಲಿ 4k ರೆಸಲ್ಯೂಶನ್‌ ಹೊಂದಿರುವ ಬಿಗ್‌ಸ್ಕ್ರೀನ್‌ ಸ್ಮಾರ್ಟ್‌ಟಿವಿಗಳು ಸಖತ್‌ ಸೌಂಡ್‌ ಮಾಡುತ್ತಿವೆ.

ಹೌದು

ಹೌದು, ಸ್ಮಾರ್ಟ್‌ಟಿವಿ ವಲಯದಲ್ಲಿ 65, 55,ಇಂಚಿನ 4K ರೆಸಲ್ಯೂಶನ್‌ ಹೊಂದಿರುವ ಸ್ಮಾರ್ಟ್‌ಟಿವಿಗಳು ಸಾಕಷ್ಟು ಸದ್ದಯ ಮಾಡುತ್ತಿವೆ. ಡಾಲ್ಬಿ ವಿಷನ್‌ ಆಂಡ್‌ ಆಟ್ಮೋಸ್‌ ಅನ್ನು ಹೊಂದಿರುವ ಸ್ಮಾರ್ಟ್‌ಟಿವಿಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಇನ್ನು ಈಗಾಗ್ಲೆ ಹಲವು ಕಂಪೆನಿಗಳ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ 65ಇಂಚಿನ 4K ರೆಸಲ್ಯೂಶನ್‌ ಹೊಂದಿರುವ ಅತ್ಯುತ್ತಮ ಸ್ಮಾರ್ಟ್‌ಟಿವಿಗಳು ಯಾವುವು ಅನ್ನೊದರ ಮಾಹಿತಿ ಈ ಲೇಖನದಲ್ಲಿದೆ ಓದಿ.

ಎಲ್‌ಜಿ C9 OLED ಸ್ಮಾರ್ಟ್‌ಟಿವಿ

ಎಲ್‌ಜಿ C9 OLED ಸ್ಮಾರ್ಟ್‌ಟಿವಿ

ಎಲ್‌ಜಿ ಕಂಪೆನಿಯ ಎಲ್‌ಜಿ C9 OLED ಸ್ಮಾರ್ಟ್‌ಟಿವಿ 3840 x 2160 ರೆಸಲ್ಯೂಶನ್‌ ಹೊಂದಿರುವ 65 ಇಂಚಿನ ಸ್ಕ್ರೀನ್‌ ಅನ್ನು ಹೊಂದಿದೆ. ಇದು OLED ಪ್ಯಾನೆಲ್‌ ಟೆಕ್ನಾಲಜಿಯನ್ನ ಹೊಂದಿದ್ದು, ಫ್ರೀವಿವ್ಯೂ ಹೆಚ್‌ಡಿ ಟ್ಯೂನರ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ a9 Gen 2 ಪ್ರೊಸೆಸರ್‌ ಅನ್ನು ಹೊಂದಿದ್ದು, webOS ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಉತ್ತಮ ಬ್ರೈಟ್‌ನೆಶ್‌ ಅನ್ನು ಹೊಂದಿದ್ದು, ಸಿನಿಮಾ ವೀಕ್ಷಣೆಯಲ್ಲಿ ಥೀಯೆಟರ್‌ ಅನುಭವವನ್ನು ನೀಡಲಿದೆ. ಇನ್ನು ಇದರಲ್ಲಿ 4.2 ಚಾನೆಲ್‌ ಸ್ಪೀಕರ್‌ ಅನ್ನು ಹೊಂದಿದ್ದು, ಉತ್ತಮ ಸೌಂಡ್‌ ಸಿಸ್ಟಂ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿಯಲ್ಲಿ ಡಾಲ್ಬಿ ವಿಷನ್‌ ಮತ್ತು ಆಟ್ಮೋಸ್‌ ಅನ್ನು ಒಳಗೊಂಡಿದೆ. ಇನ್ನು ಇದರ ಬೆಲೆ 2,29,110 ರೂ ಆಗಿದೆ.

ಫಿಲಿಪ್ಸ್‌ OLED 804 ಸ್ಮಾರ್ಟ್‌ಟಿವಿ

ಫಿಲಿಪ್ಸ್‌ OLED 804 ಸ್ಮಾರ್ಟ್‌ಟಿವಿ

ಫಿಲಿಪ್ಸ್‌ ಕಂಪೆನಿಯ ಈ ಸ್ಮಾರ್ಟ್‌ಟಿವಿ ಭಿಫೈ(beefy) P5 ಪಿಕ್ಚರ್‌ ಪ್ರೊಸೆಸರ್‌ ಅನ್ನು ಹೊಂದಿದ್ದು, ರಿಯಲ್‌ ಫೋರ್ಸ್‌ ಒಎಲ್‌ಇಡಿ ಇಮೇಜ್‌ ಮಾದರಿಯನ್ನ ಹೊಂದಿದೆ. ಇದರಲ್ಲಿ ಉತ್ತಮವಾದ ಬ್ರೈಟ್‌ನೆಶ್‌ ಒಳಗೊಂಡ ಸ್ಪೆಕ್ಟಕೂಲರ್‌ ಬಣ್ಣಗಳನ್ನ ನೀಡಲಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಡಾಲ್ಬಿ ವಿಷನ್‌ ಮತ್ತು HDR10+ ಅನ್ನು ಬೆಂಬಲಿಸಲಿದ್ದು, ಇದು ಡೈನಾಮಿಕ್‌ HDR ಫರ್ಮ್ಯಾಟ್‌ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ 3840 x 2160 ಸ್ಕ್ರಿನರ್‌ ರೆಸಲ್ಯೂಶನ್‌ ಹೊಂದಿರುವ 65 ಇಂಚಿನ ಸ್ಕ್ರೀನ್‌ ಹೊಂದಿದೆ. ಜೊತೆಗೆ ಇದರಲ್ಲಿ ನಾಲ್ಕು ಕಡೆ ಆಂಬಿಲೈಟ್‌ ಹಾಗೂ ವಿಲ್ಕಿನ್ಸ್‌ಸೌಂಡ್‌ಬಾರ್‌ ಅನ್ನು ಸಹ ನೀಡಲಾಗಿದೆ. ಇನ್ನು ಇದರ ಬೆಲೆ £4,999 (ಅಂದಾಜು 4,74,869 ರೂ.) ಆಗಿದೆ.

ಸ್ಯಾಮ್‌ಸಂಗ್‌ Q90 QLED TV

ಸ್ಯಾಮ್‌ಸಂಗ್‌ Q90 QLED TV

ಈ ಸ್ಮಾರ್ಟ್‌ ಟಿವಿ 3840 x 2160 ರೆಸಲ್ಯೂಶನ್‌ ಹೊಂದಿರುವ 65ಇಂಚಿನ ಸ್ಕ್ರೀನ್‌ ಅನ್ನು ಹೊಂದಿದೆ. ಅಲ್ಲದೆ QLED ಪ್ಯಾನೆಲ್‌ ಟೆಕ್ನಾಲಜಿಯನ್ನ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ ಟ್ರೂಲಿ ಡೈನಾಮಿಕ್‌ ಪಿಕ್ಚರ್‌ ಪ್ರೊಸೆಸರ್‌ ಅನ್ನು ಹೊಂದಿದ್ದು, 1,600 ನಿಟ್ಸ್‌ ಬ್ರೈಟ್‌ನೆಶ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಬೆಜೆಲ್‌ ಲೆಸ್‌ ಡಿಸೈನ್‌ ಹೊಂದಿದ್ದು, ಅಲ್ಟ್ರಾ ವಿವ್ಯೂ ಆಂಗಲ್‌ ಟೆಕ್ನಾಲಜಿಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಸೂಪರ್‌ ಫಿಕ್ಚರ್‌ ಕ್ವಾಲಿಟಿ, ಹೊಂದಿದೆ. ಆದರೆ ಇದರಲ್ಲಿ ಡಾಲ್ಬಿ ವಿಷನ್‌ ಸಪೋರ್ಟ್‌ ಅನ್ನು ನೀಡಲಾಗಿಲ್ಲ. ಇನ್ನು ಈ ಸ್ಮಾರ್ಟ್‌ಟಿವಿ ಬೆಲೆ ಅಮೆಜಾನ್‌ ತಾಣದಲ್ಲಿ 3,30,501 ರೂ ಆಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ 3,44,800 ರೂ, ಗಳಿಗೆ ಖರೀದಿಸಬಹುದಾಗಿದೆ.

ಸೋನಿ A9G/AG9 OLED

ಸೋನಿ A9G/AG9 OLED

ಸೋನಿ ಕಂಪೆನಿಯ ಮಾಸ್ಟರ್‌ ಆವೃತ್ತಿಯ ಅತ್ಯುತ್ತಮ ಸ್ಮಾರ್ಟ್‌ಟಿವಿ ಇದಾಗಿದ್ದು, ಇದು 3840 x 2160 ರೆಸಲ್ಯೂಶನ್‌ ಹೊಂದಿರುವ 55 ಇಂಚಿನ ಸ್ಕ್ರೀನ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ OLED ಪ್ಯಾನೆಲ್‌ ಟೆಕ್ನಾಲಜಿಯನ್ನ ಒಳಗೊಂಡಿದೆ. ಇದರಲ್ಲಿ ಅಕೌಸ್ಟಿಕ್ ಸೋರ್ಸ್‌ ಪ್ಲಸ್‌ ಆಡಿಯೋ ಫಿಚರ್ಸ್ ಅನ್ನು ನೀಡಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿಯನ್ನ ಸಿನಿಮ್ಯಾಟಿಕ್‌ ಅನುಭವ ನೀಡುವ ಮಾದರಿಯಲ್ಲಿ ರಚನೆ ಮಾಡಲಾಗಿದೆ. ಅಲ್ಲದೆ ಉತ್ತಮ ಬ್ರೈಟ್‌ನೆಶ್‌ ರೇಟಿಂಗ್‌ ಅನ್ನು ಸಹ ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿಯ ಬೆಲೆ 2,69,900 ರೂ ಆಗಿದೆ.

ಎಲ್‌ಜಿ B9 OLED TV

ಎಲ್‌ಜಿ B9 OLED TV

ಇದು ಎಲ್‌ಜಿ ಕಂಪೆನಿ B9 ಸರಣಿಯ OLED ಪ್ಯಾನೆಲ್‌ ಟೆಕ್ನಾಲಜಿ ಹೊಂದಿರುವ ಸ್ಮಾರ್ಟ್‌ಟಿವಿ ಆಗಿದೆ. ಈ ಸ್ಮಾರ್ಟ್‌ಟಿವಿ ಕೂಡ 3840 x 2160 ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿರುವ 65 ಇಂಚಿನ ಸ್ಕ್ರೀನ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿಯಲ್ಲಿ ಡೈನಾಮಿಕ್‌ ಇಮೇಜ್‌ ಇನ್‌ಫಿನಿಟಿ ಕಂಟ್ರ್ಯಾಸ್ಟ್‌ ಮತ್ತು ವೈಬ್ರೆಂಟ್‌ ಕಲರ್‌ಗಳನ್ನ ಅಳವಡಿಸಲಾಗಿದೆ. ಅಲ್ಲದೆ ಇದರಲ್ಲಿ ಉತ್ತಮ ಸೌಂಡ್‌ ಸಿಸ್ಟಂ ಅನ್ನು ಅಳವಡಿಸಲಾಗಿದೆ, ಜೊತೆಗೆ ಟಿವಿ ವೀಕ್ಷಣೆಯಲ್ಲಿ ಉತ್ತಮ ಅನುಭವವನ್ನು ನಿಡಲಿದೆ. ಇದರ ಬೆಲೆ 1,29,999 ರೂ, ಆಗಿದೆ.

Best Mobiles in India

English summary
Best 65-inch 4K TVs 2020: the best big screen TVs for any budget.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X