ಸ್ಮಾರ್ಟ್‌ಫೋನ್‌ಗಳಿಗೆ ಸರಿಹೊಂದುವ ಅತ್ಯುತ್ತಮ ಕ್ಯಾಮೆರಾ ಲೆನ್ಸ್‌ಗಳು!

|

ಇತ್ತೀಚಿನ ದಿನಗಳಲ್ಲಿ ಫೋಟೊ ಕ್ಲಿಕ್ಕಿಸುವ ಹವ್ಯಾಸ ಎಲ್ಲರಲ್ಲೂ ಕಂಡು ಬರುತ್ತಿದೆ. ಪ್ರವಾಸ, ಪ್ರಯಾಣ, ಹಬ್ಬ ಹರಿದಿನ ಮುಂತಾದ ಸಂತೋಷದಾಯಕ ಕ್ಷಣಗಳನ್ನ ಇನ್ನಷ್ಟು ಖುಷಿಯಾಗಿಸಲು, ಕಲರ್‌ಫುಲ್‌ ಆಗಿ ನೆನಪುಳಿಯಲು ಆ ಕ್ಷಣದ ಫೋಟೊ ಸೆರೆಹಿಡಿಯುವುದಕ್ಕೆ ಎಲ್ಲರೂ ಪ್ರಯತ್ನಿಸುತ್ತಾರೆ. ಹೊಸ ಮಾದರಿಯಲ್ಲಿ ಇಮೇಜ್‌ಗಳನ್ನ ಸ್ನ್ಯಾಪ್‌ ಮಾಡಲು ಬಯಸುತ್ತೇವೆ. ಅಷ್ಟೇ ಅಲ್ಲ ಅವುಗಳನ್ನ ಸ್ನೇಹಿತರ ಜೊತೆ ಹಂಚಿಕೊಂಡು ಆನಂದವನ್ನ ಹಂಚಿಕೊಳ್ಳುತ್ತೇವೆ. ಇದು ಎಲ್ಲರಿಗೂ ಅನುಕೂಲರವಾಗಿದೆ. ಆದರೆ ಬಜೆಟ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಕ್ಯಾಮೆರಾಗಳು ನೀವು ಕ್ಲಿಕ್‌ ಮಾಡಲು ಬಯಸುವ ವಿವಿಧ ರೀತಿಯ ಫೋಟೋಗಳನ್ನ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಆದರೆ ಇದಕ್ಕೆ ಪರಿಹಾರವಂತೂ ಇದೆ.

ಹೌದು

ಹೌದು, ಬಜೆಟ್‌ ಬೆಲೆ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಕ್ಯಾಮೆರಾಗಳು ನೀವು ಕ್ಲಿಕ್ ಮಾಡಲು ಬಯಸುವ ವಿವಿಧ ರೀತಿಯ ಫೋಟೋಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಆದರೆ ಇದಕ್ಕೆ ಉತ್ತಮ ಪರಿಹಾರವಿದೆ. ಈ ಪರಿಹಾರದ ಮೂಲಕ ಸಾರ್ವಕಾಲಿಕ ಇನ್‌ಸ್ಟಾ-ರೆಡಿ ಇಮೇಜ್‌ಗಳನ್ನು ಕ್ಲಿಕ್ ಮಾಡಬಹುದು. ಆದರೆ ಇದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ಹೆಚ್ಚುವರಿ ಲೆನ್ಸ್‌ ಅಳವಡಿಸಬೇಕು ಅಷ್ಟೇ . ಹಾಗಾದ್ರೆ ಸದ್ಯ ಕಭ್ಯವಿರುವ ಅತ್ಯುತ್ತಮ ಲೆನ್ಸ್‌ ಯಾವುದು ಅನ್ನೊದರ ಡಿಟೇಲ್ಸ್‌ ಅನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಓಲೋಕ್ಲಿಪ್ ಮಲ್ಟಿ-ಡಿವೈಸ್ 3-ಇನ್ -1

ಓಲೋಕ್ಲಿಪ್ ಮಲ್ಟಿ-ಡಿವೈಸ್ 3-ಇನ್ -1

ಇದು ಹೆಚ್ಚಿನ ಪ್ರಮಾಣದಲ್ಲಿ ಆಪಲ್, ಗೂಗಲ್ ಮತ್ತು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಿಗೆ ಹೊಂದಿಕೆಯಾಗಲಿದ್ದು. ಇದು ತ್ರಿ ಇನ್‌ ಒನ್‌ ಮಲ್ಟಿ ಡಿವೈಸ್‌ ಅನ್ನು ಹೊಂದಿದೆ. ಈ ಮೂರು-ಲೆನ್ಸ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಕನೆಕ್ಟಿವಿಟಿ ಮಾಡಲು ಉಪಯುಕ್ತವಾಗಿದ್ದು, ಫಿಶ್ಐ ಲೆನ್ಸ್, ಸೂಪರ್-ವೈಡ್ ಲೆನ್ಸ್ ಮತ್ತು 15x ಮ್ಯಾಕ್ರೋ ಜೂಮ್ ಲೆನ್ಸ್ ಅನ್ನು ಹೊಂದಿದೆ. ಇನ್ನು ಈ ಲೆನ್ಸ್‌ ಅನ್ನು ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿ ಕ್ಲಿಪ್ ಮಾಡುವ ಮೂಲಕ ಬಳಸಬಹುದು. ಇದಲ್ಲದೆ ಪನೋರಮಾ ಶಾಟ್ಸ್‌ ಮತ್ತು 360 ಡಿಗ್ರಿ ವಿಆರ್ ಫೋಟೋಗಳನ್ನು ಚಿತ್ರೀಕರಿಸಲು ಇದು ಉತ್ತಮ ಆಯ್ಕೆಯಾಗಿದೆ.

ಮೊಮೆಂಟ್ ವೈಡ್ ಲೆನ್ಸ್

ಮೊಮೆಂಟ್ ವೈಡ್ ಲೆನ್ಸ್

ಇದು ಇತರ ಲೆನ್ಸ್ ಆಯ್ಕೆಗಳಿಗಿಂತ ಭಿನ್ನವಾಗಿದ್ದು. ಈ ಲೆನ್ಸ್ ಫೋನ್‌ಗೆ ಕ್ಲಿಪ್ ಆಗುವುದಿಲ್ಲ. ಬದಲಾಗಿ, ಸ್ಮಾರ್ಟ್‌ಫೋನ್‌ ಬಳಕೆದಾರರು ಇದನ್ನ ಅಗತ್ಯಕ್ಕೆ ಅನುಗುಣವಾಗಿ ಅದರಲ್ಲೂ ವಿಶೇಷವಾಗಿ ಆಪಲ್, ಗೂಗಲ್ ಮತ್ತು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಿಗಾಗಿ ಇ ಲೆನ್ಸ್‌ ಅನ್ನು ವಿನ್ಯಾಸಗೊಳಿಸಲಾಗಿದ್ದು, ನಿಮ್ಮ ಅಗತ್ಯಕ್ಕೆ ತಕ್ಕಂತೆ ಇದನ್ನ ಹೊಂದಿಸಿಕೊಳ್ಳಬಹುದಾಗಿದೆ. ಇನ್ನು ಈ ಡಿವೈಸ್‌ 0.63 ಎಕ್ಸ್ ವೈಡ್ ಲೆನ್ಸ್ ಹೊಂದಿದೆ. ಅಲ್ಲದೆ ಮೊಮೆಂಟ್ ವೈಡ್ ಲೆನ್ಸ್ ಐಫೋನ್ 6, 6s, 6 ಪ್ಲಸ್, 6s ಪ್ಲಸ್ 7, 7 ಪ್ಲಸ್, 8, 8 ಪ್ಲಸ್, x, xr, xs, xs ಮ್ಯಾಕ್ಸ್, 11, 11 ಪ್ರೊ, 11 ಪ್ರೊ ಮ್ಯಾಕ್ಸ್‌ಗೆ ಹೊಂದಿಕೊಳ್ಳುತ್ತದೆ.

ಮೊಮೆಂಟ್‌ ಫಿಶ್‌ಐ ಲೆನ್ಸ್‌

ಮೊಮೆಂಟ್‌ ಫಿಶ್‌ಐ ಲೆನ್ಸ್‌

ಹಲವಾರು ಐಫೋನ್, ಸ್ಯಾಮ್‌ಸಂಗ್ ಮತ್ತು ಗೂಗಲ್ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಈ ಲೆನ್ಸ್‌ ಸುಲಭವಾಗಿ ಹೊಂದಿಕೊಳ್ಳುತ್ತದೆ, ಈ ಲೆನ್ಸ್ ಕೂಡ ಮೊಮೆಂಟ್ ವೈಡ್ ಲೆನ್ಸ್‌ನಂತೆಯೇ ಕಾರ್ಯನಿರ್ವಹಿಸುತ್ತದೆ, ಆದರೆ ಇದು ವಿಶಾಲವಾದ ವ್ಯೂವ್‌ ಅನ್ನು ನೀಡಲಿದೆ. ಅಲ್ಲದೆ ಐಫೋನ್ 11 ರಲ್ಲಿ ಲಭ್ಯವಿರುವ ಅಲ್ಟ್ರಾ-ವೈಡ್ ಲೆನ್ಸ್‌ಗಿಂತ 50 ಡಿಗ್ರಿ ಅಗಲದ ಫೀಲ್ಡ್-ಆಫ್-ವ್ಯೂ ಕ್ಲಿಕ್ ಮಾಡಲು ಇದು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. 10x ಮ್ಯಾಕ್ರೋ ಲೆನ್ಸ್ ಅಂದಾಜು 18 ಎಂಎಂ ಫೋಕಸ್ ದೂರವನ್ನು ಹೊಂದಿದೆ.

ಮ್ಯಾಕ್ಟ್ರೆಮ್ ಫೋನ್ ಕ್ಯಾಮೆರಾ ಲೆನ್ಸ್ ಕಿಟ್

ಮ್ಯಾಕ್ಟ್ರೆಮ್ ಫೋನ್ ಕ್ಯಾಮೆರಾ ಲೆನ್ಸ್ ಕಿಟ್

ಇದು ಪರಿಪೂರ್ಣವಾದ ಲೆನ್ಸ್‌ ಆಗಿದ್ದು, ಇದು ಮ್ಯಾಕ್ರೋ ಲೆನ್ಸ್, ವೈಡ್-ಆಂಗಲ್ ಲೆನ್ಸ್, ಫಿಶ್ಐ ಲೆನ್ಸ್ ಮತ್ತು ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಈ ಲೆನ್ಸ್‌ 20X ಮ್ಯಾಗ್ನಿಫಿಕೇಶನ್‌ ಅನ್ನು ಒದಗಿಸುತ್ತದೆ. ಐಫೋನ್ 8, 7, 6, 6S Plus, X, XS, XS Max, XR ಮತ್ತು ಸ್ಯಾಮ್‌ಸಂಗ್ ಡಿವೈಸ್‌ಗಳಿಗೆ ಇದು ಸೂಕ್ತವಾಗಿದೆ. ಅಲ್ಲದೆ 0.5 ಎಕ್ಸ್ ವೈಡ್ ಆಂಗಲ್ ಲೆನ್ಸ್ ಮತ್ತು 25 ಎಕ್ಸ್ ಮ್ಯಾಕ್ರೋ ಲೆನ್ಸ್ ಬರುತ್ತದೆ.

Most Read Articles
Best Mobiles in India

English summary
Here are top 5 lenses for your smartphone that will help you snap Insta-ready pics.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X