ನಿಮಗೆ ಪ್ರತಿದಿನ ಹೆಚ್ಚಿನ ಡೇಟಾ ಬೇಕಿದ್ದರೆ ಈ ಪ್ರಿಪೇಯ್ಡ್ ಪ್ಲಾನ್‌ಗಳು ಸೂಕ್ತ!
ಜಿಯೋ, ಏರ್‌ಟೆಲ್ ಮತ್ತು ವಿ ಟೆಲಿಕಾಂಗಳು ತಮ್ಮ ಬಳಕೆದಾರರಿಗೆ ಹಲವು ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿವೆ. ಈ ಪ್ಲಾನ್‌ಗಳಲ್ಲಿ ಅಲ್ಪಾವಧಿ, ದೀರ್ಘಾವಧಿ ಪ್ರಿಪೇಯ್ಡ್ ಪ್ಲಾನ್‌ಗಳು ಕೂಡ ಸೇರಿವೆ. ಈ ಪೈಕಿ ದಿನನಿತ್ಯ ಹೆಚ್ಚಿನ ಡೇಟಾ ನೀಡುವ ಹಲವು ಆಕರ್ಷಕ ಪ್ಲಾನ್‌ಗಳು ಬಳಕೆದಾರರ ಗಮನ ಸೆಳೆದಿವೆ. ಇದೇ ಕಾರಣಕ್ಕೆ ಮೂರು ಟೆಲಿಕಾಂಗಳು ಕೂಡ ಪ್ರತಿನಿತ್ಯ ಹೆಚ್ಚಿನ ಡೇಟಾ ಬಯಸುವವರಿಗಾಗಿಯೇ ಹಲವು ಪ್ರಿಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಾ ಬಂದಿವೆ.

ಹೌದು, ಟೆಲಿಕಾಂ ಕಂಪೆನಿಗಳು ಪರಿಚಯಿಸಿರುವ ಪ್ರಿಪೇಯ್ಡ್ ಪ್ಲಾನ್‌ಗಳು ವಿವಿಧ ಬೆಲೆಗಳ ಆಯ್ಕೆಯಲ್ಲಿ ಲಭ್ಯವಿವೆ. ಇವುಗಳಲ್ಲಿ ದೈನಂದಿನ 1GB, 1.5GB, 2GB, 3GB ಡೇಟಾ ನೀಡುವ ಪ್ರಿಪೇಯ್ಡ್ ಪ್ಲಾನ್‌ಗಳು ಸೇರಿವೆ. ಬಳಕೆದಾರರು ತಮಗೆ ಅವಶ್ಯಕತೆ ಅನುಗುಣವಾದ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಹೆಚ್ಚುವರಿ ಡೇಟಾ ಬೇಕಿದ್ದರೆ ಹೆಚ್ಚು ಡೇಟಾ ನೀಡುವ ಪ್ಲಾನ್‌ಗಳನ್ನು ಆಯ್ಕೆ ಮಾಡುತ್ತಾರೆ. ಹಾಗಾದ್ರೆ ನಿಮಗೆ ಪ್ರತಿನಿತ್ಯ ಹೆಚ್ಚಿನ ಡೇಟಾ ನೀಡುವ ಅತ್ಯುತ್ತಮ ಪ್ರಿಪೇಯ್ಡ್ ಪ್ಲಾನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ 419ರೂ. ಪ್ರಿಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂ ದೈನಂದಿನ ಅಧಿಕ ಡೇಟಾ ನೀಡುವ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ 419ರೂ. ಪ್ರೀಪೇಯ್ಡ್ ಪ್ಲ್ಯಾನ್ ಕೂಡ ಒಂದಾಗಿದೆ. ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿನಿತ್ಯ 3GB ಡೇಟಾ ಪ್ರಯೋಜನ ಸಿಗಲಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಯನ್ನು ನೀಡಲಿದೆ. ಇನ್ನು ಈ ವ್ಯಾಲಿಡಿಟಿ ಅವಧಿಯಲ್ಲಿ ಅನಿಯಮಿತ ಕರೆ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ.

ಜಿಯೋ 601ರೂ.ಪ್ರಿಪೇಯ್ಡ್ ಪ್ಲಾನ್
ದೈನಂದಿನ ಅಧಿಕ ಡೇಟಾ ಬಯಸೋರಿಗೆ ಜಿಯೋ ನೀಡಿರುವ ಮತ್ತೊಂದು ಆಯ್ಕೆ 601ರೂ. ಬೆಲೆಯ ಪ್ರೀಪೇಯ್ಡ್ ಪ್ಲ್ಯಾನ್. ಈ ಪ್ಲಾನ್ ನಿಮಗೆ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ನೀಡಲಿದೆ. ಈ ಸಮಯದಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನವನ್ನು ಪಡೆಯಬಹುದು. ಅಲ್ಲದೆ ಅನಿಯಮಿತ ಕರೆ ಪ್ರಯೋಜನ ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ 6 GB ಡೇಟಾ ಸಿಗಲಿದ್ದು, ಹಾಗೆಯೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯ ಪ್ರಯೋಜನ ಸಹ ಲಭ್ಯವಾಗಲಿದೆ.

ಜಿಯೋ 1,199ರೂ.ಪ್ರಿಪೇಯ್ಡ್ ಪ್ಲಾನ್
ಅಧಿಕ ಡೇಟಾ ಜೊತೆಗೆ ಹೆಚ್ಚಿನ ವ್ಯಾಲಿಡಿಟಿ ಬಯಸುವವರಿಗೆ ಈ ಪ್ಲಾನ್ ಸೂಕ್ತವಾಗಿದೆ. 1,199ರೂ.ಪ್ರಿಪೇಯ್ಡ್ ಪ್ಲಾನ್ 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಇನ್ನು ಈ ಪ್ಲಾನ್‌ನಲ್ಲಿ ಪ್ರತಿನಿತ್ಯ 3GB ಡೇಟಾ ಜೊತೆಗೆ ಮತ್ತು ದಿನಕ್ಕೆ 100 SMS ಪ್ರಯೋಜನ ದೊರೆಯಲಿದೆ. ಇದರೊಂದಿಗೆ ಅನಿಯಮಿತ ಕರೆ ಪ್ರಯೋಜನ ಕೂಡ ಲಭ್ಯ.

ಏರ್‌ಟೆಲ್ 599ರೂ.ಪ್ರಿಪೇಯ್ಡ್ ಪ್ಲಾನ್
ಏರ್‌ಟೆಲ್ ಟೆಲಿಕಾಂನ ದೈನಂದಿನ ಅಧಿಕ ಡೇಟಾ ನೀಡುವ ಪ್ಲಾನ್‌ಗಳಲ್ಲಿ 599ರೂ.ಪ್ಲಾನ್ ಕೂಡ ಒಂದಾಗಿದೆ. ಈ ಪ್ಲಾನ್ ನಿಮಗೆ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಹಾಗೂ ಪ್ರತಿನಿತ್ಯ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯ. ಇದಲ್ಲದೆ ಅನಿಯಮಿತ ಕರೆ ಪ್ರಯೋಜನ ಜೊತೆಗೆ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯ.

ಏರ್‌ಟೆಲ್ 699ರೂ.ಪ್ರಿಪೇಯ್ಡ್ ಪ್ಲಾನ್
ಅಧಿಕ ಡೇಟಾ ನೀಡುವ ಪ್ಲಾನ್ ಪಟ್ಟಿಯಲ್ಲಿ ಏರ್‌ಟೆಲ್ 699ರೂ. ಪ್ರೀಪೇಯ್ಡ್ ಪ್ಲ್ಯಾನ್ ಕೂಡ ಸೇರಿದೆ. ಈ ಪ್ಲಾನ್ ನಿಮಗೆ ಒಟ್ಟು 56 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯಲಿದೆ. ಜೊತೆಗೆ ಡೈಲಿ 100 ಎಸ್‌ಎಮ್‌ಎಸ್ ಪ್ರಯೋಜನ ಲಭ್ಯ.

ವಿ ಟೆಲಿಕಾಂ 475ರೂ.ಪ್ರಿಪೇಯ್ಡ್ ಪ್ಲಾನ್
ವಿ ಟೆಲಿಕಾಂ ದೈನಂದಿನ ಅಧಿಕ ಡೇಟಾ ನೀಡುವ ಪ್ಲಾನ್‌ಗಳ ಸಾಲಿನಲ್ಲಿ ಈ ಪ್ಲಾನ್ ಕೂಡ ಒಂದಾಗಿದೆ. ಈ ಪ್ಲಾನ್‌ನಲ್ಲಿ ಪ್ರತಿನಿತ್ಯ 3GB ಡೇಟಾ ಪ್ರಯೋಜನ ಲಭ್ಯ. ಜೊತಗೆ ಅನಿಯಮಿತ ಧ್ವನಿ ಕರೆಗಳು ಮತ್ತು ಡೈಲಿ 100 SMS ಸೌಲಭ್ಯ ಸಿಗಲಿದೆ. ಈ ಪ್ಲಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ.

ವಿ ಟೆಲಿಕಾಂ 699ರೂ.ಪ್ರಿಪೇಯ್ಡ್ ಪ್ಲಾನ್
ವಿ ಟೆಲಿಕಾಂನ 699ರೂ. ಪ್ರೀಪೇಯ್ಡ್ ಪ್ಲ್ಯಾನ್ ನಿಮಗೆ ಡೈಲಿ 3GB ಡೇಟಾ ಪ್ರಯೋಜನ ನೀಡಲಿದೆ. ಇದು ಅನಿಯಮಿತ ಕರೆ ಹಾಗೂ ದಿನನಿತ್ಯ 100 ಎಸ್‌ಎಮ್‌ಎಸ್ ಸೌಲಭ್ಯ ನೀಡಲಿದೆ. ಈ ಪ್ಲಾನ್ 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.


Click it and Unblock the Notifications








