Home
ಸುದ್ದಿಜಾಲ

50,000ರೂ. ಒಳಗೆ ನೀವು ಖರೀದಿಸಬಹುದಾದ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು!

ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಿಗಳ ತನಕ ಲ್ಯಾಪ್‌ಟಾಪ್‌ ಅವಶ್ಯಕವಾಗಿ ಬೇಕಾದ ಡಿವೈಸ್‌ಗಳಲ್ಲಿ ಒಂದಾಗಿದೆ. ಇದಕ್ಕೆ ತಕ್ಕಂತೆ ಹಲವು ಜನಪ್ರಿಯ ಬ್ರಾಂಡ್‌ಗಳು ವಿವಿಧ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಹಲವು ಬೆಲೆ ವಿಭಾಗಗಳಲ್ಲಿ ನೀವು ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದಾಗಿದೆ.

ಹೌದು, ಮಾರುಕಟ್ಟೆಯಲ್ಲಿ ವಿವಿಧ ಬೆಲೆ ಮಾದರಿಯಲ್ಲಿ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದು. ಇದರಲ್ಲಿ ನಿಮ್ಮ ಬಜೆಟ್‌ ಹಾಗೂ ಅವಶ್ಯಕತೆ ಮಾನದಂಡವಾಗಲಿದೆ. ಒಂದು ವೇಳೆ ನೀವು 50,000ರೂ. ಬೆಲೆಯಲ್ಲಿ ಲ್ಯಾಪ್‌ಟಾಪ್‌ ಖರೀದಿಸಲು ಬಯಸಿದರೆ ಸಾಕಷ್ಟು ಆಯ್ಕೆಗಳು ಲಭ್ಯವಿದೆ. ಹಾಗಾದ್ರೆ ನೀವು 50,000ರೂ. ಬೆಲೆಯಲ್ಲಿ ಖರೀದಿಸಬಹುದಾದ ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

50,000ರೂ. ಒಳಗೆ ನೀವು ಖರೀದಿಸಬಹುದಾದ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು!

ರಿಯಲ್‌ಮಿ ಬುಕ್ (ಸ್ಲಿಮ್)

ನೀವು 50,000ರೂ. ಬೆಲೆ ಒಳಗೆ ಖರೀದಿಸಬಹುದಾದ ಲ್ಯಾಪ್‌ಟಾಪ್‌ಗಳಲ್ಲಿ ರಿಯಲ್‌ಮಿ ಬುಕ್‌ (ಸ್ಲಿಮ್) ಉತ್ತಮ ಆಯ್ಕೆಯಾಗಿದೆ. ಈ ಲ್ಯಾಪ್‌ಟಾಪ್‌ ಆಪಲ್‌ ಮ್ಯಾಕ್‌ಬುಕ್‌ ಮಾದರಿಯ ಡಿಸೈನ್‌ ಹೊಂದಿದ್ದು, ಕೇವಲ 1.3 ಕೆಜಿ ತೂಕವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ 14 ಇಂಚಿನ LCD 2K ಡಿಸ್‌ಪ್ಲೇಯನ್ನು ಹೊಂದಿದ್ದು, ಉತ್ತಮ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಇದು 11ನೇ-ತಲೆಮಾರಿನ ಕೋರ್ i3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಹಾಗೂ ಥಂಡರ್ಬೋಲ್ಟ್ 4 ಪೋರ್ಟ್ ಅನ್ನು ಹೊಂದಿದೆ. ಭಾರತದಲ್ಲಿ ಇದರ ಬೆಲೆ 46,999 ರೂ.ಆಗಿದೆ.

ಅಸೂಸ್‌ ವಿವೋಬುಕ್‌ 15

ಅಸೂಸ್‌ ವಿವೋಬುಕ್‌ 15 ಲ್ಯಾಪ್‌ಟಾಪ್‌ ನಿಮಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಆಯ್ಕೆಗಳಲ್ಲಿ ಒಂದೆನಿಸಿಕೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯನ್ನು 180 ಡಿಗ್ರಿಗಳವರೆಗೆ ತಿರುಗಿಸಬಹುದು. ಇದು ಇಂಟೆಲ್‌ ಕೋರ್‌ i3 (1220P) ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ 8GB RAM ಮತ್ತು 512GB ಇಂಟರ್‌ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಭಾರತದಲ್ಲಿ ಈ ಲ್ಯಾಪ್‌ಟಾಪ್‌ ಬೆಲೆ 44,990 ರೂ. ಆಗಿದೆ.

50,000ರೂ. ಒಳಗೆ ನೀವು ಖರೀದಿಸಬಹುದಾದ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು!

ಇನ್ಫಿನಿಕ್ಸ್‌ ಇನ್‌ಬುಕ್‌ X2 ಪ್ಲಸ್‌

ಇನ್ಫಿನಿಕ್ಸ್‌ ಇನ್‌ಬುಕ್‌ X2 ಪ್ಲಸ್‌ ಲ್ಯಾಪ್‌ಟಾಪ್ 50,000ರೂ. ಒಳಗೆ ಲಭ್ಯವಾಗುವ ಉತ್ತಮ ಆಯ್ಕೆಗಳಲ್ಲಿ ಒಂದೆನಿಸಿಕೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ 15.6 ಇಂಚಿನ IPS ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಈ ಲ್ಯಾಪ್‌ಟಾಪ್‌ ವಿಂಡೋಸ್‌ 11 ನಲ್ಲಿ ಕಾರ್ಯನಿರ್ವಹಿಸಲಿದೆ. ಬರುತ್ತದೆ. ಭಾರತದಲ್ಲಿ ಇದರ ಬೆಲೆ 47,990 ರೂ. ಬೆಲೆಯನ್ನು ಹೊಂದಿದೆ.

ಹೆಚ್‌ಪಿ 15s

ಹೆಚ್‌ಪಿ 15s ಲ್ಯಾಪ್‌ಟಾಪ್‌ ಕೂಡ ನೀವು ಪರಿಗಣಿಸಬಹುದಾದ ಪ್ರಮುಖ ಆಯ್ಕೆಗಳಲ್ಲಿ ಒಂದಾಗಿದೆ. ಈ ಲ್ಯಾಪ್‌ಟಾಪ್‌ 15.6 ಇಂಚಿನ ಆಂಟಿ-ಗ್ಲೇರ್ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ AMD ರೇಡಿಯನ್ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ ಅಮೆಜಾನ್ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ. ಭಾರತದಲ್ಲಿ ಈ ಲ್ಯಾಪ್‌ಟಾಪ್‌ ಬೆಲೆ 46,017ರೂ.ಆಗಿದೆ.

50,000ರೂ. ಒಳಗೆ ನೀವು ಖರೀದಿಸಬಹುದಾದ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು!

ಲೆನೊವೊ ಥಿಂಕ್‌ಬುಕ್ 15

ಲೆನೊವೊ ಥಿಂಕ್‌ಬುಕ್ 15 ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ರೈಜೆನ್‌ 5 (5500U) CPU ಒಳಗೊಂಡಿದ್ದು, 8GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಲ್ಯಾಪ್‌ಟಾಪ್‌ ಡ್ಯುಯಲ್-ಟೋನ್ ಫಿನಿಶ್ ಹೊಂದಿದ್ದು, ಸಾಕಷ್ಟು ಆಕರ್ಷಕವಾಗಿ ಕಾಣಲಿದೆ. ಪ್ರಸ್ತುತ ಭಾರತದಲ್ಲಿ ಇದರ ಬೆಲೆ 45,990ರೂ.ಆಗಿದೆ.

Best Mobiles in India

English summary
Infinix may not be a very popular brand in the laptop market, but its Infinix InBook X2 Plus feature-packed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+