TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ದೇಶಿಯ ಮಾರುಕಟ್ಟೆಯಲ್ಲಿ ಆಪ್ ಆಧಾರಿತ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ, ಒಲಾ ಹೊಸದೊಂದು ಮಾದರಿಯ ಸೇವೆಯನ್ನು ತನ್ನ ಗ್ರಾಹಕರ ನೀಡಲು ಮುಂದಾಗಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಒಲಾ ಕ್ಯಾಬ್ ಪ್ರಯಾಣದ ಸೆಫ್ಟಿಯನ್ನು ಇನ್ನಷ್ಟು ಹೆಚ್ಚು ಮಾಡಲಿದೆ. ಈ ದೇಶದ ಬಹುತೇಕ ಎಲ್ಲ ನಗರಗಳಲ್ಲಿ ಸೇವೆಯನ್ನು ನೀಡುತ್ತಿರುವ ಒಲಾ ವಿದೇಶದಲ್ಲಿ ಹೊಸತನ ಯಶಸ್ವಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಹಿನ್ನೆಲೆಯಲ್ಲಿ ಗ್ರಹಕರ ಸೇಫ್ಟಿ ಗೆ ಹೊಸ ಹೊಸ ಸೇವೆ ನೀಡುತ್ತಿದೆ.
ಸದ್ಯ ಮಹಾನಗರಗಳಲ್ಲಿ ಕ್ಯಾಬ್ ಪ್ರಯಾಣದ ಸೆಫ್ಟಿ ಬಗ್ಗೆ ಸಾಕಷ್ಟು ಪ್ರಶ್ನೆಗಳು ಇತ್ತು, ಈ ಹಿನ್ನೆಲೆಯಲ್ಲಿ ತನ್ನ ಬಳಕೆದಾರರಿಗೆ ಹೆಚ್ಚಿನ ಸೇಫ್ಟಿ ನೀಡಬೇಕು ಎನ್ನುವ ಕಾರಣಕ್ಕಾಗಿ, ಹೊಸದಾಗಿ ಒಲಾ ಗ್ರಾರ್ಡಿಯನ್ ಎಂಬ ಹೊಸ ಸೇವೆಯನ್ನು ಪ್ರಾರಂಭಿಸುತ್ತಿದೆ. ಇದು ಕ್ಯಾಬ್ ಪ್ರಯಾಣ ಮಾಡುತ್ತಿರುವವ ಅವರೊಂದಿಗೆ ಮನೆಯಲ್ಲಿ ಕುಳಿತಿರುವ ಅವರ ಪೋಷಕರು ಸಹ ಕ್ಯಾಬ್ ಎಲ್ಲಿ ಪ್ರಯಾಣಿಸುತ್ತಿದೆ ಎಂಬುದನ್ನು ಟೈಮ್ ರಿಯಲ್ ಟೈಮ್ ನಲ್ಲಿ ನೋಡಬಹುದಾದ ಅವಕಾಶವನ್ನು ಮಾಡಿಕೊಟ್ಟಿದೆ.
ಸದ್ಯ ಈ ಹೊಸ ಮಾದರಿಯ ಸೇವೆಯೂ ಪರೀಕ್ಷೆ ಹಂತದಲ್ಲಿದ್ದು ಮೊದಲಿಗೆ ಬೆಂಗಳೂರು, ಮುಂಬೈ ಮತ್ತು ಪುಣೆ ನಗರಗಳಲ್ಲಿ ಆರಂಭವಾಗಲಿದೆ. ಇದಾದ ನಂತರದಲ್ಲಿ ಈ ಸೇವೆಯು ದೆಹಲಿ ಮತ್ತು ಕೊಲ್ಕತ್ತಾ ನಗರಗಳಲ್ಲಿ ಅಕ್ಟೋಬರ್ ತಿಂಗಳ ನಂತರದಲ್ಲಿ ಆರಂಭ ಆಗುವ ಸಾಧ್ಯತೆಯೂ ಇದೆ.
ಒಲಾ ಹೊಸದಾಗಿ ನೀಡುವ ಸೇವೆಯು ಯಾಂತ್ರಿಕ ಕಲಿಕೆ (ಮಿಷಿನ್ ಲರ್ನಿಂಗ್) ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಬಳಸಿಕೊಂಡು ಕಾರ್ಯನಿರ್ವಹಿಸಲಿದ್ದು, ಬಳಕೆದಾರರಿಗೆ ಹೆಚ್ಚಿನ ಗುಣಮಟ್ಟದ ಸೇವೆಯನ್ನು ನೀಡಲಿದೆ. ಇದರಿಂದಾಗಿ ನೀವು ಕಣ್ಣು ಮುಚ್ಚಿಕೊಂಡು ಒಲಾದಲ್ಲಿ ಪ್ರಯಾಣ ಮಾಡಬಹುದಾಗಿದೆ.
ಈ ಹಿಂದೆ ಒಲಾ ಕ್ಯಾಬ್ ನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಸುರಕ್ಷತೆಯ ವಿಷಯದಲ್ಲಿ ಸಾಕಷ್ಟು ತೊಂದರೆಗಳು ಇತ್ತು. ಅದರಲ್ಲಿಯೂ ಮಹಿಳೆಯರು ಒಬ್ಬರಾಗೊ ಓಡಾಡುವ ಸಂದರ್ಭದಲ್ಲಿ ತೊಂದರೆ ಎದುರಾಗುತ್ತಿತು, ಈ ಹಿನ್ನಲೆಯಲ್ಲಿ ಒಲಾ ಕ್ಯಾಬ್ ಎಲ್ಲಿ ಪ್ರಯಾಣ ಮಾಡುತ್ತಿದೆ. ಯಾವ ಸ್ಥಳದಲ್ಲಿ ನಿಂತಿದೆ, ಎಷ್ಟು ವೇಗದಲ್ಲಿ ಸಾಗುತ್ತಿದೆ. ಮತ್ತು ಸರಿಯಾದ ದಾರಿಯಲ್ಲಿ ಸಾಗುತಿದೆಯೇ ಎಂಬುದನ್ನು ತಮ್ಮ ಮನೆಯಲ್ಲಿ ಕುಳಿತ ಪೋಷಕರಿಗೂ ತಿಳಿಸುವ ತಂತ್ರಜ್ಞಾನ ಇದಾಗಿದೆ. ಇದರಿಂದಾಗಿ ನಿಮ್ಮ ಪ್ರಯಾಣ ಸುಖಮಯವಾಗಿರುತ್ತದೆ.