ಪಾಸ್‌ವರ್ಡ್‌ ಬಳಸದೆ ನಿಮ್ಮ ಡಿಜಿಟಲ್‌ ಖಾತೆಗಳಿಗೆ ಸೈನ್‌ ಇನ್‌ ಆಗುವುದು ಹೇಗೆ?

|

ಇಂದಿನ ಡಿಜಿಟಲ್‌ ಪ್ರಪಂಚದಲ್ಲಿ ಪಾಸ್‌ವರ್ಡ್‌ಗಳನ್ನು ಬಳಸುವುದು ತುಂಬಾನೇ ಮುಖ್ಯವಾಗಿದೆ. ನಿಮ್ಮ ಆನ್‌ಲೈನ್‌ ಖಾತೆಗಳಿಗೆ ಸ್ಟ್ರಾಂಗ್‌ ಪಾಸ್‌ವರ್ಡ್‌ಗಳನ್ನು ಸೆಟ್‌ ಮಾಡುವುದು ಸುರಕ್ಷಿತವಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಯಾವುದೇ ಪ್ರಮುಖ ಮತ್ತು ನಿಮ್ಮ ಎಲ್ಲಾ ಖಾಸಗಿ ಮಾಹಿತಿಯನ್ನು ಸುರಕ್ಷತೆಯಿಂದ ಕಾಪಾಡಬೇಕಾದರೆ ಪಾಸ್‌ವರ್ಡ್‌ಗಳು ಮುಖ್ಯವಾಗಿದೆ. ಇದೇ ಕಾರಣಕ್ಕೆ ಇಮೇಲ್‌ನಿಂದ ಬ್ಯಾಂಕ್ ಖಾತೆಗಳಿಗೆ, ಶಾಪಿಂಗ್ ಕಾರ್ಟ್‌ಗಳಿಂದ ವೀಡಿಯೊ ಗೇಮ್‌ಗಳವರೆಗೆ ಎಲ್ಲಾ ಮಾದರಿಯ ಡಿಜಿಟಲ್‌ ಕಾತೆಗಳಿಗೆ ಪಾಸ್‌ವರ್ಡ್‌ ಸೆಟ್‌ ಮಾಡಿರುತ್ತಾರೆ. ಆದರೆ ಈ ಎಲ್ಲಾ ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾನೇ ಕಷ್ಟದ ವಿಷಯ ಕೂಡ ಆಗಿದೆ.

ಪಾಸ್‌ವರ್ಡ್‌

ಹೌದು, ಡಿಜಿಟಲೀಕರಣ ಹೆಚ್ಚಾದಂತೆ ಪಾಸ್‌ವರ್ಡ್‌ಗಳ ಬಳಕೆ ಕೂಡ ಹೆಚ್ಚಾಗಿದೆ. ಆದರೆ ಎಲ್ಲಾ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವುದು ಅತ್ಯಂತ ಕಷ್ಟಕರವಾದ ವಿಷಯ. ಹಾಗಂತ ಸುಲಭವಾದ ಪಾಸ್‌ವರ್ಡ್‌ಗಳನ್ನು ಬಳಸುವುದು ಹ್ಯಾಕರ್‌ಗಳಿಗೆ ದಾರಿಮಾಡಿಕೊಟ್ಟಂತೆ ಆಗಲಿದೆ. ಆದರಿಂದ ನಿಮ್ಮ ನೆನಪಿನಲ್ಲಿ ಉಳಿಯುವಂತಹ ಸ್ಟ್ರಾಂಗ್‌ ಪಾಸ್‌ವರ್ಡ್ ಬಳಸಬೇಕು, ಇಲ್ಲವೇ ಪಾಸ್‌ವರ್ಡ್‌ ಅನ್ನು ಆಗಾಗ್ಗೆ ಬದಲಾಯಿಸಬೇಕು. ಆದರೆ ಹೆಚ್ಚಿನ ಜನರು ಈ ರೀತಿ ಪದೇ ಪದೇ ಪಾಸ್‌ವರ್ಡ್‌ ಬದಲಾಯಿಸಲು ಇಷ್ಟಪಡುವುದಿಲ್ಲ. ಹಾಗಾದ್ರೆ ಪಾಸ್‌ವರ್ಡ್‌ ಇಲ್ಲದೆ ಹೋದರು ನಿಮ್ಮ ಡಿಜಿಟಲ್‌ ಖಾತೆಗಳನ್ನು ಸೆಕ್ಯುರ್‌ ಮಾಡುವುದಕ್ಕೆ ದಾರಿ ಇದೆಯಾ? ಪಾಸ್‌ವರ್ಡ್ ಬದಲಿಗೆ ನಿಮಗೆ ಯಾವುದು ಸುರಕ್ಷಿತ ಮಾರ್ಗ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪಾಸ್‌ವರ್ಡ್‌

ಪಾಸ್‌ವರ್ಡ್‌ ಬಳಸದೆ ಸುರಕ್ಷಿತವಾಗಿರುವುದಕ್ಕೆ ಹಲವು ಮಾರ್ಗಗಳಿವೆ. ಪಾಸ್‌ವರ್ಡ್‌ ಇಲ್ಲದೆಯೆ ಸೈನ್‌ ಇನ್‌ ಆಗುವ ಅವಕಾಶವನ್ನು ಮೈಕ್ರೋಸಾಫ್ಟ್‌ ಮಾರ್ಚ್ 2021 ರಲ್ಲಿಯೇ ಘೋಷಣೆ ಮಾಡಿದೆ. ಈ ಫೀಚರ್ಸ್‌ ಅನ್ನು ಪ್ರಪಂಚದಾದ್ಯಂತದ ಎಂಟರ್‌ಪ್ರೈಸ್ ಸಂಸ್ಥೆಗಳಿಗೆ ತರುವುದಾಗಿ ಹೇಳಿಕೊಂಡಿದೆ. ಈ ಫೀಚರ್ಸ್‌ ಬಳಸುವ ಮೂಲಕ ನೀವು ನಿಮ್ಮ ಮೈಕ್ರೋಸಾಫ್ಟ್‌ ಅಕೌಂಟ್‌ನಿಂದ ಪಾಸ್‌ವರ್ಡ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು. ನಿಮ್ಮ ಮೆಚ್ಚಿನ ಅಪ್ಲಿಕೇಶನ್‌ಗಳು ಮತ್ತು ಸೇವೆಗಳಿಗೆ ಸೈನ್ ಇನ್ ಮಾಡಲು Microsoft Authenticator ಅಪ್ಲಿಕೇಶನ್, Windows Hello, ಭದ್ರತಾ ಕೀ ಅಥವಾ ನಿಮ್ಮ ಫೋನ್ ಅಥವಾ ಇಮೇಲ್‌ಗೆ ಕಳುಹಿಸಲಾದ ವೆರಿಫಿಕೇಶನ್‌ ಕೋಡ್ ಅನ್ನು ಬಳಸಬಹುದಾಗಿದೆ.

ಪಾಸ್‌ವರ್ಡ್‌ ಸಮಸ್ಯೆ

ಪಾಸ್‌ವರ್ಡ್‌ ಸಮಸ್ಯೆ

ಸ್ಟ್ರಾಂಗ್‌ ಇಲ್ಲದ ಪಾಸ್‌ವರ್ಡ್‌ಗಳನ್ನು ಬಳಸುವ ಎಂಟರ್‌ಪ್ರೈಸ್ ಮತ್ತು ಸಾಮಾನ್ಯ ಗ್ರಾಹಕರ ಅಕೌಂಟ್‌ಗಳು ಹ್ಯಾಕರ್‌ಗಳ ದಾಳಿಗೆ ತುತ್ತಾಗುವ ಸಾಧ್ಯತೆ ಇದೆ. ಮೈಕ್ರೋಸಾಫ್ಟ್‌ ಬ್ಲಾಗ್ ಪೋಸ್ಟ್‌ನಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ ಪ್ರತಿ ಸೆಕೆಂಡಿಗೆ 579 ಪಾಸ್‌ವರ್ಡ್ ದಾಳಿಗಳು ನಡೆಯುತ್ತಿವೆ. ಅಂದರೆ ಪ್ರತಿವರ್ಷ 18 ಶತಕೋಟಿಯಷ್ಟು ಅಕೌಂಟ್‌ಗಳು ಪಾಸ್‌ವರ್ಡ್‌ ಕಾರಣದಿಂದ ಹ್ಯಾಕರ್‌ ದಾಳಿಗೆ ಒಳಗಾಗುತ್ತಿವೆ.

ಪಾಸ್‌ವರ್ಡ್‌

ಈ ರೀತಿಯ ಹ್ಯಾಕರ್‌ ದಾಳಿಗೆ ಪ್ರಮುಖ ಕಾರಣ ದುರ್ಬಲ ಪಾಸ್‌ವರ್ಡ್‌ಗಳ ಬಳಕೆ. ಹೆಚ್ಚಿನ ಜನರು ತಮಗೆ ಸಾಮಾನ್ಯವಾಗಿ ನೆನಪಿಗೆ ಬರುವಂತಹ ಪಾಸ್‌ವರ್ಡ್‌ಗಳನ್ನು ಕ್ರಿಯೆಟ್‌ ಮಾಡಿಬಿಡುತ್ತಾರೆ. ಈ ಪಾಸ್‌ವರ್ಡ್‌ಗಳು ದುರ್ಬಲ ಪಾಸ್‌ವರ್ಡ್‌ಗಳಾಗಿದ್ದು, ಹ್ಯಾಕರ್‌ಗಳಿಗೆ ಸುಲಭ ಪ್ರವೇಶ ನೀಡು ಬಿಡುತ್ತವೆ. ಬೇರೆಯವರಿಗೆ ಪ್ರಬವೇಶಿಸಲು ಸಾದ್ಯವಾಗದಂತಹ ಪಾಸ್‌ವರ್ಡ್‌ಗಳನ್ನು ಕ್ರಿಯೆಟ್‌ ಮಾಡುವಲ್ಲಿ ಜನರು ಎಡವುತ್ತಿರೋದು ಇದಕ್ಕೆಲ್ಲಾ ಕಾರಣ. ಇನ್ನು ಪಾಸ್‌ವರ್ಡ್‌ಗಳನ್ನು ಆಗಾಗ ಅಪ್ಡೇಟ್‌ ಮಾಡುವ ಅಗತ್ಯವಿದೆ. ಹೊಸ ಮಾದರಿಯ ಪಾಸ್‌ವರ್ಡ್‌ಗಳನ್ನು ಆಪ್ಡೇಟ್‌ ಮಾಡುವುದು ಮಾತ್ರವಲ್ಲ. ಆದರೂ ಸಾಕಷ್ಟು ಸುರಕ್ಷಿತ ಮತ್ತು ಸಾಕಷ್ಟು ಸ್ಮರಣೀಯ ಪಾಸ್‌ವರ್ಡ್‌ಗಳನ್ನು ರಚಿಸುವುದು ಒಂದು ಸವಾಲಾಗಿದೆ. ಕೆಲವೊಮ್ಮೆ ಬಹುಮುಖ್ಯವಾದ ಖಾತೆಗಳಿಗೆ ಪ್ರವೇಶ ನೀಡುವ ಪಾಸ್‌ವರ್ಡ್‌ಗಳನ್ನು ಮರೆತುಹೋದರೆ ತುಂಬಾನೇ ಬೇಸರವಾಗಲಿದೆ. ತುರ್ತು ಸಂದರ್ಭದಲ್ಲಿ ಬಹಳ ಕಿರಿಕಿರಿ ಎನಿಸಿಬಿಡುತ್ತದೆ.

ಹ್ಯಾಕರ್ಸ್‌ಗಳ ಬುದ್ದಿವಂತಿಕೆ

ಹ್ಯಾಕರ್ಸ್‌ಗಳ ಬುದ್ದಿವಂತಿಕೆ

ಇನ್ನು ನೀವು ಯಾವುದೇ ಮಾದರಿಯ ಪಾಸ್‌ವರ್ಡ್‌ಗಳನ್ನು ಸೆಟ್‌ ಮಾಡಿದರೂ ಹ್ಯಾಕರ್‌ಗಳು ಸುಲಭವಾಗಿ ಪ್ರವೇಶ ಮಾಡಿಬಿಡುತ್ತಾರೆ. ಯಾರೊಬ್ಬರ ಸಾಮಾಜಿಕ ಮಾಧ್ಯಮವನ್ನು ತ್ವರಿತವಾಗಿ ನೋಡುವುದರಿಂದ ಯಾವುದೇ ಹ್ಯಾಕರ್‌ಗಳು ತಮ್ಮ ವೈಯಕ್ತಿಕ ಖಾತೆಗಳಿಗೆ ಲಾಗ್ ಇನ್ ಮಾಡಲು ಪ್ರಾರಂಭಿಸಬಹುದು. ಒಮ್ಮೆ ಆ ಪಾಸ್‌ವರ್ಡ್ ಮತ್ತು ಇಮೇಲ್ ಹ್ಯಾಕರ್‌ಗಳ ಕೈಗೆ ದೊರೆತರೆ ಹ್ಯಾಕರ್‌ಗಳು ಅದನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಿಬಿಡುತ್ತಾರೆ. ಅಲ್ಲದೆ ನಕಲಿ ವೆಬ್‌ಸೈಟ್‌ಗಳ ಮೂಲಕ ನಿಮ್ಮ ಪಾಸ್‌ವರ್ಡ್‌ಗಳನ್ನು ನಕಲು ಮಾಡುವ ಪ್ರಯತ್ನ ಕೂಡ ಮಾಡುತ್ತಾರೆ.

ಪಾಸ್‌ವರ್ಡ್‌ ಬಳಸದೆ ನಿಮ್ಮ ಡಿಜಿಟಲ್‌ ಖಾತೆಗೆ ಸೈನ್‌ಇನ್‌ ಆಗುವುದು ಹೇಗೆ?

ಪಾಸ್‌ವರ್ಡ್‌ ಬಳಸದೆ ನಿಮ್ಮ ಡಿಜಿಟಲ್‌ ಖಾತೆಗೆ ಸೈನ್‌ಇನ್‌ ಆಗುವುದು ಹೇಗೆ?

ಹಂತ:1 ಮೊದಲನೇಯದಾಗಿ ನೀವು Microsoft Authenticator ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿ.
ಹಂತ:2 ನಂತರ ನಿಮ್ಮ ಪರ್ಸನಲ್‌ ಮೈಕ್ರೋಸಾಫ್ಟ್‌ ಅಕೌಂಟ್‌ಗೆ ಲಿಂಕ್ ಮಾಡಿರಿ.
ಹಂತ:3 ನಿಮ್ಮ Microsoft ಖಾತೆಗೆ ಭೇಟಿ ನೀಡಿ, ಸೈನ್ ಇನ್ ಮಾಡಿ ಮತ್ತು ಸುಧಾರಿತ ಭದ್ರತಾ ಆಯ್ಕೆಗಳನ್ನು ಆಯ್ಕೆಮಾಡಿ.
ಹಂತ:4 ಇದಾದ ನಂತರ ಹೆಚ್ಚುವರಿ ಭದ್ರತಾ ಆಯ್ಕೆಗಳ ಅಡಿಯಲ್ಲಿ, ನೀವು ಪಾಸ್‌ವರ್ಡ್‌ರಹಿತ ಖಾತೆಯನ್ನು ನೋಡುತ್ತೀರಿ. ಆನ್ ಮಾಡಿ ಆಯ್ಕೆಮಾಡಿ.
ಹಂತ:5 ನಿಮ್ಮ ಆನ್-ಸ್ಕ್ರೀನ್ ಪ್ರಾಂಪ್ಟ್‌ಗಳನ್ನು ಅನುಸರಿಸಿ, ನಂತರ ನಿಮ್ಮ Authenticator ಅಪ್ಲಿಕೇಶನ್‌ನಿಂದ ನೊಟೀಫಿಕೇಶನ್‌ ಅನ್ನು ಅನುಮೋದಿಸಿ.

ಒಮ್ಮೆ ನೀವು Microsoft Authenticator ನೋಟಿಫಿಕೇಶನ್‌ ಅನುಮೋದಿಸಿದರೆ ನಿಮ್ಮ ಪಾಸ್‌ವರ್ಡ್‌ನಿಂದ ನೀವು ಮುಕ್ತರಾಗುತ್ತೀರಿ. ಪಾಸ್‌ವಡ್‌ ಇಲ್ಲದೆ ಸೈನ್‌ಇನ್‌ ಆಗುವುದಕ್ಕೆ ಅವಕಾಶ ಸಿಗಲಿದೆ. ಅದರೆ ನೀವು ಮತ್ತೊಮ್ಮೆ ಪಾಸ್‌ವರ್ಡ್‌ ಬಲಸಲು ಬಯಸಿದರೆ ಅದಕ್ಕೂ ಕೂಡ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ.

ಪಾಸ್‌ವರ್ಡ್‌

ಇನ್ನು ಇತ್ತೀಚಿನ ವರದಿ ಪ್ರಕಾರ ಭಾರತದಲ್ಲಿ ಸಾಮಾನ್ಯವಾಗಿ 12345, 123456, 123456789, 12345678, india123, 1234567890, 1234567, qwerty, abc123, iloveyou ಪಾಸ್‌ವರ್ಡ್‌ಗಳನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ. ವರದಿಯ ಪ್ರಕಾರ, india123 ಅನ್ನು ಹೊರತುಪಡಿಸಿ, ಈ ಎಲ್ಲಾ ಪಾಸ್‌ವರ್ಡ್‌ಗಳನ್ನು ಒಂದು ನಿಮಿಷದಲ್ಲಿ ಭೇದಿಸಬಹುದಾಗಿದೆ. ಆದರೂ ಕೂಡ ಇಂತಹ ಸಾಮಾನ್ಯ ಪಾಸ್‌ವರ್ಡ್‌ಗಳನ್ನು ಬಳಸುತ್ತಿದ್ದಾರೆ. ಇದಲ್ಲದೆ ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಹೆಸರನ್ನು ಪಾಸ್‌ವರ್ಡ್‌ಗಳಾಗಿ ಬಳಸುತ್ತಾರೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ. ಇನ್ನು ಯುಎಸ್‌ನಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳೆಯರು 'iloveyou' ಎಂಬ ಪಾಸ್‌ವರ್ಡ್ ಬಳಸುತ್ತಿದ್ದಾರೆ ಎನ್ನಲಾಗಿದೆ.

ಪಾಸ್‌ವರ್ಡ್

ಇಂದಿನ ಸೈಬರ್‌ ಜಗತ್ತಿನಲ್ಲಿ ಸೈಬರ್‌ಟಾಕ್‌ಗಳಿಂದ ಸುರಕ್ಷಿತವಾಗಿರಲು ಬಲವಾದ ಪಾಸ್‌ವರ್ಡ್ ಅನ್ನು ಆಯ್ಕೆ ಮಾಡುವುದು ಅತ್ಯಗತ್ಯ. ಕನಿಷ್ಠ 12 ಅಕ್ಷರಗಳು ಮತ್ತು ದೊಡ್ಡಕ್ಷರಗಳು, ಸಣ್ಣ ಅಕ್ಷರಗಳು, ಸಂಖ್ಯೆಗಳು ಮತ್ತು ಚಿಹ್ನೆಗಳ ಸಂಯೋಜನೆಯೊಂದಿಗೆ ಸಂಕೀರ್ಣವಾದ ಪಾಸ್‌ವರ್ಡ್‌ಗಳನ್ನು ಆಯ್ಕೆ ಮಾಡಲು ಈ ವರದಿಯು ಬಳಕೆದಾರರಿಗೆ ಸಲಹೆ ನೀಡಿದೆ. ಏಕೆಂದರೆ ಡಿಜಿಟಲ್‌ ಖಾತೆಗಳಿಗೆ ಪಾಸ್‌ವರ್ಡ್‌ ಅನ್ನು ಸೆಟ್‌ ಮಾಡುವಾಗ ನಮ್ಮ ಹೆಸರುಗಳನ್ನೇ ಬಳಸುವುದು ಸುರಕ್ಷಿತವಲ್ಲ. ಏಕೆಂದರೆ ಪಾಸ್‌ವರ್ಡ್‌ಗೆ ವೈಯಕ್ತಿಕ ಮಾಹಿತಿಗಳು ಸುಲಭವಾಗಿ ಹ್ಯಾಕರ್‌ಗಳ ಪಾಲಿಗೆ ದಕ್ಕಿಬಿಡುತ್ತದೆ. ನಿಮ್ಮ ಖಾತೆಗಳಿಗೆ ಈ ಪಾಸ್‌ವರ್ಡ್‌ಗಳು ಹೆಚ್ಚು ಭದ್ರತೆ ನೀಡುವುದಿಲ್ಲ ಹ್ಯಾಕ್‌ ಆಗುವ ಸಂಭವಗಳಿರುತ್ತವೆ.

Best Mobiles in India

English summary
Here is how you can login to apps and services without using password.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X