Home
ಸುದ್ದಿಜಾಲ

ಇಂದು ''ಆಂಡ್ರಾಯ್ಡ್ O'' ರಿಲೀಸ್!!..ಯಾವ ಯಾವ ಸ್ಮಾರ್ಟ್‌ಫೋನ್ ಅಪ್‌ಡೇಟ್ ಹೊಂದಲಿವೆ!?

ಇಂದಿನ ಸಂಪೂರ್ಣ ಸೂರ್ಯಗ್ರಹಣದೊಂದಿಗೆ ''ಆಂಡ್ರಾಯ್ಡ್ O'' ಭೂಮಿಯನ್ನು ಸ್ಪರ್ಶಿಸಲಿದೆ.!!

By Bhaskar N J

ಗೂಗಲ್‌ ತನ್ನ ನೂತನ ಮೊಬೈಲ್ ಆಪರೇಟಿಂಗ್‌ ಸಿಸ್ಟಮ್‌ ಅನ್ನು ಇಂದೇ ಹೊರತರುವುದಾಗಿ ಪ್ರಕಟಿಸಿದ್ದು, ಆಂಡ್ರಾಯ್ಡ್ ನೌಗಾಟ್ ನಂತರ ಇದೀಗ ''ಆಂಡ್ರಾಯ್ಡ್ O'' ಬಿಡುಗಡೆಯಾಗುತ್ತಿದೆ. ಕೆಲವೇ ಹೊತ್ತಿನಲ್ಲಿ ಇಂದಿನ ಸಂಪೂರ್ಣ ಸೂರ್ಯಗ್ರಹಣದೊಂದಿಗೆ ''ಆಂಡ್ರಾಯ್ಡ್ O'' ಭೂಮಿಯನ್ನು ಸ್ಪರ್ಶಿಸಲಿದೆ.!!

ಕಾಲಕ್ಕೆ ತಕ್ಕಂತೆ ಬಳಕೆಗೆ ಅನುಗುಣವಾಗಿ ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿರುವ ಆಂಡ್ರಾಯ್ಡ್ ನೂತನ ಮಾದರಿ ''ಆಂಡ್ರಾಯ್ಡ್ O'' ಇನ್ನೇನು ಬಿಡುಗಡೆಯಾಗುವ ಸಮಯದಲ್ಲಿದೆ.!! ಹಾಗಾದರೆ, ಆಂಡ್ರಾಯ್ಡ್ O'' ಎಂದರೇನು? ಹೊಸ ಅಪ್‌ಡೇಟ್ ''ಆಂಡ್ರಾಯ್ಡ್ O'' ಅನ್ನು ಪಡೆಯುವ ಸ್ಮಾರ್ಟ್ಫೋನ್‌ಗಳು ಯಾವುವು ಎಂಬುದನ್ನು ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ''ಆಂಡ್ರಾಯ್ಡ್ O''?

ಏನಿದು ''ಆಂಡ್ರಾಯ್ಡ್ O''?

ಗೂಗಲ್‌ನ ನೂತನ ''ಆಂಡ್ರಾಯ್ಡ್ O''ಸಿಸ್ಟಮ್‌ನಲ್ಲಿ 'O' ಎಂದರೆ ಏನು ಎಂಬುದಕ್ಕೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.!! ಆದರೆ, ಊಹಾಪೋಹಗಳ ಪ್ರಕಾರ 'O' ಎಂದರೆ ಒರಿಯೊ ಎಂದೇ ನಂಬಲಾಗಿದೆ. ಇದನ್ನು ಗೂಗಲ್ ಖಚಿತಗೊಳಿಸಬೇಕಿದೆ.!!

''ಆಂಡ್ರಾಯ್ಡ್ O'' ಅಪ್‌ಡೇಟ್ ಹೇಗೆ?

''ಆಂಡ್ರಾಯ್ಡ್ O'' ಅಪ್‌ಡೇಟ್ ಹೇಗೆ?

ಪ್ರಸ್ತುತ ಇರುವ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಈ ''ಆಂಡ್ರಾಯ್ಡ್ O'' ಅಪ್‌ಡೇಟ್ ಸಾಧ್ಯವಿಲ್ಲಾ.! ಕೆಲವೊಂದು ಕಂಪೆನಿಯ ಕೆಲವು ಬ್ರಾಂಡ್‌ಗಳಿಗೆ ಈ ಆಪರೇಟಿಂಗ್ ಸಿಸ್ಟಮ್ ಅಪ್‌ಡೆಟ್‌ಗೆ ಸಾಧ್ಯವಿದೆ. ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಶಿಯೋಮಿ ಸ್ಮಾರ್ಟ್‌ಫೋನ್ಸ್.!!

ಶಿಯೋಮಿ ಸ್ಮಾರ್ಟ್‌ಫೋನ್ಸ್.!!

ದೊಡ್ಡ ಮಾರುಕಟ್ಟೆ ಹೊಂದಿರುವ ಶಿಯೋಮಿ ರೆಡ್ಮಿ ನೋಟ್ 4 ಮತ್ತು ರೆಡ್ಮಿ 4 ಫೋನ್‌ಗಳು ಈಗಲೂ ಆಂಡ್ರಾಯ್ಡ್ ಮಾರ್ಶೋಮಲ್ಲೊವಿನಲ್ಲಿಯೇ ಇವೆ. ಹಾಗಾಗಿ, ಇವುಗಳು ''ಆಂಡ್ರಾಯ್ಡ್ O'' ಅಪ್‌ಡೇಟ್ ಪಡೆಯಲು ಅವರಿಗೆ ಬಹಳ ಸಮಯ ತೆಗೆದುಕೊಳ್ಳಬಹುದು.

ಸ್ಯಾಮ್ಸಂಗ್

ಸ್ಯಾಮ್ಸಂಗ್

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 5 ಮತ್ತು ಜೆ 7 ಸ್ಮಾರ್ರ್ಟ್ಫೋನ್ಸ್ ಹಾಗೂ ಸ್ಯಾಮ್ಸಂಗ್ ಜೆ7 ಪ್ರೋ ಮತ್ತು ಜೆ 7 ಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳಲ್ಲಿ ''ಆಂಡ್ರಾಯ್ಡ್ O'' ಅಪ್‌ಡೇಟ್ ಪಡೆಯಬಹುದು ಎಂದು ಹೇಳಲಾಗಿದೆ. ಮುಂದಿನ ದಿವಸಗಳಲ್ಲಿ ಬಹುತೇಕ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ''ಆಂಡ್ರಾಯ್ಡ್ O'' ಅಪ್‌ಡೇಟ್ ಹೊಂದಬಹುದು.!!

ಮೋಟೋ  ಸ್ಮಾರ್ಟ್‌ಫೋನ್ಸ್!!

ಮೋಟೋ ಸ್ಮಾರ್ಟ್‌ಫೋನ್ಸ್!!

ಮೋಟೋ ಸಿ ಸರಣಿ ಸ್ಮಾರ್ಟ್‌ಫೋನ್‌ಗಳು, ಮೋಟೋ ಇ 4 ಸರಣಿ, ಮೋಟೋ ಜಿ 5 ಸರಣಿ, ಮೋಟೋ ಜಿ 4 ಸರಣಿಗಳು, ಮೋಟೋ ಝಡ್ 2 ಸರಣಿ ಮತ್ತು ಮೋಟೋ ಝಡ್ ಸರಣಿ ಫೋನ್ ಆಂಡ್ರಾಯ್ಡ್ ಒ ಬೆಂಬಲಿಸುವ ಮೊದಲ ಫೋನ್ ಆಗಿರಬಹುದು.

ಲೆನೊವೊ

ಲೆನೊವೊ

ಇತ್ತೀಚಿಗೆ ಬಿಡುಗಡೆಯಾದ ಲೆನೊವೊ K8 ಫೋನ್ ಆಂಡ್ರಾಯ್ಡ್ O ಅನ್ನು ಬೆಂಬಲಿಸುತ್ತದೆ ಎನ್ನಲಾಗಿದೆ. K6 ನೋಟ್, K6 ಪವರ್, P2, ಮತ್ತು Z2 ಪ್ಲಸ್ ನೊಗಟ್ ಅನ್ನು ಹೊಂದಿದ್ದು, ಇವುಗಳು ಆಂಡ್ರಾಯ್ಡ್ O ಗೆ ಸಪೋರ್ಟ್ ಆಗುವ ಸಂಭವ ಕಡಿಮೆಯಿದೆ.

Best Mobiles in India

English summary
One question that you must be asking is that when will Android O. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+