ಸದ್ಯದಲ್ಲೇ ಇನ್‌ಸ್ಟಾಗ್ರಾಮ್‌ ಸೇರಲಿವೆ ಈ ಉಪಯಕ್ತ ಫೀಚರ್ಸ್‌ಗಳು!

|

ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ಕೂಡ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಆಗಿ ರೂಪುಗೊಂಡಿದೆ. ಬಳಕೆದಾರರು ಮತ್ತು ಕಂಟೆಂಟ್‌ ಕ್ರಿಯೆಟರ್ಸ್‌ಗಳಿಗೆ ಉತ್ತಮ ಪ್ಲಾಟ್‌ಫಾರ್ಮ್‌ ಆಗಿ ಗುರುತಿಸಿಕೊಂಡಿದೆ. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ ಬಳಕೆದಾರರ ಅನುಭವ ಸುಧಾರಿಸಲು ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಫೇಸ್‌ಬುಕ್‌ ಒಡೆತನದ ಇನ್‌ಸ್ಟಾಗ್ರಾಮ್‌ ಫೇಸ್‌ಬುಕ್‌ ಮಾದರಿಯಲ್ಲಿಯೇ ಅನೇಕ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ಬಳಕೆದಾರರಿಗೆ ಅನೇಕ ಫೀಚರ್ಸ್‌ಗಳನ್ನು ಹೊಂದಿದೆ. ಕಾಲಕ್ಕೆ ಅನುಗುಣವಾಗಿ ಇನ್‌ಸ್ಟಾಗ್ರಾಮ್‌ ಇನ್ನು ಅನೇಕ ಫೀಚರ್ಸ್‌ಗಳನ್ನ ಪರಿಚಯಿಸುತ್ತಾ ಬಂದಿದೆ. ಇನ್ನು ಈ ವರ್ಷವೂ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುವುದಕ್ಕೆ ಸಿದ್ಧತ ನಡೆಸಿದೆ. ಇವುಗಳಲ್ಲಿ ಇಂಟರೆಸ್ಟ್-ಬೇಸ್ಡ್ ಸರ್ಚ್, ಸೆಲ್ NFT ಕಲೆಕ್ಟಿಬ್ಲೆಸ್, ಲೈಕ್ ಬಟನ್ ಫಾರ್ ಸ್ಟೋರೀಸ್, ಆಡ್ ಮ್ಯೂಸಿಕ್ ಟು ಫೀಡ್ ಪೋಸ್ಟ್ಸ ನಂತಹ ಫೀಚರ್ಸ್‌ಗಳನ್ನು ಪರಿಚಯಿಸಲಿದೆ ಎನ್ನಲಾಗಿದೆ. ಹಾಗಾದ್ರೆ ಸದ್ಯದಲ್ಲೇ ಇನ್‌ಸ್ಟಾಗ್ರಾಮ್‌ ಸೇರಲಿರುವ ಹಲವು ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಇಂಟರೆಸ್ಟ್-ಬೇಸ್ಡ್ ಸರ್ಚ್

ಇಂಟರೆಸ್ಟ್-ಬೇಸ್ಡ್ ಸರ್ಚ್

ಈ ಹೊಸ ಫೀಚರ್ಸ್‌ ಸದ್ಯದಲ್ಲೇ ಇನ್‌ಸ್ಟಾಗ್ರಾಮ್‌ ಸೇರಲಿದೆ. ಇದು ಬಳಕೆದಾರರ ಆಸಕ್ತಿಗೆ ತಕ್ಕಂತೆ ಕಂಟೆಂಟ್‌ ಅನ್ನು ಸರ್ಚ್‌ ಮಾಡಲು ಅವಕಾಶ ನೀಡಲಿದೆ. ಪ್ರಸ್ತುತ, ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಯಾವುದೇ ಒಂದು ಕಂಟೆಂಟ್‌ ಅನ್ನು ಸರ್ಚ್‌ ಮಾಡಿದ್ರೆ , ಅದಕ್ಕೆ ಸಂಬಂಧಿಸಿದ ಪೇಜ್‌ಗಳನ್ನು ಮಾತ್ರ ತೋರಿಸಲಿದೆ. ಆದರೆ ಇಂಟರೆಸ್ಟ್-ಬೇಸ್ಡ್ ಸರ್ಚ್ ಇಂಟರೆಸ್ಟ್-ಬೇಸ್ಡ್ ಸರ್ಚ್ ಮೊದಲು ಪೋಸ್ಟ್‌ಗಳು, ಖಾತೆಗಳು, ಪುಟಗಳು ಅಥವಾ ವಿಷಯದ ಮೇಲೆ ಲಭ್ಯವಿರುವ ಇತರ ಮಾಹಿತಿಯನ್ನು ತೋರಿಸುತ್ತದೆ. ಇನ್ನು ಈ ಇಂಟರೆಸ್ಟ್-ಬೇಸ್ಡ್ ಸರ್ಚ್ ಸದ್ಯಕ್ಕೆ ಕೆಲವು ಪ್ರದೇಶಗಳಲ್ಲಿ ಮಾತ್ರ ಲಭ್ಯವಾಗಲಿದೆ. ಜೊತೆಗೆ ಕೆಲವೇ ಕೆಲವು ಭಾಷೆಗಳನ್ನು ಮಾತ್ರ ಬೆಂಬಲಿಸುವ ಸಾಧ್ಯತೆ ಇದೆ.

ಸೆಲ್ NFT ಕಲೆಕ್ಟಿಬ್ಲೆಸ್

ಸೆಲ್ NFT ಕಲೆಕ್ಟಿಬ್ಲೆಸ್

ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ NFT ಗಳನ್ನು ಸೇಲ್‌ ಮಾಡಲು ಅನುತಿಸುವ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇನ್ನು ಈ ಫೀಚರ್ಸ್‌ ಬಳಕೆದಾರರಿಗೆ ಡಿಜಿಟಲ್ ಐಟಂ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸೇಲ್‌ ಮಾಡುವುದಕ್ಕೆ ಪೋಸ್ಟ್ ಮಾಡಲು ಅನುಮತಿಸುತ್ತದೆ. ಇದರಲ್ಲಿ ಪಟ್ಟಿ ಮಾಡಲಾದ NFT ಐಟಂಗಳು 'ಕಲೆಕ್ಟಿಬಲ್' ಲೇಬಲ್ ಅನ್ನು ಒಳಗೊಂಡಿರುತ್ತವೆ. ಸದ್ಯ ಇನ್‌ಸ್ಟಾಗ್ರಾಮ್‌ ಈ ಹೊಸ ಫೀಚರ್ಸ್‌ ಯಾವಾಗ ಲಭ್ಯವಾಗಲಿದೆ ಅನ್ನೊದು ಇನ್ನು ಕೂಡ ಕನ್ಫರ್ಮ್‌ ಆಗಿಲ್ಲ.

ಲೈಕ್ ಬಟನ್ ಫಾರ್ ಸ್ಟೋರೀಸ್

ಲೈಕ್ ಬಟನ್ ಫಾರ್ ಸ್ಟೋರೀಸ್

ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಲೈಕ್ ಬಟನ್ ಫಾರ್‌ ಸ್ಟೋರೀಸ್‌ ಫೀಚರ್ಸ್‌ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಸದ್ಯ ಶೇರ್ ಬಟನ್ ಅನ್ನು ಹಾರ್ಟ್ ಬಟನ್‌ ನೊಂದಿಗೆ ಬದಲಿಸುವ ಗುರಿಯನ್ನು ಹೊಂದಿದೆ. ಇದು ಬಳಕೆದಾರರ ಸ್ಟೋರೀಸ್‌ ಮೇಲೆ ಟ್ಯಾಪ್ ಮಾಡುವ ಮೂಲಕ ಲೈಕ್‌ ಮಾಡಬಹುದಾಗಿದೆ. ಇನ್ನು ಈ ಫೀಚರ್ಸ್‌ ಯಾವಾಗ ಲಭ್ಯವಾಗಲಿದೆ ಅನ್ನೊದು ಇನ್ನು ತಿಳಿದು ಬಂದಿಲ್ಲ.

ಆಡ್ ಮ್ಯೂಸಿಕ್ ಟು ಫೀಡ್ ಪೋಸ್ಟ್ಸ

ಆಡ್ ಮ್ಯೂಸಿಕ್ ಟು ಫೀಡ್ ಪೋಸ್ಟ್ಸ

ಇತ್ತೀಚೆಗೆ ಇನ್‌ಸ್ಟಾಗ್ರಾಮ್ ನಿಯಮಿತ ಫೀಡ್ ಪೋಸ್ಟ್‌ಗಳಿಗೆ ಮ್ಯೂಸಿಕ್‌ ಪರಿಚಯಿಸಲು ಕಾರ್ಯನಿರ್ವಹಿಸುತ್ತಿದೆ ಎನ್ನಲಾಗ್ತಿದೆ. ಪ್ರಸ್ತುತ, ಇನ್‌ಸ್ಟಾಗ್ರಾಮ್‌ನಲ್ಲಿ ಇಮೇಜ್‌ಗಳು ಮತ್ತು ವೀಡಿಯೊಗಳನ್ನು ಅಪ್‌ಲೋಡ್ ಮಾಡಿದಾಗ, ಬಳಕೆದಾರರನ್ನು ಟ್ಯಾಗ್ ಮಾಡಲು ಮತ್ತು ಸ್ಥಳಗಳನ್ನು ಸೇರಿಸಲು ಮಾತ್ರ ಅನುಮತಿಸುತ್ತದೆ. ಆದರೆ ಈ ಹೊಸ ಫೀಚರ್ಸ್‌ ಪರಿಚಯಿಸಿದ ನಂತರ ಮ್ಯೂಸಿಕ್‌ ಆಡ್‌ ಮಾಡುವುದಕ್ಕೆ ಅನುಮತಿಸಲಿದೆ. ಇದು ಬಳಕೆದಾರರು ತಮ್ಮ ಟೈಮ್‌ಲೈನ್‌ನಲ್ಲಿ ಶೇರ್‌ ಮಾಡುವುದಕ್ಕೆ ಮ್ಯೂಸಿಕ್‌ ಅನ್ನು ಸೇರಿಸಲು ಅನುಮತಿಸುತ್ತದೆ.

ಇನ್‌ಸ್ಟಾಗ್ರಾಮ್‌ ಫ್ಯಾನ್‌ ಕ್ಲಬ್

ಇನ್‌ಸ್ಟಾಗ್ರಾಮ್‌ ಫ್ಯಾನ್‌ ಕ್ಲಬ್

ಇನ್‌ಸ್ಟಾಗ್ರಾಮ್ ಸದ್ಯದಲ್ಲೇ ಹೊಸ 'ಫ್ಯಾನ್ ಕ್ಲಬ್' ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದು ಟ್ವಿಟರ್ ಸೂಪರ್ ಫಾಲೋಸ್ ಅಥವಾ ಓನ್ಲಿಫ್ಯಾನ್ಸ್ ನಂತಹ ವಿಶೇಷ ಚಂದಾದಾರಿಕೆ ಆಧಾರಿತ ಕಮ್ಯೂನಿಟಿಯನ್ನು ಕ್ರಿಯೆಟ್‌ ಮಾಡಲು ಅವಕಾಶ ನೀಡಲಿದೆ. ಫ್ಯಾನ್ ಕ್ಲಬ್ ಫೊಸ್ಟ್‌ಗಳನ್ನು ಶೇರ್‌ ಮಾಡುವುದಕ್ಕೆ, ಪ್ರತ್ಯೇಕವಾಗಿ ಲೈವ್ ಸೆಶನ್‌ಗಳನ್ನು ನಡೆಸಲು ಅನುಮತಿಸುತ್ತದೆ.

24-ಗಂಟೆಗಳ ಸ್ಟೇಟಸ್‌ ಸೆಟ್‌ ಮಾಡಿ

24-ಗಂಟೆಗಳ ಸ್ಟೇಟಸ್‌ ಸೆಟ್‌ ಮಾಡಿ

ಲಭ್ಯವಿರುವ ಮಾಹಿತಿ ಪ್ರಕಾರ ಇನ್‌ಸ್ಟಾಗ್ರಾಮ್ ತನ್ನ ವೇದಿಕೆಯಲ್ಲಿ 24 ಗಂಟೆಗಳ ಸ್ಟೇಟಸ್‌ ಸೆಟ್‌ ಮಾಡುವುದಕ್ಕೆ ಮುಂದಾಗಿದೆ. ವಾಟ್ಸಾಪ್‌ ಸ್ಟೇಟಸ್‌ ಮಾದರಿಯಲ್ಲಿಯೇ ಹೊಸ ಫಿಚರ್ಸ್‌ ಪರಿಚಯಿಸಿದೆ. 24 ಗಂಟೆಗಳ ಸ್ಟೇಟಸ್ ಫೀಚರ್ ಪ್ರಸ್ತುತ ಇನ್‌ಸ್ಟಾಗ್ರಾಮ್‌ನ ಮೀಸಲಾದ ಮೆಸೇಜಿಂಗ್ ಆಪ್ ಥ್ರೆಡ್‌ಗಳಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ಮೇನ್‌ ಅಪ್ಲಿಕೇಶನ್‌ಗೆ ತರುವ ಹೆಚ್ಚಿನ ಅವಕಾಶವಿದೆ.

Best Mobiles in India

Read more about:
English summary
Instagram has transitioned from a mere photo-sharing app to a feature-packed social platform for users and content creators.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X