10,000ರೂ, ಒಳಗೆ ನೀವು ಖರೀದಿಸಬಹುದಾದ ಅತ್ಯುತ್ತಮ TWS ಇಯರ್‌ಬಡ್ಸ್‌!

|

ಕಳೆದ ಕೆಲವು ವರ್ಷಗಳಿಂದ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಇಯರ್‌ಫೋನ್‌ಗಳನ್ನು ಕೊಡುವುದನ್ನು ಸ್ಟಾಪ್‌ ಮಾಡಲಾಗಿದೆ. ಇದಕ್ಕೆ ಬದಲಾಗಿ ಸ್ಮಾರ್ಟ್‌ಫೋನ್‌ ಬಳಸುವವರು ತಮಗೆ ಬೇಕಾದ ಇಯರ್‌ಫೋನ್‌ಗಳನ್ನು ಖರೀದಿಸಬಹುದಾಗಿದೆ. ಆದರಿಂದ ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ಗಳಿಗಿರುವಷ್ಟೇ ಬೇಡಿಕೆ ಇಯರ್‌ಫೋನ್‌ಗಳು ಕೂಡ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ಇಯರ್‌ಫೋನ್‌‌ಗಳನ್ನು ಪರಿಚಯಿಸಿವೆ. ಇನ್ನು ಇತ್ತೀಚಿನ ದಿನಗಳಲ್ಲಿ ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿವೆ.

ಇಯರ್‌ಬಡ್ಸ್‌ಗಳು

ಹೌದು, ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಇಯರ್‌ಬಡ್ಸ್‌ಗಳು ಮಲ್ಟಿ ಟಾಸ್ಕಿಂಗ್‌ ಫೀಚರ್ಸ್‌ ಅನ್ನು ಒಳಗೊಂಡಿವೆ. ಸದ್ಯ ಭಾರತದಲ್ಲಿ ಹಲವು ಬೆಲೆಗಳ ವಿಭಾಗದಲ್ಲಿ ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳು ಲಭ್ಯವಿದೆ. ಹಾಗಾದ್ರೆ ಭಾರತದಲ್ಲಿ 10,000 ರೂ.ಗಳ ಒಳಗೆ ನೀವು ಖರೀದಿಸಬಹುದಾದ ಕೆಲವು ಅತ್ಯುತ್ತಮ ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಥಿಂಗ್ ಇಯರ್‌ 1

ನಥಿಂಗ್ ಇಯರ್‌ 1

ನಥಿಂಗ್ ಇಯರ್ 1 ಟ್ರೂಲಿ ವಾಯರ್‌ ಇಯರ್‌ಫೋನ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಹೊಂದಿದೆ. ಇದರಲ್ಲಿ ಅನಗತ್ಯ ಸೌಂಡ್‌ ಅನ್ನು ಕ್ಯಾನ್ಸಲೇಶನ್‌ ಮಾಡಲು ಮೂರು ಹೈ ಡೆಫಿನಿಷನ್ ಮೈಕ್‌ಗಳೊಂದಿಗೆ ಬರುತ್ತವೆ. ಈ ಇಯರ್‌ಬಡ್ಸ್‌ ವಿಶಿಷ್ಟವಾದ ಪಾರದರ್ಶಕ ಸಾಧನವನ್ನು ಹೊಂದಿವೆ. ಈ ಡಿವೈಸ್‌ 34 ಗಂಟೆಗಳವರೆಗಿನ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಅಲ್ಲದೆ ಈ ಇಯರ್‌ಬಡ್ಸ್‌ 11.6 ಎಂಎಂ ಆಡಿಯೋ ಡ್ರೈವರ್ ಅನ್ನು ಹೊಂದಿದೆ. ಇವುಗಳಲ್ಲಿ ಮೀಡಿಯಂ ಬ್ಯಾಕ್‌ಗ್ರೌಂಡ್‌ ವಾಯ್ಸ್‌ ಕ್ಯಾನ್ಸಲೇಶನ್‌ ಲೈಟ್ ಮೋಡ್ ಮತ್ತು ಅತ್ಯಂತ ಗದ್ದಲದ ಸೆಟ್ಟಿಂಗ್‌ಗಳಲ್ಲಿ ನಾಯ್ಸ್‌ ಅನ್ನು ಕ್ಯಾನ್ಸಲೇಶನ್‌ ಮಾಡುವ ಗರಿಷ್ಠ ಮೋಡ್ ಅನ್ನು ಒಳಗೊಂಡಿದೆ. ಈ ಇಯರ್‌ಫೋನ್‌ಗಳು ಫ್ಲಿಪ್‌ಕಾರ್ಟ್ ನಲ್ಲಿ 5,999 ರೂಗಳಲ್ಲಿ ಲಭ್ಯವಿದೆ.

ಒನ್‌ಪ್ಲಸ್ ಬಡ್ಸ್ ಪ್ರೊ

ಒನ್‌ಪ್ಲಸ್ ಬಡ್ಸ್ ಪ್ರೊ

ಇನ್ನು ಇನ್‌ಪ್ಲಸ್‌ ಬಡ್ಸ್ ಪ್ರೊ ಇಯರ್‌ಬಡ್ಸ್‌ ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ 9,990 ರೂ.ಬೆಲೆಗೆ ಲಭ್ಯವಾಗಲಿದೆ. ಈ ಇಯರ್‌ಬಡ್ಸ್‌ 11ಎಂಎಂ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು ಹೈ-ಡೆಫಿನಿಷನ್ ಆಡಿಯೊ ಪ್ಲೇಬ್ಯಾಕ್‌ಗಾಗಿ ಎಲ್‌ಎಚ್‌ಡಿಸಿ ಕೊಡೆಕ್‌ಗೆ ಬೆಂಬಲವನ್ನು ನೀಡುತ್ತದೆ. ಇಯರ್‌ಬಡ್ಸ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಒಳಗೊಂಡಿದೆ. ಇನ್ನು ಈ ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ 38 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತವೆ ಎಂದು ಹೇಳಲಾಗಿದೆ.

ಸೋನಿ WF-XB700

ಸೋನಿ WF-XB700

ಸೋನಿ ಕಂಪೆನಿಯ ಸೋನಿ WF-XB700 ಪ್ರಸ್ತುತ ಭಾರತದಲ್ಲಿ 7,990 ರೂಗಳಿಗೆ ಲಭ್ಯವಾಗಲಿದೆ. ಈ ಇಯರ್‌ಬಡ್ಸ್‌ ಸೋನಿಯ ಎಕ್ಸ್‌ಟ್ರಾ ಬಾಸ್ ಸರಣಿಯಲ್ಲಿ ಬರಲಿದೆ. ಆದ್ದರಿಂದ ಇದರಲ್ಲಿ ನೀವು ಡೀಪ್‌ ಮತ್ತು ಪಂಚ್ ಬಾಸ್ ಅನ್ನು ನಿರೀಕ್ಷಿಸಬಹುದು. ಇನ್ನು ಈ ಡಿವೈಸ್‌ 12 ಎಂಎಂ ಆಡಿಯೋ ಡ್ರೈವರ್‌ ಅನ್ನು ಹೊಂದಿದೆ. ಇದು ಬ್ಲೂಟೂತ್ 5.0 ಅನ್ನು ಬೆಂಬಲಿಸಲಿದೆ. ಇನ್ನು ಈ ಇಯರ್‌ಬಡ್ಸ್‌ 9 ಗಂಟೆಗಳ ಹೆಚ್ಚುವರಿ 9 ಗಂಟೆಗಳ ಪ್ಲೇಬ್ಯಾಕ್ ನೀಡಲಿದೆ. ಇದರಲ್ಲಿ ನೀವು ಟ್ರ್ಯಾಕ್‌ಗಳ ಮೂಲಕ ಸ್ಕಿಪ್ ಮಾಡಲು ಮತ್ತು ವಾಲ್ಯೂಮ್ ಅನ್ನು ಸರಿಹೊಂದಿಸಲು ಬಳಸಬಹುದು.

ಸ್ಕಲ್‌ಕ್ಯಾಂಡಿ ಇಂಡಿ ಇವೊ

ಸ್ಕಲ್‌ಕ್ಯಾಂಡಿ ಇಂಡಿ ಇವೊ

ಈ ಇಯರ್‌ಬಡ್ಸ್ ಅನ್ನು ನೀವು ಸ್ವಂತವಾಗಿ ಬಳಸಿದಾಗ 6 ಗಂಟೆಗಳವರೆಗೆ ಬಾಳಿಕೆ ಬರಲಿದೆ ಆದರೆ ಇದರ ಚಾರ್ಜಿಂಗ್‌ ಕೇಸ್‌ನೊಂದಿಗೆ ಬಳಸಿದಾಗ ಹೆಚ್ಚುವರಿಯಾಗಿ 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಈ ಇಯರ್‌ಬಡ್ಸ್‌ ಬೆವರು, ನೀರು ಮತ್ತು ಧೂಳಿನ ಪ್ರತಿರೋಧವನ್ನು ಹೊಂದಿದ್ದು, IP55 ರೇಟ್‌ನೊಂದಿಗೆ ಬರುತ್ತದೆ.

ಒಪ್ಪೋ ಎನ್ಕೋ X

ಒಪ್ಪೋ ಎನ್ಕೋ X

ಒಪ್ಪೋ ಕಂಪೆನಿ ಪರಿಚಯಿಸಿರುವ ಒಪ್ಪೋ ಎನ್ಕೋ X ಇಯರ್‌ಬಡ್ಸ್‌ ಅತ್ಯುತ್ತಮ ಇಯರ್‌ಬಡ್ಸ್‌ಗಳಲ್ಲಿ ಒಂದಾಗಿದೆ. ಇನ್ನು ಈ ಇಯರ್‌ಬಡ್ಸ್‌ ಉತ್ತಮವಾದ ನಾಯ್ಸ್‌ ಕ್ಯಾನ್ಸಲೇಶನ್‌ ಮತ್ತು ಸುಧಾರಿತ ಧ್ವನಿ ಅನುಭವಕ್ಕಾಗಿ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಒಳಗೊಂಡಿದೆ. ಇನ್ನು ಈ ಡಿವೈಸ್‌ ಒಂದು ಬಾರಿ ಚಾರ್ಜ್ ಮಾಡಿದರೆ 25 ಗಂಟೆಗಳ ಬ್ಯಾಟರಿ ಬಾಳಿಕೆ ನೀಡುತ್ತದೆ. ಅಲ್ಲದೆ ಇದರ ಕೇಸ್ ತೆರೆದಾಗ ಇಯರ್‌ಫೋನ್‌ಗಳು ಸ್ವಯಂಚಾಲಿತವಾಗಿ ನಿಮ್ಮ ಆಯ್ಕೆಯ ಡಿವೈಸ್‌ಗೆ ಕನೆಕ್ಟ್‌ ಆಗಲಿದೆ. ಈ ಇಯರ್ ಬಡ್ಸ್‌ ಅಮೆಜಾನ್ ಸೈಟ್‌ನಲ್ಲಿ 9,999 ರೂ, ಬೆಲೆಯಲ್ಲಿ ಲಭ್ಯವಾಗಲಿದೆ.

ಪಿಕ್ಸೆಲ್ ಬಡ್ಸ್ ಎ-ಸೀರೀಸ್‌

ಪಿಕ್ಸೆಲ್ ಬಡ್ಸ್ ಎ-ಸೀರೀಸ್‌

ಪಿಕ್ಸೆಲ್ ಬಡ್ಸ್ ಎ-ಸೀರೀಸ್ ನಿಮಗೆ ಫ್ಲಿಪ್‌ಕಾರ್ಟ್‌ ಮೂಲಕ ಕೇವಲ 9,999ರೂ,ಗಳಿಗೆ ಲಭ್ಯವಾಗಲಿದೆ. ಇನ್ನು ಈ ಇಯರ್‌ಬಡ್ಸ್‌ 12 ಎಂಎಂ ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಪ್ಯಾಕ್ ಮಾಡಲಿದೆ. ಅಲ್ಲದೆ ಈ ಇಯರ್‌ಬಡ್ಸ್‌ ನಿಮ್ಮ ಸುತ್ತಮುತ್ತಲಿನ ಆಧಾರದ ಮೇಲೆ ವಾಲ್ಯೂಮ್ ಅನ್ನು ಸರಿಹೊಂದಿಸುವ ಅಡಾಪ್ಟಿವ್ ಸೌಂಡ್ ಫೀಚರ್ ಅನ್ನು ಗೂಗಲ್ ನೀಡಿದೆ. ಈ ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್‌ ಬಾಸ್ ಬೂಸ್ಟ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ, ಇದು ಹೆಚ್ಚು ಶಕ್ತಿಯುತವಾದ ಬಾಸ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ. ಈ ವೈರ್‌ಲೆಸ್ ಇಯರ್‌ಬಡ್‌ಗಳು ಸಂಪರ್ಕಕ್ಕಾಗಿ ಬ್ಲೂಟೂತ್ 5.0 ಅನ್ನು ಬೆಂಬಲಿಸುತ್ತವೆ.

Best Mobiles in India

Read more about:
English summary
The best TWS earphones under Rs 10,000 for September 2021.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X