ಬಜೆಟ್ ಐಫೋನ್ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ಎಂಬುದಕ್ಕೆ ಮತ್ತಷ್ಟು ಸಾಕ್ಷ್ಯ ಲಭ್ಯ

By Gizbot Bureau
|

ಕೈಗೆಟುಕುವ ಬೆಲೆಯ ಐಫೋನ್ ಗಳನ್ನು ಆಪಲ್ ಸಂಸ್ಥೆ ಬಿಡುಗಡೆಗೊಳಿಸಲಿದೆ ಎಂಬ ಬಗೆಗಿನ ವದಂತಿಗಳು ಹಲವು ದಿನಗಳಿಂದ ಹರಿದಾಡುತ್ತಲೇ ಇವೆ.ಈ ವದಂತಿಗಳು ಹೇಳುವ ಪ್ರಕಾರ ಈ ಫೋನ್ ಗಳು ಐಫೋನ್ ಎಸ್ಇಯ ಯಶಸ್ವಿ ಸರಣಿ ಫೋನ್ ಗಳಾಗಿರುತ್ತವೆ ಎನ್ನಲಾಗುತ್ತಿದೆ. ಇದೀಗ ಮ್ಯಾಕ್ ರೂಮರ್ ಒಂದು ವರದಿ ಮಾಡಿರುವ ಪ್ರಕಾರ ಈ ಬಜೆಟ್ ಐಫೋನ್ ಗಳ ಪ್ರೊಡಕ್ಷನ್ ಕೆಲಸಗಳು ಫೆಬ್ರವರಿ 2020 ರಿಂದ ಆರಂಭವಾಗಲಿದೆಯಂತೆ.

ಹೊಸ ವದಂತಿ

ಈ ಹೊಸ ವದಂತಿಯು ಹಳೆಯ ಸುದ್ದಿಗೆ ಪುಷ್ಠಿ ನೀಡುವಂತಿದ್ದು ಈ ಹಿಂದೆ,2020 ರ ಮೊದಲ ತ್ರೈಮಾಸಿಕದಲ್ಲಿ ಆಪಲ್ ಸಂಸ್ಥೆ ಬಜೆಟ್ ಐಫೋನ್ ಗಳನ್ನು ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗುತ್ತಿತ್ತು.

ಮ್ಯಾಕ್ರೂಮರ್ಸ್ ವರದಿ

ಮ್ಯಾಕ್ರೂಮರ್ಸ್ ವರದಿಯ ಪ್ರಕಾರದ ಬಾರ್ಕ್ಲೇಸ್ ನ ವಿಶ್ಲೇಷಕರು ಹೇಳಿರುವ ಪ್ರಕಾರ ಫೆಬ್ರವರಿಯಿಂದ ಬಜೆಟ್ ಐಫೋನ್ ಗಳ ಉತ್ಪಾದನೆ ಪ್ರಾರಂಭವಾಗಲಿದೆ. ಬಾರ್ಕ್ಲೇಸ್ ನ ವಿಶ್ಲೇಷಕರು ತಮ್ಮ ಅಧ್ಯಯನದಲ್ಲಿ ತಾವು ಆಪಲ್ ಸಪ್ಲೈ ಚೈನ್ ನ ತಯಾರಕರನ್ನು ಭೇಟಿ ಮಾಡಿದ್ದು ಅವರು ಹೇಳಿರುವ ಪ್ರಕಾರದ ಅಂದಾಜು ತಯಾರಿಕೆಯ ವೆಚ್ಚವನ್ನು ಕೂಡ ನೀಡಿದ್ದಾರೆ.

ಆಪಲ್ ವಿಶ್ಲೇಷ

ಈ ಹಿಂದೆ ಪ್ರಸಿದ್ಧ ಆಪಲ್ ವಿಶ್ಲೇಷಕ ಮಿಂಗ್ ಚಿ-ಕುವೋ ಕೂಡ ಮಾರ್ಚ್ ವೇಳೆಗೆ ಐಫೋನ್ ಬರಲಿದೆ ಎಂದು ಸೂಚಿಸಿದ್ದಾರೆ. ಕು ಹೇಳಿರುವ ಪ್ರಕಾರ ಹೊಸ ಐಫೋನ್ ಗಳು ಹೆಚ್ಚುಕಡಿಮೆ ಐಫೋನ್ 8 ರೀತಿಯೇ ಕಾಣಲಿದೆ ಎಂದಿದ್ದಾರೆ. ಐಫೋನ್ 8 2017 ರಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿತ್ತು. ಆದರೆ ಇದು ಹೊಸ ಎ13 ಬಯೋನಿಕ್ ಚಿಪ್ ನ್ನು ಹೊಂದಿರುತ್ತದೆ. ಈ ಚಿಪ್ 2019 ರ ಐಫೋನ್ ಮಾಡೆಲ್ ಗಳಲ್ಲಿ ನಾವು ಕಾಣಬಹುದಾಗಿದೆ. ಐಫೋನ್ ನಲ್ಲಿ ಎಷ್ಟು ಮೆಮೊರಿ ವ್ಯವಸ್ಥೆ ಇರುತ್ತದೆ ಎಂಬ ಬಗ್ಗೆ ಆಪಲ್ ಯಾವಾಗಲೂ ಕೂಡ ಗುಟ್ಟು ಬಿಟ್ಟುಕೊಡುವುದಿಲ್ಲ ಆದರೆ ಈ ಬಾರಿ ಕು ಹೇಳುವ ಪ್ರಕಾರ 3GB RAM ವ್ಯವಸ್ಥೆ ಇದರಲ್ಲಿ ಇರಲಿದೆ ಎಂದಿದ್ದಾರೆ.

ವದಂತಿಗಳ ಪ್ರಕಾರ ಐಫೋನ್ ಎಸ್ಇ2 ಐಫೋನ್ 8 ರ ಫಾರ್ಮ್ ಫ್ಯಾಕ್ಟರ್ ಮತ್ತು ನೋಟವನ್ನು ಹೋಲುತ್ತದೆ. ಜೊತೆಗೆ 4.7 ಇಂಚಿನ ಡಿಸ್ಪ್ಲೇಯನ್ನು ಹೊಂದುವ ನಿರೀಕ್ಷೆ ಇದೆ. ವದಂತಿಗಳ ಪ್ರಕಾರ ಇದರಲ್ಲಿ ಫೇಸ್ ಐಡಿ ಇರುವುದಿಲ್ಲ ಆದರೆ ಭದ್ರತೆಗಾಗಿ ಟಚ್ ಐಡಿಯನ್ನು ಅಳಡಿಸಲಾಗುತ್ತದೆ. ಅಂದರೆ ಹೋಮ್ ಬಟನ್ ನ್ನು ಐಫೋನ್ ಎಸ್ಇ2 ನಲ್ಲೂ ಕೂಡ ನಿರೀಕ್ಷಿಸಬಹುದು.

ಈ ವರ್ಷದ ಆರಂಭದಲ್ಲಿ ನಿಕ್ಕೀ ಮೊದಲ ಬಾರಿಗೆ ಕೈಗೆಟುಕುವ ಬೆಲೆಯ ಐಫೋನ್ ಗಳ ಬಗ್ಗೆ ವರದಿ ಮಾಡಿ ವದಂತಿ ಮಾಡಿದ್ದರು. ಆಪಲ್ ಬಹಳ ಬೆಲೆಯ ಬಗ್ಗೆ ಪ್ರಜ್ಞೆಯನ್ನು ಹೊಂದಿದೆ ಮತ್ತು ಐಫೋನ್ ಎಸ್ಇ2 ಬಗ್ಗೆ ಹಬ್ಬುತ್ತಿರುವ ವದಂತಿಗಳು ನಿಜವೆಂದು ಕಾಣುತ್ತದೆ ಎಂದಿದ್ದರು. ಕಳೆದ ವರ್ಷ ಬಿಡುಗಡೆಗೊಂಡಿದ್ದ ಐಫೋನ್ ಎಕ್ಸ್ ಆರ್ ಗಿಂತ ಈ ವರ್ಷ ಬಿಡುಗಡೆಗೊಂಡಿದ್ದ ಐಫೋನ್ 11 12,000 ರುಪಾಯಿ ಕಡಿಮೆ ಬೆಲೆಯನ್ನು ಹೊಂದಿತ್ತು. ಆದರೆ ಐಫೋನ್ ಎಸ್ಇ2 ಎಷ್ಟು ಬೆಲೆಯನ್ನು ಹೊಂದಿರುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಆದರೆ ಕೈಗೆಟುಕುವ ಬೆಲೆಯನ್ನು ನಿರೀಕ್ಷಿಸಬಹುದು ಎಂದಷ್ಟೇ ಹೇಳಲಾಗುತ್ತದೆ. ಯಾವುದಕ್ಕೂ ಕಾದುನೋಡಬೇಕಷ್ಟೇ!

Most Read Articles
Best Mobiles in India

Read more about:
English summary
Here Is The Proof For The Existence Of The Budget iPhone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X