ಆನ್‌ಲೈನ್‌ನಲ್ಲಿ ಸುಲಭವಾಗಿ ಹಣಗಳಿಸುವುದಕ್ಕೆ ಈ 10 ಮಾರ್ಗಗಳನ್ನು ಅನುಸರಿಸಿ!

|

ಇಂದಿನ ದಿನಗಳಲ್ಲಿ ಇಂಟರ್‌ನೆಟ್‌ ನಮ್ಮ ದೈನಂದಿನ ಜೀವನ ಅವಿಭಾಜ್ಯ ಅಂಗವಾಗಿದೆ. ಇಂಟರ್‌ನೆಟ್‌ ಇಂದು ಎಲ್ಲಾ ಕೆಲಸಗಳನ್ನು ಸುಲಭ ಮಾಡಿದೆ. ಹಣ ಪಾವತಿ ಮಾಡುವುದರಿಂದ ಹಿಡಿದು ಮನೆಯಲ್ಲಿಯೇ ಕುಳಿತು ಹಣ ಸಂಪಾದನೆ ಮಾಡುವ ತನಕ ಇಂಟರ್‌ನೆಟ್‌ ಸಹಾಯಕವಾಗಿದೆ. ಅಷ್ಟೇ ಅಲ್ಲ ಇಂಟರ್‌ನೆಟ್‌ ಮೂಲಕ ಹಣಗಳಿಸಲು ಸಾಕಷ್ಟು ಮಾರ್ಗಗಳು ಕೂಡ ಲಭ್ಯವಿದೆ. ಡಿಜಿಟಲೀಕರಣ ಹೆಚ್ಚಾದಂತೆ ಆನ್‌ಲೈನ್‌ ಮೂಲಕ ಹಣಗಳಿಸುವ ಹೊಸಹೊಸ ಅವಕಾಶಗಳು ಕೂಡ ತೆರೆದುಕೊಳ್ಳುತ್ತಿವೆ.

ಇಂಟರ್‌ನೆಟ್‌

ಹೌದು, ಇಂದು ಮನೆಯಲ್ಲಿಯೇ ಕುಳಿತು ಹಣ ಸಂಪಾದನೆ ಮಾಡುವುದಕ್ಕೆ ಇಂಟರ್‌ನೆಟ್‌ನಲ್ಲಿ ಹಲವು ಅವಕಾಶಗಳಿವೆ. ಆನ್‌ಲೈನ್‌ ಮೂಲಕ ಹಣಗಳಿಸುವ ವಿಚಾರದಲ್ಲಿ ಅನೇಕ ನಕಲಿ ವೆಬ್‌ಸೈಟ್‌ಗಳ ಹಾವಳಿ ಕೂಡ ಇದೆ. ಇದರ ನಡುವೆ ಆನ್‌ಲೈನ್‌ ಮೂಲಕ ಹಣ ಗಳಿಸುವುದಕ್ಕೆ ನಿಜವಾಗಿಯೂ ಅವಕಾಶ ನೀಡುವ ಅನೇಕ ವೆಬ್‌ಸೈಟ್‌ಗಳಿವೆ. ವೀಡಿಯೋ ವೀಕ್ಷಣೆಯಿಂದ ಹಿಡಿದ ವೆಬ್‌ಸೈಟ್‌ಗೆ ಬೇಟಿ ನೀಡುವ ಮೂಲಕವೂ ಹಣ ಸಂಪಾದಿಸುವುದಕ್ಕೆ ಹಲವು ದಾರಿಗಳಿವೆ.

ಇಂಟರ್‌ನೆಟ್‌

ಇಂಟರ್‌ನೆಟ್‌ ಬಳಸಿಕೊಂಡು ಹಣ ಸಂಪಾದನೆ ಮಾಡುವುದಕ್ಕೆ ಹಲವು ಮಾರ್ಗಗಳು ಲಭ್ಯವಿದೆ. ಆದರೆ ಆನ್‌ಲೈನ್‌ನಲ್ಲಿ ಹಣ ನೀಡುವ ನೆಪದಲ್ಲಿ ಹಲವು ನಕಲಿ ವೆಬ್‌ಸೈಟ್‌ಗಳು ಜನರನ್ನು ದಾರಿ ತಪ್ಪಿಸುತ್ತಿದೆ. ಆದರೆ ನಿಜವಾಗಿಯೂ ಜನರಿಗೆ ಆನ್‌ಲೈನ್‌ ಮೂಲಕ ಹಣ ಗಳಿಸುವುದಕ್ಕೆ ಅನೇಕ ಅವಕಾಶಗಳಿವೆ. ಅದರಲ್ಲೂ ನೀವು ವೆಬ್‌ಸೈಟ್‌ಗಳಿಗೆ ಪ್ರವೇಶ ನೀಡಿದರೂ ಕೂಡ ಹಣ ಸಿಗಲಿದೆ. ಅಷ್ಟೇ ಅಲ್ಲ ಆನ್‌ಲೈನ್‌ನಲ್ಲಿ ಗೇಮ್‌ ಆಡಿದರೂ ಕೂಡ ಹಣ ನೀಡುವ ಗೇಮ್‌ಗಳು ಲಭ್ಯವಿದೆ. ಇದಕ್ಕಾಗಿ ನಿಮಗೆ ಯಾವುದೇ ವಿಶೇಷ ಕೌಶಲ್ಯಗಳ ಅವಶ್ಯಕತೆ ಇಲ್ಲದಿರೋದು ಇನ್ನು ವಿಶೇಷ. ಸದ್ಯ ನಿಮಗೆ ಆನ್‌ಲೈನ್‌ನಲ್ಲಿ ಹಣ ಗಳಿಸಲು ಲಭ್ಯವಿರುವ 10 ಮಾರ್ಗಗಳು ಇಲ್ಲಿವೆ ಓದಿರಿ.

PTC ಸೈಟ್‌

PTC ಸೈಟ್‌

ವೆಬ್‌ಸೈಟ್‌ ಅನ್ನು ಕ್ಲಿಕ್‌ ಮಾಡಿದರೆ ಸಾಕು ಹಣಗಳಿಸಬಹುದಾದ ಆನ್‌ಲೈನ್‌ ವೆಬ್‌ಸೈಟ್‌ಗಳಿವೆ. Neobox ಮತ್ತು BUXP ನಂತಹ ಪೇಯ್ಡ್-ಟು-ಕ್ಲಿಕ್ (PTC) ವೆಬ್‌ಸೈಟ್‌ಗಳ ಮೂಲಕ ಪಾವತಿಗಳನ್ನು ಮಾಡಲಾಗುತ್ತದೆ. ಈ ಸೈಟ್‌ಗಳಲ್ಲಿನ ಜಾಹೀರಾತುಗಳನ್ನು ಕ್ಲಿಕ್ ಮಾಡುವ ಮೂಲಕ ನೀವು ಹಣವನ್ನು ಗಳಿಸಬಹುದಾಗಿದೆ. ಅಷ್ಟೇ ಅಲ್ಲ ಬೇರೆಯವರಿಗೆ ಲಿಂಕ್‌ ಮೂಲಕ ರೆಫರೆನ್ಸ್‌ ಮಾಡಿದ್ರೆ ನಿಮಗೆ ಬಹುಮಾನಗಳು ಕೂಡ ದೊರೆಯಲಿದೆ.

ವೀಡಿಯೊಗಳನ್ನು ವೀಕ್ಷಿಸಿ

ವೀಡಿಯೊಗಳನ್ನು ವೀಕ್ಷಿಸಿ

ಇನ್ನು ಆನ್‌ಲೈನ್‌ನಲ್ಲಿ ವೀಡಿಯೋಗಳನ್ನು ವೀಕ್ಷಣೆ ಮಾಡಿದರೂ ಕೂಡ ಹಣ ಗಳಿಸುವುದಕ್ಕೆ ಅವಕಾಶವಿದೆ. ನೀವು ಸಂಶೋಧನಾ ಸಂಸ್ಥೆ ನೀಲ್ಸನ್ ವೀಡಿಯೊಗಳನ್ನು ನೋಡುವ ಮೂಲಕ ಹಣವನ್ನು ಗಳಸಿಬಹುದು. ಇದಕ್ಕಾಗಿ ಹಣ ಪಡೆಯಲು Netflix ನಲ್ಲಿ ಟ್ಯಾಗರ್ ಆಗಬಹುದು. ಇದಲ್ಲದೆ ವೀಡಿಯೊಗಳನ್ನು ವೀಕ್ಷಿಸಲು InboxDollars ಸಹ ನಿಮಗೆ ಹಣ ಪಾವತಿಸುತ್ತದೆ.

ಸೊಶೀಯಲ್‌ ಮೀಡಿಯಾದಲ್ಲಿ ಪ್ರಮೋಷನ್‌

ಸೊಶೀಯಲ್‌ ಮೀಡಿಯಾದಲ್ಲಿ ಪ್ರಮೋಷನ್‌

ಸೊಶೀಯಲ್‌ ಮೀಡಿಯಾದಲ್ಲಿ ಪ್ರಮೋಷನ್‌ ಮಾಡುವ ಮೂಲಕ ಕೂಡ ಆನ್‌ಲೈನ್‌ನಲ್ಲಿ ಹಣಗಳಿಸಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವ್ಯಾಪಾರಗಳು ಅವುಗಳ ಬಗ್ಗೆ ಮತ್ತು ಅವರ ಉತ್ಪನ್ನಗಳು ಅಥವಾ ಸೇವೆಗಳ ಕುರಿತು ಪೋಸ್ಟ್ ಮಾಡಿದರೆ ನಿಮಗೆ ಹಣ ಪಾವತಿಸುತ್ತಾರೆ. ಇದಕ್ಕಾಗಿಯೇ ನಿಮಗೆ ಪ್ರಾಯೋಜಿತ ಪೋಸ್ಟ್‌ಗಳು ಚಿತ್ರಗಳನ್ನು ಶೇರ್‌ ಮಾಡುವುದಕ್ಕೆ ಅವಕಾಶ ನೀಡುತ್ತಾರೆ.ಪ್ರಾಯೋಜಿತ ಪೋಸ್ಟ್‌ಗಳು ಉತ್ಪನ್ನಗಳ ಚಿತ್ರಗಳನ್ನು ಹಂಚಿಕೊಳ್ಳುವುದು ಮತ್ತು Twitter, Instagram ಮತ್ತು Facebook ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅವುಗಳ ಕುರಿತು ಮಾತನಾಡುವುದನ್ನು ಒಳಗೊಂಡಿರುತ್ತದೆ.

ಟೆಸ್ಟ್‌ ವೆಬ್‌ಸೈಟ್‌

ಟೆಸ್ಟ್‌ ವೆಬ್‌ಸೈಟ್‌

ಇದಲ್ಲದೆ ನೀವು ಯಾವುದೇ ಟೆಕ್ನಿಕಲ್‌ ಜ್ಞಾನವಿಲ್ಲದೆ ಹೋದರೂ ಕೂಡ ಆನ್‌ಲೈನ್‌ನಲ್ಲಿ ಹಣ ಗಳಿಸುವುದಕ್ಕೆ ಟೆಸ್ಟ್‌ ವೆಬ್‌ಸೈಟ್‌ ಉತ್ತಮ ಆಯ್ಕೆಯಾಗಿದೆ. ಟೆಸ್ಟ್‌ ವೆಬ್‌ಸೈಟ್‌ಗಳಲ್ಲಿ ಸಮಯ ಕಳೆಯಲು ಮತ್ತು ಡೆವಲಪರ್‌ಗಳಿಗೆ ಸಹಾಯ ಮಾಡುವ ಮೂಲಕ ನೀವು ಹಣವನ್ನು ಪಡೆಯಬಹುದು. ಆದರೆ ನೀವು ವೆಬ್‌ಸೈಟ್‌ಗಳ ಲುಕ್‌, ವಿನ್ಯಾಸ ಮತ್ತು ಕಾರ್ಯಚಟುವಟಿಕೆಗಳ ಕುರಿತು ಪ್ರತಿಕ್ರಿಯೆಯನ್ನು ಒದಗಿಸಬೇಕಾಗುತ್ತದೆ. UseTesting, Enrollment ಮತ್ತು Testing Time ಇವು ಈ ರೀತಿಯ ವೆಬ್‌ಸೈಟ್‌ಗಳನ್ನು ಪರಿಶೀಲಿಸುವ ಮೂಲಕ ಹಣವನ್ನು ಗಳಿಸಲು ನಿಮಗೆ ಸಹಾಯ ಮಾಡುವ ವೇದಿಕೆಗಳಾಗಿವೆ.

ಹೊಸ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಿ

ಹೊಸ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಿ

ಆನ್‌ಲೈನ್‌ನಲ್ಲಿ ಹಣಗಳಿಸಲು ನಿಮಗಿರುವ ಮತ್ತೊಂದು ಸುಲಭ ಮಾರ್ಗ ಹೊಸ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡುವುದು. ಹಣ ಗಳಿಸುವುದಕ್ಕಾಗಿ ScreenLift, Fronto, Slidejoy, Ibotta, Sweatcoinನಂತಹ ಹೊಸ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಿದರೆ ನಿಮಗೆ ಹಣ ಸಿಗಲಿದೆ. ಜೊತೆಗೆ ರಿವಾರ್ಡ್‌ ಮತ್ತು ಕ್ಯಾಶ್‌ಬ್ಯಾಕ್ ಕೂಡ ಸಿಗಲಿದೆ.

ಗೇಮ್‌ಗಳ ಮೂಲಕ ಹಣ ಗಳಿಸಿ

ನೀವು ಆನ್‌ಲೈನ್‌ನಲ್ಲಿ ಗೇಮ್‌ಗಳನ್ನು ಆಡಿದರೆ ನಿಮಗೆ ಕೆಲವು ವೆಬ್‌ಸೈಟ್‌ಗಳು ಹಣವನ್ನು ಪಾವತಿಸುತ್ತವೆ. ಇವುಗಳಲ್ಲಿ ಮಿಸ್ಟ್‌ಪ್ಲೇ, ಲಕ್‌ಟಾಸ್ಟಿಕ್, ಸ್ವಾಗ್‌ಬಕ್ಸ್ ಮತ್ತು ಸೆಕೆಂಡ್ ಲೈಫ್ ಸೇರಿವೆ. ಈ ಸೈಟ್‌ಗಳಲ್ಲಿ ಕೆಲವು ಪೇಪಾಲ್ ಅಥವಾ ರಿವಾರ್ಡ್‌ ರೂಪದಲ್ಲಿ ಹಣ ಪಾವತಿ ಮಾಡುತ್ತವೆ.

ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಹಣ ಪಡೆಯಿರಿ

ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಹಣ ಪಡೆಯಿರಿ

ಆನ್‌ಲೈನ್‌ನಲ್ಲಿ ಕೆಲವು ಸಮೀಕ್ಷೆಗಳು ನಡೆಯುತ್ತಿರುತ್ತವೆ. ಇಂತಹ ಸಮೀಕ್ಷೆಗಳಲ್ಲಿ ನೀವು ಭಾಗವಹಿಸಿದರೆ ನಿಮಗೆ ಹಣ ಸಿಗಲಿದೆ. ಸಮೀಕ್ಷೆಗಳಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರೆ ಸಾಕು ಹಣ ಪಾವತಿಸಲಾಗುತ್ತದೆ.

ಹಳೆಯ ಉಡುಗೊರೆ ಕಾರ್ಡ್‌ಗಳನ್ನು ಮಾರಾಟ ಮಾಡಿ
ನಿಮ್ಮ ಹಳೆಯ ಉಡುಗೊರೆ ಕಾರ್ಡ್‌ಗಳನ್ನು ಮಾರಾಟ ಮಾಡುವುದುರಿಂದ ಕೂಡ ನೀವು ಆನ್‌ಲೈನ್‌ನಲ್ಲಿ ಹಣವನ್ನು ಗಳಿಸಬಹುದು. ಗಿಫ್ಟ್ ಕಾರ್ಡ್‌ಗಳನ್ನು ಕಾರ್ಡ್‌ಕ್ಯಾಶ್ ಮೂಲಕ ಆನ್‌ಲೈನ್‌ನಲ್ಲಿ ಮಾರಾಟ ಮಾಡಿದರೆ ನಿಮಗೆ ಹಣ ಸಿಗಲಿದೆ.

ಜಾಯಿನ್‌ ಫೋಕಸ್ ಗ್ರೂಪ್‌
ಇನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಹಣ ಗಳಿಸಲು ಟೆಸ್ಟಿಂಗ್ ಬ್ರಾಂಡ್ ಉತ್ಪನ್ನಗಳ ಫೋಕಸ್ ಗ್ರೂಪ್‌ಗೆ ಜಾಯಿನ್‌ ಆಗಬಹುದು. FocusGroup.com, User Interviews,ಮತ್ತು Respondent.io ನಂತಹ ಗುಂಪುಗಳಿವೆ. ಈ ಗುಂಪುಗಳಲ್ಲಿ ನೀವು ಜಾಯಿನ್‌ ಆದರೆ ಸಾಕು ನಿಮಗೆ ಹಣ ಸಿಗಲಿದೆ.

ಫೋಟೋಗಳನ್ನು ಮಾರಾಟ ಮಾಡಿ

ಫೋಟೋಗಳನ್ನು ಮಾರಾಟ ಮಾಡಿ

ಇದಲ್ಲದೆ ಆನ್‌ಲೈನ್‌ನಲ್ಲಿ ನಿಮ್ಮ ಹಳೆಯ ಅಥವಾ ಹೊಸ ಫೋಟೋಗಳನ್ನು ಮಾರಾಟ ಮಾಡುವ ಮೂಲಕ ಹಣಗಳಿಸಬಹುದಾಗಿದೆ. ನೀವು ಫೋಟೋಗಳನ್ನು ಸ್ಟಾಕ್ ಫೋಟೋಗ್ರಫಿ ವೆಬ್‌ಸೈಟ್‌ಗಳಿಗೆ ಮಾರಾಟ ಮಾಡುವುದರ ಮೂಲಕ ಹಣ ಗಳಿಸಲು ಅವಕಾಶವಿದೆ. ಚಿತ್ರಗಳು, ಶಟರ್‌ಸ್ಟಾಕ್ ಮತ್ತು ಹೆಚ್ಚಿನವುಗಳಂತಹ ಜನಪ್ರಿಯ ಸ್ಟಾಕ್ ಫೋಟೋಗ್ರಫಿ ಸೈಟ್‌ಗಳಿಗೆ ನೀವು ಚಿತ್ರಗಳನ್ನು ಅಪ್‌ಲೋಡ್ ಮಾಡಬಹುದು, ಇದರಲ್ಲಿ ನಿಮ್ಮ ಫೋಟೋಗಳನ್ನು ಯಾರಾದರೂ ಖರೀದಿಸಿದರೆ ಈ ಸೈಟ್‌ಗಳು ಹಣ ಪಾವತಿಸುತ್ತವೆ.

ಇಲ್ಲಿ ಲಭ್ಯವಿರುವ ಹಲವು ಆಯ್ಕೆಗಳಲ್ಲಿ ನೀವು ಯಾವುದೇ ಆಯ್ಕೆಗಳನ್ನು ಬಳಸಿದರೂ ನಿಮಗೆ ಆನ್‌ಲೈನ್‌ ಮೂಲಕ ಹಣಗಳಿಸಬಹುದಾಗಿದೆ. ಆದಾಗ್ಯೂ, ಈ ಆಯ್ಕೆಗಳಿಗೆ ಹೋಗುವ ಮೊದಲು ನೀವು ಜಾಗರೂಕರಾಗಿರಬೇಕು ಏಕೆಂದರೆ ಇವುಗಳ ವಿಶ್ವಾಸಾರ್ಹ ಮೂಲದ ಬಗ್ಗೆ ತಿಳಿದುಕೊಳ್ಳುವುದು ಸೂಕ್ತವಾಗಿದೆ.

Most Read Articles
Best Mobiles in India

English summary
Here are the 10 less known but real ways to make money online. Take a look at them from below.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X