ಆಪಲ್ ಪಾಡ್‌ಕಾಸ್ಟ್ ಪ್ರೀಮಿಯಂ ಚಂದಾದಾರಿಕೆ ಇಂದಿನಿಂದ ಲಭ್ಯ!

|

ಆಪಲ್‌ ಕಂಪನಿ ಕಳೆದ ತಿಂಗಳು ಘೋಷಣೆ ಮಾಡಿದ್ದ ಆಪಲ್ ಪಾಡ್‌ಕಾಸ್ಟ್‌ಗಳ ಪ್ರೀಮಿಯಂ ಚಂದಾದಾರಿಕೆ ಮತ್ತು ಪಾಡ್‌ಕಾಸ್ಟ್ ಚಾನೆಲ್‌ ಇದೀಗ ಲೈವ್ ಆಗಿವೆ. ಎಲ್ಲಾ ಐಒಎಸ್ ಬಳಕೆದಾರರಿಗೆ ಪಾಡ್‌ಕಾಸ್ಟ್‌ಗಳನ್ನು ಉಚಿತವಾಗಿ ಕೇಳಲು ಇದು ಅನುಮತಿಸುತ್ತದೆ. ಆದಾಗ್ಯೂ, ಕೆಲವು ಪ್ರೀಮಿಯಂ ಪ್ರದರ್ಶನಗಳು ಮತ್ತು ಚಾನಲ್‌ಗಳನ್ನು ಈಗ ಪ್ರೀಮಿಯಂ ಚಂದಾದಾರಿಕೆಗಳೊಂದಿಗೆ ಪ್ರವೇಶಿಸಬಹುದಾಗಿದೆ.

ಆಪಲ್

ಹೌದು, ಆಪಲ್‌ ಕಂಪೆನಿ ಘೋಷಣೆ ಮಾಡಿದ್ದ ಆಪಲ್ ಪಾಡ್‌ಕಾಸ್ಟ್ ಪ್ರೀಮಿಯಂ ಚಂದಾದಾರಿಕೆ ಇದೀಗ ಲೈವ್‌ ಆಗಿದೆ. ಈ ಪ್ರೀಮಿಯಂ ಚಂದಾದಾರಿಕೆ ಜಾಹೀರಾತು-ಮುಕ್ತ ಆಲಿಸುವಿಕೆ, ಹೊಸ ಸಂಚಿಕೆಗಳಿಗೆ ಆರಂಭಿಕ ಪ್ರವೇಶ ಮತ್ತು ಆರ್ಕೈವ್ ಪ್ರವೇಶದಂತಹ ಪ್ರಯೋಜನಗಳನ್ನು ಒಳಗೊಂಡಿದೆ. ಅಲ್ಲದೆ ಕ್ರಿಯೆಟರ್ಸ್‌ ಆಪಲ್ ಪಾಡ್‌ಕ್ಯಾಸ್ಟರ್ಸ್ ಪ್ರೋಗ್ರಾಂಗೆ ಸೈನ್ ಅಪ್ ಮಾಡಬಹುದು. ಜೊತೆಗೆ ವರ್ಷಕ್ಕೆ 1,799 ರೂ ಚಂದಾದಾರಿಕೆ ವೆಚ್ಚದಲ್ಲಿ ಪ್ರೀಮಿಯಂ ಪರಿಕರಗಳನ್ನು ಪಡೆಯಬಹುದಾಗಿದೆ. ಇನ್ನು ಈ ಆಪಲ್‌ ಪಾಡ್‌ಕಾಸ್ಟ್‌ ಪ್ರೀಮಿಯಂ ಚಂದಾದರಿಕೆ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪಾಡ್‌ಕಾಸ್ಟ್‌

ಆಪಲ್ ಪಾಡ್‌ಕಾಸ್ಟ್‌ ವಿಶೇಷತೆ ಎಂದರೆ ಇದರಲ್ಲಿ ಕ್ರಿಯೆಟರ್ಸ್‌ ಕೇಳುಗರು ತಮ್ಮ ಎಲ್ಲ ವಿಷಯವನ್ನು ಉಚಿತವಾಗಿ ಪ್ರವೇಶಿಸಬಹುದಾದ ಆಯ್ಕೆಯನ್ನು ಕೂಡ ನೀಡಲಾಗಿದೆ. ಹಾಗೆಯೇ ಫ್ರೀಮಿಯಮ್ ಮಾದರಿಯೂ ಕೂಡ ಇದೆ. ಇಲ್ಲಿ ಎಲ್ಲಾ ಕೇಳುಗರು ಇನ್ನೂ ಉಚಿತವಾಗಿ ವಿಷಯವನ್ನು ಪ್ರವೇಶಿಸಬಹುದು. ಆದರೆ ಪಾವತಿಸಿದ ಸದಸ್ಯರಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಾಗುತ್ತದೆ. ಪಾವತಿಸಿದ ಮಾದರಿಯಲ್ಲಿ ಕೇಳುಗರು ವಿಷಯವನ್ನು ಪ್ರವೇಶಿಸಲು ಪಾವತಿಸಬೇಕಾಗುತ್ತದೆ.

ಆಪಲ್ ಪಾಡ್‌ಕಾಸ್ಟ್ ಪ್ರೀಮಿಯಂ ಚಂದಾದಾರಿಕೆಗಳು

ಆಪಲ್ ಪಾಡ್‌ಕಾಸ್ಟ್ ಪ್ರೀಮಿಯಂ ಚಂದಾದಾರಿಕೆಗಳು

ಆಪಲ್ ಪಾಡ್‌ಕಾಸ್ಟ್ ಪ್ರೀಮಿಯಂ ಚಂದಾದಾರಿಕೆ ಐಒಎಸ್ 14.6, ಐಪ್ಯಾಡೋಸ್ 14.6, ಮತ್ತು ಮ್ಯಾಕೋಸ್ 11.4, ವಾಚ್‌ಓಎಸ್ 7.5 ಅಥವಾ ನಂತರದ ಚಾಲನೆಯಲ್ಲಿರುವ ಡಿವೈಸ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಆಪಲ್ ಹೋಮ್‌ಪಾಡ್ ಮತ್ತು ಹೋಮ್‌ಪಾಡ್ ಮಿನಿ ಸ್ಪೀಕರ್‌ಗಳು, ಜೊತೆಗೆ ಕಾರ್‌ಪ್ಲೇ ಸಹ ಬೆಂಬಲಿತವಾಗಿದೆ. ಫ್ಯಾಮಿಲಿ ಶೇರ್‌ ಅನ್ನು ಬಳಸಿಕೊಂಡು ಕುಟುಂಬದ ಆರು ಸದಸ್ಯರ ನಡುವೆ ಆಪಲ್ ಪಾಡ್‌ಕ್ಯಾಸ್ಟ್ ಪ್ರೀಮಿಯಂ ಚಂದಾದಾರಿಕೆಯನ್ನು ಹಂಚಿಕೊಳ್ಳಬಹುದು.

ಶೋ

ಇನ್ನು ಕೇಳುಗರು ಶೋ ಚಂದಾದಾರಿಕೆಯನ್ನು ಖರೀದಿಸಿದಾಗ, ಅವರು ಸ್ವಯಂಚಾಲಿತವಾಗಿ ಶೋ ಅನುಸರಿಸುತ್ತಾರೆ. ಅಲ್ಲದೆ ಪುಟವನ್ನು ಚಂದಾದಾರರ ಆವೃತ್ತಿ ಲೇಬಲ್‌ನೊಂದಿಗೆ ನವೀಕರಿಸಲಾಗುತ್ತದೆ. ಆದ್ದರಿಂದ ಇವರಿಗೆ ಪ್ರೀಮಿಯಂ ಅನುಭವಕ್ಕೆ ಪ್ರವೇಶವಿದೆ. ಇನ್ನು ಕೇಳುಗರು ಪ್ರತಿ ಶೋ ಪೇಜ್‌ನಿಂದ ಮತ್ತು ಹುಡುಕಾಟದ ಮೂಲಕ ತಮ್ಮ ನೆಚ್ಚಿನ ಪಾಡ್‌ಕಾಸ್ಟ್‌ಗಳಿಗಾಗಿ ಚಾನಲ್‌ಗಳನ್ನು ಕಂಡುಹಿಡಿಯಬಹುದು. ಈಗ ಆಲಿಸಿ ಮತ್ತು ಬ್ರೌಸ್ ಟ್ಯಾಬ್‌ಗಳಿಂದ ಶಿಫಾರಸುಗಳನ್ನು ಅನ್ವೇಷಿಸಬಹುದು ಮತ್ತು ಸಂದೇಶಗಳು, ಮೇಲ್ ಮತ್ತು ಇತರ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಚಾನಲ್‌ಗಳನ್ನು ಹಂಚಿಕೊಳ್ಳಬಹುದು.

ಲಿಸನ್

ಕೇಳುಗರು ಚಾನಲ್‌ಗಳಿಗೆ ಚಂದಾದಾರರಾಗುತ್ತಿದ್ದಂತೆ, ಲಿಸನ್ ನೌ ಟ್ಯಾಬ್ ಹೊಸ ಸಾಲುಗಳೊಂದಿಗೆ ವಿಸ್ತರಿಸುತ್ತದೆ. ಇದು ಚಾನಲ್‌ನಲ್ಲಿ ಒಳಗೊಂಡಿರುವ ಎಲ್ಲಾ ವಿಷಯಗಳಿಗೆ ಮತ್ತು ಅವರ ಚಂದಾದಾರಿಕೆಯೊಂದಿಗೆ ಸುಲಭವಾಗಿ ಪ್ರವೇಶವನ್ನು ನೀಡುತ್ತದೆ. ಎರಡು ಅಥವಾ ಹೆಚ್ಚಿನ ಚಾನಲ್‌ಗಳಿಗೆ ಚಂದಾದಾರರಾಗಿರುವ ಕೇಳುಗರು ಲಿಸನ್ ನೌ ಟ್ಯಾಬ್‌ನಲ್ಲಿ ನನ್ನ ಚಾನೆಲ್‌ಗಳ ಸಾಲನ್ನು ನೋಡುತ್ತಾರೆ, ಅಲ್ಲಿ ಅವರು ನೀಡುವ ಎಲ್ಲಾ ಪ್ರದರ್ಶನಗಳನ್ನು ಬ್ರೌಸ್ ಮಾಡಬಹುದು ಮತ್ತು ಅನುಸರಿಸಬಹುದು.

ಆಪಲ್ ಪಾಡ್‌ಕಾಸ್ಟ್ ಪ್ರೀಮಿಯಂ ಚಂದಾದಾರಿಕೆಗಳು: ಬೆಲೆ ನಿಗದಿ

ಆಪಲ್ ಪಾಡ್‌ಕಾಸ್ಟ್ ಪ್ರೀಮಿಯಂ ಚಂದಾದಾರಿಕೆಗಳು: ಬೆಲೆ ನಿಗದಿ

ಆಪಲ್ ಪಾಡ್‌ಕಾಸ್ಟ್ ಪ್ರೀಮಿಯಂ ಚಂದಾದಾರಿಕೆಗಳ ಬೆಲೆ ನೀವು ಪಾವತಿಸಲು ಬಯಸುವ ಕ್ರಿಯೆಟರ್ಸ್‌ ಮೇಲೆ ಅವಲಂಬಿತವಾಗಿರುತ್ತದೆ. ಪ್ಲಾಟ್‌ಫಾರ್ಮ್‌ನಲ್ಲಿರುವ ಪ್ರತಿಯೊಬ್ಬ ಸೃಷ್ಟಿಕರ್ತರು ತಮ್ಮದೇ ಆದ ಮಾದರಿಯನ್ನು ಅನುಸರಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ತಮ್ಮದೇ ಆದ ಬೆಲೆಯನ್ನು ನಿಗದಿಪಡಿಸಿರುತ್ತಾರೆ. ಕೇಳುಗರು ತಮ್ಮ ಚಂದಾದಾರಿಕೆಗಳನ್ನು ನಿರ್ವಹಿಸಬಹುದು ಮತ್ತು ಆಪಲ್ ಪಾಡ್‌ಕಾಸ್ಟ್‌ಗಳಲ್ಲಿ ಲಿಸನ್ ನೌ ಟ್ಯಾಬ್‌ನ ಮೇಲ್ಭಾಗದಿಂದ ಪ್ರವೇಶಿಸಬಹುದಾದ ಆಪಲ್ ಐಡಿ ಖಾತೆ ಸೆಟ್ಟಿಂಗ್‌ಗಳಿಂದ ಮಾಸಿಕದಿಂದ ವಾರ್ಷಿಕ ಬಿಲ್ಲಿಂಗ್‌ಗೆ ಬದಲಾಯಿಸಬಹುದು.

Best Mobiles in India

English summary
Here's all you need to know about Apple Podcasts premium subscriptions including pricing, benefits, family sharing and more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X