ಇನ್ಮುಂದೆ ನೆಟ್‌ಫ್ಲಿಕ್ಸ್‌ನಲ್ಲಿ ವೀಡಿಯೊ ಸ್ಟ್ರೀಮಿಂಗ್‌ ಮಾತ್ರವಲ್ಲ ಗೇಮ್‌ ಕೂಡ ಆಡಬಹುದು!

|

ಭಾರತದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ದಿನದಿಂದ ದಿನಕ್ಕೆ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಇದರಲ್ಲಿ ನೆಟ್‌ಫ್ಲಿಕ್ಸ್‌ ಕೂಡ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇನ್ನು ನೆಟ್‌ಫ್ಲಿಕ್ಸ್‌ ಪ್ಲಾಟ್‌ಫಾರ್ಮ್‌ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ನೆಟ್‌ಫ್ಲಿಕ್ಸ್‌ ವೀಡಿಯೊ ಸ್ಟ್ರೀಮಿಂಗ್‌ ಸೇವೆ ಮಾತ್ರವಲ್ಲ ಅಧಿಕೃತವಾಗಿ ಗೇಮಿಂಗ್‌ ಅನುಭವವನ್ನು ನೀಡುವುದಕ್ಕೆ ಮುಂದಾಗಿದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ಇನ್ಮುಂದೆ ಕೇವಲ ವೀಡಿಯೊ ಸ್ಟ್ರೀಮಿಂಗ್ ಸೇವೆಯಾಗಿ ಮಾತ್ರವಲ್ಲ ಗೇಮಿಂಗ್‌ ಅನುಭವವನ್ನು ಕೂಡ ನೀಡಲಿದೆ. ಸದ್ಯ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಗೇಮಿಂಗ್‌ಗಳನ್ನು ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಎಲ್ಲಾ ಚಂದಾದಾರರು ಸದ್ಯ ಇದೀಗ ಪರಿಚಯಿಸಿರುವ ಐದು ಮೊಬೈಲ್ ಗೇಮ್‌ಗಳನ್ನು ತಮ್ಮ ಆಂಡ್ರಾಯ್ಡ್‌ ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳಲ್ಲಿ ಆಡಬಹುದಾಗಿದೆ. ಆದರೆ iOS ಬಳಕೆದಾರರು ಗೇಮಿಂಗ್‌ ಅನುಭವವನ್ನು ಸವಿಯಲು ಇನ್ನು ಸ್ವಲ್ಪ ಸಮಯ ಕಾಯಬೇಕಾಗುತ್ತದೆ ಎನ್ನಲಾಗಿದೆ. ಹಾಗಾದ್ರೆ ನೆಟ್‌ಫ್ಲಿಕ್ಸ್‌ನಲ್ಲಿ ಗೇಮಿಂಗ್‌ ಅನುಭವವನ್ನು ಸವಿಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಐದು ಹೊಸ ಗೇಮ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಸ್ಟ್ರೇಂಜರ್ ಥಿಂಗ್ಸ್: 1984 (BonusXP), ಸ್ಟ್ರೇಂಜರ್ ಥಿಂಗ್ಸ್ 3: The Game (BonusXP), ಶೂಟಿಂಗ್ ಹೂಪ್ಸ್ (ಫ್ರಾಸ್ಟಿ ಪಾಪ್), ಕಾರ್ಡ್ ಬ್ಲಾಸ್ಟ್ (Amuzo & Rogue Games), ಮತ್ತು Teeter Up (ಫ್ರಾಸ್ಟಿ ಪಾಪ್).ಗೇಮ್‌ಗಳು ಸೇರಿವೆ. ಈ ಗೇಮ್‌ಗಳನ್ನು ಆಡಲು ಬಳಕೆದಾರರಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಮಾತ್ರ ಅಗತ್ಯವಿರುತ್ತದೆ. ಇದಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕಗಳು ಅಥವಾ ಅಪ್ಲಿಕೇಶನ್‌ನಲ್ಲಿನ ಹೊಸ ಖರೀದಿಗಳು ಇರುವುದಿಲ್ಲ ಎಂದು ಕಂಪನಿ ಹೇಳಿದೆ.

ನೆಟ್‌ಫ್ಲಿಕ್‌

ನೆಟ್‌ಫ್ಲಿಕ್‌ ಪ್ರಾರಂಭಿಸಿರುವ ಈ ಗೇಮ್‌ಗಳು ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ. ಈ ಐದು-ಗೇಮ್‌ಗಳ ಕ್ಯಾಟಲಾಗ್ ಇದೀಗ ಚಿಕ್ಕದಾಗಿ ಕಾಣಿಸಬಹುದು. ಆದರೆ ನೆಟ್‌ಫ್ಲಿಕ್ಸ್‌ ಗೇಮ್‌ ಅನುಭವ ಹೊಸದಾಗಿ ಪ್ರಾರಂಭವಾಗಿದೆ. ನೆಟ್‌ಫ್ಲಿಕ್ಸ್‌ ತನ್ನ ಬಳಕೆದಾರರಿಗೆ ಗೇಮ್‌ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ವರ್ಷದ ಆರಂಭದಲ್ಲಿ ಆಕ್ಸೆನ್‌ಫ್ರೀ ಎಂಬ ಆಟದ ಡೆವಲಪರ್ ಆಗಿರುವ ನೈಟ್ ಸ್ಕೂಲ್ ಸ್ಟುಡಿಯೊವನ್ನು ಸ್ವಾಧೀನಪಡಿಸಿಕೊಂಡಿತ್ತು. ಇದರ ಮೂಲಕ ಹೊಸ ಗೇಮ್‌ಗಳನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪರಿಚಯಿಸಿದೆ.

ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್ ಈಗಾಗಲೇ ತನ್ನ ಗೇಮ್‌ಗಳಾದ "ಸ್ಟ್ರೇಂಜರ್ ಥಿಂಗ್ಸ್: 1984", "ಸ್ಟ್ರೇಂಜರ್ ಥಿಂಗ್ಸ್ 3: ದಿ ಗೇಮ್", "ಕಾರ್ಡ್ ಬ್ಲಾಸ್ಟ್", "ಟೀಟರ್ ಅಪ್" ಮತ್ತು "ಶೂಟಿಂಗ್ ಹೂಪ್ಸ್" ಶೀರ್ಷಿಕೆಗಳನ್ನು ಆಂಡ್ರಾಯ್ಡ್‌ನಲ್ಲಿ ಸ್ಪೇನ್, ಇಟಲಿ ಮತ್ತು ಪೋಲೆಂಡ್‌ನಲ್ಲಿರುವ ನೆಟ್‌ಫ್ಲಿಕ್ಸ್ ಸದಸ್ಯರಿಗೆ ಪರಿಚಯಿಸಿದೆ. ಸದ್ಯ ನೆಟ್‌ಫ್ಲಿಕ್ಸ್ ಗೇಮ್‌ಗಳ ಆರಂಭಿಕ ರೋಲ್‌ಔಟ್ ಸ್ವಲ್ಪ ಯಶಸ್ಸನ್ನು ಪಡೆದರೆ, ಕಂಪನಿಯು ತನ್ನ ಗ್ರಾಹಕರಿಗೆ ಹೆಚ್ಚಿನ ಚಂದಾದಾರಿಕೆ ಶ್ರೇಣಿಗಳನ್ನು ಪರಿಚಯಿಸುವ ಸಾದ್ಯತೆ ಇದೆ. ಇಲ್ಲವೇ ತನ್ನ ಎಲ್ಲಾ ಚಂದಾದಾರರಿಗೆ ಆಟಗಳಿಗೆ ಪ್ರವೇಶವನ್ನು ಹೊಂದಲು ಅವಕಾಶ ನೀಡುವುದನ್ನು ಮುಂದುವರಿಸಬಹುದು. ಆದರೆ ಕೆಲವು ಪ್ರೀಮಿಯಂ ಐಟಂಗಳಿಗೆ ಹೆಚ್ಚುವರಿ ಶುಲ್ಕ ಬೇಕಾಗಬಹುದು ಎಂದು ಹೇಳಲಾಗಿದೆ.

ನೆಟ್‌ಫ್ಲಿಕ್ಸ್‌

ಇನ್ನು ನೆಟ್‌ಫ್ಲಿಕ್ಸ್‌ ಪ್ಲಾಟ್‌ಫಾರ್ಮ್‌ ಹಲವು ಭಾಷೆಯ ವೆಬ್‌ ಸಿರೀಸ್‌ಗಳು, ಚಲನಚಿತ್ರಗಳನ್ನು ಸ್ಟ್ರೀಮಿಂಗ್‌ ಮಾಡಲು ಅವಕಾಶ ನೀಡಿದೆ. ನಿಮಗೆ ಬೇರೆ ಭಾಷೆಯ ಸಿನಿಮಾ ನೋಡುವುದಕ್ಕೆ ಭಾಷೆ ಸಮಸ್ಯೆ ಎದುರಾದಲ್ಲಿ ನಿಮ್ಮ ಆಯ್ಕೆಯ ಭಾಷೆಯ ಸಬ್‌ ಟೈಟಲ್‌ ಅನ್ನು ಸೇರಿಸಬಹುದಾಗಿದೆ. ಹಾಗಂತ ಎಲ್ಲಾ ಚಲನಚಿತ್ರಗಳಿಗೂ ಎಲ್ಲಾ ಭಾಷೆಯಲ್ಲೂ ಸಬ್‌ಟೈಟಲ್‌ ಸೇರಿಸುವ ಅವಕಾಶವನ್ನು ನೀಡಲಾಗಿಲ್ಲ.

ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ಅದ್ಯತೆಯ ಭಾಷೆಯನ್ನು ಬದಲಾಯಿಸುವುದು ಹೇಗೆ?

ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ಅದ್ಯತೆಯ ಭಾಷೆಯನ್ನು ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ Netflix.com ಗೆ ಸೈನ್ ಇನ್ ಮಾಡಿ.
ಹಂತ:2 ನಂತರ ನಿಮ್ಮ ಅಕೌಂಟ್‌ ಅನ್ನು ಆಯ್ಕೆ ಮಾಡಿ.
ಹಂತ:3 ಇದರಲ್ಲಿ ನಿಮ್ಮ ಪ್ರೊಫೈಲ್ ಆಯ್ಕೆಮಾಡಿ.
ಹಂತ:4 ನಿಮ್ಮ ಅಧ್ಯತೆಯ ಭಾಷೆಯನ್ನು ಆಯ್ಕೆಮಾಡಿ.
ಹಂತ:5 ನಂತರ ಪ್ರದರ್ಶನ ಭಾಷೆಯನ್ನು ಆಯ್ಕೆಮಾಡಿ.
ಹಂತ:6 ಈಗ ಸೇವ್‌ ಆಯ್ಕೆ ಮಾಡಿ.

ಒಂದು ವೇಳೆ ನಿಮ್ಮ ಡಿವೈಸ್‌ನಲ್ಲಿ ಭಾಷೆಯ ಬದಲಾವಣೆಯನ್ನು ನೀವು ನೋಡದಿದ್ದರೆ, ನೀವು ಸೈನ್ ಔಟ್ ಮತ್ತು ನಂತರ ಮತ್ತೆ ಸೈನ್ ಇನ್ ಮಾಡಬೇಕಾಗುತ್ತದೆ. ಇದರಲ್ಲಿ ನಿಮ್ಮ ಸ್ಥಳ ಮತ್ತು ಭಾಷೆಯ ಸೆಟ್ಟಿಂಗ್‌ಗಳ ಆಧಾರದ ಮೇಲೆ ನೆಟ್‌ಫ್ಲಿಕ್ಸ್ 5-7 ಅತ್ಯಂತ ಸೂಕ್ತ ಭಾಷೆಗಳನ್ನು ತೋರಿಸುತ್ತದೆ.

Best Mobiles in India

English summary
The Netflix games will be available to all subscribers without any extra fee, but there are only five of them.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X