TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ನೀವೇನಾದರೂ ಇತ್ತೀಚೆಗೆ ಬಿಡುಗಡೆಗೊಂಡಿರುವ ಒನ್ ಪ್ಲಸ್ 6 ಸ್ಮಾರ್ಟ್ ಫೋನನ್ನು ಖರೀದಿಸಬೇಕೆಂಬ ಹಂಬಲದಲ್ಲಿದ್ದರೆ, ಇಲ್ಲಿದೆ ನಿಮಗೊಂದು ಒಳ್ಳೆಯ ಸುದ್ದಿ.. ಅಮೇಜಾನ್ 2000 ರುಪಾಯಿಯ ಕ್ಯಾಷ್ ಬ್ಯಾಕ್ ನ್ನು ಒನ್ ಪ್ಲಸ್ 6 ಮೊಬೈಲ್ ಗೆ ನೀಡುತ್ತಿದೆ. ಸಿಟಿ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡಿದರೆ, ನಿಮಗೆ ಈ ಆಫರ್ ಕ್ಯಾಷ್ ಬ್ಯಾಕ್ ಲಭ್ಯವಾಗಲಿದೆ.
ಈ 9 ಕಾರಣಗಳಿಂದ ನೀವು ಆಪಲ್ ಐಪೋನ್ ನಿಂದ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಗೆ ಬದಲಾಯಿಸಿಕೊಳ್ಳುತ್ತಿರಿ..!
ಅಂದರೆ ನಿಮಗೆ 6 ಜಿಬಿ ವೇರಿಯಂಟ್ ನ ಮೊಬೈಲ್ ಕೇವಲ 32,999 ರುಪಾಯಿಗೆ ಮತ್ತು 8 ಜಿಬಿ ವರ್ಷನ್ ನ ಮೊಬೈಲ್ 37,999 ರುಪಾಯಿಗೆ ಲಭ್ಯವಾಗಲಿದೆ. ಕ್ಯಾಷ್ ಬ್ಯಾಕ್ ನ ಜೊತೆಗೆ, ಕಂಪೆನಿಯು ತನ್ನ ಗ್ರಾಹಕರಿಗೆ ಇನ್ನಷ್ಟು ರಿಯಾಯಿತಿ ಬೆಲೆಯನ್ನು ನೀಡುತ್ತಿದೆ. ಒನ್ ಪ್ಲಸ್ 6 ಮೊಬೈಲ್ ಖರೀದಿಸುವವರಿಗೆ 12 ತಿಂಗಳ ಡ್ಯಾಮೇಜ್ ಇನ್ಸುರೆನ್ಸ್ ಮತ್ತು 500 ರುಪಾಯಿಯ ಕಿಂಡಲ್ ಇ-ಬುಕ್ ಖರೀದಿಗೆ ಕ್ರೆಡಿಟ್ ಸಿಗಲಿದೆ.
ಇದರ ಜೊತೆಗೆ, ಐಡಿಯಾ ಸೆಲ್ಯುಲರ್ ಬಳಕೆದಾರರು 2000 ರುಪಾಯಿಯ ಕ್ಯಾಷ್ ಬ್ಯಾಕ್ ನ್ನು ಕೂಡ ಪಡೆಯಲಿದ್ದಾರೆ,ಇದರ ಜೊತೆಗೆ ಖರೀದಿಸಿದವರಿಗೆ 25,000 ರುಪಾಯಿ ವರೆಗಿನ ಕ್ಲಿಯರ್ ಟ್ರಿಪ್ ಬೆನಿಫಿಟ್ ಕೂಡ ಸಿಗುತ್ತದೆ ಮತ್ತು ನೀವು ಅಮೇಜಾನ್ ನಲ್ಲಿ ಪ್ರೈಮ್ ವೀಡಿಯೋ ಸ್ಟ್ರೀಮ್ ಮಾಡಿದರೆ 250 ರುಪಾಯಿಯ ಪೇ ಬ್ಯಾಲೆನ್ಸ್ ಕೂಡ ದೊರಕಲಿದೆ.
ಒನ್ ಪ್ಲಸ್ 6 , 6.28 ಇಂಚಿನ ಫುಲ್ HD+ optic AMOLED ಸ್ಕ್ರೀನ್ ಡಿಸ್ಪ್ಲೇ ಹೊಂದಿದ್ದು, 19:9 ಅನುಪಾತದಲ್ಲಿದೆ..ಐಫೋನ್ –ಎಕ್ಸ್ ನಂತೆ ನಾಚ್ ಸ್ಕ್ರೀನ್ ಡಿಸ್ಪ್ಲೇಯನ್ನು ಕೂಡ ಇದು ಹೊಂದಿದೆ. ಬಳಕೆದಾರರಿಗೆ ನಾಚ್ ನ್ನು ಅನೇಬಲ್ ಮತ್ತು ಡಿಸೇಬಲ್ ಮಾಡುವ ಅವಕಾಶವಿರುತ್ತದೆ. ಆಕ್ಟಾ-ಕೋರ್- ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ 6ಜಿಬಿ/8ಜಿಬಿ RAM ನೊಂದಿಗೆ ಪೇರ್ ಆಗಿ ಇರುತ್ತದೆ.
ಈ ಸ್ಮಾರ್ಟ್ ಫೋನ್ ನಲ್ಲಿ 64ಜಿಬಿ/128ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದ್ದು, ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮತ್ತಷ್ಟು ಹಿಗ್ಗಿಸಿಕೊಳ್ಳುವ ಅವಕಾಶವಿದೆ. ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ಮುಖಾಂತರ ಇದು ರನ್ ಆಗುತ್ತದೆ ಮತ್ತು ಡುಯಲ್ ಹಿಂಭಾಗ ಕ್ಯಾಮರಾ ಸೆಟ್ ಅಪ್ ನ್ನು ಇದು ಒಳಗೊಂಡಿದೆ.ಇದರಲ್ಲಿ 6MP (Sony IMX519) +20MP (Sony IM376K sensor) ಸೆಟ್ ಅಪ್ ನ ಪ್ರೈಮರಿ ಕ್ಯಾಮರಾ ಮತ್ತು 16MP ಸೆನ್ಸರ್ f/1.7 ದ್ಯುತಿರಂದ್ರವನ್ನು ಹೊಂದಿದೆ.
4K ರೆಸೋಲ್ಯೂಷನ್ ನಲ್ಲಿ ವೀಡಿಯೋಗಳನ್ನು ಶೂಟ್ ಮಾಡಬಹುದಾಗಿದ್ದು 60fps ಹೊಂದಿದೆ... 480fpsನ ಸ್ಲೋ ಮೋಷನ್ ವೀಡಿಯೋವನ್ನು HD ರೆಸೊಲ್ಯೂಷನ್ ನಲ್ಲಿ ಶೂಟ್ ಮಾಡಬಹುದು. ಮುಂಭಾಗದಲ್ಲಿ 16MP ಸೆನ್ಸರ್ ಇದ್ದು (Sony IMX371) ಹೊಸದಾದ ಪೊಟ್ರೈಟ್ ಮೋಡಿನ ವೈಶಿಷ್ಟ್ಯವನ್ನು ಹೊಂದಿದೆ. 3300 mAh ಬ್ಯಾಟರಿಯನ್ನು ಇದು ಹೊಂದಿದ್ದು, ಡ್ಯಾಷ್ ಚಾರ್ಜರ್ ನ್ನು ಒಳಗೊಂಡಿದೆ.