Home
ಸುದ್ದಿಜಾಲ

ನೀವು ಬಳಸಬಹುದಾದ ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್‌ಗಳು ಇಲ್ಲಿವೆ!

ಪ್ರಸ್ತುತ ದಿನಗಳಲ್ಲಿ ಡೇಟಿಂಗ್‌ ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ತಮ್ಮ ಭಾವನೆ ಮತ್ತು ತಮ್ಮ ಅಭಿರುಚಿಗೆ ಸರಿ ಹೊಂದುವ ಆಪ್ತರನ್ನು ಹುಡಕಲು ಡೇಟಿಂಗ್ ಆಪ್‌ಗಳನ್ನು ಬಳಸುತ್ತಿದ್ದಾರೆ. ಇದೇ ಕಾರಣಕ್ಕೆ ಭಾರತದಲ್ಲಿಯೂ ಕೂಡ ಡೇಟಿಂಗ್‌ ಅಪ್ಲಿಕೇಶನ್‌ಗಳು ಪ್ರಸಿದ್ಧಿ ಪಡೆದಿವೆ. ಸದ್ಯ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅನೇಕ ಡೇಟಿಂಗ್ ಆಪ್‌ಗಳು ಲಭ್ಯವಿದ್ದು, ಯುವಜನತೆ ತಮ್ಮ ನೆಚ್ಚಿನ ಡೇಟಿಂಗ್ ಆಪ್‌ಗಳನ್ನು ಬಳಸಬಹುದಾಗಿದೆ.

ಡೇಟಿಂಗ್‌

ಹೌದು, ಡೇಟಿಂಗ್‌ ಅಪ್ಲಿಕೇಶನ್‌ಗಳು ಸಮಾನ ಮನಸ್ಕರನ್ನು ಒಂದುಗೂಡಿಸುತ್ತವೆ. ತಮ್ಮ ಮನಸ್ಸಿನ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುವುದಕ್ಕೆ ಅವಕಾಶ ನೀಡುತ್ತವೆ. ಡೇಟಿಂಗ್‌ ಅಪ್ಲಿಕೇಶನ್‌ಗಳಲ್ಲಿ ನಿಮ್ಮ ಅಭಿರುಚಿಗಳನ್ನು ನಮೂದಿಸುವ ಮೂಲಕ ನಿಮ್ಮದೇ ಆದ ಪ್ರೊಫೈಲ್‌ ಅನ್ನು ಕ್ರಿಯೆಟ್‌ ಮಾಡುವುದಕ್ಕೆ ಅವಕಾಶವಿದೆ. ಇದರಿಂದ ನಿಮಗೆ ಸೂಕ್ತ ಎನಿಸುವ ಆಪ್ತರನ್ನು ಸರ್ಚ್‌ ಮಾಡುವುದು ಸುಲಭವಾಗಲಿದೆ. ಹಾಗಾದ್ರೆ ಭಾರತದಲ್ಲಿ ಅತ್ಯಂತ ಜನಪ್ರಿಯ ಎನಿಸಿಕೊಂಡಿರುವ ಡೇಟಿಂಗ್‌ ಅಪ್ಲಿಕೇಶನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟಿಂಡರ್ ಅಪ್ಲಿಕೇಶನ್‌

ಟಿಂಡರ್ ಅಪ್ಲಿಕೇಶನ್‌

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅತಿ ಹೆಚ್ಚಿನ ಜನಪ್ರಿಯಯತೆ ಪಡೆದುಕೊಂಡಿರುವ ಡೇಟಿಂಗ್‌ ಅಪ್ಲಿಕೇಶನ್‌ಗಳಲ್ಲಿ ಟಿಂಡರ್‌ ಕೂಡ ಒಂದು. ಟಿಂಡರ್‌ ಡೇಟಿಂಗ್ ಆಪ್‌ ಉಚಿತವಾಗಿದ್ದು, ನಿಮ್ಮ ಲೋಕೆಶನ್ ಆಧಾರದ ಮೇಲೆ ಸುತ್ತಮುತ್ತಲಿನ ಇತರೆ ಫ್ರೊಫೇಲ್‌ಗಳ ಆಯ್ಕೆ ಲಭ್ಯವಾಗಲಿದೆ. ಇದರಲ್ಲಿ ನಿಮಗೆ ಸೂಕ್ತ ಎನಿಸುವ ಪ್ರೊಫೈಲ್‌ಗಳನ್ನು ನೋಡಬಹುದು. ಬಳಕೆದಾರರು ಒಂದು ದಿನಕ್ಕೆ ನಿಯಮಿತ ಪ್ರೋಫೇಲ್‌ಗಳನ್ನು ಮಾತ್ರ ನೋಡಬಹುದಾಗಿದ್ದು, ಹೆಚ್ಚಿನ ಪ್ರೋಫೇಲ್‌ ನೋಡಲು ಇಚ್ಚಿಸಿದರೇ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇನ್ನು ಈ ಅಪ್ಲಿಕೇಶನ್‌ ಬಳಸುವುದಕ್ಕೆ ಬಳಕೆದಾರರು ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಲಾಗ್‌ಇನ್ ಆಗಬಹುದು ಅಥವಾ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಬಹುದು.

ಬಂಬಲ್

ಬಂಬಲ್

ಬಂಬಲ್ ಜಾಗತಿಕವಾಗಿ ಜನಪ್ರಿಯ ಡೇಟಿಂಗ್‌ ಅಪ್ಲಿಕೇಶನ್‌ಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಈ ಅಪ್ಲಿಕೇಶನ್ ಮೂಲಕ ನೀವು ನಿಮಗೆ ಸೂಕ್ತ ಎನಿಸುವ ಅಪ್ತರನ್ನು ಸರ್ಚ್‌ ಮಾಡಬಹುದು. ಇನ್ನು ಈ ಅಪ್ಲಿಕೇಶನ್ ಅನ್ನು ಸ್ತ್ರೀ-ಆಧಾರಿತವಾಗಿ ಮಾಡಲಾಗಿದೆ, ಅಂದರೆ, ಈ ಅಪ್ಲಿಕೇಶನ್‌ನಲ್ಲಿ, ಮಹಿಳಾ ಬಳಕೆದಾರರು ಮಾತ್ರ ಮೊದಲ ಪುರುಷ ಬಳಕೆದಾರರನ್ನು ಸಂಪರ್ಕಿಸಬಹುದು. ಅವರೊಂದಿಗೆ ಚಾಟ್‌ ಮಾಡಬಹುದು. ವ್ಯಾಪಾರ ಸಂಪರ್ಕಗಳನ್ನು ಪಡೆದುಕೊಳ್ಳಬಹುದು. ಅಲ್ಲದೆ ಆಯ್ಕೆಗಳ ಮೂಲಕ ನಿಮಗಾಗಿ ಸರಿಯಾದ ದಿನಾಂಕವನ್ನು ಕೂಡ ಸೆಟ್‌ ಮಾಡಿಕೊಳ್ಳಬಹುದು.

ಹ್ಯಾಪನ್ ಅಪ್ಲಿಕೇಶನ್‌

ಹ್ಯಾಪನ್ ಅಪ್ಲಿಕೇಶನ್‌

ಹ್ಯಾಪನ್ ಸಹ ಲೋಕೆಷನ್ ಆಧಾರಿತ ಡೇಟಿಂಗ್ ಆಪ್‌ ಆಗಿದ್ದು, ಇದರ ಫ್ರೋಫೇಲ್ ಮ್ಯಾಚಿಂಗ್ ಸ್ವಲ್ಪ ಭಿನ್ನವಾಗಿದೆ. ನಿಮ್ಮ ನಿಜ ಜೀವನದಲ್ಲಿ ಕಂಡಿರುವ ವ್ಯಕ್ತಿಗಳು ಹ್ಯಾಪನ್ ಆಪ್‌ನಲ್ಲಿ ಪ್ರೋಫೇಲ್ ಹೊಂದಿದ್ದಾರಾ ಎಂದು ತಿಳಿಯಬಹುದು, ಹೊಂದಿದ್ದರೆ ನೀವು ಅವರಿಗೆ ಹ್ಯಾಪನ್ ಆಪ್‌ ಮೂಲಕ ರೀಕ್ವೆಸ್ಟ್ ಕಳುಹಿಸಬಹುದು ನಿಮ್ಮ ರೀಕ್ವೆಸ್ಟ್ ಅವರು ಸ್ವೀಕರಿಸಿದರೇ ನೀವು ಅವರೊಂದಿಗೆ ಮಾತಾಡುವ ಅವಕಾಶ ಇದೆ.

ಟ್ರೂಲಿ ಮ್ಯಾಡ್ಲೀ ಅಪ್ಲಿಕೇಶನ್‌

ಟ್ರೂಲಿ ಮ್ಯಾಡ್ಲೀ ಅಪ್ಲಿಕೇಶನ್‌

ಟ್ರೂಲಿ ಮ್ಯಾಡ್ಲೀ ಉತ್ತಮ ಡೇಟಿಂಗ್ ಆಪ್ಲಿಕೇಶನ್‌ ಆಗಿದ್ದು, ಬಳಕೆದಾರರು ನೀಡಿರುವ ಪ್ರೋಫೇಲ್‌ಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಪ್ರೋಫೇಲ್‌ಗಳ ಖಚಿತತೆಗಾಗಿ ಗುರುತಿನ ಪುರಾವೆಯನ್ನು ಕೇಳಲಾಗುತ್ತದೆ. ನಿಮ್ಮ ಪ್ರೋಫೇಲ್‌ ಆಧಾರದ ಮೇಲೆ ನಿಮಗೆ ಸರಿಹೊಂದುವಂತಹ ಪ್ರೊಫೇಲ್‌ಗಳನ್ನು ನೀಡುತ್ತಾರೆ, ನಿಮ್ಮ ಅಭಿರುಚುಗೆ ಮ್ಯಾಚ್ ಆದ ಬಳಕೆದಾರರೊಂದಿಗೆ ಪ್ರತ್ಯಕವಾಗಿ ಸಂದೇಶ ಮಾಡಲು ಅನುಮತಿ ಪಡೆಯುತ್ತಿರಿ. ನಿಮ್ಮ ಪ್ರೋಫೇಲ್ ಸುರಕ್ಷತೆ ಇದ್ದು, ಯಾರು ಡೌನಲೋಡ್ ಮಾಡಿಕೊಳ್ಳಲು ಅವಕಾಶ ನೀಡಿಲ್ಲ. ಅನುಚಿತ ವರ್ತನೆಗೆ ತೋರಿಸಬಾರದೆಂದು ಬಳಕೆದಾರರ ಮೇಲೆ ನಿಗಾ ಇಡಲಾಗಿರುತ್ತದೆ.

Best Mobiles in India

English summary
Although India is full of dating apps, love is fast on about half a dozen dating apps
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+