ಭಾರತದಲ್ಲಿ ನೀವು ಖರೀದಿಸಬಹುದಾದ ಟಾಪ್‌ 10 ಪೆನ್‌ಡ್ರೈವ್‌ಗಳು!

|

ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ಡೇಟಾವನ್ನು ಪೆನ್‌ಡ್ರೈವ್‌ನಲ್ಲಿ ಸ್ಟೋರೇಜ್‌ ಮಾಡುತ್ತಾರೆ. ಪೆನ್‌ಡ್ರೈವ್‌ನಲ್ಲಿ ಡೇಟಾವನ್ನು ಸೇವ್‌ ಮಾಡುವುದರಿಂದ ಇದನ್ನು ಸಾಗಿಸುವುದು ಕೂಡ ಸುಲಭವಾಗಿದೆ. ಅಲ್ಲದೆ ತಮ್ಮ ಅಗತ್ಯದ ಫೈಲ್‌ಗಳನ್ನು ಪೆನ್‌ಡ್ರೈವ್‌ನಲ್ಲಿ ಸೇವ್‌ ಮಾಡುವುದು ಉಪಯುಕ್ತವಾಗಿದೆ. ಪೆನ್‌ಡ್ರೈವ್‌ನಲ್ಲಿ ಡೇಟಾ ಫೈಲ್‌ಗಳನ್ನು ಸೇವ್‌ ಮಾಡುವುದು ಸುರಕ್ಷತೆಯ ದೃಷ್ಟಿಯಿಂದಲೂ ಕೂಡ ಒಳಿತಾಗಿದೆ. ಪೆನ್‌ಡ್ರೈವ್‌ನಲ್ಲಿ ನೀವು ನಿಮ್ಮ ಫೈಲ್‌ಗಳನ್ನು ಸೇವ್‌ ಮಾಡುವುದರಿಂದ ಫೈಲ್‌ಗಳನ್ನು ನಿಮಗೆ ಬೇಕು ಎನಿಸಿದಾಗ ಬಳಸಿಕೊಳ್ಳಬಹುದಾಗಿದೆ.

ಡಿಜಟಲ್‌

ಹೌದು, ಇಂದಿನ ಡಿಜಟಲ್‌ ಜಮಾನದಲ್ಲಿ ಪೆನ್‌ಡ್ರೈವ್‌ ಅತ್ಯಗತ್ಯ ಟೆಕ್‌ ಗ್ಯಾಜೆಟ್ಸ್‌ಗಳಲ್ಲಿ ಒಂದಾಗಿದೆ. ಪೆನ್‌ಡ್ರೈವ್‌ಗಳ ಮೂಲಕ ನಿಮ್ಮ ಎಲ್ಲಾ ಡೇಟಾವನ್ನು ಒಂದೇ ಕಡೆ ಸ್ಟೋರ್‌ ಮಾಡಲು ಸಾಧ್ಯವಾಗಲಿದೆ. ಪೆನ್‌ಡ್ರೈವ್‌ ಬಳಸಿಕೊಂಡು ನಿಮ್ಮ ಡೇಟಾವನ್ನು ಸ್ಟೋರ್‌ ಮಾಡಬಹುದು, ಬೇರೆ ಕಡೆಗೆ ವರ್ಗಾಯಿಸಬಹುದು. ಇನ್ನು ಪೆನ್‌ಡ್ರೈವ್‌ಗಳನ್ನು ಯುಎಸ್‌ಬಿ ಫ್ಲ್ಯಾಶ್ ಡ್ರೈವ್, ಥಂಬ್ ಡ್ರೈವ್, ಫ್ಲ್ಯಾಶ್ ಸ್ಟಿಕ್ ಮತ್ತು ಗಿಗ್ ಸ್ಟಿಕ್ ಎಂದು ಕರೆಯಲಾಗುತ್ತದೆ. ಇನ್ನು ನೀವು ಕೂಡ ಒಂದು ಉತ್ತಮವಾದ ಪೆನ್‌ಡ್ರೈವ್‌ ಖರೀದಿಸಬೇಕಾದರೆ ಹಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಹಾಗಾದ್ರೆ ಪ್ರಸ್ತುತ ನೀವು ಖರೀದಿಸಬಹುದಾದ ಅತ್ಯುತ್ತಮ ಪೆನ್‌ಡ್ರೈವ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾನ್‌ಡಿಸ್ಕ್‌ ಕ್ರೂಜರ್‌ ಬ್ಲೇಡ್‌ 32GB

ಸ್ಯಾನ್‌ಡಿಸ್ಕ್‌ ಕ್ರೂಜರ್‌ ಬ್ಲೇಡ್‌ 32GB

ಈ ಪೆನ್‌ಡ್ರೈವ್‌ 32GB ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯವಿದೆ. ಇದು 32GHz ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಪೋರ್ಟಬಲ್‌ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಪೆನ್‌ಡ್ರೈವ್‌ USB 2.0 ಹಾರ್ಡ್‌ವೇರ್‌ ಇಂಟರ್‌ಫೇಸ್‌ ಅನ್ನು ಹೊಂದಿದ್ದು, ಕ್ಯಾಪ್‌ಲೆಸ್‌ ಫಾರ್ಮ್‌ನಲ್ಲಿ ಲಭ್ಯವಿದೆ. ಇದು ಕೆಂಪು ಹಾಗೂ ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಿದ್ದು ಇದರ ಬೆಲೆ 329ರೂ.ಆಗಿದೆ.

ಸ್ಯಾನ್‌ಡಿಸ್ಕ್‌ ಅಲ್ಟ್ರಾ ಡ್ಯುಯಲ್‌ 32GB

ಸ್ಯಾನ್‌ಡಿಸ್ಕ್‌ ಅಲ್ಟ್ರಾ ಡ್ಯುಯಲ್‌ 32GB

ನಿಮ್ಮ ಲ್ಯಾಪ್‌ಟಾಪ್‌ ಇಲ್ಲವೇ ಆಂಡ್ರಾಯ್ಡ್‌ ಫೋನ್‌ಗಳಿಗೆ ಬ್ಯಾಕಪ್‌ ಆಗಿ ಬಳಸುವುದಕ್ಕೆ ಈ ಪೆನ್‌ಡ್ರೈವ್‌ ಉತ್ತಮವಾಗಿದೆ. ಈ ಪೆನ್‌ಡ್ರೈವ್‌ ಎರಡು USB ಕನೆಕ್ಟರ್‌ಗಳನ್ನು ಹೊಂದಿದೆ. ಇದರಿಂದ ನಿಮ್ಮ ಕಂಪ್ಯೂಟರ್ ಮತ್ತು ಆಂಡ್ರಾಯ್ಡ್‌ ಡಿವೈಸ್‌ಗಳ ನಡುವೆ ಡೇಟಾ ಟ್ರಾನ್ಸಫರ್‌ ಮಾಡುವುದು ಸುಲಭವಾಗಲಿದೆ. ಇದು 130 MBPS ವೇಗದಲ್ಲಿ ಡೇಟಾ ಟ್ರಾನ್ಸಫರ್‌ ಮಾಡುವ ಸಾಮರ್ಥ್ಉಯವನ್ನು ಹೊಂದಿದ್ದು, 32GB ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. ಇದರ ಬೆಲೆ 479ರೂ.ಆಗಿದ್ದು, ಬ್ಲ್ಯಾಕ್‌ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.

ಸ್ಯಾನ್‌ಡಿಸ್ಕ್‌ ಅಲ್ಟ್ರಾ USB 3.0 ಪೆನ್‌ಡ್ರೈವ್‌

ಸ್ಯಾನ್‌ಡಿಸ್ಕ್‌ ಅಲ್ಟ್ರಾ USB 3.0 ಪೆನ್‌ಡ್ರೈವ್‌

ಸ್ಯಾನ್‌ಡಿಸ್ಕ್‌ನ ಅಲ್ಟ್ರಾ USB 3.0 ಪೆನ್‌ ಡ್ರೈವ್‌ ಹೆಚ್ಚಿನ ಕಾರ್ಯಕ್ಷಮತೆಯನ್ನು ಒಳಗೊಂಡ ಪೆನ್ ಡ್ರೈವ್ ಆಗಿದೆ. ಇದು 256GB ವರೆಗಿನ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಗಳಲ್ಲಿ ಬರಲಿದೆ. ಇದರ 32GB ಸ್ಟೋರೇಜ್‌ ಸಾಮರ್ಥ್ಯದ ಪೆನ್ ಡ್ರೈವ್ 100Mbps ವೇಗದಲ್ಲಿ ಡೇಟಾವನ್ನು ರೀಡ್‌ ಮಾಡಲಿದೆ. ಇದರಲ್ಲಿ ಮೂವೀಸ್‌, ಇಮೇಜಸ್‌ ಸೇರಿದಂತೆ ಇತರ ಡೇಟಾವನ್ನು ಸ್ಟೋರೇಜ್‌ ಮಾಡುವುದಕ್ಕೆ ಉತ್ತಮ ಅವಕಾಶವಿದೆ. ಇದು 128-ಬಿಟ್ AES ಎನ್‌ಕ್ರಿಪ್ಶನ್ ಹೊಂದಿದೆ. ಇನ್ನು ಈ ಪೆನ್‌ಡ್ರೈವ್‌ ಬೆಲೆ 628ರೂ.ಆಗಿದೆ.

ಹೆಚ್‌ಪಿ v222w 64GB USB 2.0

ಹೆಚ್‌ಪಿ v222w 64GB USB 2.0

ಹೆಚ್ಚುವರಿ ಭದ್ರತೆ ಮತ್ತು ಡೇಟಾ ಸ್ಟೋರೇಜ್‌ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಈ ಪೆನ್‌ಡ್ರೈವ್‌ USB ಫ್ಲಾಶ್ ಡ್ರೈವ್ ಆಗಿದೆ. ಇದು USB 2.0 ಹಾರ್ಡ್‌ವೇರ್‌ ಇಂಟರ್‌ಫೇಸ್‌ ಅನ್ನು ಹೊಂದಿದೆ. ಪ್ರಸ್ತುತ ಈ ಪೆನ್‌ಡ್ರೈವ್‌ನ ಬೆಲೆ 822ರೂ.ಆಗಿದೆ.

ಲೆಕ್ಸರ್‌ 64GB USB 2.0

ಲೆಕ್ಸರ್‌ 64GB USB 2.0

ಉನ್ನತ ಮಟ್ಟದ ಕಾರ್ಯಕ್ಷಮತೆ ಬಯಸುವವರಿಗೆ ಲೆಕ್ಸರ್‌ ಪೆನ್‌ಡ್ರೈವ್‌ ಸೂಕ್ತವಾಗಿದೆ. ಈ ಪೆನ್‌ಡ್ರೈವ್‌ ಲ್ಯಾಪ್‌ಟಾಪ್‌ಗಳು ಮತ್ತು ಮ್ಯಾಕ್ಸ್‌ ಎರಡರಲ್ಲೂ ಕೂಡ ಕಾರ್ಯನಿರ್ವಹಿಸುತ್ತದೆ. ಇದು ಅಲ್ಟ್ರಾ-ಸ್ಲಿಮ್, ಸೊಗಸಾದ ಆಕಾರವನ್ನು ಹೊಂದಿದೆ. ಅಲ್ಲದೆ ಈ USB ಡ್ರೈವ್‌ನಲ್ಲಿ ಎರಡು ವರ್ಷಗಳ ಸೀಮಿತ ವಾರಂಟಿಯೂ ಕೂಡ ಲಭ್ಯವಾಗಲಿದೆ. ಈ ಪೆನ್‌ಡ್ರೈವ್‌ 775ರೂ.ಬೆಲೆಯನ್ನು ಪಡೆದಿದೆ.

ಟ್ರಾನ್ಸ್‌ಸ್ಕ್ಯಾಂಡಿ 32GB

ಟ್ರಾನ್ಸ್‌ಸ್ಕ್ಯಾಂಡಿ 32GB

ಜನಪ್ರಿಯ ಪೆನ್‌ಡ್ರೈವ್‌ ತಯರಾಕರಲ್ಲಿ ಟ್ಯಾನ್ಸ್‌ಸ್ಕ್ಯಾಂಡಿ ಕಂಪೆನಿ ಮುಂಚೂಣಿಯಲ್ಲಿದೆ. ಟ್ರಾನ್ಸ್‌ಸ್ಕ್ಯಾಂಡಿ ಪೆನ್‌ಡ್ರೈವ್‌ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ 32GB ಸಾಮರ್ಥ್ಯದ ಪೆನ್‌ಡ್ರೈವ್‌ ನೀವು ಖರೀದಿಸಬಹುದಾದ ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಈ ಪೆನ್‌ಡ್ರೈವ್‌ ಯುಎಸ್‌ಬಿ 3.0 ಹಾರ್ಡ್‌ವೇರ್‌ ಇಂಟರ್‌ಫೇಸ್‌ ಅನ್ನು ಹೊಂದಿದೆ. ಇದು 52 Mbps ರೀಡರ್‌ ವೇಗ ಹಾಗೂ 30 Mbps ಬರೆಯುವ ವೇಗವನ್ನು ಹೊಂದಿದೆ. ಇನ್ನು ಈ ಪೆನ್‌ಡ್ರೈವ್‌ ಅನ್ನು ನೀವು ಕೇವಲ 1105ರೂ.ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಸ್ಟ್ರಾಂಷಿಯಂ (Strontium) ನಿಟ್ರೋ ಪ್ಲಸ್‌ 128GB ಟೈಪ್‌-ಸಿ ಯುಎಸ್‌ಬಿ

ಸ್ಟ್ರಾಂಷಿಯಂ (Strontium) ನಿಟ್ರೋ ಪ್ಲಸ್‌ 128GB ಟೈಪ್‌-ಸಿ ಯುಎಸ್‌ಬಿ

128GB ಸಾಮರ್ಥ್ಯದ ಪೆನ್ ಡ್ರೈವ್‌ ಖರೀದಿಸುವವರಿಗೆ ಸ್ಟ್ರಾಂಷಿಯಂ ನೈಟ್ರೋ ಪ್ಲಸ್ ಪೆನ್‌ಡ್ರೈವ್‌ ಬೆಸ್ಟ್‌ ಚಾಯ್ಸ್‌ ಆಗಿದೆ. ಈ ಪೆನ್‌ಡ್ರೈವ್‌ ಎರಡು ಕನೆಕ್ಟರ್‌ಗಳನ್ನು ಹೊಂದಿದೆ. ಇದರಲ್ಲಿ ಒಂದು ಯುಎಸ್‌ಬಿ ಟೈಪ್-ಸಿ ಕನೆಕ್ಟರ್ ಮತ್ತು ಯುಎಸ್‌ಬಿ ಟೈಪ್-ಎ ಕನೆಕ್ಟರ್ ಸೇರಿವೆ. ಈ ಪೆನ್‌ಡ್ರೈವ್‌ ಮೂಲಕ ನೀವು ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಮೊಬೈಲ್ ನಲ್ಲಿ ಡೇಟಾ ಟ್ರಾನ್ಸ್‌ಫರ್‌ ಮಾಡಬಹುದಾಗಿದೆ. ಈ ಪೆನ್‌ಡ್ರೈವ್‌ ಬೆಲೆ 1,829ರೂ.ಆಗಿದೆ.

ಹೆಚ್‌ಪಿ OTG ಫ್ಲ್ಯಾಶ್‌ ಡ್ರೈವ್‌ 64GB

ಹೆಚ್‌ಪಿ OTG ಫ್ಲ್ಯಾಶ್‌ ಡ್ರೈವ್‌ 64GB

64GB ಸಾಮರ್ಥ್ಯದ ಹೆಚ್‌ಪಿ OTG ಫ್ಲ್ಯಾಷ್ ಡ್ರೈವ್ ಜನಪ್ರಿಯ ಪೆನ್‌ಡ್ರೈವ್‌ಗಳಲ್ಲಿ ಒಂದಾಗಿದೆ. ಇದು ಪೆನ್ ಆಕಾರದಲ್ಲಿದ್ದು, ಲ್ಯಾಪ್‌ಟಾಪ್‌ ಮತ್ತು ಆಂಡ್ರಾಯ್ಡ್‌ ಡಿವೈಸ್‌ಗಳ ನಡುವೆ ಡೇಟಾ ಟ್ರಾನ್ಸ್‌ಫರ್‌ ಮಾಡುವುದಕ್ಕೆ ಬೆಸ್ಟ್‌ ಆಯ್ಕೆಯಾಗಿದೆ. ಇದು USB 3.1 ಕನೆಕ್ಟ್‌ ಮತ್ತು ಮೈಕ್ರೋ USB ಕನೆಕ್ಟರ್ ಎನ್ನುವ ಎರಡು ಯುಎಸ್‌ಬಿ ಕನೆಕ್ಟರ್‌ಗಳನ್ನು ಹೊಂದಿದೆ. ಈ ಪೆನ್‌ಡ್ರೈವ್‌ ನಿಮಗೆ 1,132ರೂ.ಬೆಲೆಯಲ್ಲಿ ದೊರೆಯಲಿದೆ.

ಕಿಂಗ್‌ಸ್ಟನ್‌ ಡಾಟಾ ಟ್ರಾವೆಲರ್‌ ಎಕ್ಸೋಡಿಯಾ

ಕಿಂಗ್‌ಸ್ಟನ್‌ ಡಾಟಾ ಟ್ರಾವೆಲರ್‌ ಎಕ್ಸೋಡಿಯಾ

ಕಿಂಗ್‌ಸ್ಟನ್‌ ಡಾಟಾ ಟ್ರಾವೆಲರ್‌ ಎಕ್ಸೋಡಿಯಾ 32GB ಸಾಮರ್ಥ್ಯದ ಅತ್ಯುತ್ತಮ ಪೆನ್‌ಡ್ರೈವ್‌ಗಳಲ್ಲಿ ಒಂದು. ಈ ಪೆನ್‌ಡ್ರೈವ್‌ನ USB 3.2 ನಿಂದ ಹೆಚ್ಚಿನ ವೇಗದ ಡೇಟಾ ಟ್ರಾನ್ಸ್‌ಫರ್‌ ಮಾಡಬಹುದಾಗಿದೆ. ಈ ಪೆನ್‌ಡ್ರೈವ್‌ USB 2.0 ಮತ್ತು 3.0 ಪೋರ್ಟ್‌ಗಳನ್ನು ಇಂಟರ್‌ ಆಪರೇಬಲ್ ಮಾಡುತ್ತದೆ. ಇನ್ನು ಈ ಪೆನ್‌ಡ್ರೈವ್‌ 200MBPS ರೀಡರ್‌ ವೇಗವನ್ನು ಹೊಂದಿದೆ. ಇದರ ಬೆಲೆ 329ರೂ.ಆಗಿದೆ.

ಸ್ಟ್ರಾಂಷಿಯಂ ಅಮ್ಮೋ (Strontium ammo) 32GB

ಸ್ಟ್ರಾಂಷಿಯಂ ಅಮ್ಮೋ (Strontium ammo) 32GB

ಸ್ಟ್ರಾಂಷಿಯಂ ಅಮ್ಮೋ (Strontium ammo) 32GB ಸಾಮರ್ಥ್ಯದ ಪೆನ್ ಡ್ರೈವ್ ಆಗಿದೆ. ಇದು ಹಲವಾರು ಕಂಪ್ಯೂಟರ್‌ಗಳಲ್ಲಿ ಡೇಟಾವನ್ನು ಸಂಗ್ರಹಿಸಲು ಮತ್ತು ಅವುಗಳ ನಡುವೆ ಟ್ರಾನ್ಸಫರ್‌ ಮಾಡುವುದಕ್ಕೆ ಉತ್ತಮ ಆಯ್ಕೆಯಾಗಿದೆ. ಇನ್ನು ಈ ಪೆನ್‌ಡ್ರೈವ್‌ ಬೆಲೆ 625ರೂ.ಆಗಿದೆ.

Best Mobiles in India

English summary
Here's Best 10 Pen Drives To Buy Online In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X