ನೀವು ಖರೀದಿಸಬಹುದಾದ 32 ಇಂಚಿನ ಅತ್ಯುತ್ತಮ ಸ್ಮಾರ್ಟ್‌ಟಿವಿಗಳು!

|

ಟೆಕ್ನಾಲಜಿ ಬದಲಾದಂತೆ ಸ್ಮಾರ್ಟ್‌ಟಿವಿಗಳ ವಿನ್ಯಾಸ ಕೂಡ ಸಾಕಷ್ಟು ಬದಲಾಗಿದೆ. ಕೇವಲ ಮನರಂಜನೆಯ ಉದ್ದೇಶಕ್ಕೆ ಮಾತ್ರವಲ್ಲದೆ ಹಲವು ಕಾರ್ಯಗಳನ್ನು ಕೂಡ ಇಂದಿನ ಸ್ಮಾರ್ಟ್‌ಟಿವಿಗಳು ನಿರ್ವಹಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಕೇವಲ ಡಿಟಿಎಚ್‌ ಚಾನಲ್‌ಗಳು ಮಾತ್ರವಲ್ಲದೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೂ ಕೂಡ ಪ್ರವೇಶ ನೀಡುವುದರಿಂದ ಸ್ಮಾರ್ಟ್‌ಟಿವಿಗಳಿಗೆ ಬೇಡಿಕೆ ಹೆಚ್ಚಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಸ್ಮಾರ್ಟ್‌ಟಿವಿಗಳನ್ನು ಖರೀದಿಸುವುದಕ್ಕೆ ಬಯಸುತ್ತಾರೆ.

ಸ್ಮಾರ್ಟ್‌ಟಿವಿಗಳಿಗೆ

ಹೌದು, ಸ್ಮಾರ್ಟ್‌ಟಿವಿಗಳಿಗೆ ಇಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದರಿಂದ ಹಲವು ಪ್ರಮುಖ ಸ್ಮಾರ್ಟ್‌ಟಿವಿ ಬ್ರ್ಯಾಂಡ್‌ಗಳು ಹಲವು ಗಾತ್ರದ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿವೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಸ್ಮಾರ್ಟ್‌ಟಿವಿಗಳ ಗಾತ್ರವನ್ನು ಆಯ್ಕೆ ಮಾಡಬಹುದಾಗಿದೆ. ಸದ್ಯ ನೀವು 32 ಇಂಚಿನ ಸ್ಮಾರ್ಟ್‌ಟಿವಿ ಖರೀದಿಸುವುದಕ್ಕೆ ಬಯಸಿದರೆ ಹಲವು ಆಯ್ಕೆಗಳು ಲಭ್ಯವಿವೆ. ಹಾಗಾದ್ರೆ ಪ್ರಸ್ತುತ ಭಾರತದಲ್ಲಿ ನೀವು ಖರೀದಿಸಬಹುದಾದ 32 ಇಂಚಿನ ಆಂಡ್ರಾಯ್ಡ್‌ LED ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೋನಿ W830

ಸೋನಿ W830

ಸ್ಮಾರ್ಟ್‌ಟಿವಿ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಸೋನಿ ಕಂಪೆನಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಸೋನಿ ಕಂಪೆನಿ ವಿವಿಧ ಗಾತ್ರದ ಸ್ಮಾರ್ಟ್‌ಟಿವಿಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಇದರಲ್ಲಿ ನೀವು 32 ಇಂಚಿನ ಸ್ಮಾರ್ಟ್‌ಟಿವಿ ಖರೀದಿಸಲು ಬಯಸಿದರೆ ಸೋನಿ W830 ಟಿವಿ ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್‌ TV UI ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಜನಪ್ರಿಯ ಸ್ಟ್ರೀಮಿಂಗ್ ಸೇವೆಗಳ ಅನುಕೂಲಕ್ಕಾಗಿ ಪ್ಲೇ ಸ್ಟೋರ್‌ಗೆ ಪ್ರವೇಶವನ್ನು ಕೂಡ ಪಡೆಯಬಹುದಾಗಿದೆ. ಸ್ಮಾರ್ಟ್‌ಫೋನ್‌ನಿಂದ ಸ್ಮಾರ್ಟ್‌ಟಿವಿಗೆ ಕನೆಕ್ಟ್‌ ಮಾಡುವುದಕ್ಕೆ ಕ್ರೋಮಾಕಾಸ್ಟ್‌ ಅನ್ನು ಬೆಂಬಲಿಸುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿ ಎಕ್ಸ್-ಪ್ರೊಟೆಕ್ಷನ್ ಪ್ರೊನೊಂದಿಗೆ ಬರಲಿದೆ. ಪ್ರಸ್ತುತ ಈ ಸ್ಮಾರ್ಟ್‌ಟಿವಿ 31,290ರೂ.ಬೆಲೆಯನ್ನು ಹೊಂದಿದೆ.

ಸೋನಿ 32-ಇಂಚಿನ W672G

ಸೋನಿ 32-ಇಂಚಿನ W672G

32 ಇಂಚಿನ ಸ್ಮಾರ್ಟ್‌ಟಿವಿಗಳಲ್ಲಿ ಸೋನಿ W672G ಸ್ಮಾರ್ಟ್‌ಟಿವಿ ಕೂಡ ಬೆಸ್ಟ್‌ ಎನಿಸಲಿದೆ. ಈ ಸ್ಮಾರ್ಟ್‌ಟಿವಿ ಫುಲ್‌ HD ರೆಸಲ್ಯೂಶನ್ ಹೊಂದಿದೆ. ಸ್ಕ್ರೀನ್‌ ಮೇಲಿನ ವಿಷಯವನ್ನು ಹೆಚ್ಚಿಸಲು ಟಿವಿಯು ಸೋನಿಯ ಎಕ್ಸ್-ರಿಯಾಲಿಟಿ ಪ್ರೊ ಪಿಕ್ಚರ್ ಪ್ರೊಸೆಸಿಂಗ್‌ನೊಂದಿಗೆ ಬರಲಿದೆ. ಇನ್ನು ಈ ಟಿವಿ HDR ಅನ್ನು ಕೂಡ ಬೆಂಬಲಿಸುತ್ತದೆ. ಇದು ಆಂಡ್ರಾಯ್ಡ್‌ ನಲ್ಲಿ ರನ್‌ ಆಗದಿದ್ದರೂ ಕೂಡ ಯುಟ್ಯೂಬ್‌ ಮತ್ತು ನೆಟ್‌ಫ್ಲಿಕ್ಸ್‌ ನಂತಹ ಸ್ಟ್ರೀಮಿಂಗ್ ಸೇವೆಗಳಿಗೆ ಬೆಂಬಲವನ್ನು ಕೂಡ ನೀಡಲಿದೆ. ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ವಿಷಯವನ್ನು ವೀಕ್ಷಿಸಲು ಯುಎಸ್‌ಬಿ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿಗೆ ಸಂಪರ್ಕಿಸಬಹುದು. ಪ್ರಸ್ತುತ ಈ ಸ್ಮಾರ್ಟ್‌ಟಿವಿ 29,499ರೂ.ಬೆಲೆಯನ್ನು ಹೊಂದಿದೆ.

MI TV 4A ಹಾರಿಜಾನ್ ಎಡಿಷನ್‌

MI TV 4A ಹಾರಿಜಾನ್ ಎಡಿಷನ್‌

ಮಿ TV 4A ಹಾರಿಜಾನ್‌ ಆವೃತ್ತಿಯು HD ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ರೇಟ್‌ ಒಳಗೊಂಡಿದೆ. ಇದು 3 HDMI ಪೋರ್ಟ್‌ಗಳು ಮತ್ತು 2 USB ಪೋರ್ಟ್‌ಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ ಟಿವಿಯು ಶಿಯೋಮಿಯ ಸ್ವಂತ ಪ್ಯಾಚ್‌ವಾಲ್ UI ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಟಿವಿ DTS-HD ಜೊತೆಗೆ ಡಾಲ್ಬಿ ಆಡಿಯೊ ಬೆಂಬಲಿಸಲಿದೆ. ಇದು ನೆಟ್‌ಫ್ಲಿಕ್ಸ್, ಪ್ರೈಮ್ ವೀಡಿಯೋಗಳು, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಹೆಚ್ಚಿನ ಜನಪ್ರಿಯ ಸ್ಟ್ರೀಮಿಂಗ್ ಸೇವೆಗಳನ್ನು ಸಹ ಬೆಂಬಲಿಸುತ್ತದೆ. ಪ್ರಸ್ತುತ ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ 16,499ರೂ.ಗಳಿಗೆ ದೊರೆಯಲಿದೆ.

ಒನ್‌ಪ್ಲಸ್‌ 32Y1

ಒನ್‌ಪ್ಲಸ್‌ 32Y1

ಒನ್‌ಪ್ಲಸ್‌ 32Y1 ಸ್ಮಾರ್ಟ್‌ಟಿವಿ 32 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 60Hz ರಿಫ್ರೆಶ್ ರೇಟ್‌ HD ರೆಸಲ್ಯೂಶನ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ ಟಿವಿ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಬಳಕೆದಾರರಿಗೆ ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಎಲ್ಲಾ ಜನಪ್ರಿಯ ಸ್ಟ್ರೀಮಿಂಗ್ ಸೇವೆಗಳಿಗೆ ಪ್ರವೇಶವನ್ನು ನೀಡುತ್ತದೆ. ಇದು ಬಳಸಲು ಸುಲಭವಾದ ರಿಮೋಟ್ ಕಂಟ್ರೋಲ್‌ನೊಂದಿಗೆ ಬರುತ್ತದೆ. ಇದಲ್ಲದೆ 2 HDMI ಪೋರ್ಟ್‌ಗಳು ಮತ್ತು 2 USB ಪೋರ್ಟ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ 15,499ರೂ.ಗಳಿಗೆ ದೊರೆಯಲಿದೆ.

ಹಿಸೆನ್ಸ್ 32A56E

ಹಿಸೆನ್ಸ್ 32A56E

ಹಿಸೆನ್ಸ್‌ 32A56E ಸ್ಮಾರ್ಟ್‌ಟಿವಿ 32 ಇಂಚಿನ ಟಿವಿ HD ರೆಡಿ ರೆಸಲ್ಯೂಶನ್ ಡಿಸ್‌ಪ್ಲೇ ಹೊಂದಿದೆ. ಇದು 60Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇನ್ನು ಈ ಸ್ಮರ್ಟ್‌ಟಿವಿ ಕನೆಕ್ಟಿವಿಟಿ ಆಯ್ಕೆಗಾಗಿ 2 HDMI ಪೋರ್ಟ್‌ಗಳು ಮತ್ತು 2 USB ಪೋರ್ಟ್‌ಗಳನ್ನು ಹೊಂದಿದೆ. ಹಾಗೆಯೇ ಈ ಟಿವಿ 1GB RAM ಮತ್ತು 8GB ROM ಅನ್ನು ಕೂಡ ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಗೂಗಲ್ ಪ್ಲೇ ಸ್ಟೋರ್, ಗೂಗಲ್ ಅಸಿಸ್ಟೆಂಟ್ ಮತ್ತು ಕ್ರೋಮ್‌ಕಾಸ್ಟ್ ಇಂಟರ್‌ಬಿಲ್ಟ್‌ ಪ್ರವೇಶವನ್ನು ನೀಡುತ್ತದೆ. ಪ್ರಸ್ತುತ ಈ ಸ್ಮಾರ್ಟ್‌ಟಿವಿ 16,999ರೂ.ಬೆಲೆಗೆ ದೊರೆಯಲಿದೆ.

ತೋಷಿಬಾ 32L5050

ತೋಷಿಬಾ 32L5050

ಮಾರುಕಟ್ಟೆಯಲ್ಲಿ 32 ಇಂಚಿನ ಆಯ್ಕೆಯ ಸ್ಮಾರ್ಟ್‌ಟಿವಿಗಳಲ್ಲಿ ತೋಷಿಬಾ 32L5050 ಕೂಡ ಸೇರಿದೆ. ಈ ಸ್ಮಾರ್ಟ್‌ಟಿವಿ ತನ್ನದೇ ಆದ Vidaa OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ನೀವು ನೆಟ್‌ಫ್ಲಿಕ್ಸ್‌, ಪ್ರೈಮ್‌ ವೀಡಿಯೊ ಮತ್ತು ಯುಟ್ಯೂಬ್‌ ನಂತಹ ಜನಪ್ರಿಯ ಸ್ಟ್ರೀಮಿಂಗ್‌ ಸೇವೆಗಳಿಗೆ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ಟಿವಿಯು UI ಸರಳ ಮತ್ತು ಬಳಸಲು ಸುಲಭವಾಗಿದೆ ಎಂದು ತೋಷಿಬಾ ಹೇಳಿಕೊಂಡಿದೆ. ಪ್ರಸ್ತುತ ಈ ಸ್ಮಾರ್ಟ್‌ಟಿವಿಯ ಬೆಲೆ 16,990 ರೂ.ಆಗಿದೆ.

ಸ್ಯಾಮ್‌ಸಂಗ್‌ 32 ಇಂಚಿನ T4340 ಸ್ಮಾರ್ಟ್ HD ಟಿವಿ

ಸ್ಯಾಮ್‌ಸಂಗ್‌ 32 ಇಂಚಿನ T4340 ಸ್ಮಾರ್ಟ್ HD ಟಿವಿ

ಸ್ಯಾಮ್‌ಸಂಗ್‌ ಕಂಪೆನಿಯ 32 ಇಂಚಿನ T4340 ಸ್ಮಾರ್ಟ್ HD ಟಿವಿ ಕೂಡ ನಿಮಗೆ 32 ಇಂಚಿನ ಸ್ಮಾರ್ಟ್‌ಟಿವಿಗಳಲ್ಲಿ ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ಟಿವಿ HD ರೆಡಿ ರೆಸಲ್ಯೂಶನ್ ಮತ್ತು HDR ಅನ್ನು ಸಹ ಬೆಂಬಲಿಸುತ್ತದೆ. ಇದು ಟೈಜನ್‌ UI ನಲ್ಲಿ ಕಾರ್ಯನಿರ್ವಹಿಸುತ್ತದೆ, ಜೊತೆಗೆ ನೆಟ್‌ಫ್ಲಿಕ್ಸ್‌, ಪ್ರೈಮ್‌ ವೀಡಿಯೊ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಈ ಸ್ಮಾರ್ಟ್‌ಟಿವಿ ಇಂಟರ್‌ಬಿಲ್ಟ್‌ ಆಪಲ್‌ಟಿವಿ ಅಪ್ಲಿಕೇಶನ್ ಅನ್ನು ಸಹ ಬೆಂಬಲಿಸುತ್ತದೆ. ಈ ಟಿವಿಯಲ್ಲಿ ರಿಮೋಟ್ ಮೂಲಕ ನಿಮ್ಮ ಆಫೀಸ್ ಕಂಪ್ಯೂಟರ್ ಅನ್ನು ಕೂಡ ಪ್ರವೇಶಿಸಬಹುದಾಗಿದೆ. ಪ್ರಸ್ತುತ ಈ ಸ್ಮಾರ್ಟ್‌ಟಿವಿ 15,990ರೂ.ಬೆಲೆಯನ್ನು ಒಳಗೊಂಡಿದೆ.

Best Mobiles in India

Read more about:
English summary
The 32-inch smart TV is small, ideal for close viewing distances and if this is your first TV or a TV for that spare bedroom.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X