ಭಾರತದಲ್ಲಿ 30,000ರೂ. ಒಳಗೆ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ಟಿವಿಗಳು!

|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಟಿವಿ ಮಾರುಕಟ್ಟೆ ಸಾಕಷ್ಟು ಕಲರ್‌ಫುಲ್‌ ಆಗಿದೆ. ಹೊಸ ಮಾದರಿಯ ಟೆಕ್ನಾಲಜಿಯೊಂದಿಗೆ ವಿವಿಧ ಗಾತ್ರದ ಸ್ಮಾರ್ಟ್‌ಟಿವಿಗಳು ಲಭ್ಯವಿದೆ. ಇನ್ನು ಇತ್ತೀಚಿನ ಸ್ಮಾರ್ಟ್‌ಟಿವಿಗಳು ಮಲ್ಟಿ ಟಾಸ್ಕ್‌ ಫಂಕ್ಷನ್‌ ಅನ್ನು ಹೊಂದಿದ್ದು, ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ವಿವಿಧ ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿವೆ. ಇದರಲ್ಲಿ ರಿಯಲ್‌ಮಿ, ಸ್ಯಾಮ್‌ಸಂಗ್‌, ರೆಡ್ಮಿ, ಇನ್ಫಿನಿಕ್ಸ್‌ ನಂತಹ ಜನಪ್ರಿಯ ಬ್ರ್ಯಾಂಡ್‌ಗಳು ಕೂಡ ಸೇರಿವೆ.

ಟಿವಿ

ಹೌದು, ಟಿವಿ ಮಾರುಕಟ್ಟೆಯಲ್ಲಿ ವಿವಿಧ ಗಾತ್ರದ ಸ್ಮಾರ್ಟ್‌ಟಿವಿಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ನಿಮ್ಮ ಅಗತ್ಯಕ್ಕೆ ತಕ್ಕಂತ ಸ್ಮಾರ್ಟ್‌ಟಿವಿಗಳನ್ನು ಆಯ್ಕೆ ಮಾಡಬಹುದಾಗಿದೆ. ಅಲ್ಲದೆ ಬಜೆಟ್‌ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಸ್ಮಾರ್ಟ್‌ಟಿವಿಗಳು ಕೂಡ ಮಾರುಕಟ್ಟೆಯಲ್ಲಿ ಸೌಂಡ್‌ ಮಾಡುತ್ತಿವೆ. ಇದರಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಟಿವಿಗಳು ಭಾರತದಲ್ಲೆ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಹಾಗಾದ್ರೆ ಭಾರತದಲ್ಲಿ ನೀವು 30,000ರೂ. ಒಳಗೆ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ ಸ್ಮಾರ್ಟ್‌ TV X ಫುಲ್‌ HD

ರಿಯಲ್‌ಮಿ ಸ್ಮಾರ್ಟ್‌ TV X ಫುಲ್‌ HD

ರಿಯಲ್‌ಮಿ ಸ್ಮಾರ್ಟ್‌ ಟಿವಿ X ಫುಲ್‌ ಹೆಚ್‌ಡಿ ಟಿವಿ 30,000ರೂ. ಒಳಗೆ ಲಭ್ಯವಾಗುವ ಸ್ಮಾರ್ಟ್‌ಟಿವಿಗಳಲ್ಲಿ ಒಂದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 40 ಇಂಚಿನ ಪ್ರೀಮಿಯಂ ಬೆಜೆಲ್-ಲೆಸ್ ಅಲ್ಟ್ರಾ ಬ್ರೈಟ್ ಎಲ್ಇಡಿ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಟಿವಿ 7 ಡಿಸ್‌ಪ್ಲೇ ಮೋಡ್‌ಗಳನ್ನು ಹೊಂದಿದೆ. ಇದರಲ್ಲಿ ಸ್ಟ್ಯಾಂಡರ್ಡ್, ವಿವಿದ್, ಸ್ಪೋರ್ಟ್, ಮೂವಿ, ಗೇಮ್, ಎನರ್ಜಿ ಸೇವಿಂಗ್ ಮತ್ತು ಯೂಸರ್ ಮೋಡ್‌ ಸೇರಿದೆ. ಇನ್ನು ಈ ಸ್ಮಾರ್ಟ್‌ಟಿವಿಯಲ್ಲಿ ಕ್ರೋಮಾ ಬೂಸ್ಟ್ ಟೆಕ್ನಾಲಜಿಯನ್ನು ನೀಡಲಾಗಿದೆ. ಈ ಸ್ಮಾರ್ಟ್ ಟಿವಿಯು 24W ಡಾಲ್ಬಿ ಆಡಿಯೋ ಸ್ಟಿರಿಯೊ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇದು ಮೀಡಿಯಾ ಟೆಕ್ ಪವರ್‌ಫುಲ್ 64-ಬಿಟ್ ಕ್ವಾಡ್-ಕೋರ್ ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಲ್-ಇನ್-ಒನ್ ಸ್ಮಾರ್ಟ್ ರಿಮೋಟ್ ಮತ್ತು ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ 21,999ರೂ.ಆಗಿದೆ.

ಇನ್ಫಿನಿಕ್ಸ್‌ X1 TV 43 ಇಂಚು

ಇನ್ಫಿನಿಕ್ಸ್‌ X1 TV 43 ಇಂಚು

ಇನ್ಫಿನಿಕ್ಸ್‌ X1 TV 43 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ HDR 10 ಮತ್ತು 400 ರಿಫ್ರೆಶ್‌ ರೇಟ್‌ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ಟಿವಿ ಡಾಲ್ಬಿ ಆಡಿಯೊವನ್ನು ಒಳಗೊಂಡಿದೆ. ಇದರಲ್ಲಿ ಇನ್-ಬಿಲ್ಟ್ ಬಾಕ್ಸ್ 24W ಸ್ಪೀಕರ್ ಅನ್ನು ಅಳವಡಿಸಲಾಗಿದೆ. ಇದು ಮೀಡಿಯಾಟೆಕ್‌ ಕ್ವಾಡ್-ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. ಹಾಗೆಯೇ 1GB RAM ಮತ್ತು 8 GB ROM ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ ಗೂಗಲ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ. ಇದಕ್ಕಾಗಿ ಇಂಟರ್‌ಬಿಲ್ಟ್‌ ಕ್ರೋಮ್‌ಕಾಸ್ಟ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ನಿಮ್ಮ ಹತ್ತಿರದ ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ಇದರ ಬೆಲೆ 23,999ರೂ.ಆಗಿದೆ.

ರೆಡ್ಮಿ ಸ್ಮಾರ್ಟ್‌ಟಿವಿ 43 ಇಂಚು

ರೆಡ್ಮಿ ಸ್ಮಾರ್ಟ್‌ಟಿವಿ 43 ಇಂಚು

ರೆಡ್ಮಿ ಸ್ಮಾರ್ಟ್ ಟಿವಿ 43 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಡಾಲ್ಬಿ ಆಡಿಯೊ ಬೆಂಬಲಿಸುವ 20W ಸ್ಪೀಕರ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಆಡಿಯೊ ಅನುಭವಕ್ಕಾಗಿ DTS ವರ್ಚುವಲ್: X ಗೆ ಬೆಂಬಲವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ 64 ಬಿಟ್ ಕ್ವಾಡ್-ಕೋರ್ ಪ್ರೊಸೆಸರ್‌ ಬೆಂಬಲವನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್‌ TV 11 ಅನ್ನು ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಟಿವಿ IMDB ಜೊತೆಗೆ ಕಸ್ಟಮ್ ಪ್ಯಾಚ್‌ವಾಲ್ 4 ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿಯ ಬೆಲೆ 22,999ರೂ.ಆಗಿದೆ.

ಒನ್‌ಪ್ಲಸ್‌ TV 43 Y1S ಪ್ರೊ

ಒನ್‌ಪ್ಲಸ್‌ TV 43 Y1S ಪ್ರೊ

ಒನ್‌ಪ್ಲಸ್‌ TV 43 Y1S ಪ್ರೊ ಸ್ಮಾರ್ಟ್‌ಟಿವಿ 43 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 3840x2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಡಾಲ್ಬಿ ಆಡಿಯೋವನ್ನು ಬೆಂಬಲಿಸಲಿದೆ. ಹಾಗೆಯೇ ಈ ಸ್ಮಾರ್ಟ್‌ಟಿವಿ 2GB RAM ಮತ್ತು 8GB ಸ್ಟೋರೇಜ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಭಾರತದಲ್ಲಿ 29,999ರೂ.ಬೆಲೆಗೆ ಲಭ್ಯವಾಗಲಿದೆ.

ಒನ್‌ಪ್ಲಸ್‌ TV Y ಸರಣಿ Y1S ಎಡ್ಜ್

ಒನ್‌ಪ್ಲಸ್‌ TV Y ಸರಣಿ Y1S ಎಡ್ಜ್

ಒನ್‌ಪ್ಲಸ್‌ Y1s ಎಡ್ಜ್‌ ಸ್ಮಾರ್ಟ್‌ಟಿವಿ 43 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1920 X 1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಜೊತೆಗೆ 60Hz ರಿಫ್ರೆಶ್ ರೇಟ್‌ ಮತ್ತು 178 ಡಿಗ್ರಿ ವ್ಯೂ ಆಂಗಲ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಆಡಿಯೊ ಸೆಟಪ್ ಡಾಲ್ಬಿ ಅಟ್ಮಾಸ್ ಮತ್ತು ಡಾಲ್ಬಿ ಸೌಂಡ್‌ ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡು HTML ಪೋರ್ಟ್‌ಗಳು ಮತ್ತು ಎರಡು USB ಪೋರ್ಟ್‌ಗಳ ಸಂಪರ್ಕವನ್ನು ನಿಮಗೆ ಅನುಮತಿಸುತ್ತದೆ. ಪ್ರಸ್ತುತ ಇದರ ಬೆಲೆ 25,999ರೂ.ಆಗಿದೆ.

ಸೋನಿ 32-ಇಂಚಿನ W672G

ಸೋನಿ 32-ಇಂಚಿನ W672G

ಸೋನಿ W672G ಸ್ಮಾರ್ಟ್‌ಟಿವಿ 32-ಇಂಚಿನ ಫುಲ್‌ HD ರೆಸಲ್ಯೂಶನ್ ಹೊಂದಿದೆ. ಸ್ಕ್ರೀನ್‌ ಮೇಲಿನ ವಿಷಯವನ್ನು ಹೆಚ್ಚಿಸಲು ಟಿವಿಯು ಸೋನಿಯ ಎಕ್ಸ್-ರಿಯಾಲಿಟಿ ಪ್ರೊ ಪಿಕ್ಚರ್ ಪ್ರೊಸೆಸಿಂಗ್‌ನೊಂದಿಗೆ ಬರಲಿದೆ. ಇನ್ನು ಈ ಟಿವಿ HDR ಅನ್ನು ಕೂಡ ಬೆಂಬಲಿಸುತ್ತದೆ. ಇದು ಆಂಡ್ರಾಯ್ಡ್‌ ನಲ್ಲಿ ರನ್‌ ಆಗದಿದ್ದರೂ ಕೂಡ ಯುಟ್ಯೂಬ್‌ ಮತ್ತು ನೆಟ್‌ಫ್ಲಿಕ್ಸ್‌ ನಂತಹ ಸ್ಟ್ರೀಮಿಂಗ್ ಸೇವೆಗಳಿಗೆ ಬೆಂಬಲವನ್ನು ಕೂಡ ನೀಡಲಿದೆ. ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ವಿಷಯವನ್ನು ವೀಕ್ಷಿಸಲು ಯುಎಸ್‌ಬಿ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿಗೆ ಸಂಪರ್ಕಿಸಬಹುದು. ಪ್ರಸ್ತುತ ಈ ಸ್ಮಾರ್ಟ್‌ಟಿವಿ 29,499ರೂ.ಬೆಲೆಯನ್ನು ಹೊಂದಿದೆ.

ಒನ್‌ಪ್ಲಸ್‌ 32Y1

ಒನ್‌ಪ್ಲಸ್‌ 32Y1

ಒನ್‌ಪ್ಲಸ್‌ 32Y1 ಸ್ಮಾರ್ಟ್‌ಟಿವಿ 32 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 60Hz ರಿಫ್ರೆಶ್ ರೇಟ್‌ HD ರೆಸಲ್ಯೂಶನ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ ಟಿವಿ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಬಳಕೆದಾರರಿಗೆ ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಎಲ್ಲಾ ಜನಪ್ರಿಯ ಸ್ಟ್ರೀಮಿಂಗ್ ಸೇವೆಗಳಿಗೆ ಪ್ರವೇಶವನ್ನು ನೀಡುತ್ತದೆ. ಇದು ಬಳಸಲು ಸುಲಭವಾದ ರಿಮೋಟ್ ಕಂಟ್ರೋಲ್‌ನೊಂದಿಗೆ ಬರುತ್ತದೆ. ಇದಲ್ಲದೆ 2 HDMI ಪೋರ್ಟ್‌ಗಳು ಮತ್ತು 2 USB ಪೋರ್ಟ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ 15,499ರೂ.ಗಳಿಗೆ ದೊರೆಯಲಿದೆ.

Best Mobiles in India

Read more about:
English summary
Here's Best 43-inch smart TVs under Rs 30,000 to buy in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X