Home
ಸುದ್ದಿಜಾಲ

ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳು!

ಇಂದಿನ ದಿನಗಳಲ್ಲಿ ಟೆಕ್‌ ವಲಯದಲ್ಲಿ ಸ್ಮಾರ್ಟ್‌ವಾಚ್‌ಗಳು ಕೂಡ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿವೆ. ವಿವಿಧ ಬೆಲೆಗಳ ಆಯ್ಕೆಗಳಲ್ಲಿ ಅನೇಕ ಸ್ಮಾರ್ಟ್‌ವಾಚ್‌ಗಳನ್ನು ಖರೀದಿಸಬಹುದಾಗಿದೆ. ಇನ್ನು ಈಗಿನ ಸ್ಮಾರ್ಟ್‌ವಾಚ್‌ಗಳು ಫಿಟ್ನೆಸ್‌ ಆಧಾರಿತ ಫೀಚರ್ಸ್‌ಗಳಿಂದಾಗಿ ಹೆಚ್ಚು ಗಮನ ಸೆಳೆಯುತ್ತಿವೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಸ್ಮಾರ್ಟ್‌ವಾಚ್‌ಗಳತ್ತ ಆಸಕ್ತಿ ವಹಿಸುತ್ತಿದ್ದಾರೆ.

ಸ್ಮಾರ್ಟ್‌ವಾಚ್‌

ಹೌದು, ಸ್ಮಾರ್ಟ್‌ವಾಚ್‌ಗಳಿಗೆ ಇಂದು ಹೆಚ್ಚಿನ ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಅನೇಕ ಕಂಪೆನಿಗಳು ಹಲವು ಆಕರ್ಷಕ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡುತ್ತಲೇ ಬಂದಿವೆ. ಇನ್ನು ಹೊಸ ಮಾದರಿಯ ಟೆಕ್ನಾಲಜಿ, ವಾಚ್‌ ಫೇಸ್‌ಗಳು ಹಾಗೂ ಹೆಲ್ತ್‌ ಫೀಚರ್ಸ್‌ಗಳಿಂದಾಗಿ ಸ್ಮಾರ್ಟ್‌ವಾಚ್‌ಗಳು ಸಖತ್‌ ಸೌಂಡ್‌ ಮಾಡುತ್ತಿವೆ. ಇದರಲ್ಲಿ ಆಪಲ್‌ ಕಂಪೆನಿ, ಸ್ಯಾಮ್‌ಸಂಗ್‌, ರಿಯಲ್‌ಮಿ, ಶಿಯೋಮಿ, ಅಮಾಜ್‌ಫಿಟ್‌ ನಂತಹ ಪ್ರಸಿದ್ಧಿ ಕಂಪೆನಿಗಳು ಕೂಡ ಹಲವು ವಾಚ್‌ಗಳನ್ನು ಪರಿಚಯಿಸಿವೆ. ಇವುಗಳಲ್ಲಿ ಹೆಚ್ಚಿನ ಸ್ಮಾರ್ಟ್‌ವಾಚ್‌ಗಳು ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳಾಗಿವೆ.

ಸ್ಮಾರ್ಟ್‌ವಾಚ್‌ಗಳು

ಇನ್ನು ಸ್ಮಾರ್ಟ್‌ವಾಚ್‌ಗಳು ಸ್ಮಾರ್ಟ್‌ಫೋನ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಮಟ್ಟಿಗೆ ಮುಂದುವರೆದಿವೆ. ಬ್ಲೂಟೂತ್‌ ಕನೆಕ್ಟಿವಿಟಿ ಮೂಲಕ ಫೋನ್‌ ಕಾಲ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಕೂಡ ಹೊಂದಿವೆ. ಜೊತೆಗೆ ಮ್ಯೂಸಿಕ್‌ ಪ್ಲೇ ಮಾಡುವ ಹಾಗೂ ಗೂಗಲ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸುವ ಸ್ಮಾರ್ಟ್‌ವಾಚ್‌ಗಳು ಕೂಡ ಲಬ್ಯವಿದೆ. ಸದ್ಯ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯಲ್ಲಿ ಮಾತ್ರವಲ್ಲದೆ ಹೈ ಎಂಡ್‌ ಮಾದರಿಯ ಸ್ಮಾರ್ಟ್‌ವಾಚ್‌ಗಳು ಕೂಡ ದೊರೆಯಲಿವೆ. ಹಾಗಾದ್ರೆ ಮಾರುಕಟ್ಟೆಯಲ್ಲಿ 10,000 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಸ್ಮಾರ್ಟ್‌ವಾಚ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮಾಜ್‌ಫಿಟ್ ಜೆಪ್ E

ಅಮಾಜ್‌ಫಿಟ್ ಜೆಪ್ E

ಅಮಾಜ್‌ಫಿಟ್ ಜೆಪ್ E ಸ್ಟೈಲಿಶ್‌ ಡಿಸೈನ್‌ ಹೊಂದಿದ್ದು, ಎರಡು ಡಿಸ್‌ಪ್ಲೇ ಆಯ್ಕೆಗಳನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ 348 x 442 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಬೆಂಬಲಿಸುವ 1.28 ಇಂಚಿನ ಸರ್ಕಲ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದಲ್ಲದೆ 341 PPI ಒಳಗೊಂಡ 1.65 ಇಂಚಿನ ಸ್ಕ್ವೇರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಸಹ ಒಳಗೊಂಡಿದೆ. ಇದಲ್ಲದೆ ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್‌ಗಳನ್ನು ಸಹ ಬೆಂಬಲಿಸುತ್ತದೆ. ಇದನ್ನು ಅಮಾಜ್‌ಫಿಟ್‌ ಸ್ವಾಮ್ಯದ ಅಪ್ಲಿಕೇಶನ್‌ನಿಂದ ಟ್ವೀಕ್ ಮಾಡಬಹುದಾಗಿದೆ.

ಈ ಸ್ಮಾರ್ಟ್‌ವಾಚ್‌ನಲ್ಲಿ ಕಿರಿದಾದ ಬೆಜೆಲ್‌ಗಳೊಂದಿಗೆ 3D ಕರ್ವ್ಡ್‌ -ಬೆಜೆಲ್ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ ವಾಚ್ ಹೊರಾಂಗಣ ಓಟ, ಟ್ರೆಡ್ ಮಿಲ್, ಒಳಾಂಗಣ ಸೈಕ್ಲಿಂಗ್, ಹೊರಾಂಗಣ ಸೈಕ್ಲಿಂಗ್, ವಾಕಿಂಗ್, ಎಲಿಪ್ಟಿಕಲ್, ಕ್ಲೈಂಬಿಂಗ್, ಸ್ಕೀಯಿಂಗ್, ಪೂಲ್ ಸ್ವಿಮ್ಮಿಂಗ್‌, ಫ್ರೀಸ್ಟೈಲ್ ಮತ್ತು ಟ್ರಯಲ್ ರನ್ನಿಂಗ್ ಸೇರಿದಂತೆ 11 ಕ್ರೀಡಾ ವಿಧಾನಗಳನ್ನು ಹೊಂದಿದೆ. ಪ್ರಸ್ತುತ ಈ ಸ್ಮಾರ್ಟ್‌ವಾಚ್‌ 8,999ರೂ.ಗಳಿಗೆ ಲಭ್ಯವಾಗಲಿದೆ.

ನಾಯ್ಸ್ ಕಲರ್‌ಫಿಟ್ ಪ್ರೊ 3 ಆಲ್ಫಾ

ನಾಯ್ಸ್ ಕಲರ್‌ಫಿಟ್ ಪ್ರೊ 3 ಆಲ್ಫಾ

ನಾಯ್ಸ್ ಕಲರ್‌ಫಿಟ್ ಪ್ರೊ 3 ಆಲ್ಫಾ 1.69 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240 × 280 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದ್ದು, 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು 43 ಎಂಎಂ ಆಯತಾಕಾರದ ಡಯಲ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಕೂಡ ಹೊಂದಿದೆ. ಇದರಲ್ಲಿ ನೀವು 100ಕ್ಕೂ ಹೆಚ್ಚಿನ ಸ್ಪೋರ್ಟ್ಸ್‌ ಮೋಡ್‌ಗಳನ್ನು ಕಾಣಬಹುದಾಗಿದೆ. ಇದಲ್ಲದೆ ಸ್ಟೆಪ್ಸ್‌, ಕ್ಯಾಲೊರಿ ಬರ್ನ್ಸ್‌ ಸೇರಿದಂತೆ ಇತ್ಯಾದಿ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಬಹುದು. ಇದರ ಬೆಲೆ 5,499ರೂ. ಆಗಿದೆ.

ಫೈರ್ ಬೋಲ್ಟ್ ಇನ್ವಿನ್ಸಿಬಲ್

ಫೈರ್ ಬೋಲ್ಟ್ ಇನ್ವಿನ್ಸಿಬಲ್

ಫೈರ್-ಬೋಲ್ಟ್ ಇನ್ವಿನ್ಸಿಬಲ್ ಸ್ಮಾರ್ಟ್‌ವಾಚ್‌ 454 x 454 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 1.39 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಆಗಿದ್ದು, 2.5D ಫುಲ್‌ ಲ್ಯಾಮಿನೇಟೆಡ್ ಸ್ಕ್ರೀನ್‌ ಅನ್ನು ಸಹ ನೀಡಲಾಗಿದೆ. ಇದಲ್ಲದೆ ಈ ಸ್ಮಾರ್ಟ್ ವಾಚ್ 100 ಬಿಲ್ಟ್-ಇನ್ ವಾಚ್ ಫೇಸ್‌ಗಳು ಮತ್ತು 100 ಸ್ಪೋರ್ಟ್ಸ್ ಮೋಡ್‌ಗಳನ್ನು ನೀಡಲಿದೆ. ಇದರಲ್ಲಿ ಫ್ಲ್ಯಾಷ್‌ಲೈಟ್, ಕ್ಯಾಲ್ಕುಲೇಟರ್ ಅಪ್ಲಿಕೇಶನ್ ಮತ್ತು ಮ್ಯೂಸಿಕ್‌ ಕಂಟ್ರೋಲ್‌ ಅನ್ನು ಸಹ ನೀಡಲಾಗಿದೆ. ಅಲ್ಲದೆ ಈ ವಾಚ್‌ ವಾಟರ್‌ಪ್ರೂಫ್‌ ಆಗಿದ್ದು, IP67 ಧೂಳು ಮತ್ತು ವಾಟರ್‌ ರೆಸಿಸ್ಟೆನ್ಸಿಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ನ ಬೆಲೆ 6,999ರೂ.ಆಗಿದೆ.

ರಿಯಲ್‌ಮಿ ಟೆಕ್‌ಲೈಫ್‌ ವಾಚ್ R100

ರಿಯಲ್‌ಮಿ ಟೆಕ್‌ಲೈಫ್‌ ವಾಚ್ R100

ರಿಯಲ್‌ಮಿ ಟೆಕ್‌ಲೈಫ್‌ ವಾಚ್ R100 1.32 ಇಂಚಿನ ಸರ್ಕಲ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 360×360 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 450ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ ವಾಚ್ 100 ವಾಚ್ ಫೇಸ್‌ಗಳೊಂದಿಗೆ ಬರುತ್ತದೆ. ಜೊತೆಗೆ ಈ ವಾಚ್‌ ಒಳಾಂಗಣ ಓಟ, ಬ್ಯಾಡ್ಮಿಂಟನ್, ಸಾಕರ್, ಕ್ರಿಕೆಟ್, ಹೈಕಿಂಗ್, ಯೋಗ ಮತ್ತು ಮುಂತಾದವುಗಳನ್ನು ಒಳಗೊಂಡಿರುವ 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳೊಂದಿಗೆ ಬರುತ್ತದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಅಲ್ಯೂಮಿನಿಯಂ ಬೆಜೆಲ್‌ಗಳು ಮತ್ತು ಸಿಲಿಕೋನ್ ಪಟ್ಟಿಗಳನ್ನು ಹೊಂದಿದೆ. ಪ್ರಸ್ತುತ ಈ ಸ್ಮಾರ್ಟ್‌ವಾಚ್‌ 3,999ರೂ.ಬೆಲೆಯನ್ನು ಹೊಂದಿದೆ.

ಹುವಾವೇ ವಾಚ್ ಫಿಟ್

ಹುವಾವೇ ವಾಚ್ ಫಿಟ್

ಹುವಾವೇ ಕಂಪೆನಿಯ ಸ್ಮಾರ್ಟ್‌ವಾಚ್‌ಗಳು ಕೂಡ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ಹುವಾವೇ ವಾಚ್‌ ಫಿಟ್‌ ಬಜೆಟ್‌ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ವಾಚ್‌ 1.64 ಇಂಚಿನ ಹೆಚ್‌ಡಿ ಅಮೋಲೆಟ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 70% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ನಲ್ಲಿ ಬಳಕೆದಾರರು 130ಕ್ಕೂ ಹೆಚ್ಚಿನ ವಾಚ್ ಫೇಸ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ಈ ಸ್ಮಾರ್ಟ್‌ವಾಚ್‌ ಸುಧಾರಿತ ಡೇಟಾ ಟ್ರ್ಯಾಕಿಂಗ್ ಜೊತೆಗೆ 96 ವರ್ಕ್‌ಔಟ್ ಮೋಡ್‌ಗಳನ್ನು ನೀಡುತ್ತದೆ. ಇದು ಫಿಟ್ ಸಕುರಾ ಪಿಂಕ್, ಗ್ರ್ಯಾಫೈಟ್ ಬ್ಲಾಕ್, ಐಲ್ ಬ್ಲೂ ಮತ್ತು ಹೆಚ್ಚಿನದನ್ನು ಒಳಗೊಂಡಿರುವ ಪಟ್ಟಿಗಾಗಿ ಬಹು ಬಣ್ಣದ ಆಯ್ಕೆಗಳಲ್ಲಿ ಬರಲಿದ್ದು, ಈ ವಾಚ್‌ 6,990ರೂ.ಬೆಲೆಯಲ್ಲಿ ದೊರೆಯಲಿದೆ.

Best Mobiles in India

English summary
Here's Best 5 smartwatches in India under Rs 10,000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+