Home
ಸುದ್ದಿಜಾಲ

ಸ್ಮಾರ್ಟ್‌ಟಿವಿ ಖರೀದಿಸಬೇಕೆ? ಇಲ್ಲಿವೆ ಸೋನಿ ಸಂಸ್ಥೆಯ ಬೆಸ್ಟ್‌ ಸ್ಮಾರ್ಟ್‌ಟಿವಿಗಳು!

ಸೋನಿ ಕಂಪೆನಿಯ ಸ್ಮಾರ್ಟ್‌ಟಿವಿಗಳಿಗೆ ಜಾಗತಿಕವಾಗಿ ಭಾರಿ ಬೇಡಿಕೆಯಿದೆ. ಸೋನಿ ಸ್ಮಾರ್ಟ್‌ಟಿವಿಗಳ ವಿನ್ಯಾಸ ಹಾಗೂ ಟೆಕ್ನಾಲಜಿಗೆ ಮನಸೋಲದವರೇ ಇಲ್ಲ. ಇದಕ್ಕೆ ತಕ್ಕಂತೆ ಸೋನಿ ಕಂಪೆನಿ ಕೂಡ ಹಲವು ಆಕರ್ಷಕ ಸ್ಮಾರ್ಟ್‌ಟಿವಿಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಗುಣಮಟ್ಟ ಹಾಗೂ ಗಾತ್ರಕ್ಕೆ ತಕ್ಕಂತ ಸ್ಮಾರ್ಟ್‌ಟಿವಿಗಳ ಆಯ್ಕೆಯನ್ನು ಸೋನಿ ಕಂಪೆನಿ ನೀಡುತ್ತಾ ಬಂದಿದೆ.

ಹೌದು, ಸೋನಿ ಕಂಪೆನಿಯ ಸ್ಮಾರ್ಟ್‌ಟಿವಿಗಳು ಪ್ರೀಮಿಯಂ ಗುಣಮಟ್ಟದ ಸೇವೆಯಿಂದ ಗುರುತಿಸಿಕೊಂಡಿವೆ. ಬೆರಳ ತುದಿಯಲ್ಲಿಯೇ ಹಲವು ಸೇವೆಗಳಿಗೆ ಪ್ರವೇಶ ನೀಡುವ ಸ್ಮಾರ್ಟ್‌ಟಿವಿಗಳನ್ನು ಸೋನಿ ಹೊಂದಿದೆ. ಸದ್ಯ ನೀವು ಖರೀದಿಸಬಹುದಾದ ಅತ್ಯುತ್ತಮ ಸೋನಿ ಆಂಡ್ರಾಯ್ಡ್‌ ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಟಿವಿ ಖರೀದಿಸಬೇಕೆ? ಇಲ್ಲಿವೆ ಸೋನಿ ಸಂಸ್ಥೆಯ ಬೆಸ್ಟ್‌ ಟಿವಿಗಳು!

ಸೋನಿ ಬ್ರಾವಿಯಾ 75 ಇಂಚಿನ ಆಂಡ್ರಾಯ್ಡ್ ಟಿವಿ

ಸೋನಿ ಬ್ರಾವಿಯಾ 75 ಇಂಚಿನ ಆಂಡ್ರಾಯ್ಡ್ ಟಿವಿ 4K ಅಲ್ಟ್ರಾ HD ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಟ್ರೈಲುಮಿನೋಸ್ ಪ್ರೊ ಟೆಕ್ನಾಲಜಿಯನ್ನು ಪಡೆದಿದೆ. ಇದು X1 HDR 4K ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಬಳಕೆದಾರರ ಅನುಭವವನ್ನು ನವೀಕರಿಸುತ್ತದೆ. ಜೊತೆಗೆ ಸ್ಮಾರ್ಟ್‌ಟಿವಿ ಡಾಲ್ಬಿ ವಿಷನ್ ಮತ್ತು ಇಮ್ಮರ್ಸಿವ್ ಆಡಿಯೋ ಫೀಚರ್ಸ್‌ ಅನ್ನು ಒಳಗೊಂಡಿದೆ. ಇದು Google TV ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಟಿವಿಯಲ್ಲಿ ನೀವು 7 ಲಕ್ಷಕ್ಕೂ ಹೆಚ್ಚಿನ ಚಲನಚಿತ್ರಗಳು ಮತ್ತು ಟಿವಿ ಶೋ ಸಂಚಿಕೆಗಳನ್ನು ಪ್ರವೇಶಿಸಬಹುದಾಗಿದೆ.

ಸೋನಿ ಬ್ರಾವಿಯಾ 32 ಇಂಚಿನ ಆಂಡ್ರಾಯ್ಡ್ ಟಿವಿ

ಇನ್ನು ನೀವು ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಟಿವಿಗಳಲ್ಲಿ ಸೋನಿ ಬ್ರಾವಿಯಾ 32 ಇಂಚಿನ ಆಂಡ್ರಾಯ್ಡ್ ಟಿವಿ ಕೂಡ ಒಂದಾಗಿದೆ. ಈ ಸ್ಮಾರ್ಟ್‌ಟಿವಿ 4K ಅಲ್ಟ್ರಾ HD ಡಿಸ್‌ಪ್ಲೇ ಹೊಂದಿದ್ದು, 1780 ವೈಡ್‌ ಆಂಗಲ್‌ ವ್ಯೂ ಅನ್ನು ಹೊಂದಿದೆ. ಇದು 60 Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, X1 4K ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಕ್ರೋಮ್‌ಕಾಸ್ಟ್‌ ಕನೆಕ್ಟಿವಿಟಿಯನ್ನು ನೀಡಲಾಗಿದ್ದು, ನಿಮ್ಮ ಮೊಬೈಲ್‌ ಅನ್ನು ಸ್ಮಾರ್ಟ್‌ಟಿವಿಯೊಂದಿಗೆ ಕನೆಕ್ಟ್ ಮಾಡಬಹುದಾಗಿದೆ.

ಸ್ಮಾರ್ಟ್‌ಟಿವಿ ಖರೀದಿಸಬೇಕೆ? ಇಲ್ಲಿವೆ ಸೋನಿ ಸಂಸ್ಥೆಯ ಬೆಸ್ಟ್‌ ಟಿವಿಗಳು!

ಸೋನಿ ಬ್ರಾವಿಯಾ 43 ಇಂಚಿನ LED ಆಂಡ್ರಾಯ್ಡ್‌ ಟಿವಿ

ಸೋನಿ ಬ್ರಾವಿಯಾ 43 ಇಂಚಿನ LED ಆಂಡ್ರಾಯ್ಡ್‌ ಟಿವಿ 4K ಅಲ್ಟ್ರಾ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 16:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ. ಇದಲ್ಲದೆ ಸ್ಮಾರ್ಟ್‌ಟಿವಿ 20 ವ್ಯಾಟ್ ಬಾಸ್ ರಿಫ್ಲೆಕ್ಸ್ ಸ್ಪೀಕರ್ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ಟಿವಿ ಗೂಗಲ್ ಅಸಿಸ್ಟೆಂಟ್ ಕಂಟ್ರೋಲ್‌ ಅನ್ನು ಸಹ ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿ ಸೋನಿ ಎಕ್ಸ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಮೋಷನ್ ಫ್ಲೋ XR100 ಮತ್ತು ಲೈವ್ ಕಲರ್ ಡಿಸ್ಪ್ಲೇ ಮತ್ತು 4K ಎಕ್ಸ್-ರಿಯಾಲಿಟಿ ಪ್ರೊ ಟೆಕ್ನಾಲಜಿಯನ್ನು ಹೊಂದಿದೆ.

ಸೋನಿ ಬ್ರಾವಿಯಾ 55 ಇಂಚಿನ ಅಲ್ಟ್ರಾ HD ಆಂಡ್ರಾಯ್ಡ್ ಟಿವಿ

ಸೋನಿ ಬ್ರಾವಿಯಾ 55 ಇಂಚಿನ ಅಲ್ಟ್ರಾ HD ಆಂಡ್ರಾಯ್ಡ್ ಟಿವಿ ಸ್ಮಾರ್ಟ್ ಲೈವ್ ಕಲರ್ ಟೆಕ್ನಾಲಜಿಯನ್ನು ಪಡೆದಿದೆ. ಈ ಸ್ಮಾರ್ಟ್‌ಟಿವಿ ಮೋಶನ್‌ಫ್ಲೋ XR200 ಫೀಚರ್ಸ್‌ ಅನ್ನು ಹೊಂದಿದ್ದು, ಇನ್‌ಬಿಲ್ಟ್‌ ಗೂಗಲ್‌ ಅಸಿಸ್ಟೆಂಟ್‌ ಅನ್ನು ಹೊಂದಿದೆ. ಅಲ್ಲದೆ ಇದು Wi-Fi ಮತ್ತು ಬ್ಲೂಟೂತ್ ಆಕ್ಟಿವೇಟ್‌ ಅನ್ನು ಪಡೆದಿದ್ದು, Apple Airplay ಮತ್ತು Chromecast ಗೆ ಹೊಂದಿಕೊಳ್ಳುತ್ತದೆ.

ಸ್ಮಾರ್ಟ್‌ಟಿವಿ ಖರೀದಿಸಬೇಕೆ? ಇಲ್ಲಿವೆ ಸೋನಿ ಸಂಸ್ಥೆಯ ಬೆಸ್ಟ್‌ ಟಿವಿಗಳು!

ಸೋನಿ ಬ್ರಾವಿಯಾ 77 ಇಂಚಿನ XR ಸರಣಿ

ಸೋನಿ ಬ್ರಾವಿಯಾ 77 ಇಂಚಿನ XR ಸರಣಿಯ ಸ್ಮಾರ್ಟ್‌ಟಿವಿ ಕೂಡ ಅತ್ಯುತ್ತಮ ಆಯ್ಕೆ ಎನಿಸಿಕೊಂಡಿದೆ. ಈ ಸ್ಮಾರ್ಟ್‌ಟಿವಿ 120 Hertz ವೂಪಿಂಗ್ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಸ್ಮಾರ್ಟ್‌ಟಿವಿ 5.1 Ch-3D ಸರೌಂಡ್ ಅಪ್‌ಸ್ಕೇಲಿಂಗ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಜೊತೆಗೆ ಸ್ಮಾರ್ಟ್‌ಟಿವಿ ಡಾಲ್ಬಿ ಅಟ್ಮಾಸ್ ಮತ್ತು ವಾಯ್ಸ್‌ ಜೂಮ್ 2 ಅನ್ನು ಹೊಂದಿದೆ.

Best Mobiles in India

English summary
Here's Best 5 Sony Android TVs to buy in india: specs details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+