ನೀವು ಉಸಿರಾಡುವ ಗಾಳಿಯ ಗುಣಮಟ್ಟದ ಬಗ್ಗೆ ತಿಳಿಯೋದಕ್ಕೆ ಆಪ್‌ಗಳಿವೆ ಗೊತ್ತಾ?

|

ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವುದು ಹೊಸ ವಿಷಯವೇನು ಅಲ್ಲ. ಆಧುನಿಕತೆ ಹೆಚ್ಚಾದಂತೆ ವಾಯುಮಾಲಿನ್ಯ ಕೂಡ ಹೆಚ್ಚಾಗುತ್ತಲೇ ಬಂದಿದೆ. ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಅನೇಕ ಟೆಕ್ನಾಲಜಿ ಡಿವೈಸ್‌ಗಳು ಬಂದಿವೆಯಾದರೂ ವಾಯು ಮಾಲಿನ್ಯವನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗುವುತ್ತಿಲ್ಲ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿ ಹೆಚ್ಚಿನ ವಾಯು ಮಾಲಿನ್ಯ ಕಾರಣಕ್ಕೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಉತ್ತರ ಭಾರತದಲ್ಲಿ ದೀಪಾವಳಿಯ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಯು ಮಾಲಿನ್ಯ ದಾಖಲಾಗಿದೆ.

 ಏರ್‌ ಕ್ವಾಲಿಟಿ ಚೆಕ್‌

ಹೌದು, ಹೆಚ್ಚಿದ ಆಧುನಿಕ ಜೀವನ ಶೈಲಿಯ ಪರಿಣಾಮ ನಗರ ಪ್ರದೇಶಗಳು ವಾಯು ಮಾಲಿನ್ಯದಿಂದ ಕೂಡಿವೆ. ನಗರ ಪ್ರದೇಶಗಳಲ್ಲಿ ಉಸಿರಾಡುವ ಗಾಳಿ ಕೂಡ ವಿಷಮ ಪರಿಸ್ಥಿತಿಗೆ ತಲುಪುತ್ತಿವೆ. ಇಂತಹ ಸನ್ನಿವೇಶದಲ್ಲಿ ನಮ್ಮ ಸುತ್ತಮುತ್ತಲಿನ ವಾತಾವರಣದ ಏರ್‌ ಕ್ವಾಲಿಟಿ ಚೆಕ್‌ ಮಾಡುವುದು ಉತ್ತಮ. ಇದಕ್ಕಾಗಿಯೇ ಅನೇಕ ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಹಾಗಾದ್ರೆ ವಾತಾವರಣದಲ್ಲಿನ ಗಾಳಿಯ ಗುಣಮಟ್ಟವನ್ನು ಅಳೆಯುವುದು ಹೇಗೆ? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗಾಳಿಯ ಗುಣಮಟ್ಟವನ್ನು ಅಳೆಯುವುದು ಹೇಗೆ?

ಗಾಳಿಯ ಗುಣಮಟ್ಟವನ್ನು ಅಳೆಯುವುದು ಹೇಗೆ?

ಹೆಚ್ಚುತ್ತಿರುವ ವಾಯುಮಾಲಿನ್ಯದ ಕಾರಣದಿಂದಾಗಿ ನಮ್ಮ ವಾತಾವರಣದ ಗಾಳಿಯ ಗುಣಮಟ್ಟವನ್ನು ಅಳೆಯಬೇಕಾದ ಅನಿವಾರ್ಯತೆ ನಮಗಿದೆ. ಏರ್ ಕ್ವಾಲಿಟಿ ಇಂಡೆಕ್ಸ್ ರೇಟಿಂಗ್ ಮೂಲಕ ನೀವು ಉಸಿರಾಡುವ ಗಾಳಿಯ ಗುಣಮಟ್ಟವನ್ನು ಅಳೆಯಬಹುದಾಗಿದೆ. ಏರ್‌ ಕ್ವಾಲಿಟಿ ಇಂಡೆಕ್ಸ್‌ ಮಟ್ಟ 0 ರಿಂದ 500 ಡಿಗ್ರಿಗಳವರೆಗೆ ಇರುತ್ತದೆ. ಈ ಸಂಖ್ಯೆಗಳಲ್ಲಿ ಉಂಟಾಗುವ ಬದಲಾವಣೆ ಗಾಳಿಯಲ್ಲಿನ ಮಾಲಿನ್ಯದ ಪ್ರಮಾಣವನ್ನು ತಿಳಿಸಲಿದೆ. AQI ನೆಲಮಟ್ಟದ ಓಝೋನ್, ಕಾರ್ಬನ್ ಮಾನಾಕ್ಸೈಡ್, ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್, ಮತ್ತು ವಾಯುಗಾಮಿ ಕಣಗಳು ಅಥವಾ PM2.5 ಮತ್ತು PM10 ನಂತಹ ಏರೋಸಾಲ್‌ಗಳಂತಹ ಐದು ಪ್ರಮುಖ ವಾಯು ಮಾಲಿನ್ಯಕಾರಕಗಳನ್ನು ಟ್ರ್ಯಾಕ್ ಮಾಡುತ್ತದೆ. ನಿಮ್ಮ ಪ್ರದೇಶದ AQI ರೇಟಿಂಗ್ ಕಡಿಮೆ ಇದ್ದರೆ, ಗಾಳಿಯ ಗುಣಮಟ್ಟವು ಸ್ವಚ್ಛವಾಗಿರುತ್ತದೆ. ಗಾಳಿಯ ಗುಣಮಟ್ಟ ಅಳೆಯುವ ಅಪ್ಲಿಕೇಶನ್‌ಗಳ ಬಗ್ಗೆ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಸಫರ್ ಇಂಡಿಯಾ

ಸಫರ್ ಇಂಡಿಯಾ

SAFAR ಇದು ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ವೆಬ್‌ಸೈಟ್‌ ಆಗಿದೆ. ಇದು ಭಾರತದ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯಾಲಜಿ, ಪುಣೆ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಬಳಕೆದಾರರು AQI ಮಟ್ಟಗಳ ಮುನ್ಸೂಚನೆಗಳನ್ನು ಮತ್ತು PM10 ಮತ್ತು PM2.5 ಹಂತಗಳನ್ನು ಒಳಗೊಂಡ ವಿವರಗಳನ್ನು ಪಡೆಯಬಹುದಾಗಿದೆ.

ಬ್ರೀಜೋಮೀಟರ್

ಬ್ರೀಜೋಮೀಟರ್

ಬ್ರೀಜೋಮೀಟರ್ ಇದು ಗಾಳಿಯ ಗುಣಮಟ್ಟವನ್ನು ಅಳೆಯುವ ಅಪ್ಲಿಕೇಶನ್‌ ಆಗಿದೆ. ಈ ಅಪ್ಲಿಕೇಶನ್‌ ನಿಮ್ಮ ಸ್ಥಳದ ಡೇಟಾವನ್ನು ಸ್ವಯಂಚಾಲಿತವಾಗಿ ಅಥವಾ ಹಸ್ತಚಾಲಿತವಾಗಿ ಪಡೆಯಲು ಅವಕಾಶ ನೀಡಲಿದೆ. ಮಾಹಿತಿಗೆ ಅನುಗುಣವಾದ AQI ಡಿಟೇಲ್ಸ್‌ ನೀಡಲಿದೆ. ಈ ಅಪ್ಲಿಕೇಶನ್‌ ಮೂಲಕ ನೀವು ರಿಯಲ್‌ ಟೈಂ ಮ್ಯಾಪ್‌ ವ್ಯೂ ನೋಡಬಹುದು. ಇದು ನಿಮ್ಮ ಪ್ರದೇಶದಲ್ಲಿರುವ ಗಾಳಿಯ ಗುಣಮಟ್ಟ ಎಷ್ಟು ಒಳ್ಳೆಯದು ಅಥವಾ ಕೆಟ್ಟದು ಅನ್ನೊದನ್ನು ಅಳೆಯಲಿದೆ. ಈ ಅಪ್ಲಿಕೇಶನ್ ಎಕ್ಸ್‌ಪೋಶರ್ ಟ್ರ್ಯಾಕರ್ ಪೇಜ್‌ ಅನ್ನು ಕೂಡ ಹೊಂದಿದೆ. ಇದು ನೀವು ಬೇಟಿ ನೀಡುವ ಪ್ರದೇಶಗಳ ವಾಯುಮಾಲಿನ್ಯದ ಮಟ್ಟವನ್ನು ಟ್ರ್ಯಾಕ್‌ ಮಾಡಲಿದೆ.

IQAir+

IQAir+

ನಿಮ್ಮ ವಾತಾವರಣದ ಗಾಳಿಯ ಗುಣಮಟ್ಟವನ್ನು ಅಳೆಯಬಲ್ಲ ಮತ್ತೊಂದು ಅಪ್ಲಿಕೇಶನ್‌ IQAir+ ಆಗಿದೆ. ಈ ಅಪ್ಲಿಕೇಶನ್ ನಿಮಗೆ AQI ಡೇಟಾ ಮತ್ತು ಮುನ್ಸೂಚನೆಗಳನ್ನು ನಿಮಗೆ ತೋರಿಸುತ್ತದೆ. ಇದರ ಮೂಲಕ ನೀವು ಗಾಳಿಯ ವೇಗ, ಮಳೆ ಮತ್ತು ಹವಾಮಾನದಂತಹ ಇತರ ಡೇಟಾವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ನಿಮ್ಮ ಪ್ರದೇಶದಲ್ಲಿ ಗಾಲುಯ ಗುಣಮಟ್ಟದ ಹೇಗಿದೆ. ಇದಲ್ಲದೆ ಮಾಸ್ಕ್‌ ಧರಿಸುವುದು, ಹೊರಾಂಗಣ ವ್ಯಾಯಾಮ ಸೇರಿದಂತೆ ನಿಮ್ಮ ಪ್ರದೇಶದಲ್ಲಿ ಯಾವ ಚಟುವಟಿಕೆಗಳು ಮತ್ತು ಪ್ರೋತ್ಸಾಹ ಮತ್ತು ನಿರುತ್ಸಾಹವನ್ನು ಸಹ ಹೆಲ್ತ್‌ ನೋಟಿಫಿಕೇಶನ್‌ ಅನ್ನು ನೀಡಲಿದೆ.

ಗೂಗಲ್‌ ಸರ್ಚ್‌

ಗೂಗಲ್‌ ಸರ್ಚ್‌

ಗಾಳಿಯ ಗುಣಮಟ್ಟವನ್ನು ಕೇವಲ ಅಪ್ಲಿಕೇಶನ್‌ಗಳಿಂದ ಮಾತ್ರವಲ್ಲ ಗೂಗಲ್‌ ಸರ್ಚ್‌ ಮೂಲಕವೂ ತಿಳಿಯಬಹುದಾಗಿದೆ. ತಮ್ಮ ಪ್ರದೇಶದಲ್ಲಿ ವಾಯು ಮಾಲಿನ್ಯದ ಬಗ್ಗೆ ಹೆಚ್ಚಿನ ವಿವರವನ್ನು ತಿಳಿಯಬೇಕಾದರೆ ಗೂಗಲ್‌ ಸರ್ಚ್‌ಮಾಡಿದರೆ ಸಾಕು ತಿಳಿಯಲಿದೆ. ನಿಮ್ಮ ಆಸಕ್ತಿಯ ಸ್ಥಳಗಳಿಗೆ ಸಂಬಂಧಿಸಿದಂತೆ AQI ಮಾಹಿತಿಯನ್ನು ಪಡೆಯಲು "air quality near me" ಅಥವಾ ಎಂದು ಟೈಪ್‌ ಮಾಡುವ ಮೂಲಕ ತಿಳಿಯಬಹುದಾಗಿದೆ.

Best Mobiles in India

Read more about:
English summary
Here are the best apps to check Air quality in your city and all you need to know about AQI ratings.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X