Home
ಸುದ್ದಿಜಾಲ

ಕ್ರಿಸ್‌ಮಸ್‌ ಸೇಲ್‌ನಲ್ಲಿ ರೆಡ್‌ಮಿ ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿತ!

ಇನ್ನೇನು ಕೆಲವೇ ದಿನಗಳಲ್ಲಿ 2021ಕ್ಕೆ ಬಾಯ್‌ ಹೇಳಿ ಹೊಸ ವರ್ಷಕ್ಕೆ ಹಾಯ್‌ ಹೇಳಲಿದ್ದೇವೆ. ಅಲ್ಲದೆ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ ಕೂಡ ಜೋರಾಗಿದೆ. ಹೊಸ ವರ್ಷ ಹಾಗೂ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಹಲವು ಸ್ಮಾರ್ಟ್‌ಫೋನ್‌ ಕಂಪೆನಿಗಳು ಭರ್ಜರಿ ರಿಯಾಯಿತಿ ನೀಡುತ್ತಿವೆ. ಇದರ ಜೊತೆಗೆ ಇ-ಕಾಮರ್ಸ್‌ಪ್ಲಾಟ್‌ಫಾರ್ಮ್‌ಗಳು ಕೂಡ ಡಿಸ್ಕೌಂಟ್‌ ಸೇಲ್‌ಗಳನ್ನು ನಡೆಸುತ್ತಿವೆ. ಇದೇ ಸಂದರ್ಭದಲ್ಲಿ ಶಿಯೋಮಿ ರೆಡ್‌ಮಿ ಕಂಪೆನಿ ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ನೀಡುತ್ತಿದೆ.

ಕ್ರಿಸ್‌ಮಸ್‌

ಹೌದು, ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ರೆಡ್‌ಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್‌ ಆಫರ್‌ ನೀಡಲಾಗ್ತಿದೆ. ಈ ಭಾರಿಯ ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಆತ್ಮೀಯರಿಗೆ ರೆಡ್‌ಮಿ ಪೋನ್‌ ಗಿಫ್ಟ್‌ ನೀಡಲು ಇದು ಒಳ್ಳೆ ಅವಕಾಶವಾಗಿದೆ. ಇನ್ನು ರೆಡ್‌ಮಿ ಕಂಪೆನಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇಯರ್‌ಬಡ್ಸ್‌ ಸೇರಿದಂತೆ ರಿಯಲ್‌ಮಿ ಪ್ರಾಡಕ್ಟ್‌ಗಳ ಮೇಲೆ ಭಾರಿ ಬೆಲೆ ಇಳಿಕೆಯನ್ನು ಘೋಷಿಸಿದೆ. ಹಾಗಾದ್ರೆ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ನೀವು ರಿಯಾಯಿತಿ ದರದಲ್ಲಿ ಖರೀದಿಸಬಹುದಾದ ರೆಡ್ಮಿ ಪ್ರಾಡಕ್ಟ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರೆಡ್‌ಮಿ 9i

ರೆಡ್‌ಮಿ 9i

ರೆಡ್‌ಮಿ 9i ಸ್ಮಾರ್ಟ್‌ಫೋನ್ ಕ್ರಿಸ್‌ಮಸ್‌ ಹಬ್ಬದ ಸೇಲ್‌ 8499ರೂ.ಬೆಲೆಗೆ ಮಾರಾಟವಾಗುತ್ತಿದೆ. ಈ ಆಫರ್ ಡಿಸೆಂಬರ್ 21 ರವರೆಗೆ ಮಾನ್ಯವಾಗಿರುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.53-ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೊ G25 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 10 ಓಎಸ್ ಬೆಂಬಲವನ್ನು ಪಡೆದುಕೊಂಡಿದೆ. ಹಾಗೆಯೇ 4GB RAM ಸಾಮರ್ಥ್ಯದ ವೇರಿಯಂಟ್ ಆಯ್ಕೆ ಇದೆ. ಈ ಫೋನ್‌ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇನ್ನು ರೆಡ್‌ಮಿ 9i ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 4G VOLTE, ವೈ-ಫೈ, ಬ್ಲೂಟೂತ್ 5.0, GPS, USB-C, ಐಆರ್ ಬ್ಲಾಸ್ಟರ್ ಮತ್ತು 3.5mm ಆಡಿಯೊ ಜ್ಯಾಕ್‌ ಅನ್ನು ಪಡೆದಿದೆ.

ರೆಡ್‌ಮಿ 9A

ರೆಡ್‌ಮಿ 9A

ರೆಡ್‌ಮಿ 9A ಸ್ಮಾರ್ಟ್‌ಫೋನ್ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ 6,999ರೂ.ಬೆಲೆಗೆ ಲಭ್ಯವಾಗಲಿದೆ. ಈ ಆಫರ್‌ ಕೂಡ ಡಿಸೆಂಬರ್ 21 ರವರೆಗೆ ಮಾನ್ಯವಾಗಿರುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೊ G25 ಪ್ರೊಸೆಸರ್‌ ಸಾಮರ್ಥ್ಯ ಹೊಂದಿದ್ದು, ಅದಕ್ಕೆ ಪೂಕರವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ. ಈ ಸ್ಮಾರ್ಟ್‌ಫೋನ್‌ 13ಎಂಪಿ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದು 5000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ.

ರೆಡ್‌ಮಿ ಬುಕ್‌ 15 ಸರಣಿ

ರೆಡ್‌ಮಿ ಬುಕ್‌ 15 ಸರಣಿ

ಕ್ರಿಸ್‌ಮಸ್‌ ಹಬ್ಬದ ಸೇಲ್‌ನಲ್ಲಿ ರೆಡ್‌ಮಿ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವಲ್ಲ, ರೆಡ್‌ಮಿ ಲ್ಯಾಪ್‌ಟಾಪ್‌ಗಳ ಮೇಲೂ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಇದರಲ್ಲಿ RedmiBook 15 ಸರಣಿಯ ಲ್ಯಾಪ್‌ಟಾಪ್‌ಗಳು ಹೆಚ್ಚಿನ ಡಿಸ್ಕೌಂಟ್‌ ಪಡೆದುಕೊಂಡಿವೆ. ಈ ಪೈಕಿ ರೆಡ್‌ಮಿ ಬುಕ್‌ 15ಪ್ರೊ 47,999ರೂ. ಬೆಲೆ ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್‌ ಇತ್ತೀಚಿನ 11 ನೇ ಜನ್ ಇಂಟೆಲ್ ಟೈಗರ್‌ಲೇಕ್ ಕೋರ್ i5-11300H ಪ್ರೊಸೆಸರ್‌ ಅನ್ನು ಹೊಂದಿದೆ. ಇದಲ್ಲದೆ ರೆಡ್‌ಮಿ ಬುಕ್‌ ಇ-ಲರ್ನಿಂಗ್ ಆವೃತ್ತಿ ಲ್ಯಾಪ್‌ಟಾಪ್‌ 11 ನೇ ಜನ್ ಇಂಟೆಲ್ ಟೈಗರ್‌ಲೇಕ್ ಕೋರ್ i3-1115G4 ಪ್ರೊಸೆಸರ್‌ ಬಲವನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ 37,999ರೂ.ಬೆಲೆಗೆ ಲಭ್ಯವಾಗಲಿದೆ. ಈ ಆಫರ್ ಡಿಸೆಂಬರ್ 22 ರವರೆಗೆ ಮಾತ್ರ ಮಾನ್ಯವಾಗಿದೆ.

ರೆಡ್‌ಮಿ ಇಯರ್‌ಬಡ್ಸ್ 3 ಪ್ರೊ

ರೆಡ್‌ಮಿ ಇಯರ್‌ಬಡ್ಸ್ 3 ಪ್ರೊ

ಇದಲ್ಲದೆ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ನಿಮ್ಮ ಸ್ನೆಹಿತರಿಗೆ ಆಡಿಯೋ ಪ್ರಾಡಕ್ಟ್‌ಗಳನ್ನ ಉಡುಗೊರೆ ನೀಡಬಹುದು. ಇದಕ್ಕಾಗಿ ರೆಡ್ಮಿ ತನ್ನ ಇಯರ್‌ಬಡ್ಸ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಘೋಷಿಸಿದೆ. ಈ ಪೈಕಿ ನೀವು ರೆಡ್‌ಮಿ ಇಯರ್‌ಬಡ್ಸ್‌ 3 Pro ಅನ್ನು ಕೇವಲ 2,499ರೂ.ಗಳಿಗೆ ಖರೀದಿಸಬಹುದಾಗಿದೆ. ಇದು ಬ್ಲೂಟೂತ್ 5.2 ಟೆಕ್ನಾಲಜಿಯನ್ನು ಹೊಂದಿದ್ದು,ಪಿಂಕ್, ಬಿಳಿ ಮತ್ತು ನೀಲಿ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Here's Best deals for you from Redmi on Christmas.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+