ಭಾರತದಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಟ್ಯಾಬ್‌ಗಳು!

|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ ಟ್ಯಾಬ್ಲೆಟ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಆನ್‌ಲೈನ್‌ ಕ್ಲಾಸ್‌, ವರ್ಕ್‌ ಪ್ರಂ ಹೋಮ್‌ ಶುರುವಾದ ನಂತರ ಟ್ಯಾಬ್ಲೆಟ್‌ ಮಾರುಕಟ್ಟೆ ಪ್ರಾಬಲ್ಯ ಸಾಧಿಸಿದೆ. ಸದ್ಯ ಟೆಕ್‌ ಮಾರುಕಟ್ಟೆಯಲ್ಲಿ ಹಲವು ಆಯ್ಕೆಯ ಟ್ಯಾಬ್ಲೆಟ್‌ಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ರಿಯಲ್‌ಮಿ, ಮೊಟೊರೊಲಾ, ನೋಕಿಯಾ, ಸ್ಯಾಮ್‌ಸಂಗ್‌, ಆಪಲ್‌ನಂತಹ ಜನಪ್ರಿಯ ಬ್ರ್ಯಾಂಡ್‌ಗಳ ಟ್ಯಾಬ್ಲೆಟ್‌ಗಳು ಕೂಡ ಸೇರಿವೆ.

ಸ್ಮಾರ್ಟ್‌

ಹೌದು, ಸ್ಮಾರ್ಟ್‌ ಟ್ಯಾಬ್ಲೆಟ್‌ಗಳು ಇಂದು ಹಲವು ಉದ್ದೇಶಗಳಿಂದಾಗಿ ಪ್ರಸಿಧ್ದಿಯನ್ನು ಪಡೆದಿವೆ. ಅಗಲವಾದ ಡಿಸ್‌ಪ್ಲೇ ಹಾಗೂ ಸುಲಭವಾಗಿ ಕ್ಯಾರಿ ಮಾಡಬಹುದಾದ ಈ ಡಿವೈಸ್‌ಗಳು ವಿಧ್ಯಾರ್ಥಿಗಳಿಗೆ ಹೆಚ್ಚು ಸೂಕ್ತವಾಗಿವೆ. ಅಲ್ಲದೆ ಬ್ಯುಸಿನೆಸ್‌ ಉದ್ದೇಶಗಳಿಗೂ ಕೂಡ ಟ್ಯಾಬ್ಲೆಟ್‌ಗಳನ್ನು ಬಳಸುವುದು ಸಾಮಾನ್ಯವಾಗಿದೆ. ಇನ್ನು ಸ್ಮಾರ್ಟ್‌ಟ್ಯಾಬ್ಲೆಟ್‌ಗಳು ಬಜೆಟ್‌ ಬೆಲೆಯಿಂದ ಹಿಡಿದು ಹೈ ಎಂಡ್‌ ಮಾದರಿಯ ತನಕ ಲಭ್ಯವಿದೆ. ಹಾಗಾದ್ರೆ ಪ್ರಸ್ತುತ ಭಾರತದಲ್ಲಿ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ ಟ್ಯಾಬ್ಲೆಟ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೋಕಿಯಾ T20

ನೋಕಿಯಾ T20

ನೋಕಿಯಾ T20 ಟ್ಯಾಬ್ಲೆಟ್‌ ಅತ್ಯುತ್ತಮ ಟ್ಯಾಬ್ಲೆಟ್‌ಗಳಲ್ಲಿ ಉತ್ತಮ ಆಯ್ಕೆಯಾಗಿದೆ. ಈ ಟ್ಯಾಬ್ಲೆಟ್‌ 10.4 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 78.94 % ಸ್ಕ್ರೀನ್‌ ಟು ಬಾಡಿ ನಡುವಿನ ಅನುಪಾತವನ್ನು ಹೊಂದಿದೆ. ಇದು ಯುನಿಸೊಕ್‌ T610 ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್‌ v11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಟ್ಯಾಬ್ಲೆಟ್‌ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ರಿಯರ್‌ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 5ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ. ಜೊತೆಗೆ 8200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಪ್ರಸ್ತುತ ಈ ಟ್ಯಾಬ್‌ 13,999ರೂ.ಬೆಲೆಯಲ್ಲಿ ಲಭ್ಯವಾಗಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ S8 ಅಲ್ಟ್ರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ S8 ಅಲ್ಟ್ರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ S8 ಅಲ್ಟ್ರಾ 14.6 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಹೊಂದಿದೆ. ಇನ್ನು ಈ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಸಹ ಹೊಂದಿದೆ. ಇದಲ್ಲದೆ ಟ್ಯಾಬ್ S8 ಅಲ್ಟ್ರಾ ಎಸ್ ಪೆನ್ ಅನ್ನು ಬೆಂಬಲಿಸುತ್ತದೆ, ಇದು ಟ್ಯಾಬ್‌ ಬೀಫಿ 11,200 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಪ್ರಸ್ತುತ ಈ ಟ್ಯಾಬ್ಲೆಟ್‌ನ ಆರಂಭಿಕ ಬೆಲೆ 1,08,900ರೂ. ಬೆಲೆ ಹೊಂದಿದೆ.

ಶಿಯೋಮಿ ಪ್ಯಾಡ್ 5

ಶಿಯೋಮಿ ಪ್ಯಾಡ್ 5

ಶಿಯೋಮಿ ಪ್ಯಾಡ್‌ 5 10.95 ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. ಇದು WQHD+ ರೆಸಲ್ಯೂಶನ್ ಅನ್ನು ಹೊಂದಿದೆ. ಇನ್ನು ಈ ಟ್ಯಾಬ್‌ 120Hz ರಿಫ್ರೆಶ್ ರೇಟ್ ಬೆಂಬಲ ಮತ್ತು 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇದಲ್ಲದೆ ಈ ಟ್ಯಾಬ್ಲೆಟ್ ಸ್ನಾಪ್‌ಡ್ರಾಗನ್ 860 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಇದು 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಇನ್ನು ಶಿಯೋಮಿ ಪ್ಯಾಡ್ 5 ಡಾಲ್ಬಿ ಅಟ್ಮಾಸ್ ಬೆಂಬಲಿಸುವ ಕ್ವಾಡ್-ಸ್ಪೀಕರ್ ಸೆಟಪ್ ಅನ್ನು ಹೊಂದಿದೆ. ಹಾಗೆಯೇ ಈ ಟ್ಯಾಬ್ಲೆಟ್ ಶಿಯೋಮಿ ಪೆನ್ ಮತ್ತು ಸ್ಮಾರ್ಟ್ ಕೀಬೋರ್ಡ್ ಅನ್ನು ಸಹ ಬೆಂಬಲಿಸುತ್ತದೆ. ಜೊತೆಗೆ 8720mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಈ ಟ್ಯಾಬ್ಲೆಟ್ ಬೇಸ್ ಮಾಡೆಲ್‌ 6GB RAM ಆಯ್ಕೆಗೆ 26,999 ರೂ. ಬೆಲೆಯನ್ನು ಹೊಂದಿದೆ.

ಐಪ್ಯಾಡ್ ಏರ್ M1

ಐಪ್ಯಾಡ್ ಏರ್ M1

ಐಪ್ಯಾಡ್‌ ಏರ್‌ M1 ಕೂಡ ಅತ್ಯುತ್ತಮ ಟ್ಯಾಬ್ಲೆಟ್‌ಗಳಲ್ಲಿ ಒಂದಾಗಿದೆ. ಈ ಟ್ಯಾಬ್ಲೆಟ್‌ 10.9 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಆದರೆ ಈ ಟ್ಯಾಬ್‌ನಲ್ಲಿ ಪ್ರೊಮೋಷನ್ ಡಿಸ್‌ಪ್ಲೇ ಟೆಕ್ನಾಲಜಿಯನ್ನು ಹೊಂದಿದೆ. ಆದರೆ ಇದು ಡ್ಯುಯಲ್ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ. ಇನ್ನು ಐಪ್ಯಾಡ್‌ ಏರ್ M1 ಯುಎಸ್‌ಬಿ ಟೈಪ್-ಸಿ ಪೋರ್ಟ್, 12 ಮೆಗಾಪಿಕ್ಸೆಲ್‌ ರಿಯರ್‌ ಕ್ಯಾಮೆರಾವನ್ನು ಸಹ ಕಾಣಬಹುದಾಗಿದೆ. ಪ್ರಸ್ತುತ ಈ ಟ್ಯಾಬ್‌ನ ಬೆಲೆ 54,900ರೂ.ಆಗಿದೆ.

ಆಪಲ್‌ ಐಪ್ಯಾಡ್‌ ಪ್ರೊ M1

ಆಪಲ್‌ ಐಪ್ಯಾಡ್‌ ಪ್ರೊ M1

ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಟ್ಯಾಬ್ಲೆಟ್‌ಗಳಲ್ಲಿ ಆಪಲ್‌ ಐಪ್ಯಾಡ್ ಪ್ರೊ M1 ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಆಪಲ್‌ ಐಪ್ಯಾಡ್‌ ಪ್ರೊ M1 11 ಇಂಚು ಹಾಗೂ 12.9 ಇಂಚಿನ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರ 12.9 ಇಂಚಿನ ಮಾದರಿಯು ಲಿಕ್ವಿಡ್ ರೆಟಿನಾ XDR ಮಿನಿ ಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಆದರೆ 11 ಇಂಚಿನ ಐಪ್ಯಾಡ್ ಪ್ರೊ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ಇನ್ನು ಈ ಎರಡೂ ಟ್ಯಾಬ್ಲೆಟ್‌ಗಳು 120Hz ರಿಫ್ರೆಶ್ ರೇಟ್ ಟಕ್ನಾಲಜಿ , ಟ್ರೂ ಟೋನ್ ಮತ್ತು P3 ಬಣ್ಣದ ಹರವುಗಳನ್ನು ಬೆಂಬಲಿಸುತ್ತವೆ. ಇವುಗಳು ಹೊಸ M1 ಪ್ರೊಸೆಸರ್‌ ಹೊಂದಿದ್ದು, 16GB RAM ಹೊಂದಿವೆ. ಇನ್ನು ಈ ಟ್ಯಾಬ್ಲೆಟ್‌ನ 11 ಇಂಚಿನ ಮಾದರಿಯ ಬೇಸ್‌ ಮಾಡೆಲ್‌ ಬೆಲೆ 71,900ರೂ.ಬೆಲೆಯನ್ನು ಹೊಂದಿದೆ. ಆದರೆ 12.9 ಇಂಚಿನ ಮಾದರಿಯ ಬೆಲೆ 99,900ರೂ.ಗಳಿಂದ ಪ್ರಾರಂಭವಾಗುತ್ತದೆ.

ರಿಯಲ್‌ಮಿ ಪ್ಯಾಡ್

ರಿಯಲ್‌ಮಿ ಪ್ಯಾಡ್

ರಿಯಲ್‌ಮಿ ಕಂಪೆನಿಯ ರಿಯಲ್‌ಮಿ ಪ್ಯಾಡ್‌ ಭಾರತದಲ್ಲಿ ಲಭ್ಯವಾಗುವ ಉತ್ತಮ ಟ್ಯಾಬ್‌ಗಳಲ್ಲಿ ಒಂದಾಗಿದೆ. ಈ ಟ್ಯಾಬ್‌ 10.4 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್‌ ಹಿಲಿಯೋ G80 SoC ಪ್ರೊಸೆಸರ್‌ ಹೊಂದಿದೆ. ಈ ಟ್ಯಾಬ್ಲೆಟ್ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ 8ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಜೊತೆಗೆ 7100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, USB ಟೈಪ್-C ಒಳಗೊಂಡಿದೆ. ಇನ್ನು ಈ ಟ್ಯಾಬ್ಲೆಟ್‌ 4GB RAM ವರೆಗೆ ಬರುತ್ತದೆ. ವೈಫೈ ಕನೆಕ್ಟಿವಿಟಿ ಟ್ಯಾಬ್ಲೆಟ್‌ ಬೇಸ್‌ ಮಾಡೆಲ್‌ 3GB RAM ಆಯ್ಕೆಯ ಬೆಲೆ 13,999 ರೂ.ಆಗಿದೆ.

Best Mobiles in India

Read more about:
English summary
Here's best iPad models and Android tablets that you can buy in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X