Home
ಸುದ್ದಿಜಾಲ

500ರೂ,ಒಳಗೆ ಲಭ್ಯವಾಗುವ ಅತ್ಯುತ್ತಮ ಪ್ರಿಪೇಯ್ಡ್‌ ಪ್ಲಾನ್‌ಗಳು!

ಟೆಲಿಕಾಂ ವಲಯದಲ್ಲಿ ಜಿಯೋ ಮತ್ತು ಏರ್‌ಟೆಲ್‌ ಮತ್ತು ವಿ ಟೆಲಿಕಾಂಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಗ್ರಾಹಕರನ್ನು ಸೆಳೆಯುವುದಕ್ಕಾಗಿ ಏರ್‌ಟೆಲ್‌ ಮತ್ತು ಜಿಯೋ ಹಾಗೂ ವಿ ಟೆಲಿಕಾಂ ಪರಸ್ಪರ ಪೈಪೋಟಿಯನ್ನು ನಡೆಸುತ್ತಿವೆ. ಇದಕ್ಕಾಗಿ ತಮ್ಮ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಅಧಿಕ ಡೇಟಾ ಪ್ರಯೋಜನ ನೀಡುವ ಹಲವು ಪ್ಲಾನ್‌ಗಳು ಪರಿಚಯಿಸಿವೆ. ಇದಲ್ಲದೆ ಈ ಮೂರು ಟೆಲಿಕಾಂಗಳು ತಮ್ಮ ಹಲವು ಪ್ಲಾನ್‌ಗಳಲ್ಲಿ ಕೆಲವು ಒಟಿಟಿ ಪ್ರಯೋಜನಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಪ್ರಿಪೇಯ್ಡ್‌

ಹೌದು, ಏರ್‌ಟೆಲ್‌, ಜಿಯೋ ಮತ್ತು ವಿ ಟೆಲಿಕಾಂಗಳು ತಮ್ಮ ಗ್ರಾಹಕರಿಗೆ ವಿವಿಧ ಬೆಲೆಯಲ್ಲಿ ಹಲವು ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ನೀಡುತ್ತಿವೆ. ಅಲ್ಪಾವಧಿಯ ಪ್ಲಾನ್‌ಗಳ ಜೊತೆಗೆ ದೀರ್ಘಾವಧಿಯ ಪ್ಲಾನ್‌ಗಳು ಕೂಡ ಲಭ್ಯವಿವೆ. ಇದರಲ್ಲಿ ಅಲ್ಪಾವಧಿಯ ಪ್ರಿಪೇಯ್ಡ್‌ ಪ್ಲಾನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಹಾಗಾದ್ರೆ 500ರೂ.ಬೆಲೆಯಲ್ಲಿ ನಿಮಗೆ ಲಭ್ಯವಾಗುವ ಅತ್ಯುತ್ತಮ ಪ್ರಿಪೇಯ್ಡ್‌ ಪ್ಲಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್ 499ರೂ. ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್ 499ರೂ. ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂನ 499ರೂ. ಪ್ರಿಪೇಯ್ಡ್ ಪ್ಲಾನ್‌ ನಿಮಗೆ 28ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಸಮಯದಲ್ಲಿ ನೀವು ದೈನಂದಿನ 2GB ಡೇಟಾ ಪ್ರಯೋಜನವನ್ನು ನೀಡಲಿದೆ. ಇನ್ನು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ, ಡೈಲಿ 100 SMS ಪ್ರಯೋಜನ ದೊರೆಯಲಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ ಗ್ರಾಹಕರು ಒಂದು ವರ್ಷದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮೊಬೈಲ್‌ ಎಡಿಷನ್‌ ಮತ್ತು ಅಮೆಜಾನ್‌ ಪ್ರೈಮ್‌ ವೀಡಿಯೊ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ.

ಏರ್‌ಟೆಲ್‌ 399ರೂ. ಪ್ರಿಪೇಯ್ಡ್ ಪ್ಲಾನ್‌
ಏರ್‌ಟೆಲ್‌ 399ರೂ. ಪ್ರಿಪೇಯ್ಡ್ ಪ್ಲಾನ್‌ ನಿಮಗೆ 28ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಅವಧಿಯಲ್ಲಿ ದೈನಂದಿನ 2.5GB ಡೇಟಾ ಪ್ರಯೋಜನ ಸಿಗಲಿದೆ. ಅನಿಯಮಿತ ಕರೆಗಳ ಹಾಗೂ ಡೈಲಿ 100 ಎಸ್‌ಎಂಎಸ್‌ ಪ್ರಯೋಜನ ದೊರೆಯಲಿದೆ. ಇದಲ್ಲದೆ ಹೆಚ್ಚುವರಿಯಾಗಿ 3 ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಆವೃತ್ತಿಯನ್ನು ಪಡೆಯುತ್ತೀರಿ.

ಜಿಯೋ 499ರೂ ಪ್ರಿಪೇಯ್ಡ್‌ ಪ್ಲಾನ್‌

ಜಿಯೋ 499ರೂ ಪ್ರಿಪೇಯ್ಡ್‌ ಪ್ಲಾನ್‌

ಜಿಯೋ 499 ರೂ. ಪ್ರಿಪೇಯ್ಡ್ ಪ್ಲಾನ್‌ ಪ್ರತಿದಿನ 2 GB ಡೇಟಾ ಮತ್ತು ಡೈಲಿ 100 SMS ಪ್ರಯೋಜನ ನೀಡಲಿದೆ. ಇದು 28 ದಿನಗಳ ಮಾನ್ಯತೆಯನ್ನು ಹೊಂದಿದ್ದು, ಜಿಯೋ ಪ್ರೈಮ್ ಸದಸ್ಯತ್ವದೊಂದಿಗೆ ಅನಿಯಮಿತ ಕರೆ ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಈ ಪ್ಲಾನ್‌ ನಿಮಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡಲಿದೆ. ಇದು ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಡಿಸ್ನಿ + ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ಗೆ ಒಂದು ವರ್ಷದ ಪ್ರವೇಶವನ್ನು ನೀಡುತ್ತದೆ. ಹಾಗೆಯೇ ಜಿಯೋ ಸಿನಿಮಾ ಮತ್ತು ಜಿಯೋಟಿವಿ ಅಂತಹ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ.

ಜಿಯೋ 299ರೂ. ಪ್ರಿಪೇಯ್ಡ್‌ ಪ್ಲಾನ್‌
ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯಲಿದೆ. ಅನಿಯಮಿತ ಕರೆ ಪ್ರಯೋಜನ, ಪ್ರತಿದಿನ 100 ಎಸ್ಎಮ್ಎಸ್‌ ಸೌಲಭ್ಯ ಕಊಡ ಲಭ್ಯವಾಗಲಿದೆ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ.

ವಿ ಟೆಲಿಕಾಂ 319ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂ 319ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂನ 319ರೂ. ಪ್ರಿಪೇಯ್ಡ್ ಪ್ಲಾನ್‌ ಒಟ್ಟು 31 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಈ ಪ್ಲ್ಯಾನ್‌ನಲ್ಲಿ ನೀವು ಪ್ರತಿನಿತ್ಯ 2GB ಡೇಟಾ ಪ್ರಯೋಜನವನ್ನು ಪಡೆಯಬಹುದು. ಇನ್ನು ಈ ಯೋಜನೆಯಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಆಗಲಿದೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್‌ ಕರೆಯ ಪ್ರಯೋಜನ ಸಹ ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ವಿ ಆಪ್ಸ್‌ಗಳು ಸಹ ಲಭ್ಯ ಆಗುತ್ತವೆ.

ವಿ ಟೆಲಿಕಾಂ 359ರೂ. ಪ್ರಿಪೇಯ್ಡ್ ಪ್ಲಾನ್‌
ವಿ ಟೆಲಿಕಾಂನ 359ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಪ್ರತಿದಿನ 3GB ಡೇಟಾ ಸೌಲಭ್ಯ ದೊರೆಯುತ್ತದೆ. ಜೊತೆಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಅಲ್ಲದೆ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇದಲ್ಲದೆ ಹೆಚ್ಚುವರಿಯಾಗಿ ವಿ ಮ್ಯೂವಿಸ್ ಮತ್ತು ಟಿವಿ ಪ್ರಯೋಜನಗಳು ಲಭ್ಯ ಆಗಲಿವೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Best Mobiles in India

English summary
Airtel vs Jio vs Vi recharge plans under Rs 500: We have listed some of the best prepaid packs in this price range.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+