ನೀವು ಖರೀದಿಸಬಹುದಾದ ಸೂಪರ್ AMOLED ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ಗಳು!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ನಮ್ಮ ದಿನನಿತ್ಯದ ಅವಿಭಾಜ್ಯ ಅಂಗವಾಗಿ ಹೋಗಿದೆ. ಪ್ರತಿಯೊಬ್ಬರ ಕೈ ನಲ್ಲೂ ಸ್ಮಾರ್ಟ್‌ಫೋನ್‌ಗಳು ರಾರಾಜಿಸುತ್ತಿವೆ. ಇದೇ ಕಾರಣಕ್ಕೆ ಸ್ಮಾರ್ಟ್‌ಫೋನ್‌ ಕಂಪೆನಿಗಳು ಕೂಡ ಹಲವು ಆಯ್ಕೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟಟ್ಟೆಯಲ್ಲಿ ಪರಿಚಯಿಸಿವೆ. ಇನ್ನು ಸ್ಮಾರ್ಟ್‌ಫೋನ್‌ಗಳ ವಿನ್ಯಾಸ ಕೂಡ ಸಾಕಷ್ಟು ಬದಲಾಗಿದ್ದು, ಫೊಲ್ಡೇಬಲ್‌ ಸ್ಮಾರ್ಟ್‌ಫೋನ್‌ಗಳು ಕೂಡ ಲಭ್ಯವಿದೆ. ಅಷ್ಟೇ ಅಲ್ಲ ಬಜೆಟ್‌ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳು ಕೂಡ ಲಭ್ಯವಿದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳ ಭರಾಟೆ ಜೋರಾಗಿದೆ. ಸ್ಮಾರ್ಟ್‌ಫೋನ್‌ ಪ್ರಿಯರ ಆಶಯಗಳಿಗೆ ತಕ್ಕಂತ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೂ ಕೂಡ ಬಳಕೆದಾರರು ಕ್ಯಾಮೆರಾ ಫೀಚರ್ಸ್‌, ಡಿಸ್‌ಪ್ಲೇ ವಿನ್ಯಾಶದ ಕಡೆಗೆ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಸದ್ಯ ಇತ್ತೀಚಿನ ದಿನಗಳಲ್ಲಿ AMOLED ತಂತ್ರಜ್ಞಾನವನ್ನು ಮಧ್ಯ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾಗಿದೆ. ಹಾಗಾದ್ರೆ 20,000ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಾಗುವ ಸೂಪರ್ AMOLED ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ ನೋಟ್ 10 ಎಸ್

ರೆಡ್ಮಿ ನೋಟ್ 10 ಎಸ್

ರೆಡ್‌ಮಿ ನೋಟ್ 10s ಸ್ಮಾರ್ಟ್‌ಫೋನ್‌ 6.43 ಇಚಿನ AMOLED ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನಿಂದ ರಕ್ಷಿಸಲಾಗಿದೆ. ಇದು ಮೀಡಿಯಾ ಟೆಕ್ ಹೆಲಿಯೊ G95 SoC ಪ್ರೊಸೆಸರ್‌ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ MIUI 12.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಅಪ್‌ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ಫೋನ್‌ ಪ್ರಸ್ತುತ 13,999 ರೂ.ಬೆಲೆಗೆ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M32 5G

ಸ್ಯಾಮ್‌ಸಂಗ್ ಗ್ಯಾಲಕ್ಸಿ M32 5G

ಸ್ಯಾಮ್‌ಸಂಗ್ ಗ್ಯಾಲಕ್ಸಿ M32 5G ಸ್ಮಾರ್ಟ್‌ಫೋನ್‌ 6.5-ಇಂಚಿನ HD+ TFT ಇನ್ಫಿನಿಟಿ-ವಿ AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20:9 ಅನುಪಾತವನ್ನು ಪಡೆದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 720 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 11 ಅನ್ನು ಒನ್‌ಯುಐ 3.1 ನೊಂದಿಗೆ ರನ್ ಮಾಡುತ್ತದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. ಈ ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸದ್ಯ ಈ ಫೋನ್‌ ಅಮೆಜಾನ್‌ನಲ್ಲಿ 16,999ರೂ.ಗಳಿಗೆ ಲಭ್ಯವಿದೆ.

ರೆಡ್ಮಿ ನೋಟ್ 10 ಪ್ರೊ

ರೆಡ್ಮಿ ನೋಟ್ 10 ಪ್ರೊ

ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲಾಗಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732G SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM + 64GB ಮತ್ತು 6GB + 128GB ಸ್ಟೋರೇಜ್‌ ಆಯ್ಕೆಯನ್ನು ಪಡೆದಿದೆ. ಈ ಫೋನ್ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ 5,020mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಪ್ರಸ್ತುತ ಅಮೆಜಾನ್‌ನಲ್ಲಿ 17,999ರೂ. ಬೆಲೆ ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F62

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F62

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F62 ಸ್ಮಾರ್ಟ್‌ಫೋನ್‌ 6.7 ಇಂಚಿನ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ ಕೋರ್ exynos 9825 SoC ಪ್ರೊಸೆಸರ್‌ ಹೊಂದಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಜೊತೆಗೆ 7,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 25W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ. 6GB RAM ಮತ್ತು 128GB ಸ್ಟೋರೇಜ್‌ನ ಬೇಸ್ ವೇರಿಯಂಟ್ ಬೆಲೆಯು 18,999ರೂ. ಆಗಿದೆ.

ರಿಯಲ್‌ಮಿ 8

ರಿಯಲ್‌ಮಿ 8

ರಿಯಲ್‌ಮಿ 8 ಸ್ಮಾರ್ಟ್‌ಫೋನ್ 6.4 AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು HDR 10+ ಸಫೋರ್ಟ್‌ ಸಹ ಪಡೆದುಕೊಂಡಿದೆ. ಜೊತೆಗೆ 3D ಗೊರಿಲ್ಲಾ ಗ್ಲಾಸ್‌ ರಕ್ಷಣೆಯನ್ನು ಒಳಗೊಂಡಿದ್ದು, 90Hz ಸ್ಕ್ರೀನ್‌ ರೀಫ್ರೇಶ್‌ ರೇಟ್ ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೋ G95 ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಓಎಸ್‌ ಬೆಂಬಲವನ್ನು ಪಡೆದುಕೊಂಡಿರಲಿದೆ. ಈ ಸ್ಮಾರ್ಟ್‌ಫೋನ್‌ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5,000mAh ಬ್ಯಾಟರಿ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದರೊಂದಿಗೆ 30W Dart ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿರಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 4GB + 128GB ವೇರಿಯಂಟ್ ಬೆಲೆಯು 14,999ರೂ. ಆಗಿದೆ. 6GB + 128GB ವೇರಿಯಂಟ್ ಬೆಲೆಯು 15,999ರೂ. ಆಗಿದೆ.

Best Mobiles in India

English summary
Best phones with Super AMOLED display under Rs 20,000 in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X