Home
ಸುದ್ದಿಜಾಲ

ಬಜೆಟ್‌ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಬಯಸುವವರಿಗೆ ಇಲ್ಲಿವೆ ಬೆಸ್ಟ್‌ ಫೋನ್‌ಗಳು!

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳು ಅನೇಕ ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. ವೈವಿಧ್ಯಮಯ ವಿನ್ಯಾಸ, ಆಕರ್ಷಕ ಫೀಚರ್ಸ್‌ ಹಾಗೂ ಕ್ಯಾಮೆರಾ ವಿಶೇಷತೆಗಳಿಂದ ಗಮನಸೆಳೆದಿವೆ. ಅಲ್ಲದೆ ಬಿಗ್‌ ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳು ಕೂಡ ಇಂದು ಮಾರುಕಟ್ಟೆಯಲ್ಲಿವೆ. ಇನ್ನು ಗ್ರಾಹಕರು ಕೂಡ ಹಲವು ವಿಷಯಗಳನ್ನು ಗಮನಿಸಿದ ನಂತರವೇ ಸ್ಮಾರ್ಟ್‌ಫೋನ್‌ ಖರೀದಿಸುವುದಕ್ಕೆ ಮುಂದಾಗುತ್ತಾರೆ. ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌, ಪ್ರೊಸೆಸರ್‌, ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ ಬೆಲೆಯನ್ನು ಕೂಡ ಗಮನಿಸುತ್ತಾರೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಖರೀದಿಸುವಾಗ ಫೋನಿನ ಬೆಲೆಯು ಕೂಡ ಪ್ರಮುಖವಾಗಿದೆ. ತಮ್ಮ ಬಜೆಟ್‌ಗೆ ಸರಿ ಹೊಂದುವ ಫೋನ್‌ ಅನ್ನು ತೆಗೆದುಕೊಳ್ಳುವುದಕ್ಕೆ ಎಲ್ಲರೂ ಬಯಸುತ್ತಾರೆ. ಇದೇ ಕಾರಣಕ್ಕೆ ಸ್ಮಾರ್ಟ್‌ಫೋನ್‌ ಕಂಪೆನಿಗಳು ಕೂಡ ಬಜೆಟ್‌ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಇದರಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಕೂಡ ಸೇರಿವೆ. ಆದರೆ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬಜೆಟ್‌ ಹಾಗೂ ಮದ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಬಯಸುತ್ತಾರೆ.

ಸ್ಮಾರ್ಟ್‌ಫೋನ್‌

ಇನ್ನು ಸ್ಮಾರ್ಟ್‌ಫೋನ್‌ ಪ್ರಿಯರ ಅಗತ್ಯಗಳಿಗೆ ಅನುಗುಣವಾಗಿ ಬಜೆಟ್‌ ಬೆಲೆಯ ಫೋನ್‌ಗಳಲ್ಲಿಯೂ ಕೂಡ ಆಕರ್ಷಕ ಫೀಚರ್ಸ್‌ಗಳನ್ನು ನೀಡಲಾಗ್ತಿದೆ. ಅಲ್ಲದೆ ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಕರು ಎನಿಸಿಕೊಂಡಿರುವ ಶಿಯೋಮಿ, ರಿಯಲ್‌ಮಿ, ಸ್ಯಾಮ್‌ಸಂಗ್‌, ಒಪ್ಪೋ, ವಿವೋ ಕಂಪೆನಿಗಳು ಕೂಡ ಬಜೆಟ್‌ ಬೆಲೆಯಲ್ಲಿ ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದಾರೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯ ಫೋನ್‌ಗಳಿಗೆ ಭಾರಿ ಡಿಮ್ಯಾಂಡ್‌ ಇದೆ. ಹಾಗಾದ್ರೆ ಪ್ರಸ್ತುತ ದಿನಗಳಲ್ಲಿ ನೀವು ಕೇವಲ 10,000ರೂ.ಒಳಗೆ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ C30

ರಿಯಲ್‌ಮಿ C30

ರಿಯಲ್‌ಮಿ C30 ಸ್ಮಾರ್ಟ್‌ಫೋನ್‌ ನಿಮಗೆ ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಸ್ಮಾರ್ಟ್‌ಫೋನಿನ 2GB RAM + 32GB ಸ್ಟೋರೇಜ್‌ ಆಯ್ಕೆಯು ನಿಮಗೆ ಕೇವಲ 7,499ರೂ. ಹಾಗೂ 3GB RAM + 32GB ಆಯ್ಕೆಯು 8,299ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಯುನಿಸೋಕ್‌ T612 ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಫ್ರಂಟ್‌ ಹಾಗೂ ಹಿಂಭಾಗದಲ್ಲಿ ಸಿಂಗಲ್‌ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಹಿಂಭಾಗದ ಕ್ಯಾಮೆರಾ 8 ಮೆಗಾಪಿಕ್ಸೆಲ್ AI ಕ್ಯಾಮೆರಾ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 5 ಮೆಗಾಪಿಕ್ಸೆಲ್ AI ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಪೊಕೊ C3

ಪೊಕೊ C3

ಪೊಕೊ C3 ಸ್ಮಾರ್ಟ್‌ಫೋನಿನ ಆರಂಬಿಕ ಬೆಲೆ ಕೇವಲ 9,999ರೂ.ಆಗಿದೆ. ಬಜೆಟ್‌ ಬೆಲೆಯಲ್ಲಿ ದೊರೆಯುವ ಬೆಸ್ಟ್‌ ಸ್ಮಾರ್ಟ್‌ಫೋನ್‌ ಇದ್ದಾಗಿದ್ದು, ಇದನ್ನು 'ದಿ ಗೇಮ್ ಚೇಂಜರ್' ಎಂದು ಕರೆಯಲಾಗುತ್ತದೆ. ಈ ಸ್ಮಾರ್ಟ್‌ಫೋನ್‌ 6.53 ಇಂಚಿನ ಎಲ್‌ಸಿಡಿ ಡಾಟ್ ಡ್ರಾಪ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್ ಹೊಂದಿದೆ. ಇನ್ನು ಈ ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಆಗಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಶಿಯೋಮಿ ರೆಡ್ಮಿ 10A

ಶಿಯೋಮಿ ರೆಡ್ಮಿ 10A

ಶಿಯೋಮಿ ರೆಡ್ಮಿ 10A ಸ್ಮಾರ್ಟ್‌ಫೋನ್‌ ಅಮೆಜಾನ್‌ ಮತ್ತು ಶಿಯೋಮಿ ಅಧಿಕೃತ ವೆಬ್‌ಸೈಟ್‌ನಲ್ಲಿ 9,499ರೂ.ಬೆಲೆಗೆ ಖರೀದಿಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ 6.52 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್‌ ಹಿಲಿಯೋ G35 ಪ್ರೊಸೆಸರ್‌ ಅನ್ನು ಹೊಂದಿದೆ. ಈ ಫೋನ್‌ 3GB RAM ಮತ್ತು 32GBಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಇನ್ನು ರೆಡ್ಮಿ 10A ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13MP ಹೊಂದಿದೆ. ಇನ್ನು ಸೆಲ್ಫಿ ಕ್ಯಾಮೆರಾ 2MP ಒಳಗೊಂಡಿದೆ. ಜೊತೆಗೆ 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಬೆಂಬಲಿಸಲಿದೆ. ಈ ಫೋನ್‌ ಚಾರ್ಕೋಲ್ ಬ್ಲ್ಯಾಕ್, ಸೀ ಬ್ಲೂ ಮತ್ತು ಸ್ಲೇಟ್ ಗ್ರೇ ಕಲರ್‌ ಆಯ್ಕೆಗಳಲ್ಲಿ ದೊರೆಯಲಿದೆ.

ರೆಡ್ಮಿ 9 ಆಕ್ಟಿವ್‌

ರೆಡ್ಮಿ 9 ಆಕ್ಟಿವ್‌

ರೆಡ್ಮಿ 9 ಆಕ್ಟಿವ್‌ ಸ್ಮಾರ್ಟ್‌ಫೋನ್‌ ಪ್ರಸ್ತುತ 9,499ರೂ.ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ ನಿಮಗೆ ಶಿಯೋಮಿ ಅಧಿಕೃತ ವೆಬ್‌ಸೈಟ್‌, ಅಮೆಜಾನ್‌ ಮತ್ತು ಆಫಲೈನ್‌ ಸ್ಟೋರ್‌ಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ 6.53 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್‌ ಹಿಲಿಯೋ Helio G35 ಪ್ರೊಸೆಸೆರ್‌ ಹೊಂದಿದೆ. ಈ ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ರಿಯಲ್‌ಮಿ ನಾರ್ಜೊ 50A ಪ್ರೈಮ್

ರಿಯಲ್‌ಮಿ ನಾರ್ಜೊ 50A ಪ್ರೈಮ್

ರಿಯಲ್‌ಮಿ ನಾರ್ಜೊ 50A ಪ್ರೈಮ್‌ ಸ್ಮಾರ್ಟ್‌ಫೋನ್‌ 11,499ರೂ.ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಯುನಿಸೊಕ್ T612 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಎಐ ಅನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನ್‌ ಫ್ಲ್ಯಾಶ್ ಬ್ಲೂ ಮತ್ತು ಫ್ಲ್ಯಾಶ್ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಬರಲಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 6

ಇನ್ಫಿನಿಕ್ಸ್ ಸ್ಮಾರ್ಟ್ 6

ಇನ್ಫಿನಿಕ್ಸ್ ಸ್ಮಾರ್ಟ್ 6 ಸ್ಮಾರ್ಟ್‌ಫೋನ್‌ 7,499ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ 6.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್‌ ಹಿಲಿಯೋ A22 ಕ್ವಾಡ್-ಕೋರ್ SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ಫ್ಲ್ಯಾಷ್ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8MP ಸೆನ್ಸಾರ್‌ ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಹಾರ್ಟ್ ಆಫ್ ಓಷನ್, ಲೈಟ್ ಸೀ ಗ್ರೀನ್, ಪೋಲಾರ್ ಬ್ಲಾಕ್ ಮತ್ತು ಸ್ಟಾರಿ ಪರ್ಪಲ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಿದೆ.

Best Mobiles in India

English summary
Here's Best smartphones under Rs 10,000 in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+