15,000ರೂ. ಒಳಗೆ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳು!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳಷ್ಟೇ ಪ್ರಖ್ಯಾತಿಯನ್ನು ಸ್ಮಾರ್ಟ್‌ವಾಚ್‌ಗಳು ಕೂಡ ಪಡೆದುಕೊಂಡಿವೆ. ಸ್ಮಾರ್ಟ್‌ವಾಚ್‌ಗಳು ಕೂಡ ಸ್ಮಾರ್ಟ್‌ಫೋನ್‌ ಮಾದರಿಯ ಕೆಲಸಗಳನ್ನು ನೀಡುವುದರಿಂದ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಇದಲ್ಲದೆ ಸ್ಮಾರ್ಟ್‌ಫೋನ್‌ಗೆ ಬರುವ ಸಂದೇಶಗಳು, ಮ್ಯೂಸಿಕ್‌ ಕಂಟ್ರೋಲ್‌ ಮಾಡುವುದಕ್ಕೆ ಕೂಡ ಸಾಧ್ಯವಾಗಲಿದೆ. ಹಾಗೆಯೇ ಸ್ಮಾರ್ಟ್‌ವಾಚ್‌ಗಳ ಮೂಲಕ ನಿಮ್ಮ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವುದಕ್ಕೆ ಅವಕಾಶ ಕೂಡ ಸಿಗಲಿದೆ.

ಸ್ಮಾರ್ಟ್‌ವಾಚ್‌ಗಳು

ಹೌದು, ಸ್ಮಾರ್ಟ್‌ವಾಚ್‌ಗಳು ಇಂದು ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ನಿಮ್ಮ ಆರೋಗ್ಯವನ್ನು ಟ್ರ್ಯಾಕ್‌ ಮಾಡುವುದಕ್ಕೆ ಸಹಾಯ ಮಾಡುವ ಅನೇಕ ಫೀಚರ್ಸ್‌ಗಳನ್ನು ಒಳಗೊಂಡಿವೆ. ಇನ್ನು ಸ್ಮಾರ್ಟ್‌ವಾಚ್‌ಗಳು ವಿವಧ ಬೆಲೆಯ ಮಾದರಿಯಲ್ಲಿ ಲಭ್ಯವಾಗಲಿದ್ದು, ಬಜೆಟ್‌ ಬೆಲೆಯ ವಾಚ್‌ಗಳು ಹೆಚ್ಚಿನ ಬೇಡಿಕೆ ಪಡೆದಿವೆ. ಹಾಗಾದ್ರೆ 15,000ರೂ. ಒಳಗಿನ ಬೆಲೆಯಲ್ಲಿ ನೀವು ಖರೀದಿಸಬಹುದಾದ ಸ್ಮಾರ್ಟ್‌ವಾಚ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫಿಟ್‌ಬಿಟ್ ವರ್ಸಾ 2

ಫಿಟ್‌ಬಿಟ್ ವರ್ಸಾ 2

15,000ರೂ. ಒಳಗಿನ ಸ್ಮಾರ್ಟ್‌ವಾಚ್‌ಗಳಲ್ಲಿ ಫಿಟ್‌ಬಿಟ್ ವರ್ಸಾ 2 ಕೂಡ ಸೇರಿದೆ. ಈ ಸ್ಮಾರ್ಟ್‌ವಾಚ್‌ ಸ್ಕ್ವೇರ್‌ ಡಯಲ್‌ನೊಂದಿಗೆ ಹಗುರವಾದ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ನಲ್ಲಿ ಹಾರ್ಟ್‌ ಬೀಟ್‌ ಮೇಲ್ವಿಚಾರಣೆ, ಸ್ಲೀಪಿಂಗ್‌ ಟ್ರ್ಯಾಕಿಂಗ್ ಸೇರಿದಂತೆ ಅನೇಕ ಹೆಲ್ತ್‌ ಟ್ರ್ಯಾಕಿಂಗ್ ಫೀಚರ್ಸ್‌ಗಳನ್ನು ಹೊಂದಿದೆ. ಈ ವಾಚ್‌ನಲ್ಲಿ ಸ್ಪಾಟಿಫೈ ಬಳಸಿಕೊಂಡು ಮ್ಯೂಸಿಕ್‌ ಸ್ಟ್ರೀಮ್ ಮಾಡಬಹುದು. ಅಲ್ಲದೆ ಅಮೆಜಾನ್‌ನ ಎಕೋ ಡಿವೈಸ್‌ಗಳನ್ನು ಸಹ ನಿಯಂತ್ರಿಸಬಹುದು. ಇದು ಸ್ವಿಮ್‌-ಪ್ರೂಫ್‌ ವಿನ್ಯಾಸ ಮತ್ತು ಮೈಕ್ರೊಫೋನ್ ಅನ್ನು ಸಹ ಹೊಂದಿದೆ. ಸದ್ಯ ಈ ಸ್ಮಾರ್ಟ್‌ವಾಚ್‌ ಫಿಟ್‌ಬಿಟ್ ವರ್ಸಾ 2 ನಿಮಗೆ 13,799ರೂ.ಬೆಲೆಗೆ ಲಭ್ಯವಾಗಲಿದೆ.

ಒಪ್ಪೋ ವಾಚ್

ಒಪ್ಪೋ ವಾಚ್

ಒಪ್ಪೋ ಕಂಪೆನಿಯ ಒಪ್ಪೋ ವಾಚ್‌ ಕೂಡ 15,000ರೂ. ಒಳಗಿನ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ವಾಚ್‌ ಉತ್ತಮ ವೀಕ್ಷಣಾ ಕೋನಗಳೊಂದಿಗೆ ದೊಡ್ಡ, ಗರಿಗರಿಯಾದ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ವಾಚ್‌ ಆಪಲ್‌ ವಾಚ್‌ ಮಾದರಿಯನ್ನು ಹೊಂದಿರುವುದರಿಂದ ಗ್ರಾಹಕರ ಗಮನ ಸೆಳೆಯುತ್ತಿದೆ. ಈ ಡಿವೈಸ್‌ ಅಲ್ಯೂಮಿನಿಯಂ ಕೇಸ್ ಮತ್ತು ಕರ್ವ್ಡ್‌ ಸ್ಕ್ರೀನ್‌ ಹೊಂದಿರುವುದರಿಂದ ಬಳಕೆದಾರರು ಪ್ರೀಮಿಯಂ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ವಾಚ್‌ ಕೂಡ ಹೃದಯ ಬಡಿತ ಮೇಲ್ವಿಚಾರಣೆ ಮತ್ತು ನಿದ್ರೆ ಟ್ರ್ಯಾಕಿಂಗ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಅಲ್ಲದೆ ಬಳಕೆದಾರರು ಫಿಟ್‌ನೆಸ್ ರನ್, ಫ್ಯಾಟ್ ಬರ್ನ್ ರನ್, ಔಟ್‌ಸೈಡ್‌ ಸೈಕ್ಲಿಂಗ್ ಅಥವಾ ಈಜು ಮುಂತಾದ ಕ್ರೀಡಾ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಈ ಡಿವೈಸ್‌ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 14,990 ರೂ.ಗೆ ಲಭ್ಯವಾಗಲಿದೆ.

ಅಮಾಜ್‌ಫಿಟ್ ಜಿಟಿಎಸ್ 2

ಅಮಾಜ್‌ಫಿಟ್ ಜಿಟಿಎಸ್ 2

ಅಮಾಜ್‌ಫಿಟ್‌ GTS 2 ಸ್ಮಾರ್ಟ್‌ವಾಚ್‌ 1.65 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ವಾಚ್‌ ರನ್ನಿಂಗ್‌, ಸೈಕ್ಲಿಂಗ್ ಮತ್ತು ತೆರೆದ ನೀರಿನ ಈಜು ಮುಂತಾದ ಹೊರಾಂಗಣ ಆಕ್ಟಿವಿಟಿಗಳನ್ನು ಪತ್ತೆಹಚ್ಚಲು ಇಂಟರ್‌ಬಿಲ್ಟ್‌ GPS ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಬಯೋ ಟ್ರ್ಯಾಕರ್‌ 2 PPG ಆಪ್ಟಿಕಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ ಇದು ಹಾಟ್‌ಬೀಟ್‌ ಅನ್ನು ಕೂಡ ಮೇಲ್ವಿಚಾರಣೆ ಮಾಡಲಿದೆ. ಇದಲ್ಲದೆ, ಒಬ್ಬರು ನಿದ್ರೆಯನ್ನು ಟ್ರ್ಯಾಕ್ ಮಾಡಲು ಸಹ ಸಾಧ್ಯವಾಗುತ್ತದೆ. ಈ ಸ್ಮಾರ್ಟ್‌ವಾಚ್‌ 90+ ಸ್ಪೋರ್ಟ್ಸ್‌ ವಿಧಾನಗಳನ್ನು ವಾಚ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಹುವಾವೇ ವಾಚ್ ಜಿಟಿ 2

ಹುವಾವೇ ವಾಚ್ ಜಿಟಿ 2

ಹುವಾವೇ ವಾಚ್ ಜಿಟಿ 2 ಸ್ಮಾರ್ಟ್‌ವಾಚ್‌ 1.39 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 15 ಸ್ಪೋರ್ಟ್ಸ್‌ ಟ್ರ್ಯಾಕಿಂಗ್ ಫೀಚರ್ಸ್‌ಗಳನ್ನು ಮತ್ತು ಎಂಟು ಹೊರಾಂಗಣ ಕ್ರೀಡೆಗಳನ್ನು ಹೊಂದಿದೆ. ಇವುಗಳಲ್ಲಿ ಓಟ, ವಾಕಿಂಗ್, ಕ್ಲೈಂಬಿಂಗ್, ಸೈಕ್ಲಿಂಗ್, ಈಜುಕೊಳ, ಉಚಿತ ತರಬೇತಿ, ದೀರ್ಘವೃತ್ತದ ಯಂತ್ರ ಮತ್ತು ಹೆಚ್ಚಿನವು ಸೇರಿವೆ. ಜೊತೆಗೆ ಹೃದಯ ಬಡಿತ ಮತ್ತು ನಿದ್ರೆಯ ಮಾದರಿಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಬಳಸಿಕೊಂಡು ಬಳಕೆದಾರರು ಕರೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತದೆ. ಈ ವಾಚ್ 14 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಪ್ರಸ್ತುತ ಈ ಸ್ಮಾರ್ಟ್‌ವಾಚ್‌ 12,490ರೂ.ಗಳಿಗೆ ಖರೀದಿಸಬಹುದು.

Best Mobiles in India

English summary
Here's best smartwatches to buy in India under Rs 15,000

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X