ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ವಾಯರ್‌ಲೆಸ್‌ ಇಯರ್‌ಬಡ್ಸ್‌!

|

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಸ್ಮಾರ್ಟ್‌ಫೋನ್‌ ಜೊತೆಗೆ ಉತ್ತಮವಾದ ಇಯರ್‌ ಫೋನ್‌ ಹೊಂದುವುದಕ್ಕೆ ಬಯಸುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಕಂಪೆನಿಗಳು ವಿಭಿನ್ನ ಮಾದರಿಯ ಇಯರ್‌ಬಡ್ಸ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿವೆ. ಇನ್ನು ಈ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳು ಯಾವುದೇ ಫೋನ್ ಜ್ಯಾಕ್‌ನೊಂದಿಗೆ ಬರುವುದಿಲ್ಲವಾದರಿಂದ ಹೆಚ್ಚು ಆಕರ್ಷಿತವಾಗಿವೆ.

ವಾಯರ್‌ಲೆಸ್‌

ಹೌದು, ವಾಯರ್‌ಲೆಸ್‌ ಇಯರ್‌ಬಡ್ಸ್‌ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿವೆ. ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಬೆಲೆಯ ಮಾದರಿಯಲ್ಲಿ ಲಭ್ಯವಿದೆ. ಇವುಗಳಲ್ಲಿ 2,000 ರೂ.ಗಿಂತ ಕಡಿಮೆ ಬೆಲೆಯಲ್ಲಿಯೂ ಸಹ ಉತ್ತಮ ಜೋಡಿ ವಾಯರ್‌ಲೆಸ್ ಇಯರ್‌ಬಡ್ಸ್‌ಗಳನ್ನು ಖರೀದಿಸಬಹುದಾಗಿದೆ. ರಿಯಲ್‌ಮಿ, ರೆಡ್ಮಿ, ಬೋಲ್ಟ್‌ ಕಂಪೆನಿಗಳು ಕೂಡ ಅಗ್ಗದ ಬೆಲೆಯಲ್ಲಿ ಅನೇಕ ಇಯರ್‌ಬಡ್ಸ್‌ಗಳನ್ನು ಪರಿಚಯಿಸಿವೆ. ಹಾಗಾದ್ರೆ ಭಾರತದಲ್ಲಿ 2,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಅತ್ಯುತ್ತಮ ವಾಯರ್‌ಲೆಸ್ ಇಯರ್‌ಬಡ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಟ್ ಏರ್‌ಡೋಪ್ಸ್ 402

ಬೋಟ್ ಏರ್‌ಡೋಪ್ಸ್ 402

ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಇಯರ್‌ಬಡ್ಸ್‌ಗಳಲ್ಲಿ ಬೋಟ್ ಏರ್‌ಡೋಪ್ಸ್ 402 ಕೂಡ ಒಂದು. ಇದು ಇನ್-ಇಯರ್ ವಾಯರ್‌ಲೆಸ್ ವಿನ್ಯಾಸವನ್ನು ಹೊಂದಿರುವುದರಿಂದ ಆರಾಮದಾಯಕವಾದ ಅನುಭವವನ್ನು ನೀಡಲಿದೆ. ಇನ್ನು ಈ ಇಯರ್‌ಬಡ್‌ಗಳು 20Hz ನಿಂದ 20kHz ಫ್ರಿಕ್ವೆನ್ಸಿ ರೇಂಜ್‌ ಹೊಂದಿದ್ದು, ಎರಡು 10mm ಡ್ರೈವರ್‌ಗಳನ್ನು ಒಳಗೊಂಡಿದೆ. ಈ ಇಯರ್‌ಬಡ್ಸ್‌ ವಾಟರ್‌ ಪ್ರೂಫ್‌ ಆಗಿದ್ದು, ಬ್ಲೂಟೂತ್ 5.0 ಕನೆಕ್ಟಿವಿಟಿ ಹೊಂದಿದೆ. ಇದು 4 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಸಹ ನೀಡಿದೆ. ಪ್ರಸ್ತುತ ಈ ಇಯರ್‌ಬಡ್ಸ್‌ ಬೆಲೆ 1,799 ರೂ.ಆಗಿದೆ.

ರಿಯಲ್‌ಮಿ ಬಡ್ಸ್ Q2 ನಿಯೋ

ರಿಯಲ್‌ಮಿ ಬಡ್ಸ್ Q2 ನಿಯೋ

2,000ರೂ. ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗುವ ಇಯರ್‌ಬಡ್ಸ್‌ಗಳಲ್ಲಿ ರಿಯಲ್‌ಮಿ ಬಡ್ಸ್‌Q2 ನಿಯೋ ಕೂಡ ಸೇರಿದೆ. ಇದು ಇನ್-ಇಯರ್ ಇಯರ್‌ಬಡ್‌ಗಳೊಂದಿಗೆ ಕೋಬ್ಲೆಸ್ಟೋನ್ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ ನೀವು ಮೂರು ವಿಭಿನ್ನ ಗಾತ್ರಗಳಲ್ಲಿ ಸಿಲಿಕೋನ್ ಇಯರ್‌ ಟಿಪ್ಸ್‌ ಪಡೆಯಬಹುದಾಗಿದೆ. ಇನ್ನು ರಿಯಲ್‌ಮಿನ ಬಡ್ಸ್ Q2 ನಿಯೋ ಇಯರ್‌ಬಡ್ಸ್‌ 10mm ಬಾಸ್ ಬೂಸ್ಟ್ ಡ್ರೈವರ್‌ಗಳನ್ನು ಹೊಂದಿದ್ದು, ಮ್ಯೂಸಿಕ್‌ಗೆ ಉತ್ತಮವಾದ ಬಾಸ್ ನೀಡುತ್ತದೆ. ಜೊತೆಗೆ ಈ ಇಯರ್‌ಬಡ್‌ಗಳು ಗೇಮ್ ಮೋಡ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಇದು ಕಡಿಮೆ ಲೇಟೆನ್ಸಿ ಮೋಡ್ ಹೊಂದಿದ್ದು ಗೇಮರ್‌ಗಳನ್ನು ಹೆಚ್ಚು ಗಮನ ಸೆಳೆದಿದೆ. ಇನ್ನು ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ 17 ರಿಂದ 18 ಗಂಟೆಗಳವರೆಗಿನ ಬಾಳಿಕೆಯನ್ನು ನೀಡಲಿದೆ. ಪ್ರಸ್ತುತ ಈ ಇಯರ್‌ಬಡ್ಸ್‌ ಬೆಲೆ 1,599 ರೂ.ಆಗಿದೆ.

ರೆಡ್ಮಿ ಇಯರ್‌ಬಡ್ಸ್ 2C

ರೆಡ್ಮಿ ಇಯರ್‌ಬಡ್ಸ್ 2C

ರೆಡ್ಮಿ ಇಯರ್‌ಬಡ್ಸ್ 2C ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ ವಾಯರ್‌ಲೆಸ್ ಇಯರ್‌ಬಡ್ಸ್‌ಗಳಲ್ಲಿ ಒಂದಾಗಿದೆ. ಇದು ಕೂಡ ಇನ್-ಇಯರ್ ವಿನ್ಯಾಸದೊಂದಿಗೆ ಬರುತ್ತದೆ. ಈ ಇಯರ್‌ಬಡ್ಸ್‌ ಚಾರ್ಜಿಂಗ್ ಕೇಸ್‌ನೊಂದಿಗೆ 12 ಗಂಟೆಗಳ ಪ್ಲೇಬ್ಯಾಕ್ ಟೈಂ ನೀಡಲಿದೆ. ಆದರೆ ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ ನಿಮಗೆ ಸರಿಸುಮಾರು 4 ಗಂಟೆಗಳ ಬಾಳಿಕೆ ನೀಡಲಿದೆ. ಈ ಇಯರ್‌ಬಡ್ಸ್‌ ಪಾಪ್-ಒನ್ ಬಟನ್ ವಿನ್ಯಾಸದೊಂದಿಗೆ ಬರುತ್ತದೆ. ಹಾಗೆಯೇ ಇದು ಮ್ಯೂಸಿಕ್‌ ಪ್ಲೇ ಮಾಡುವುದು ಮತ್ತು ವಿರಾಮಗೊಳಿಸುವುದು, ಕರೆಗಳಿಗೆ ಉತ್ತರಿಸುವುದು, ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಆನ್ ಮಾಡುವುದು, ಮ್ಯೂಟ್ ಮಾಡುವುದು ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಲಿದೆ. ಪ್ರಸ್ತುತ ಇದರ ಬೆಲೆ 1,499 ರೂ.ಆಗಿದೆ.

ನಾಯ್ಸ್‌ ಏರ್ ಬಡ್ಸ್

ನಾಯ್ಸ್‌ ಏರ್ ಬಡ್ಸ್

ನಾಯ್ಸ್‌ ಏರ್‌ಬಡ್ಸ್‌ ಏರ್‌ಪಾಡ್‌ಗಳಂತಹ ವಿನ್ಯಾಸದೊಂದಿಗೆ ಬರುತ್ತದೆ. ಆದರೆ ಈ ಇಯರ್‌ಬಡ್‌ಗಳಲ್ಲಿ ನೀವು ಸಿಲಿಕೋನ್ ಇಯರ್ ಟಿಪ್ಸ್ ಅನ್ನು ಪಡೆಯಲಾಗುವುದಿಲ್ಲ. ಈ ಇಯರ್‌ಬಡ್ಸ್‌ 20-ಗಂಟೆಗಳ ಪ್ಲೇಬ್ಯಾಕ್ ಟೈಂ ಹೊಂದಿದೆ. ಜೊತೆಗೆ IPX4 ವಾಟರ್‌ ಆಂಡ್‌ ಡಸ್ಟ್ ಪ್ರೂಫ್‌ ಬೆಂಬಲಿಸಲಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಬ್ಲೂಟೂತ್ 5.0 ಅನ್ನು ಬೆಂಬಲಿಸಲಿದ್ದು, ಯಾವುದೇ ಆಂಡ್ರಾಯ್ಡ್‌ ಫೋನ್, ಐಫೋನ್‌ ಮತ್ತು ಲ್ಯಾಪ್‌ಟಾಪ್‌ನೊಂದಿಗೆ ಸುಲಭವಾಗಿ ಜೋಡಿಸುವುದಕ್ಕೆ ಅವಕಾಶ ನೀಡಲಿದೆ. ಪ್ರಸ್ತುತ ಈ ಇಯರ್‌ಬಡ್ಸ್‌ ಬೆಲೆ 1,899ರೂ.ಆಗಿದೆ.

Best Mobiles in India

Read more about:
English summary
Redmi Earbuds 2C and Realme Buds Q2 Neo are among the best wireless earbuds for under Rs 2,000.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X