ರೈಲು ಅಪಘಾತ ತಡೆಗೆ ಹೊಸ ಪ್ಲಾನ್!!! ಡ್ರೋನ್ ಬಳಕೆ ಯಶಸ್ವಿಯಾಗುತ್ತಾ!?

By GizBot Bureau
|

ರೈಲು ಅಪಘಾತಗಳಿಗೂ, ಡ್ರೋನ್ ಗಳಿಗೂ ಎತ್ತಣಿದೆತ್ತ ಸಂಬಂಧ ಅಂತ ಅಂದುಕೊಳ್ಳುತ್ತಿದ್ದೀರಾ? ಇನ್ನು ಎಷ್ಟು ದಿನ ಅಂತ ರೈಲ್ವೇ ಇಲಾಖೆ ಬಾಜಿರಾಯನ ಕಾಲದ ಕ್ರಮಗಳನ್ನೇ ಅನುಸರಿಸೋದು ನೀವೇ ಹೇಳಿ...ನಮ್ಮ ಪ್ರಧಾನಿ ಹೇಳಿರಲಿಲ್ಲವೇ? ರೈಲ್ವೇ ಇಲಾಖೆಯನ್ನು ಹೈಟೆಕ್ ಮಾಡಲಾಗುವುದು ಎಂದು.. ಎಸ್ ಅದು ನಿಜವಾಗುತ್ತಿರುವ ಕಾಲ ಸನ್ನಿಹಿತವಾಗಿದೆ ಎಂದು ಅನ್ನಿಸುತ್ತದೆ.

ರೈಲು ಅಪಘಾತ ತಡೆಗೆ ಹೊಸ ಪ್ಲಾನ್!!! ಡ್ರೋನ್ ಬಳಕೆ ಯಶಸ್ವಿಯಾಗುತ್ತಾ!?

ಅದಕ್ಕೆ ಇಂತಹದ್ದೊಂದು ದೊಡ್ಡ ಅಭಿವೃದ್ಧಿ ಸಾಧ್ಯವಾಗುತ್ತಿದೆ. ಇನ್ನು ಮುಂದೆ ರೈಲ್ವೇ ಹಳಿಗಳನ್ನುಪರೀಕ್ಷಿಸಲು ಯಾರೋ ಒಬ್ಬ ವ್ಯಕ್ತಿ ಬ್ಯಾಟರಿ ಹಿಡಿದು ಟ್ರ್ಯಾಕ್ ಮೇಲೆ ನಡೆದು ಹೋಗುವ ಸಂದರ್ಬವಿಲ್ಲ.. ಅದಕ್ಕಾಗಿ ಡ್ರೋನ್ ಗಳನ್ನು ಬಳಕೆ ಮಾಡಲಾಗುತ್ತೆ. ಎಸ್ ನೀವು ಓದುತ್ತಿರುವುದು ಸರಿಯಾಗಿದೆ ಇದೆ..

ರೈಲ್ವೇ ಟ್ರ್ಯಾಕ್ ಗಳು ಎಲ್ಲಾದರೂ ಹಾಳಾಗಿದೆಯಾ? ರೈಲ್ವೇ ಹಳಿಗಳಲ್ಲಿ ರೈಲು ಬಂದರೆ ಯಾವುದೇ ತೊಂದರೆ ಇಲ್ವಾ ಎಂಬುದನ್ನು ಪರೀಕ್ಷಿಸಲು ಕಿಲೋಮೀಟರ್ ಗಟ್ಟಲೆ ಸಂಚರಿಸುವ ಅಗತ್ಯವಿಲ್ಲ. ಅದನ್ನು ಸುಲಭಗೊಳಿಸುತ್ತದೆ ಡ್ರೋನ್ (ಆಕಾಶದಲ್ಲಿ ಹಾರಾಡಿ ವೀಡಿಯೋ ಚಿತ್ರೀಕರಿಸುವ ಸಾಧನ ). ಟೆಲಿಕಾಂ ಉದ್ಯಮ ಮತ್ತು ರೈಲ್ವೆಗಳ ಒಂದು ಉಪಕ್ರಮದ ಅಡಿಯಲ್ಲಿ, ರೂರ್ಕೀಯಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆ ಡ್ರೋನ್ಗ ಗಳನ್ನು ಅಭಿವೃದ್ಧಿಪಡಿಸಿದೆ, ಇವುಗಳನ್ನು ಪ್ರಸ್ತುತ ಉತ್ತರಾಖಂಡ್ ಪಟ್ಟಣದ ಸುತ್ತಲೂ ಟ್ರ್ಯಾಕ್ ಮಾಡಲಾಗುತ್ತಿದೆ.

ರೈಲು ಅಪಘಾತ ತಡೆಗೆ ಹೊಸ ಪ್ಲಾನ್!!! ಡ್ರೋನ್ ಬಳಕೆ ಯಶಸ್ವಿಯಾಗುತ್ತಾ!?

“ ಐಐಟಿ-ರೂರ್ಕೀ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು ರೈಲ್ವೇ ಟ್ರ್ಯಾಕ್ ಗಳನ್ನು ಮೇಲ್ವಿಚಾರಣೆ ಮಾಡಲು ಭಾರತೀಯ ರೈಲ್ವೆಗಳು ಮಾನವರಹಿತ ವೈಮಾನಿಕ ವಾಹನಗಳನ್ನು ನಿಯೋಜಿಸುವುದರ ಕುರಿತು ಮುಂದುವರಿದ ಹಂತಗಳಲ್ಲಿವೆ “ ಎಂದು ಭಾರತೀಯ TCOE ದ ಉಪನಿರ್ದೇಶಕರಾದ ಅನುರಾಗ್ ವಿಭೂತಿ ತಿಳಿಸಿದ್ದಾರೆ.

TCOE (ಎಕ್ಸಲೆನ್ಸ್ ಟೆಲಿಕಾಂ ಕೇಂದ್ರಗಳು) ಟೆಲಿಕಾಂ ವಲಯದಲ್ಲಿ ಸಾರ್ವಜನಿಕ-ಖಾಸಗಿ ಉಪಕ್ರಮವಾಗಿದ್ದು ಅದು ಹೊಸ ತಾಂತ್ರಜ್ಞಾನಗಳ ಮೇಲೆ ಶಿಕ್ಷಣ ನೀಡುತ್ತಿದೆ. ಇದರ ಅಡಿಯಲ್ಲಿ, ರೈಲ್ವೇ ಬ್ರಾಡ್ ಬ್ಯಾಂಡ್ ಸರ್ವಿಸಸ್ ಆರ್ಮ್, ರೈಲ್ ಟೆಲ್ ಕಾರ್ಪೋರೇಷನ್, ಐಐಟಿ-ರೂರ್ಕಿ ಜೊತೆಗೂಡಿ ಡ್ರೋನ್ ಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದೆ, ಅದು ರೈಲು ಟ್ರ್ಯಾಕ್ ಮೇಲ್ವಿಚಾರಣೆಯನ್ನು ಸ್ವಯಂಚಾಲಿತವಾಗಿ ನಡೆಸಲು ಸಹಾಯ ಮಾಡುತ್ತದೆ, ಆದರೆ ಸದ್ಯ ಇದು ಒಂದು ಕಾರ್ಯಸೂಚಕ ಪ್ರಕ್ರಿಯೆಯಾಗಿದೆ.

ಡ್ರೋನ್ ಗಳು ಕೆಲಸ ಮಾಡಲು ಆರಂಭಿಸಿದ ಮೇಲೆ ಸಾಂಪ್ರದಾಯಿಕವಾಗಿ ಜಾರಿಯಲ್ಲಿದ್ದ ಕೆಲವು ವ್ಯವಸ್ಥೆಯನ್ನು ಬದಲಿಸಬಹುದು.ಅದುವೇ ಮಾನವ ತನಿಖಾಧಿಕಾರಿಗಳನ್ನು ಅಥವಾ ಕಾರ್ಮಿಕರಿಂದ ಎಳೆಯುವ ಟ್ರಾಲಿಯನ್ನು ಬಳಸುವುದು..ಇನ್ನು ಮುಂದೆ ತೀವ್ರವಾದ ಹವಾಮಾನ ಮತ್ತು ದೂರದ ಸ್ಥಳಗಳಲ್ಲಿ ಕಠಿಣ ಕೆಲಸ ಮಾಡುವುದು ತಪ್ಪುವ ಸಾಧ್ಯತೆ ಇದೆ. ಹೆಚ್ಚಿನ ರೈಲ್ವೇ ಅಪಘಾತಗಳು ಮಾನವನ ತಪ್ಪುಗಳಿಂದ ಮತ್ತು ಅಸಮರ್ಪಕ ಟ್ರ್ಯಾಕ್ ಗಳ ಮೇಲ್ವಿಚಾರಣೆಯಿಂದ ನಡೆಯುತ್ತದೆ. ಹೀಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿದರೆ, ಡಾಟಾವನ್ನು ವಿಶ್ಲೇಷಣೆ ಮಾಡಲು ದೋಷಗಳು ಆಗದಂತೆ ತಡೆಯಲು ಹೆಚ್ಚು ನೆರವಾಗುತ್ತದೆ.

ರೈಲ್ವೇ ಯಲ್ಲಿ ಡ್ರೋನ್ ಗಳ ಬಳಕೆ ಮಾಡುವುದನ್ನು ಎಲ್ಲಾ ಭಾಗಗಳಿಗೂ ವಿಸ್ತರಿಸುವ ಆಲೋಚನೆ ಇದೆ. ಹಾಗಾದಲ್ಲಿ ರೈಲ್ವೇ ಟ್ರ್ಯಾಕ್ ಗಳ ಮೇಲ್ವಿಚಾರಣೆ ಬಹಳ ಸುಲಭಗೊಳ್ಳಲಿದೆ. “ ರೈಲು ಕಾರ್ಯಾಚರಣೆಗಳಲ್ಲಿ ಸುರಕ್ಷತೆ ಮತ್ತು ದಕ್ಷತೆ ಹೆಚ್ಚಿಸಲು ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನವನ್ನು ಬಳಸುವುದು ಸರ್ಕಾರದ ಬಯಕೆಗೆ ಅನುಗುಣವಾಗಿರುತ್ತದೆ "ಎಂದು ಭಾರತೀಯ ರೈಲ್ವೆ ವಕ್ತಾರ ಆರ್.ಡಿ. ಬಾಜ್ಪಾಯ್ ತಿಳಿಸಿದ್ದಾರೆ. ಜಬಲ್ ಪುರ, ಭೋಪಾಲ್ ಮತ್ತು ಕೋಟಾ ಡಿವಿಜನ್ ಗಳಲ್ಲಿ ಈಗಾಗಲೇ ಈ ತಂತ್ರಜ್ಞಾನವನ್ನು ರೈಲ್ವೇ ಇಲಾಖೆ ಬಳಸಲು ಪ್ರಾರಂಭಿಸಿದೆಯಂತೆ.

ಭಾರತೀಯ ರೈಲ್ವೇಯು ವಿಶ್ವದಲ್ಲೇ ಒಂದು ದೊಡ್ಡ ನೆಟ್ ವರ್ಕ್ ನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಅಪಘಾತಗಳ ಸಂಖ್ಯೆ ಕುಸಿದರೂ ಕೂಡ ಐತಿಹಾಸಿಕವಾಗಿ ಸುರಕ್ಷತಾ ವಿಚಾರದಲ್ಲಿ ಭಾರತೀಯ ರೈಲ್ವೇಯದ್ದು ಕೆಟ್ಟ ಪ್ರದರ್ಶನವೇ ಆಗಿತ್ತು. ಆ ನಿಟ್ಟಿನಲ್ಲಿ ಈಗಿನ ಸರ್ಕಾರ ಹೆಚ್ಚು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

ರೈಲು ಅಪಘಾತ ತಡೆಗೆ ಹೊಸ ಪ್ಲಾನ್!!! ಡ್ರೋನ್ ಬಳಕೆ ಯಶಸ್ವಿಯಾಗುತ್ತಾ!?

ಇತ್ತೀಚೆಗಿನ ಸರ್ಕಾರಿ ವರದಿಯ ಪ್ರಕಾರ 2017-18ರಲ್ಲಿ 54 ರೈಲ್ವೇ ಅಪಘಾತಗಳಾಗಿದ್ದು, ಹಿಂದಿನ ವರ್ಷದಲ್ಲಿ 78 ಮತ್ತು 2010-11ರಲ್ಲಿ 141 ರಷ್ಟಿತ್ತು. 2016-17ರಲ್ಲಿ, ರೈಲು ಅಪಘಾತಗಳಲ್ಲಿ 607 ಜನರಿಗೆ ಗಾಯಗಳು ಅಥವಾ ಮೃತಪಟ್ಟಿದ್ದರು, ಅದೇ ಮುಂದಿನ ವರ್ಷದಲ್ಲಿ ಆ ಸಂಖ್ಯೆ 254 ಕ್ಕೆ ಇಳಿದಿದೆ.

"ಈ (ಡ್ರೋನ್) ಯೋಜನೆಯು ಭಾರತೀಯ ರೈಲ್ವೇಯಿಂದ ರೈಲ್ ಟೆಲ್ ಗೆ ಪ್ರಸ್ತಾಪಿಸಲ್ಪಟ್ಟಿತು ಆದರೆ ರೈಲ್ ಟೆಲ್ ಹೆಚ್ಚು ಆರ್ & ಡಿ ಪರಿಣತಿಯನ್ನು ಹೊಂದಿರಲಿಲ್ಲ, ಹಾಗಾಗಿ ಇದು ಐಐಟಿ-ರೂರ್ಕಿ ಜೊತೆ ಕೈಜೋಡಿಸಿತ್ತು" ಎಂದು ವಿಬುತಿ ತಿಳಿಸಿದ್ದಾರೆ.

ಐಐಟಿ- ರೂರ್ಕಿ ಈ ತಂತ್ರಜ್ಞಾನದ ಪೇಟೆಂಟ್ ಪಡೆಯುವ ನಿರೀಕ್ಷೆ ಇದೆ. ಒಟ್ಟಾರೆ ಡ್ರೋನ್ ಗಳ ಸಹಾಯದಿಂದ ರೈಲ್ವೇ ಟ್ರ್ಯಾಕ್ ಗಳ ಚಿತ್ರಗಳನ್ನು ಮತ್ತು ವೀಡಿಯೋಗಳನ್ನು ತೆಗೆದು ಕುಳಿತಲ್ಲೇ ಪರೀಕ್ಷಿಸಲಾಗುತ್ತೆ. ಆ ಮೂಲಕ ರೈಲ್ವೇ ಸುರಕ್ಷತೆಯನ್ನು ಹೆಚ್ಚಿಸಿ ಜನರು ನಿರ್ಭಯವಾಗಿ ರೈಲಿನಲ್ಲಿ ಸಂಚರಿಸಲು ಅನುವು ಮಾಡಿಕೊಡುವ ಉದ್ದೇಶವಿದೆ. ಖಂಡಿತವಾಗಲೂ ಕೇಂದ್ರದ ಈ ಕಾರ್ಯ ಶ್ಲಾಘನೀಯ.

Best Mobiles in India

English summary
Here's how an IIT is working on making your train journeys safer. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X