ಆಪಲ್ ವಾಚ್ ನಲ್ಲಿ ಎರಡೆರಡು ಕ್ಯಾಮರಾ!

|

ಆಪಲ್ ವಾಚ್ ಗಳು ಕ್ಯೂಪರ್ಟಿನೋ ಮೂಲದ ಟೆಕ್ ದೈತ್ಯ ಆಪಲ್ ನ ಬಹಳ ಆಕರ್ಷಕ ಪ್ರೊಡಕ್ಟ್ ಗಳಲ್ಲಿ ಒಂದೆನಿಸುತ್ತಿದೆ.ಆಪಲ್ ನಿಂದ ಜನರು ನಿರೀಕ್ಷಿಸುತ್ತಿದ್ದ ಅಥವಾ ನಿರೀಕ್ಷಿಸುತ್ತಿರುವ ಅಧ್ಬುತ ಪ್ರೊಡಕ್ಟ್ ಗಳ ಲಿಸ್ಟ್ ನಲ್ಲಿ ಆಪಲ್ ವಾಚ್ ಕೂಡ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಈ ವಾಚ್ ಗ್ರಾಹಕರು ಆಪಲ್ ಐಫೋನ್ ನ್ನು ಹೆಚ್ಚು ಅವಲಂಬಿಸುವುದನ್ನು ಕಡಿಮೆ ಮಾಡಿದೆ.

ಆಪಲ್ ವಾಚ್ ನಲ್ಲಿ ಎರಡೆರಡು ಕ್ಯಾಮರಾ!

ಒಂದು ವೇಳೆ ನೀವು ಕೂಡ ಆಪಲ್ ವಾಚ್ ನ ಬಳಕೆದಾರರಾಗಿದ್ದಲ್ಲಿ ಖಂಡಿತ ಇದನ್ನು ನೀವು ಗಮನಿಸಿರುತ್ತೀರಿ. ಬಹುಶ್ಯಃ ಮೊದಲಿಗಿಂತ ಇದೀಗ ಅಂದರೆ ಆಪಲ್ ವಾಚ್ ಖರೀದಿಸಿದ ನಂತರ ಆಪಲ್ ಫೋನ್ ನ್ನು ಬಳಸುವುದನ್ನು ಕಡಿಮೆಗೊಳಿಸಿರುತ್ತೀರಿ. ಆಗಾಗ ಆಪಲ್ ಫೋನ್ ತೆಗೆಯಬೇಕಾದ ಸಂದರ್ಬ ನಿಮಗೆ ಎದುರಾಗುತ್ತದೆ ಅಷ್ಟೇ. ಆದರೆ ಈ ಬಳಸುವಿಕೆಯನ್ನು ಇನ್ನಷ್ಟು ಕಡಿತಗೊಳಿಸುವುದಕ್ಕೆ ಆಪಲ್ ಚಿಂತನೆ ನಡೆಸಿದೆ.

ಆಪಲ್ ನಲ್ಲಿ ಕೆಲಸ ಮಾಡುತ್ತಿರುವ ಕೆಲವರು ನೀಡಿರುವ ವರದಿಯ ಪ್ರಕಾರ ಆಪಲ್ ನ ಯುಎಸ್ ಪೇಟೆಂಟ್ ನಂಬರ್. 10,129,503 ತಿಳಿಸಿರುವಂತೆ ಆಪಲ್ ಫೋಟೋ ಕ್ಲಿಕ್ಕಿಸುವ ವಾಚ್ ನ್ನು ನಿರ್ಮಿಸಲು ಪ್ಲಾನ್ ಮಾಡುತ್ತಿದೆಯಂತೆ ಅಂದರೆ ಕ್ಯಾಮರಾ ಸೌಲಭ್ಯವನ್ನು ಆಪಲ್ ವಾಚ್ ನಲ್ಲಿ ನೀಡಲು ಆಪಲ್ ಸಂಸ್ಥೆ ಚಿಂತನೆ ನಡೆಸಿದೆ.

ಆದರೆ ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆಯಾಗಲೀ ಅಥವಾ ಇನ್ನಿತರೆ ಯಾವುದೇ ವಿಚಾರದ ಬಗ್ಗೆ ಸ್ಪಷ್ಟನೆ ಇಲ್ಲ. ವಾಚ್ ಅಂದರೆ ಅದು ಸಣ್ಣದಾಗಿರುತ್ತದೆ ಆದರೆ ಖಂಡಿತ ಶಕ್ತಿಶಾಲಿಯಾಗಿರುವ ಒಂದು ಡಿವೈಸ್ ಆಗಿದೆ. ಕೇವಲ ಘಂಟೆ ನೋಡುವುದಕ್ಕೆ ಮಾತ್ರವೇ ಸೀಮಿತವಲ್ಲದೆ ಇರುವ ಈ ಆಪಲ್ ವಾಚ್ ಒಂದು ಹೆಜ್ಜೆ ಮುಂದೆ ಹೋಗಿ ಕ್ಯಾಮರಾ ಸೌಲಭ್ಯವನ್ನೂ ಒಳಗೊಂಡರೆ ಖಂಡಿತ ಜಗತ್ತು ಆಪಲ್ ಬಗ್ಗೆ ಮತ್ತಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿಕೊಳ್ಳಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಇನ್ನು ಇದೀಗ ಲಭ್ಯವಿರುವ ಮಾಹಿತಿಯ ಪ್ರಕಾರ ಆಪಲ್ ವಾಚ್ ನಲ್ಲಿ ಕೇವಲ ಒಂದು ಕ್ಯಾಮರಾ ಮಾತ್ರವಲ್ಲ ಬದಲಾಗಿ ಎರಡು ಕ್ಯಾಮರಾವನ್ನು ಅಳವಡಿಸುವುದಕ್ಕೆ ಆಪಲ್ ಚಿಂತನೆ ನಡೆಸಿದೆ ಎನ್ನಲಾಗಿದೆ.

ಒಂದಾದನಂತರ ಒಂದರಂತೆ ಫೋಟೋ ಕ್ಲಿಕ್ಕಿಸುವ ಸಾಮರ್ಥ್ಯವನ್ನು ಈ ಕ್ಯಾಮರಾಗಳು ಹೊಂದಿರಲಿದ್ದು ಎರಡೂ ಲೆನ್ಸ್ ನಲ್ಲೂ ವೈಡ್ ಆಂಗಲ್ ಇರಲಿದೆ. ಎರಡೂ ಕ್ಯಾಮರಾಗಳು ಓವರ್ ಲ್ಯಾಪಿಂಗ್ ಆಂಗಲ್ ವ್ಯೂ ನ್ನು ಹೊಂದಿರಲಿದೆ ಎಂದು ವರದಿ ತಿಳಿಸುತ್ತಿದೆ.

ಫೇಸ್ ಐಡಿ, ಮತ್ತು ಫೇಸ್ ಟೈಮ್ ಆಪಲ್ ವಾಚ್ ನಲ್ಲಿ ಇರಲಿದೆ. ವಾಚ್ ನಲ್ಲಿರುವ ಕ್ಯಾಮರಾ ಬಳಸಿ ಬಳಕೆದಾರರು ವೀಡಿಯೋ ಕಾನ್ಫರೆನ್ಸ್ ಮಾಡುವುದಕ್ಕೂ ಅವಕಾಶ ನೀಡಲಾಗುತ್ತದೆ ಎಂದು ಹೇಳುತ್ತಿದೆ ಪೇಟೆಂಟ್ ನ ಸುದ್ದಿಗಳು. ಇದರ ಅರ್ಥ ಇಷ್ಟೇ ವಾಚ್ ನಲ್ಲೇ ಫೋಟೋ, ವೀಡಿಯೋ ಕ್ಯಾಪ್ಚರ್ ಮಾಡಬಹುದು ಅಷ್ಟೇ ಯಾಕೆ ಆಫೀಸ್ ಕೆಲಸವನ್ನು ಕೂಡ ಮಾಡಬಹುದು.

ಇಷ್ಟೆಲ್ಲ ವೈಶಿಷ್ಟ್ಯತೆಗಳನ್ನು ಒಳಗೊಂಡ ನಂತರ ಆಪಲ್ ತನ್ನ ವಾಚಿನ ಸೈಜ್ ನ್ನು ಹೆಚ್ಚಿಸುತ್ತದೆಯೇ ಎಂಬ ಪ್ರಶ್ನೆಗೆ ಇಲ್ಲ ಎಂಬುದೇ ಆಗಿದೆ. ಯಾಕೆಂದರೆ ವಾಚ್ ಅಂದರೆ ಅದು ಕೈಗೆ ಕಟ್ಟಿಕೊಂಡಿರಬಹುದಾದ ಒಂದು ಸ್ಟೈಲಿಶ್ ಡಿವೈಸ್ ಆಗಿರಬೇಕು. ಅದರ ಗಾತ್ರದಲ್ಲಿ ಹೆಚ್ಚಳವಾದರೆ ಅದು ವಾಚ್ ಅನ್ನಿಸಿಕೊಳ್ಳುವುದಿಲ್ಲ. ಹಾಗಾಗಿ ಚಿಕ್ಕ ಸೈಜಿನಲ್ಲಿಯೇ ಲೆನ್ಸ್ ಅಳವಡಿಸಿ ಎಲ್ಲಾ ವೈಶಿಷ್ಟ್ಯತೆಯನ್ನು ಅದರಲ್ಲಿ ಸೇರಿಸುವುದಕ್ಕೆ ಆಪಲ್ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ಖಂಡಿತ ಇದಿಷ್ಟು ಸಾಧಿಸುವುದಕ್ಕೆ ಕೆಲವು ಸಮಯ ಹಿಡಿಯಬಹುದು. ಆದರೆ ವಾಚ್ ಒಂದು ಕ್ಯಾಮರವಾಗುತ್ತದೆ ಮತ್ತು ಮನುಷ್ಯನ ದೈನಂದಿನ ಕೆಲಸವನ್ನು ಇನ್ನಷ್ಟು ಸರಳಗೊಳಿಸಿ ಸಂಪರ್ಕ ಸಾಧಿಸುವುದಕ್ಕೆ ನೆರವಾಗುತ್ತದೆ ಎಂಬ ಕಲ್ಪನೆಯೊಂದು ಸಾಕಾರವಾದರೆ ಅದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ. ಆಪಲ್ ಕೈಗೆತ್ತಿಕೊಂಡಿರುವ ಈ ಯೋಜನೆ ಆದಷ್ಟು ಬೇಗನೆ ಯಶಸ್ಸು ಕಾಣಲಿ.

Best Mobiles in India

Read more about:
English summary
Here’s how Apple plans to reduce dependence on the iPhone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X