ಭೂಮಿಗೆ ಕಾದಿದೆ ದೊಡ್ಡ ಗಂಡಾಂತರ..? ಪರಿಹಾರಕ್ಕೆ ನಾಸಾದಿಂದ ಹೊಸ ಆಯುಧ..!

By Gizbot Bureau
|

ಭೂಮಿ ಮತ್ತು ಸೌರವ್ಯೂಹದ ಮೇಲೆ ಎಲ್ಲಾ ರಾಷ್ಟ್ರಗಳು ಹಲವಾರು ರೀತಿಯ ಸಂಶೋಧನೆಗಳು ನಡೆಸುತ್ತಿವೆ. ಅದರಂತೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಕ್ಷುದ್ರಗ್ರಹಗಳ ದಾಳಿಯಂತಹ ಭೀಕರ ಘಟನೆಗಳಿಂದ ಭೂಮಿಯನ್ನು ರಕ್ಷಿಸಲು ಗ್ರಹಗಳ ರಕ್ಷಣಾ ಆಯುಧವನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ. ಆದರೆ, ನಾಸಾಕ್ಕೆ ಈಗ ಗ್ರಹಗಳ ರಕ್ಷಣಾ ಆಯುಧದ ಅಗತ್ಯವೇನು..? ಭೂಮಿಯು ಯಾವುದಾದರೂ ಸಂಭಾವ್ಯ ಅಪಾಯದಲ್ಲಿದೆಯಾ..? ಎಂಬ ಮಾಹಿತಿ ನಾಸಾಕ್ಕೆ ಸಿಕ್ಕಿರಬಹುದು ಎಂಬ ಮಾತುಗಳು ಹರಿದಾಡುತ್ತಿವೆ.

ಲಕ್ಷಾಂತರ ಕ್ಷುದ್ರಗ್ರಹ, ಉಲ್ಕೆಗಳು

ಲಕ್ಷಾಂತರ ಕ್ಷುದ್ರಗ್ರಹ, ಉಲ್ಕೆಗಳು

ನಾವು ವಾಸಿಸುವ ಬ್ರಹ್ಮಾಂಡವು ತುಂಬಾ ದೊಡ್ಡದು ಮತ್ತು ದೈತ್ಯವಾಗಿದ್ದು, ನಮ್ಮ ಸೌರವ್ಯೂಹದೊಳಗೆ, ಸಾವಿರಾರು ಕ್ಷುದ್ರಗ್ರಹಗಳು ಮತ್ತು ಉಲ್ಕೆಗಳು ಬಾಹ್ಯಾಕಾಶದಲ್ಲಿವೆ. ಕೆಲವೊಮ್ಮೆ, ಈ ರಕ್ಕಸ ಬಾಹ್ಯಾಕಾಶ ಕಾಯಗಳು ಭೂಮಿಗೆ ಬಹಳ ಹತ್ತಿರ ಬರುತ್ತವೆ ಮತ್ತು ಕೆಟ್ಟ ಸಂದರ್ಭಗಳಲ್ಲಿ ಅವು ಭೂಮಿಯ ಮೇಲೆ ಕುಸಿಯುತ್ತವೆ.

ಸಾವಿರ ಪರಮಾಣು ಬಾಂಬ್‌ಗಳಿಗೆ ಸಮ

ಸಾವಿರ ಪರಮಾಣು ಬಾಂಬ್‌ಗಳಿಗೆ ಸಮ

ಭೂಮಿಯ ಕಡೆ ಬರುವ ಕ್ಷುದ್ರಗ್ರಹ ಚಿಕ್ಕದಾಗಿದ್ದರೆ, ಗ್ರಹದ ವಾತಾವರಣಕ್ಕೆ ಬಂದ ತಕ್ಷಣ ಭಸ್ಮವಾಗುತ್ತವೆ. ಆದರೆ, ದೈತ್ಯ ಬಾಹ್ಯಾಕಾಶ ಕಾಯಗಳು ಸುಡುವುದಿಲ್ಲ ಮತ್ತು ಇವು ಒಂದು ಸಾವಿರ ಪರಮಾಣು ಬಾಂಬ್‌ಗಳ ಸ್ಫೋಟಕ್ಕೆ ಸಮನಾಗಿರಬಹುದಾದ ಬಲ ಹೊಂದಿರುತ್ತವೆ. ಇಂತಹ ಕ್ಷುದ್ರಗಳು ಭೂಮಿಯ ಮೇಲೆ ಬಿದ್ದರೆ ಅರ್ಧಗ್ರಹವೇ ನಾಶವಾಗಲಿದೆ ಎಂಬುದು ವಿಜ್ಞಾನಿಗಳ ವಾದವಾಗಿದೆ.

ಭವಿಷ್ಯದಲ್ಲಿ ದೊಡ್ಡ ಕ್ಷುದ್ರ ದಾಳಿ

ಭವಿಷ್ಯದಲ್ಲಿ ದೊಡ್ಡ ಕ್ಷುದ್ರ ದಾಳಿ

ನಾಸಾದ ಕ್ಷುದ್ರಗ್ರಹ ಟ್ರ್ಯಾಕಿಂಗ್ ವ್ಯವಸ್ಥೆ ಈಗಾಗಲೇ ಭೂಮಿಯ ಸಮೀಪವಿರುವ ವಸ್ತುಗಳು ಎಂದು ವರ್ಗೀಕರಿಸಬಹುದಾದ ನೂರಾರು ಕ್ಷುದ್ರಗ್ರಹಗಳನ್ನು ಪತ್ತೆ ಮಾಡಿದೆ. ನಿಕಟ ಹಾರಾಟದ ಸಮಯವನ್ನು ಗಮನಿಸಿದರೆ, ಈ ಕ್ಷುದ್ರಗ್ರಹಗಳು ನಮ್ಮಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿವೆ ಮತ್ತು ಸಂಭವನೀಯ ಪರಿಣಾಮದ ಸಾಧ್ಯತೆ ಬಹಳ ಕಡಿಮೆಯಾಗಿದೆ. ಆದರೆ, ರಕ್ಕಸ ಬಾಹ್ಯಾಕಾಶ ಕಾಯಗಳು ಭೂಮಿಗೆ ಅಪ್ಪಳಿಸುವ ಸಾಧ್ಯತೆಯನ್ನು ಹೆಚ್ಚಿಸುವ ಹಲವಾರು ಅಂಶಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಭವಿಷ್ಯದಲ್ಲಿ ದೊಡ್ಡ ದಾಳಿಯ ಸುಳಿವನ್ನು ನೀಡಿದ್ದಾರೆ.

ಗುರುತ್ವಕಾರ್ಷಣೆಯ ಕೀಹೋಲ್‌

ಗುರುತ್ವಕಾರ್ಷಣೆಯ ಕೀಹೋಲ್‌

ಕ್ಷುದ್ರಗ್ರಹಗಳ ಭೂಮಿ ಮೇಲಿನ ದಾಳಿಗೆ ಪ್ರಮುಖ ಕಾರಣೀಕರ್ತ ಅಂಶವೆಂದರೆ ಗುರುತ್ವಾಕರ್ಷಣೆಯ ಕೀಹೋಲ್. ತಜ್ಞರ ಪ್ರಕಾರ, ಗುರುತ್ವಾಕರ್ಷಣೆಯ ಕೀಹೋಲ್ ಬಾಹ್ಯಾಕಾಶದಲ್ಲಿ ಒಂದು ಪ್ರದೇಶವಾಗಿದ್ದು, ಹತ್ತಿರದ ಗ್ರಹಗಳ ಗುರುತ್ವಾಕರ್ಷಣೆಯಿಂದ ಕ್ಷುದ್ರಗ್ರಹಗಳ ಮೇಲೆ ಪರಿಣಾಮ ಬೀರುತ್ತವೆ. ಒಂದು ಕ್ಷುದ್ರಗ್ರಹ ಭೂಮಿಯ ಗುರುತ್ವಾಕರ್ಷಣೆಯ ಕೀಹೋಲ್‌ಗೆ ಪ್ರವೇಶಿಸಿದ ನಂತರ ಗ್ರಹದ ಮೇಲ್ಮೈಗೆ ಸೆಳೆಯಲಾಗುತ್ತದೆ ಮತ್ತು ಇದರ ಪ್ರಭಾವ ಕೂಡ ತುಂಬಾ ಹೆಚ್ಚಾಗುತ್ತವೆ.

ಯಾರ್ಕೊವ್ಸ್ಕಿ ಎಫೆಕ್ಟ್‌

ಯಾರ್ಕೊವ್ಸ್ಕಿ ಎಫೆಕ್ಟ್‌

ಯಾರ್ಕೊವ್ಸ್ಕಿ ಎಫೆಕ್ಟ್‌ ಮತ್ತೊಂದು ನಿರ್ಣಾಯಕ ಅಂಶವಾಗಿದ್ದು, ಇದು ಭೂಮಿಯೊಂದಿಗಿನ ಕ್ಷುದ್ರಗ್ರಹದ ಘರ್ಷಣೆಯನ್ನು ದುರ್ಬಲಗೊಳಿಸುತ್ತದೆ. ಬಾಹ್ಯಾಕಾಶ ತಜ್ಞರ ಪ್ರಕಾರ, ಯಾರ್ಕೊವ್ಸ್ಕಿ ಎಫೆಕ್ಟ್‌ನ್ನು ನಕ್ಷತ್ರದಂತಹ ಆಂತರಿಕ ವಸ್ತುವಿನಿಂದ ಹೊರಹೊಮ್ಮುವ ಶಾಖ ಎಂದು ವ್ಯಾಖ್ಯಾನಿಸಬಹುದು. ಇದು ಕ್ಷುದ್ರಗ್ರಹದ ಸ್ಪಿನ್ ಅನ್ನು ಮಾರ್ಪಡಿಸುವ ಸಾಮರ್ಥ್ಯ ಹೊಂದಿದ್ದು, ಇದು ಸಂಭವಿಸಿದಲ್ಲಿ, ಬಾಹ್ಯಾಕಾಶ ದೇಹದ ಮೂಲ ಪಥ ಬದಲಾಗಬಹುದು ಮತ್ತು ಮಾರಕ ಘರ್ಷಣೆಗೆ ಕಾರಣವಾಗಬಹುದು.

Best Mobiles in India

Read more about:
English summary
Here's how asteroids traveling millions of miles away post a threat to Earth

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X