ಆಧಾರ್ ಬಳಕೆಯನ್ನು ಟ್ರ್ಯಾಕ್ ಮಾಡಿ!..ನಂತರ ಸುಲಭವಾಗಿ ಮಾಹಿತಿ ಅಳಿಸಿ!!
ಆಧಾರ್ಗೆ ಸಂಬಂಧಿಸಿದಂತೆ ಇತ್ತೀಚಿಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ ನಂತರ ಈಗ ಜನರಿಗೆ ಮತ್ತೊಂದು ಪೀಕಲಾಟ ಶುರುವಾಗಿದೆ. ಸಿಮ್ ಖರೀದಿ, ಬ್ಯಾಂಕ್ ಖಾತೆಗೆ ಆಧಾರ್ ಕಡ್ಡಾಯವಲ್ಲ ಎಂದು ಕೋರ್ಟ್ ಆದೇಶಿಸಿದ ನಂತರ,ಈಗಾಗಲೇ ಸಿಮ್ ಹಾಗೂ ಬ್ಯಾಂಕ್ಗಳಿಗೆ ನೀಡಲಾದ ಆಧಾರ್ ಮಾಹಿತಿಯನ್ನು ಹಿಂಪಡೆಯುವುದು ಹೇಗೆ ಎಂಬ ಪ್ರಶ್ನೆ ಹುಟ್ಟಿದೆ.
ಸುಪ್ರೀಂ ಕೋರ್ಟ್ ಆದೇಶದ ಬಳಿಕ ಆಧಾರ್ ಬಳಸಿ ಇ-ಕೆವೈಸಿ ವ್ಯವಹಾರ ನಡೆಸಿದ್ದರೆ, ಹಂಚಿಕೊಂಡಿರುವ ಮಾಹಿತಿ ಹಾಗೂ ಬಯೋಮೆಟ್ರಿಕ್ ಮಾಹಿತಿ ಹಂಚಿಕೊಂಡಿದ್ದರೆ ಅದನ್ನು ಸೇವಾದಾರ ಸಂಸ್ಥೆಯಿಂದ ಅಥವಾ ಜೋಡಣೆಯನ್ನು ಹಿಂಪಡೆಯಲು ಅವಕಾಶವಿದೆ ಎಂದು ಆಧಾರ್ನ ನೊಡಲ್ ಸಂಸ್ಥೆ UIDAI ವೆಬ್ಸೈಟ್ನ ನಿಯಮಾವಳಿ ಸೂಚಿಯಲ್ಲಿ ತಿಳಿಸಲಾಗಿದೆ.

ಇತ್ತೀಚೆಗಷ್ಟೇ ಬ್ಯಾಂಕ್ ಹಾಗೂ ದೂರಸಂಪರ್ಕ ಸೇವೆ ಒದಗಿಸುವ ಸಂಸ್ಥೆಗಳು ಸೇರಿದಂತೆ ಮೊಬೈಲ್ ವ್ಯಾಲೆಟ್ ಹಾಗೂ ಕೊರಿಯರ್ ಏಜೆನ್ಸಿಗಳೂ ಆಧಾರ್ ಕಡ್ಡಾಯವೆಂದು ಮಾಹಿತಿ ಕಲೆ ಹಾಕಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಟೆಲಿಕಾಂ, ಮೊಬೈಲ್ ವ್ಯಾಲೆಟ್ ಸಂಸ್ಥೆಗಳು ಸೇರಿದಂತೆ ಬ್ಯಾಂಕ್ಗಳಿಂದ ಆಧಾರ್ ಮಾಹಿತಿಯನ್ನು ಅಳಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ಮೊದಲು ಆಧಾರ್ ಅನ್ನು ಟ್ರ್ಯಾಕ್ ಮಾಡಿ!
ನಿಮ್ಮ ಆಧಾರ್ ಮಾಹಿತಿಯನ್ನು ಅಳಿಸುವ ಮೊದಲು ನಿಮ್ಮ ಆಧಾರ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ನೀವು ಟ್ರ್ಯಾಕ್ ಮಾಡಬಹುದು. ನಿಮ್ಮ ಆಧಾರ್ ಮಾಹಿತಿಯನ್ನು ಯಾವ ಕಾರಣಕ್ಕೆ, ಎಲ್ಲಿ ಬಳಕೆ ಮಾಡಿಕೊಂಡಿದ್ದಾರೆ. ಆಕೌಂಟ್ ಲಿಂಕ್. ಸಿಮ್ ಕಾರ್ಡ್. ಪ್ಯಾನ್ ಕಾರ್ಡ್ ಸೇರಿದಂತೆ ಎಲ್ಲಿ ಬಳಕೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವ ಅವಕಾಶ ಲಭ್ಯವಿದೆ.

ಟ್ರ್ಯಾಕ್ ಮಾಡುವುದು ಹೇಗೆ? ಹಂತ 1
UIDAI ವೆಬ್ ಸೈಟಿಗೆ ಭೇಟಿ ನೀಡಿ. ಮತ್ತು ಆಧಾರ್ ಅಥ್ರಟಿಫಿಕೇಷನ್ ಹಿಸ್ಟರಿ ಪೇಜ್ ಒಪನ್ ಮಾಡಿ. https://resident.uidai.gov.in/notification-aadhaar. ಪೇಜ್ ಓಪನ್ ಮಾಡಿ ಮತ್ತು 12 ಅಂಕಿಗಳ ಆಧಾರ್ ಕಾರ್ಡ್ ನಂಬರ್ ಅನ್ನು ಎಂಟ್ರಿ ಮಾಡಿ ಮತ್ತು ಸೆಕ್ಯೂರಿಟಿ ಕೋಡ್ ಅನ್ನು ದಾಖಲಿಸಿ. ನಂತರ ಅಲ್ಲಿಯೇ ಕೆಳಗೆ ಇರುವ ಜನರೆಟ್ OTP ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಟ್ರ್ಯಾಕ್ ಮಾಡುವುದು ಹೇಗೆ? ಹಂತ 2
ನಿಮ್ಮ ರಿಜಿಸ್ಟರ್ ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಗೆ OTPಯು ಬರಲಿದೆ. ನಿಮಗೆ ಬೇಕಾದ ಮಾಹಿತಿಯ ವಿಧ ಮತ್ತು ಅವಧಿಯನ್ನು ಎಂಟ್ರಿ ಮಾಡಬೇಕಾಗುತ್ತದೆ. ಇದಾದ ನಂತರದಲ್ಲಿ OTP ಯನ್ನು ಎಂಟ್ರಿ ಮಾಡಿದ ತಕ್ಷಣವೇ ನಿಮ್ಮ ಆಧಾರ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬ ಸಂಪೂರ್ಣ ಮಾಹಿತಿ ನಿಮಗೆ ದೊರೆಯಲಿದೆ. ಆರು ತಿಂಗಳ ಅವಧಿಯದ್ದು ಮಾತ್ರವೇ ಲಭ್ಯವಿರಲಿದೆ.

ಬ್ಯಾಂಕ್ ಖಾತೆ!
ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಲಾದ ಆಧಾರ್ ಮಾಹಿತಿಯನ್ನು ಅಳಿಸಿ ಹಾಕಲು ಕೈ ಬರಹದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇನ್ನು ಟೆಲಿಕಾಂ ಸಂಸ್ಥೆಗಳಿಗೂ ಇದೇ ರೀತಿ ಲಿಖಿತ ರೂಪದಲ್ಲಿ ಮನವಿ ಮಾಡಿಕೊಳ್ಳಬೇಕು ಎಂದು ದಿ ಕ್ವಿಂಟ್ ವರದಿ ಮಾಡಿದೆ. ನೀವು ಅರ್ಜಿಸಲ್ಲಿಸಿದ ನಂತರವಷ್ಟೇ ನಿಮ್ಮ ಆಧಾರ್ ಮಾಹಿತಿ ಬ್ಯಾಂಕಿನಿಂದ ಅಳಿಸುತ್ತದೆ.

ಸಿಮ್ ಜೋಡಣೆ!
ಈಗಿನ ಎಲ್ಲಾ ಟೆಲಿಕಾಂ ಕಂಪೆನಿಗಳು ಇ- ಕೆವೈಸಿ ಮೂಲಕವೇ ತಮ್ಮ ಗ್ರಾಹಕರಿಗೆ ಸಿಮ್ ಕಾರ್ಡ್ ವಿತರಿಸಿದೆ. ಈಗ ಸುಪ್ರೀ ಕೋರ್ಟ್‌ನ ತೀರ್ಪನ್ನು ಪಾಲಿಸಲೇಬೇಕಿರುವುದರಿಂದ, ಆಯಾ ಟೆಲಿಕಾಂ ಕಂಪೆನಿಗಳ ಗ್ರಾಹಕ ಸೇವಾ ಕೇಂದ್ರದಲ್ಲಿ ಇತರೆ ದಾಖಲೆ ನೀಡಿ ಆಧಾರ್ ಮಾಹಿತಿ ಅಳಿಸುವಂತಹ ಆಯ್ಕೆ ಶೀಘ್ರವೇ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಮೊಬೈಲ್ ವ್ಯಾಲೆಟ್
ಇನ್ನು ಸುಪ್ರಿಂ ತೀರ್ಪಿನ ನಂತರ ಮೊಬೈಲ್ ವ್ಯಾಲೆಟ್ಗಳೊಂದಿಗೆ ಆಧಾರ್ ಡೇಟಾ ಹಂಚಿಕೊಂಡಿರುವ ಗ್ರಾಹಕರು ಈಗಾಗಲೇ ತಮ್ಮ ಮಾಹಿತಿ ಹಿಂಪಡೆಯಲು ಮುಂದಾಗಿದ್ದಾರೆ. ಆದರೆ ಮೊಬೈಲ್ ವ್ಯಾಲೆಟ್ಗಳು ಈವರೆಗೆ ಯಾವುದೇ ಆಯ್ಕೆಯನ್ನು ನೀಡದಿರುವುದರಿಂದ, ಆಧಾರ್ ಮಾಹಿತಿ ಅಳಿಸಿ ಹಾಕಲು ಯಾವ ರೀತಿ ಪ್ರತಿಕ್ರಿಯಿಸುತ್ತವೆ ಎಂಬುವುದನ್ನು ಕಾದುನೋಡಬೇಕು.


Click it and Unblock the Notifications