ಮಕ್ಕಳಿಗೆ ಹೆಡ್‌ಫೋನ್ ಕೊಡುವುದಕ್ಕಿಂತ ಮುನ್ನ ಈ ಸ್ಟೋರಿ ಓದಿ!!!

By GizBot Bureau
|

ಡಚ್ ನ ಅಧ್ಯಯನವೊಂದು ಆತಂಕಕಾರಿ ಸುದ್ದಿಯೊಂದನ್ನು ಹೊರಹಾಕಿದೆ. ಯಾವ ಮಕ್ಕಳು ಹೆಡ್ ಫೋನ್ ಬಳಸಿ ಮ್ಯೂಸಿಕ್ ಕೇಳುತ್ತಾರೋ ಅವರು ಶಬ್ಧ ಕೇಳುವ ಕೆಲವು ಸಮಸ್ಯೆಗಳಿಂದ ಬಳಲುವ ಸಾಧ್ಯತೆಗಳು ಹೆಚ್ಚಿವೆಯಂತೆ.

ಸುಮಾರು 9-11 ವರ್ಷದ 3,316 ಮಕ್ಕಳನ್ನು ಈ ಅಧ್ಯಯನಕ್ಕಾಗಿ ಬಳಸಲಾಗಿತ್ತು. ಅವರ ಪೋಷಕರು ಮಕ್ಕಳು ಎಷ್ಟು ಹೊತ್ತು ಮ್ಯೂಸಿಕ್ ಪ್ಲೇಯರ್ ಗಳನ್ನು ಬಳಸುತ್ತಾರೆ. ಮತ್ತು ಅವರು ಎಷ್ಟು ವಾಲ್ಯೂಮ್ ಇಟ್ಟುಕೊಂಡಿರುತ್ತಾರೆ ಎಂಬಿತ್ಯಾದಿ ವಿವರಗಳನ್ನು ಅಧ್ಯಯನದಲ್ಲಿ ಪರೀಕ್ಷಿಸಲಾಗಿದೆ.

ಮಕ್ಕಳಿಗೆ ಹೆಡ್‌ಫೋನ್ ಕೊಡುವುದಕ್ಕಿಂತ ಮುನ್ನ ಈ ಸ್ಟೋರಿ ಓದಿ!!!

ಅದರಲ್ಲಿ 443 ಮಕ್ಕಳಿಗೆ ಅಂದರೆ ಸುಮಾರು 14 ಶೇಕಡಾ ಮಕ್ಕಳಿಗೆ ಹೈ ಫ್ರೀಕ್ವೆನ್ಸಿಯಲ್ಲಿ ಕೇಳಿಸಿಕೊಳ್ಳುವುದಕ್ಕೆ ಯಾವುದಾದರೂ ಒಂದು ರೀತಿಯ ಸಮಸ್ಯೆಯಾಗುತ್ತದೆ. ಅಂದರೆ ಹೆಚ್ಚಿನ ಶಬ್ಧವನ್ನು ಗ್ರಹಿಸಲು , ಅಥವಾ ಹೈ ಫ್ರೀಕ್ವೆನ್ಸಿಯಲ್ಲಿ ಏನನ್ನಾದರೂ ಕೇಳಿಸಿಕೊಳ್ಳುವುದಕ್ಕೆ ಚಿಕ್ಕ ವಯಸ್ಸಿನವರಿಗೆ ಅಸಾಧ್ಯವಾಗುತ್ತದೆ.

ಯಾವ ಮಕ್ಕಳು ಹೆಡ್ ಫೋನ್ ಗಳನ್ನು ಬಳಸುವುದೇ ಇಲ್ಲವೋ ಅವರಿಗೆ ಹೋಲಿಸಿದರೆ ವಾರಕ್ಕೆ ಒಂದು ಅಥವಾ ಎರಡು ದಿನ ಹೆಡ್ ಫೋನ್ ಬಳಕೆ ಮಾಡುವ ಮಕ್ಕಳು ಅಥವಾ ಎರಡಕ್ಕಿಂತ ಹೆಚ್ಚು ದಿನ ಬಳಕೆ ಮಾಡುವ ಮಕ್ಕಳು ಶಬ್ದ ಗ್ರಹಿಸುವಿಕೆಯ ಸಮಸ್ಯೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಅನುಭವಿಸುತ್ತಿದ್ದಾರೆ. ಅದರಲ್ಲಿ ಎಷ್ಟು ಹೊತ್ತು ಹೆಡ್ ಫೋನ್ ಬಳಕೆ ಮಾಡಿದರು ಮತ್ತು ಎಷ್ಟು ಹೆಚ್ಚಿನ ವಾಲ್ಯೂಮ್ ಇಟ್ಟುಕೊಂಡಿದ್ದರೂ ಎಂಬುದನ್ನು ಪರಿಗಣಸಿದೇ ಇದ್ದರೂ ಕೂಡ ಹೆಡ್ ಫೋನ್ ಬಳಕೆ ಮಾಡದ ಮಕ್ಕಳಿಗಿಂತ ಬಳಕೆ ಮಾಡುವ ಮಕ್ಕಳಲ್ಲಿ ಸಮಸ್ಯೆ ಅಧಿಕವಾಗಿ ಇರುತ್ತದೆ.

“ ಗ್ರಹಿಸುವಿಕೆ ನಷ್ಟವಾಗಿರುವುದು ಕೇವಲ ಮ್ಯೂಸಿಕ್ ಪ್ಲೇಯರ್ ಗಳಿಂದ ಎಂಬುದನ್ನು ಈ ಅಧ್ಯಯನದಿಂದ ಸಾಬೀತು ಪಡಿಸಲು ಸಾಧ್ಯವಿಲ್ಲ, ಆದರೆ ಸಂಗೀತದ ಮಾನ್ಯತೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಕೇಳುವಿಕೆಯ ಮೇಲೆ ಪ್ರಭಾವ ಬೀರಬಹುದು ಎಂಬುದನ್ನು ಮಾತ್ರ ಹೇಳಲು ಸಾಧ್ಯ” ಎಂದು ಅಧ್ಯಯನ ಕೈಗೊಂಡ ರೋಟರ್ ಡ್ಯಾಮ್ ನ ಎರಾಸ್ಮಸ್ ಯುನಿವರ್ಸಿಟಿ ಮೆಡಿಕಲ್ ಕೇಂದ್ರದ ಲೇಖಕ ಡಾ ಕಾರ್ಲಿಜನ್ ಲೆ ಕ್ಲೆರ್ಕ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

“ ಆದರೆ ಇದು ಬಹಳ ಮಹತ್ವಪೂರ್ಣ ವಿಚಾರ ಯಾಕೆಂದರೆ, ಗ್ರಹಿಸುವಿಕೆಯ ನಷ್ಟವು ಜೀವನ ಪರ್ಯಂತ ತುಂಬಿಸಲಾಗದ ಒಂದು ನಷ್ಟವಾಗಿರುತ್ತದೆ “ ಎಂದು ಅವರು ಇಮೇಲ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ನಲ್ಲಿ ಶಿಕ್ಷಣ ಅಥವಾ ಮನರಂಜನೆಯ ಕಾರಣಕ್ಕಾಗಿ 10 ಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರು ಪೋರ್ಟೇಬಲ್ ಮ್ಯೂಸಿಕ್ ಪ್ಲೇಯರ್ ನ್ನು ಬಳಸಿಯೇ ಬಳಸುತ್ತಾರೆ ಎಂಬುದು JAMA ಒಂಟೋಲರಿಂಗೋಲಜಿಯ ತಲೆ ಮತ್ತು ಕುತ್ತಿಗೆ ಸರ್ಜರಿ ವಿಭಾಗದ ಸಂಶೋಧಕರ ವಿವರಣೆಯಾಗಿದೆ.

ಮಕ್ಕಳಿಗೆ ಹೆಡ್‌ಫೋನ್ ಕೊಡುವುದಕ್ಕಿಂತ ಮುನ್ನ ಈ ಸ್ಟೋರಿ ಓದಿ!!!

ಶಬ್ದ ಮತ್ತು ಕೇಳುವಿಕೆಗೆ ಸಂಬಂಧಿಸಿದ ನಷ್ಟವು, ಶಬ್ದಗಳು ಹತ್ತಿರದ ಶಬ್ದವೇ ಆದರೂ ಅದು ದೂರದಿಂದ ಕೇಳಿದಂತೆ ಭಾಸವಾಗುವುದು, ಅಥವಾ ದೂರದ ಶಬ್ದವು ಕೇಳಿಸದೇ ಇರುವುದು, ಆಗಾಗ ಕಿವಿಯಲ್ಲಿ ಏನೋ ರಿಂಗಣಿಸಿದಂತ ಭಾವನೆ ಇತ್ಯಾದಿಗಳಿಗೆ ಕಾರಣವಾಗಿರುತ್ತದೆ. ಇದು ಕೆಲವೊಮ್ಮೆ ತಾತ್ಕಾಲಿಕವಾಗಿರಬಹುದು. ಆದರೆ ಅದು ಪದೇ ಪದೇ ಮರುಕಳಿಸಿ ಶಾಶ್ವತ ಸಮಸ್ಯೆಗಳಿಗೂ ಕಾರಣವಾಗಬಹುದು.,.

ಸದ್ಯದ ಅಧ್ಯಯನದಲ್ಲಿ 1,244 ಮಕ್ಕಳು ಅಥವಾ 40 ಶೇಕಡಾ ಮಕ್ಕಳು ಯಾವತ್ತೂ ರೂಡ ಪೋರ್ಟೇಬಲ್ ಮ್ಯೂಸಿಕ್ ಪ್ಲೇಯರ್ ನ್ನು ಬಳಸಲಿಲ್ಲ ಮತ್ತು ಶೇಕಡಾ 19 ಮಂದಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಪೋರ್ಟೆಬಲ್ ಡಿವೈಸ್ ನ್ನು ಬಳಕೆ ಮಾಡಿದ್ದಾರೆ ಇನ್ನು 8 ಶೇಕಡಾ ಮಂದಿ ವಾರಕ್ಕೆ ಮೂರು ಬಾರಿ ಡಿವೈಸ್ ನ್ನು ಬಳಕೆ ಮಾಡುತ್ತಾರೆ.

ಹೆಚ್ಚಿನ ಮಕ್ಕಳಲ್ಲಿ ಕೇಳುವಿಕೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇಲ್ಲ, ಅದರಲ್ಲಿ ಏಳು ಶೇಕಡಾ ಮಕ್ಕಳಿಗೆ ಆಗೊಮ್ಮೆ ಈಗೊಮ್ಮೆ ಇಂತಹ ಕೇಳುವಿಕೆಗೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ.

ಆದರೆ ಈ ಅಧ್ಯಯನದಿಂದ ಹೇಗೆ ಹೆಡ್ ಫೋನ್ ಗಳು ನೇರವಾಗಿ ಮಕ್ಕಳ ಕೇಳುವಿಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಆದರೆ ಚಿಕ್ಕ ಮಕ್ಕಳಲ್ಲಿ ಹೈ ಫ್ರೀಕ್ವೆನ್ಸಿಯಲ್ಲಿ ಕೇಳುವಿಕೆಯು ಸಮಸ್ಯೆ ಒಡ್ಡುತ್ತದೆ ಎಂಬುದನಷ್ಟೇ ಹೇಳಲು ಸಮರ್ಥವಾಗಿದೆ. ಕೆಲವು ಮಕ್ಕಳು ಕಿವಿಯ ಸೋಂಕಿ ಸಮಸ್ಯೆಯನ್ನು ಇದರಿಂದ ಎದುರಿಸಬಹುದಂತೆ. ಸೋಂಕು ಪದೇ ಪದೇ ಅಥವಾ ದೀರ್ಘಾವದಿ ಆದರೆ ಕೇಳುವಿಕೆಯ ಮೇಲೆ ಬಹುದೊಡ್ಡ ಪರಿಣಾಮವಾಗಬಹುದು.

ಪೋಷಕರು ತಮ್ಮ ಮಕ್ಕಳು ಪೋರ್ಟೇಬಲ್ ಮ್ಯೂಸಿಕ್ ಪ್ಲೇಯರ್ ಬಳಕೆ ಮಾಡುವುದನ್ನು ಲಿಮಿಟ್ ನಲ್ಲಿ ಇಡಬೇಕು ಎಂದು ಫ್ರ್ಯಾಂಕ್ ಎಂಬ ಅಧ್ಯಯನಕಾರರೊಬ್ಬರು ಹೇಳುತ್ತಾರೆ. ಅಷ್ಟೇ ಅಲ್ಲ, ಪೋಷಕರು ಮಕ್ಕಳು ಹೀಗೆ ದೊಡ್ಡ ದೊಡ್ಡ ಶಬ್ದಗಳಿಗೆ ತೆರೆದುಕೊಳ್ಳಬೇಕಾದ ಸಂದರ್ಬ ಎದುರಾದಾಗ ಕೇಳುವಿಕೆಗೆ ಸಂಬಂಧಿಸಿದ ರಕ್ಷಣಾ ಡಿವೈಸ್ ಗಳನ್ನೂ ಬಳಕೆ ಮಾಡಬೇಕು. ಮ್ಯೂಸಿಷಿಯನ್ ಗಳಿಗಾಗಿ ಬಳಸುವ ಇಯರ್ ಪ್ಲಗ್ ಗಳು , ಇಯರ್ ಮಫ್ಸ್ ಗಳು, ಶಬ್ದದ ಮೂಲಕ್ಕೆ ಸೂಕ್ತವೆನಿಸುವಂತಹ ಧ್ವನಿ ಪ್ಲಗ್ ಗಳನ್ನು ಬಳಕೆ ಮಾಡುವುದು ಕೂಡ ಉತ್ತಮವಾದ ಕ್ರಮವೆಂದು ಸಲಹೆ ನೀಡಲಾಗುತ್ತದೆ.

ಮಿತಿಮೀರಿದ ಸಂಗೀತ ಕೇಳುವಿಕೆಯನ್ನು ಮಕ್ಕಳಲ್ಲಿ ನಿಯಂತ್ರಣದಲ್ಲಿರಿಸುವುದು, ಒಟ್ಟಾರೆ ಕೇಳುವ ತಂತ್ರದ ಭಾಗವಾಗಿ ಪರಿಗಣಿಸುವುದರಿಂದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ ಎಂಬುದು ಅಧ್ಯಯನಕಾರರ ಅಭಿಪ್ರಾಯವಾಗಿದೆ.

ಒಟ್ಟಾರೆ ಅಧ್ಯಯನಕಾರರ ಅಭಿಪ್ರಾಯವೇನೆಂದರೆ ಪೋಷಕರು ಮಕ್ಕಳ ಕಿವಿ ಮತ್ತು ಕಣ್ಣಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಅವರು ಎಷ್ಟು ಸಮಯ ಇಯರ್ ಫೋನ್ ಅಥವಾ ಹೆಡ್ ಪೋನ್ ಬಳಕೆ ಮಾಡುತ್ತಾರೆ ಮತ್ತು ಅದರ ವಾಲ್ಯೂಮ್ ಎಷ್ಟಿರುತ್ತದೆ ಎಂಬುದರ ಬಗ್ಗೆ ಪೋಷಕರಿಗೆ ಕಾಳಜಿ ಇರಬೇಕು. ಹೀಗೆ ಅತಿಯಾಗಿ ಮ್ಯೂಸಿಕ್ ಪ್ಲೇಯರ್ ಗಳನ್ನು ಬಳಕೆ ಮಾಡುವುದರಿಂದಾಗಿ ಮಕ್ಕಳಿಗೆ ಒಂದಲ್ಲ ಒಂದು ದಿನ ಸಮಸ್ಯೆ ಎಂಬುದನ್ನು ಮಾತ್ರ ಅವರು ಹೇಳಬಲ್ಲರು. ಹಾಗಾಗಿ ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಜಾಗೃತೆ ವಹಿಸಿ..

Best Mobiles in India

English summary
Here's how listening to music on headphones puts kids' hearing at risk. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X