TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ದಿನದಿಂದ ದಿನಕ್ಕೆ ಆನ್ ಲೈನ್ ಶಾಪಿಂಗ್ ವ್ಯವಸ್ಥೆ ಹೆಚ್ಚು ಪ್ರಸಿದ್ಧಿಗೊಳ್ಳುತ್ತಿದೆ. ಅದಕ್ಕೆ ಕಾರಣಗಳು ಹಲವಾರು ಇರಬಹುದು. ಸುಲಭದಲ್ಲೇ ಮನೆಗೆ ತರಿಸಿಕೊಳ್ಳುವ ವ್ಯವಸ್ಥೆ, ಅಂಗಡಿಗೆ ತೆರಳಲು ಸಮಯವಿಲ್ಲದೇ ಇರುವುದು, ಅಂಗಡಿಗಳಿಂದ ಕಡಿಮೆ ಬೆಲೆಗೆ ಆನ್ ಲೈನ್ ನಲ್ಲಿ ವಸ್ತುಗಳ ಲಭ್ಯತೆ ಹೀಗೆ ಇತ್ಯಾದಿಗಳು. ಆದರೆ ಖರೀದಿಸುವಿಕೆ ಎಷ್ಟು ಹೆಚ್ಚುತ್ತಿದೆಯೂ ಆನ್ ಲೈನ್ ನಲ್ಲಿ ವಂಚನೆ ಪ್ರಕರಣಗಳೂ ಕೂಡ ಅಧಿಕವಾಗುತ್ತಿದೆ.
ಒಟ್ಟು 500 ಮಿಲಿಯನ್ ಭಾರತದ ಜನಸಂಖ್ಯೆಲ್ಲಿ ಹೆಚ್ಚು ಮಧ್ಯಮವರ್ಗದವರೇ ಆಗಿದ್ದಾರೆ ಮತ್ತು ಶೇಕಡಾ 65 ಕ್ಕಿಂತ ಹೆಚ್ಚು ಮಂದಿ 35 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಅಂದರೆ ಯುವಜನತೆಯಿಂದ ತುಂಬಿದೆ ಭಾರತ. ಹಾಗಾಗಿ PWC ಟೆಕ್ ವರ್ಡ್ ರಿಪೋರ್ಟ್ ತಿಳಿಸುವಂತೆ ವ್ಯಾಪಾರಿಗಳಿಗೆ ಹೆಚ್ಚು ಮಹತ್ವಾಕಾಂಕ್ಷೆ ಇರುವ ಗ್ರಾಹಕರು ಭಾರತದಲ್ಲಿ ಲಭ್ಯವಾಗುತ್ತಾರೆ.
ಇದೇ ಕಾರಣಕ್ಕೆ ಆನ್ ಲೈನ್ ವ್ಯಾಪಾರದಲ್ಲೂ ಕೂಡ ಬಹಳ ಬೇಡಿಕೆ ಇದೆ..ಆದ್ರೆ ಇದರ ಜೊತೆಗೆ ಹಲವಾರು ರೀತಿಯ ವಂಚನೆಯನ್ನು ಕೂಡ ಇಲ್ಲಿ ಕಾಣಬಹುದಾಗಿದೆ. ಹಾಗಾಗಿ ಆನ್ ಲೈನ್ ಮಾರಾಟ ಕಂಪೆನಿಗಳು ಮೋಸದ ಆರ್ಡರ್ ಗಳನ್ನು ಗುರುತಿಸಲು, ವಸ್ತುಗಳನ್ನು ಆರ್ಡರ್ ಮಾಡಿ ಮತ್ತೆ ರಿಟರ್ನ್ ಮಾಡುವ ದರವನ್ನು ಕಡಿಮೆ ಮಾಡಲು ಮತ್ತು ಲಾಜಿಸ್ಟಿಕ್ ವೆಚ್ಚದಲ್ಲಿ ಕಡಿಮೆ ಮಾಡಲು ರೋಬೋಟಿಕ್ ಮತ್ತು ಕೃತಕ ಬುದ್ಧಿಮತ್ತೆಯ ಮೇಲೆ ಹೆಚ್ಚು ಹೂಡಿಕೆ ಮಾಡಲು ಮುಂದಾಗುತ್ತಿವೆ.
ಹಾಗಾಗಿ ಇ ಕಾಮರ್ಸ್ ಸಂಸ್ಥೆಗಳು ತಮ್ಮ ತಂತ್ರಜ್ಞಾನವನ್ನು ಪುನರುಜ್ಜೀವನಗೊಳಿಸಲು ಸಾಕಷ್ಟು ಹಣವನ್ನು ವೆಚ್ಚ ಮಾಡುತ್ತಿದ್ದಾರೆ. ಸಂವಹನೀಯ ವಾಣಿಜ್ಯ, ಕೃತಕ ಬುದ್ಧಿಮತ್ತೆ,ವಿಆರ್ ಮತ್ತು ಎರ್ ( ವರ್ಚುವಲ್ ರಿಯಾಲಿಟಿ ಮತ್ತು ವರ್ಧಿತ ರಿಯಾಲಿಟಿ), ಮತ್ತು ವಿಶ್ಲೇಷಣಾ ತಂತ್ರಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಅವು ನಡೆಸುತ್ತಿದೆ ಎಂಬ ವಿಚಾರವನ್ನು ಪಿಡಬ್ಯೂಸಿ ತಿಳಿಸಿದೆ.
ವಂಚನೆಗಳು ಅಥವಾ ಡಟಾವನ್ನು ಕಳವು ಮಾಡುವ ವಿಚಾರವು ಕೇವಲ ಆನ್ ಲೈನ್ ಬ್ಯೂಸಿನೆಸ್ ನಲ್ಲಿ ಹಣವನ್ನು ಮಾತ್ರ ನಷ್ಟಗೊಳಿಸುತ್ತಿಲ್ಲ ಬದಲಾಗಿ ಕಂಪೆನಿಯ ಗೌರವ ಮತ್ತು ಜಾಗತಿಕ ಡಿಜಿಟಲ್ ಆರ್ಥಿಕತೆಗೆ ಹಾನಿಯನ್ನು ಉಂಟು ಮಾಡುತ್ತಿದೆ ಎಂಬುದನ್ನೂ ಕೂಡ ಪಿಡಬ್ಲ್ಯೂಸಿ ತನ್ನ ವರದಿಯಲ್ಲಿ ಹೇಳಿದೆ.
ಇನ್ನು ಮುಂದೆ ಕೇವಲ ಬ್ಯಾಂಕ್ ಗಳಲ್ಲಿ ಮಾತ್ರ ನಿಮ್ಮ ವ್ಯವಹಾರದ ಶಿಸ್ತು ಇರುವುದಲ್ಲ ಬದಲಾಗಿ ಆನ್ ಲೈನ್ ವ್ಯವಹಾರದಲ್ಲೂ ನಿಮ್ಮ ಬದ್ಧತೆಯನ್ನು ತೋರಿಸಬೇಕಾಗುತ್ತದೆ. ಸರಿಯಾದ ವ್ಯವಹಾರಿಕ ಶಿಸ್ತನ್ನು ಆನ್ ಲೈನ್ ವ್ಯಾಪಾರದಲ್ಲಿ ಯಾವುದೇ ಒಬ್ಬ ವ್ಯಕ್ತಿ ಇಟ್ಟುಕೊಂಡಿಲ್ಲ ಎಂದರೆ ಅದು ಆತನ ಪ್ರೊಫೈಲ್ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದು ಆನ್ ಲೈನ್ ಕಂಪೆನಿಗಳಿಗೆ ತಿಳಿಯುತ್ತದೆ.
ನಿಮ್ಮ ಆನ್ ಲೈನ್ ನಡವಳಿಕೆ ಮತ್ತು ತಿಳುವಳಿಕೆಯ ಆಧಾರದ ಮೇಲೆ ಶೇರುಗಳನ್ನು ಉತ್ತಮಗೊಳಿಸುವುದು ಮತ್ತು ನಿರ್ವಹಣೆ ಮಾಡುವುದು ಜೊತೆಗೆ ವ್ಯಕ್ತಿಗೆ ಲಭ್ಯತೆಯ ಬಗ್ಗೆ ತಿಳಿಸುವುದು ನಡೆಯಲಿದೆ. 2017 ರಲ್ಲಿ ಪೋನ್ಮನ್ ಇನ್ಸಿಟ್ಯೂಟ್ ನಡೆಸಿದ ಅಧ್ಯಯನದ ಪ್ರಕಾರ, ಭಾರತವು ಅತೀ ಹೆಚ್ಚು ಉಲ್ಲಂಘಿಸಿದ ದಾಖಲೆಗಳನ್ನು 33,167 (ವಿಶ್ವದ ಸರಾಸರಿ = 24,089) ನಲ್ಲಿ ದಾಖಲಿಸಿದೆ.
ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್ ಕಂಪೆನಿಗಳಿಂದ ಡಾಟಾ ಗಳನ್ನು ಉಲ್ಲಂಘನೆಗೊಳಿಸಿರುವುದು ಮತ್ತು ಗ್ರಾಹಕರ ಮಾಹಿತಿಯನ್ನು ತಪ್ಪಾಗಿ ಬಳಕೆ ಮಾಡುವುದು, ಒಟ್ಟಾರೆ ಆನ್ ಲೈನ್ ಬ್ಯೂಸಿನೆಸ್ ಗಳಲ್ಲಿ ಮೋಸದ ಜಾಲವು ಪತ್ತೆಯಾಗುತ್ತಿರುವುದರಿಂದಾಗಿ ಮತ್ತು ಅದರ ಬಗ್ಗೆ ಹೆಚ್ಚು ದೂರುಗಳು ಬರುತ್ತಿರುವುದರಿಂದಾಗಿ , ಅತೀ ಹೆಚ್ಚಿನ ಭದ್ರತಾ ನಿರ್ವಹಣೆಯ ಅಗತ್ಯತೆ ಇದೆ ಎಂದು ಪಿಡಬ್ಲ್ಯೂಸಿ ಭಾರತದ ಪಾಲುದಾರರಾಗಿರುವ ಸಂದೀಪ್ ಲಾಡಾ ತಿಳಿಸಿದ್ದಾರೆ.
ಆನ್ ಲೈನ್ ಗ್ರಾಹಕರ ಜೊತೆಗೆ ವ್ಯಾಪಾರಿಗಳ ಸಂವಹನವು ಹೆಚ್ಚಾಗಿ ಫೋನ್ ಮತ್ತು ಇ-ಮೇಲ್ ಗಳ ಮೂಲಕವೇ ನಡೆಯುತ್ತದೆ ಮತ್ತು ಗ್ರಾಹಕರ ಬ್ಯಾಕಿಂಗ್ ಮಾಹಿತಿ ಮತ್ತು ವಯಕ್ತಿಕ ಡಾಟಾಗಳು ಕೂಡ ಇ-ವಾಣಿಜ್ಯ ಸೈಟ್ ಗಳಲ್ಲಿ ಲಭ್ಯವಿರುತ್ತದೆ ಹಾಗಾಗಿ ಅವುಗಳು ಸೈಬರ್ ದಾಳಿಗೆ ತುತ್ತಾಗುವ ಸಂಭವನೀಯತೆ ಹೆಚ್ಚಿದೆ.
ಕೃತಕ ಬುದ್ಧಿಮತ್ತೆ ಆಧಾರಿತ ವಾಯ್ಸ್ ಬೇಸ್ ಆಗಿರುವ ಶಾಪಿಂಗ್ ದೇಶೀಯ ಭಾಷೆಯಲ್ಲಿ ಗ್ರಾಹಕರ ಜೊತೆಗಿನ ಸಂಬಂಧವನ್ನು ಹೆಚ್ಚಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯುತ್ತದೆ ಅಷ್ಟೇ ಅಲ್ಲ ಬ್ಲಾಕ್ ಚೈನ್ ತಂತ್ರಜ್ಞಾನದ ಮುಖಾಂತರ ವಂಚನೆಯನ್ನು ಪತ್ತೆ ಹಚ್ಚುವಿಕೆ ಮತ್ತು ಸುರಕ್ಷಿತ ಪಾವತಿಗೆ ಅನುವು ಮಾಡಿಕೊಡಲು ಹಲವು ಮಜಲುಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಲ್ಲಿ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಗಳು ಮುಂದಾಗಿದೆ. ಒಟ್ಟಾರೆ, ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಶಾಪಿಂಗ್ ವಿಚಾರದಲ್ಲಿ ಇನ್ನೂ ಹಲವು ರೀತಿಯಲ್ಲಿ ಸಹಾಯಕ್ಕೆ ಬರುತ್ತದೆ ಮತ್ತು ಭದ್ರತೆಯನ್ನು ನೀಡಿ ವಂಚನೆಗೆ ಕಡಿವಾಟ ಹಾಕಲು ಮುಂದಾಗಲಿದೆ.