ಜಿಯೋ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಬಂಪರ್..! 2 ತಿಂಗಳು ಡೇಟಾ ಉಚಿತ..!
ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಈ ವರ್ಷದ ಮೇ ತಿಂಗಳಲ್ಲಿ ಪೋಸ್ಟ್ ಪೇಯ್ಡ್ ಸೇವೆಯನ್ನು ಆರಂಭಿಸಿದೆ. ಈಗ ತನ್ನ ಪೋಸ್ಟ್ ಪೇಯ್ಡ್ ಚಂದಾದಾರರಿಗೆ ಕ್ಯಾಷ್ ಬ್ಯಾಕ್ ಸೌಲಭ್ಯ ಓದಗಿಸುವ ನಿಟ್ಟಿನಲ್ಲಿ ಜಿಯೋ ಸಂಸ್ಥೆ ಐಸಿಐಸಿಐ ಬ್ಯಾಂಕ್ ನೊಂದಿಗೆ ಕೈಜೋಡಿಸಿದೆ.
ಇದರ ಅನ್ವಯ ರಿಲಯನ್ಸ್ ಜಿಯೋ ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಒಂದು ಆಫರ್ ಇದ್ದು, ಯಾರು ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಸಿ ತಮ್ಮ ಪೋಸ್ಟ್ ಪೇಡ್ ಬಿಲ್ಲಿನ ವಾರ್ಷಿಕ ಪಾವತಿಯನ್ನು ಮೊದಲೇ ಮಾಡುತ್ತಾರೋ ಅವರಿಗೆ ಬಿಲ್ಲಿನ ಓಟ್ಟು ಮೌಲ್ಯದಲ್ಲಿ ಎರಡು ತಿಂಗಳ ಮೊತ್ತವನ್ನು ಕ್ಯಾಷ್ ಬ್ಯಾಕ್ ರೂಪದಲ್ಲಿ ನೀಡಲಾಗುತ್ತದೆ.

ಈ ಆಫರ್ ನ ಅನುಸಾರ ಒಂದು ತಿಂಗಳ ಕ್ಯಾಷ್ ಬ್ಯಾಕ್ ಮೊತ್ತವು ಬಿಲ್ ಪಾವತಿ ಮಾಡಿದ 6 ತಿಂಗಳಿಗೂ ಹಾಗೂ ಇನ್ನೊಂದು ತಿಂಗಳ ಮೊತ್ತವು ನಂತರದ 6 ತಿಂಗಳಲ್ಲೂ ಕ್ಯಾಷ್ ಬ್ಯಾಕ್ ರೂಪದಲ್ಲಿ ನಿಮ್ಮ ಅಕೌಂಟಿಗೆ ಮರುಪಾವತಿ ಆಗಲಿದೆ.
ರಿಲಯನ್ಸ್ ಜಿಯೋ ಚಂದಾದಾರರು ಆರು ತಿಂಗಳ ಬಿಲ್ ಪಾವತಿ ಮಾಡಿದರೆ ಬ್ಯಾಂಕ್ ನವರು ನಿಮಗೆ ಅದೇ ಮೊತ್ತವನ್ನು ಏಳನೇ ತಿಂಗಳಲ್ಲಿ ರಿಯಾಯಿತಿ ರೂಪದಲ್ಲಿ ನೀಡುತ್ತಾರೆ. ಅಂದರೆ ಬಳಕೆದಾರರು 7 ನೇ ತಿಂಗಳ ಬಿಲ್ ಪಾವತಿ ಮಾಡುವ ಅಗತ್ಯವಿಲ್ಲ. ಅಷ್ಟೇ ಅಲ್ಲ ಅದೇ 12 ತಿಂಗಳಿಗೆ ಐಸಿಐಸಿಐ ಬ್ಯಾಂಕ್ ನವರು ಆ ಮೊತ್ತವನ್ನು ನಿಮ್ಮ ಐಸಿಐಸಿಐ ಖಾತೆಯ ಕ್ರೆಡಿಟ್ ಕಾರ್ಡ್ ಗೆ ಮರುಪಾವತಿ ಮಾಡಲಿದ್ದಾರೆ.
ಈ ಕ್ಯಾಷ್ ಬ್ಯಾಕ್ ಆಫರ್ ಪಡೆಯಲು ರಿಲಯನ್ಸ್ ಜಿಯೋ ಬಳಕೆದಾರರು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಆಟೋ ಪೇ ಆಯ್ಕೆಗೆ ಸೈನ್ ಅಪ್ ಆಗಬೇಕು.ಅಂದರೆ ಟೆಲಿಕಾಂ ಆಪರೇಟರ್ ನಿಮ್ಮ ಕ್ರೆಡಿಟ್ ಕಾರ್ಡ್ ನಿಂದ ಸ್ವಯಂಚಾಲಿತವಾಗಿ ಹಣವನ್ನು ಪ್ರತಿ ತಿಂಗಳು ವಿತ್ ಡ್ರಾ ಮಾಡಿಕೊಳ್ಳುತ್ತಾರೆ.
ಇದಕ್ಕಾಗಿ ಬಳಕೆದಾರರು ತಮ್ಮ ಮೈಜಿಯೋ ಆಪ್ ಗೆ ತೆರಳಬೇಕು ಮತ್ತು ಜಿಯೋ ಪೇಯನ್ನು ಆಯ್ಕೆ ಮಾಡಬೇಕು.ಸ್ಕ್ರೀನಿನ ಎಡಭಾಗದಲ್ಲಿ ಮೆನುವಿನಲ್ಲಿ ಸ್ಲೈಡ್ ಮಾಡಿದರೆ ಈ ಆಯ್ಕೆಯನ್ನು ಬಳಕೆದಾರರು ಗಮನಿಸಬಹುದು.

ಜಿಯೋ ಪೇ ಆಯ್ಕೆಯನ್ನು ಬಳಕೆದಾರರು ಟ್ಯಾಪ್ ಮಾಡಿದ ಕೂಡಲೇ ಅದು ಪಾವತಿ ವಿವರವನ್ನು ಕೇಳುತ್ತದೆ. ಅಲ್ಲಿ ಬಳಕೆದಾರರು ಜಿಯೋ ಆಟೋಪೇ ಆಯ್ಕೆಯನ್ನು ಅವರು ಸೆಲೆಕ್ಟ್ ಮಾಡಬೇಕು.ಪಾವತಿ ಆಯ್ಕೆಯನ್ನು ಅವರು ಕ್ರೆಡಿಟ್ ಕಾರ್ಡ್ ಎಂದು ಸೆಲೆಕ್ಟ್ ಮಾಡಿದ ನಂತರ ಆಟೋ ಪೇಮೆಂಟ್ ಅದರ ಎರಡನೇ ಹಂತವಾಗಿರುತ್ತದೆ. ಒಮ್ಮೆ ಈ ಪ್ರೊಸೆಸ್ ಮುಗಿದ ನಂತರ ಆಪ್ ನಿಮಗೆ ಯಶಸ್ವಿಯಾಗಿ ಆಟೋ ಪೇ ಆಯ್ಕೆಯನ್ನು ಕನ್ಫರ್ಮೇಷನ್ ಮಾಡಿರುವ ಮಾಹಿತಿ ನೀಡುತ್ತದೆ.
ರಿಲಯನ್ಸ್ ಜಿಯೋದ ಪೋಸ್ಟ್ ಪೇಯ್ಡ್ ಪ್ಲಾನ್ ಗಳು ರುಪಾಯಿ ಪ್ರತಿ ತಿಂಗಳಿಗೆ 199 ರುಪಾಯಿಯಿಂದ ಪ್ರಾರಂಭವಾಗುತ್ತೆ. ಇದರಲ್ಲಿ ಅನ್ ಲಿಮಿಡೆಟ್ ವಾಯ್ಸ್ ಕಾಲ್, 25ಜಿಬಿ ಡಾಟಾ ಮತ್ತು 100ಎಸ್ಎಂಎಸ್ ಗಳು ಪ್ರತಿ ದಿನ ಉಚಿತವಾಗಿ ಇರುತ್ತದೆ. ಒಂದು ವೇಳೆ ಡಾಟಾ ಲಿಮಿಟ್ ಇದಕ್ಕಿಂತ ಹೆಚ್ಚಾಗಿ ಬಳಕೆದಾರರು ಬಳಸಿದರೆ ಆಗ ಒಂದು ಜಿಬಿಗೆ 20 ರುಪಾಯಿ ಚಾರ್ಜ್ ಮಾಡಲಾಗುತ್ತದೆ.


Click it and Unblock the Notifications








