EPFO:ಮಿಸ್ಡ್‌ ಕಾಲ್‌ ಮೂಲಕ ನಿಮ್ಮ ಪಿಎಫ್‌ ಬ್ಯಾಲೆನ್ಸ್‌ ಪರಿಶೀಲಿಸಲು ಹೀಗೆ ಮಾಡಿ!

|

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳ ಪಾಲಿಗೆ ಕಷ್ಟಕಾಲದಲ್ಲಿ ಆರ್ಥಿಕ ನೆರವು ನೀಡುವ ನಿಧಿಯಾಗಿದೆ. ಇದೇ ಕಾರಣಕ್ಕೆ ಉದ್ಯೋಗಿಗಳು ತಾವು ದುಡಿಯುವ ಹಣದಲ್ಲಿ ಇಂತಿಷ್ಟು ಹಣವನ್ನು ಪಿಎಫ್‌ ರೂಪದಲ್ಲಿ ಜಮೆ ಮಾಡುತ್ತಾರೆ. ಸದ್ಯ ಇದೀಗ EPFO ತನ್ನ ಚಂದಾದಾರರಿಗೆ ಸೋಮವಾರ 21.38 ಕೋಟಿ ಪಿಎಫ್ ಖಾತೆಗಳಿಗೆ ಹಣಕಾಸು ವರ್ಷ 2020-21ರಲ್ಲಿ ಶೇಕಡಾ 8.50 ಬಡ್ಡಿಯೊಂದಿಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ. ಈ ಮಾಹಿತಿಯನ್ನು EPFO ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಶೇರ್‌ ಮಾಡಿದೆ.

EPFO

ಹೌದು, EPFO ತನ್ನ ಚಂದಾದಾರರ ಖಾತೆಗಳಿಗೆ ಬಡ್ಡಿ ಹಣವನ್ನು ಜಮಾ ಮಾಡಿದೆ. ನವೆಂಬರ್ ತಿಂಗಳ ಆರಂಭದಲ್ಲಿ ಚಂದಾದಾರರ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು ಎಂದು ಹೇಳಲಾಗಿದೆ. ಸದ್ಯ ಈಗಾಗಲೇ ಹಲವಾರು ಪಿಎಫ್ ಖಾತೆಗಳು ಬಡ್ಡಿಯನ್ನು ಪಡೆದಿವೆ ಎನ್ನಲಾಗಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಮಾರ್ಚ್ 2021 ರಲ್ಲಿ, 2020-21 ರ ಆರ್ಥಿಕ ವರ್ಷಕ್ಕೆ ಸದಸ್ಯರ ಖಾತೆಗಳಲ್ಲಿ ನೌಕರರ ಭವಿಷ್ಯ ನಿಧಿ ಸಂಗ್ರಹಣೆಗಳ ಮೇಲೆ 8.50% ವಾರ್ಷಿಕ ಬಡ್ಡಿಯನ್ನು ಜಮಾ ಮಾಡಲಾಗುವುದು ಎಂದು ಈಗಾಗಲೇ ಘೋಷಿಸಿತ್ತು ಅನ್ನೊದು ಗಮನಿಸಬೇಕಾದ ವಿಚಾರ. ಹಾಗಾದ್ರೆ ಪಿಎಫ್‌ ಬ್ಯಾಲೆನ್ಸ್‌ ಅನ್ನು ಪರಿಶೀಲಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

EPFO

ಹಣಕಾಸು ವರ್ಷ 2014 ರಿಂದ EPFO ​​ಸ್ಥಿರವಾಗಿ 8.50%ಕ್ಕಿಂತ ಕಡಿಮೆಯಿಲ್ಲದ ಆದಾಯವನ್ನು ನಿಡುತ್ತಲೇ ಬಂದಿದೆ. ಹೆಚ್ಚಿನ EPF ಬಡ್ಡಿ ದರವು ಕಾಂಪೌಂಡಿಂಗ್ ಜೊತೆಗೆ ಚಂದಾದಾರರ ಲಾಭಗಳಿಗೆ ಗಮನಾರ್ಹ ವ್ಯತ್ಯಾಸವನ್ನು ಮಾಡುತ್ತದೆ. ಈ ಮೊತ್ತವನ್ನು ಸ್ವೀಕರಿಸಿದ ಜನರು ತಮ್ಮ ಇಪಿಎಫ್ ಖಾತೆಯನ್ನು ಪ್ರವೇಶಿಸುವ ಮೂಲಕ ಅದನ್ನು ಪರಿಶೀಲಿಸಬಹುದಾಗಿದೆ. ಇದಕ್ಕಾಗಿ ನೀವು UMANG ಅಪ್ಲಿಕೇಶನ್, SMS, ಮಿಸ್ಡ್ ಕಾಲ್ ಮತ್ತು EPFO ​​ನ ಅಧಿಕೃತ ವೆಬ್‌ಸೈಟ್‌ ಮೂಲಕ ನಿಮ್ಮ PF ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ನೀವು ನಿಮ್ಮ ಪಿಎಫ್‌ ಖಾತೆಗೆ ಬಡ್ಡಿ ಜಮಾ ಆಗಿದೆಯಾ ಇಲ್ಲವಾ ಅನ್ನೊದನ್ನ ಬ್ಯಾಲೆನ್ಸ್‌ ಚೆಕ್‌ ಮಾಡುವುದರ ಮೂಲಕ ತಿಳಿಯಲು ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಎಸ್ಎಂಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ

ಎಸ್ಎಂಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ

EPFOನಲ್ಲಿ ನಿಮ್ಮ ಪಿಎಫ್ ಬ್ಯಾಲೆನ್ಸ್‌ ಪರಿಶೀಲಿಸಲು UAN ನಲ್ಲಿ ನೋಂದಾಯಿಸಿದ ನಿಮ್ಮ ಮೊಬೈಲ್ ಸಂಖ್ಯೆಯ ಮೂಲಕ 7738299899 ಸಂಖ್ಯೆಗೆ 'EPFOHO UAN ENG' ಎಂಬ ಸಂದೇಶ ಕಳುಹಿಸಬೇಕಾಗುತ್ತದೆ. ಈ ಸಂದೇಶವನ್ನು ಕಳುಹಿಸುವ ಮೂಲಕ ನಿಮ್ಮ PF ಬ್ಯಾಲೆನ್ಸ್ ಚೆಕ್‌ ಅನ್ನು ಪರಿಶೀಲಿಸಬಹುದಾಗಿದೆ. ಈ ಸಂದೇಶವನ್ನು ಕಳುಹಿಸವಾಗ ಕಾಣುವ ಕೊನೆಯ ಮೂರು ಸಂಖ್ಯೆಗಳು ನೀವು ಬಯಸುವ ಭಾಷೆಯನ್ನು ಪ್ರತಿನಿಧಿಸುತ್ತದೆ ಅನ್ನೊದು ಇಂಟ್ರೆಸ್ಟಿಂಗ್‌ ವಿಚಾರ.

ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ

ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ

EPFO ಖಾತೆಯಲ್ಲಿ ನೋಂದಾಯಿತ ಬಳಕೆದಾರರು ತಮ್ಮ ಯುಎಎನ್ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ತಮ್ಮ ಪಿಎಫ್‌ ಖಾತೆಯ ಬ್ಯಾಲೆನ್ಸ್‌ ಚೆಕ್‌ ಮಾಡಬಹುದು. ನಿಮ್ಮ ಯುಎಎನ್ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ನಂಬರ್‌ಗೆ ಸಂದೇಶ ಕಳುಹಿಸಿದರೆ ಪಿಎಫ್ ಖಾತೆಯ ಬಾಕಿ ವಿವರಗಳೊಂದಿಗೆ ಎಸ್‌ಎಂಎಸ್ ಸ್ವೀಕರಿಸಲಿದ್ದಾರೆ.

UMANG ಅಪ್ಲಿಕೇಶನ್ ಮೂಲಕ PF ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ

UMANG ಅಪ್ಲಿಕೇಶನ್ ಮೂಲಕ PF ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ

ಇನ್ನು ನೀವು UMANG ಅಪ್ಲಿಕೇಶನ್ ಮೂಲಕ ಕೂಡ ನಿಮ್ಮ PF ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದಾಗಿದೆ. ಇದಕ್ಕಾಗಿ ನೀವು ಮೊದಲು ಉಮಾಂಗ್‌ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ನಂತರ PF ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ನಿಮ್ಮ UAN ಮತ್ತು OTP (ಒಂದು-ಬಾರಿಯ ಪಾಸ್‌ವರ್ಡ್) ಅನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಬೇಕು. ಹೀಗೆ ಮಾಡುವ ಮೂಲಕ ನಿಮ್ಮ EPFOನಲ್ಲಿರುವ ಬ್ಯಾಲೆನ್ಸ್‌ ಅನ್ನು ಚೆಕ್‌ ಮಾಡಬಹುದಾಗಿದೆ.

EPFO ವೆಬ್‌ಸೈಟ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಿ

EPFO ವೆಬ್‌ಸೈಟ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಿ

ಹಂತ:1 ಮೊದಲಿಗೆ ನೀವು EPFO ​​ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ:2 ನಂತರ ವೆಬ್‌ಸೈಟ್‌ನಲ್ಲಿ ಕಾಣುವ 'ನಮ್ಮ ಸೇವೆಗಳು' ಟ್ಯಾಬ್ ಅನ್ನು ಆಯ್ಕೆ ಮಾಡಿ ಮತ್ತು 'ಉದ್ಯೋಗಿಗಳಿಗಾಗಿ' ಕ್ಲಿಕ್ ಮಾಡಿ.
ಹಂತ:3 'ಮೆಂಬರ್ ಪಾಸ್‌ಬುಕ್' ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ UAN ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
ಹಂತ:4 ನಂತರ ನಿಮ್ಮ ಪಾಸ್‌ಬುಕ್‌ ತೆರೆಯಲಿದೆ.

ಆನ್‌ಲೈನ್‌ ಮೂಲಕ ಪಿಎಫ್‌ ಹಣವನ್ನು ಹಿಂಪಡೆಯುವುದು ಹೇಗೆ?

ಆನ್‌ಲೈನ್‌ ಮೂಲಕ ಪಿಎಫ್‌ ಹಣವನ್ನು ಹಿಂಪಡೆಯುವುದು ಹೇಗೆ?

ಹಂತ:1 ಯುಎಎನ್ ಮೆಂಬರ್‌ ಇ-ಸೇವಾ ಪೋರ್ಟಲ್‌ಗೆ ಭೇಟಿ ನೀಡಿ.
ಹಂತ:2 ನಿಮ್ಮ ಯುನಿವರ್ಸಲ್ ಅಕೌಂಟ್ ಸಂಖ್ಯೆ (ಯುಎಎನ್) ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ಕ್ಯಾಪ್ಚಾವನ್ನು ನಮೂದಿಸಿ. ತದನಂತರ, ಸೈನ್ ಇನ್ ಬಟನ್ ಕ್ಲಿಕ್ ಮಾಡಿ. ಹಂತ:3 ಈಗ, ಮೇಲಿನ ಮೆನುವಿನಿಂದ ಆನ್‌ಲೈನ್ ಸೇವೆಗಳ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ CLAIM (FORM-31,19,10C & 10D) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:4 ಆನ್‌ಲೈನ್ ಕ್ಲೈಮ್ ಫಾರ್ಮ್‌ನಲ್ಲಿ ಕಂಡುಬರುವ ವಿವರಗಳನ್ನು ಪರಿಶೀಲಿಸಿ.
ಹಂತ:5 ಪರಿಶೀಲಿಸಿದ ನಂತರ, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ.
ಹಂತ:6 ಪರಿಶೀಲನೆ ಬಟನ್ ಕ್ಲಿಕ್ ಮಾಡಿ ಮತ್ತು ನಂತರ ಪ್ರಮಾಣಪತ್ರದಲ್ಲಿ ಲಭ್ಯವಿರುವ Yes ಬಟನ್ ಕ್ಲಿಕ್ ಮಾಡಿ.
ಹಂತ:7 Proceed for Online claim ಕ್ಲಿಕ್ ಮಾಡುವ ಮೂಲಕ ಕ್ಲೈಮ್‌ನೊಂದಿಗೆ ಮುಂದುವರಿಯಲು ನಿಮ್ಮನ್ನು ಈಗ ಕೇಳಲಾಗುತ್ತದೆ.
ಹಂತ:8 ನೀವು ಸುಧಾರಿತ ಪಿಎಫ್ ಹಿಂಪಡೆಯಲು ಅರ್ಜಿ ಸಲ್ಲಿಸುತ್ತಿದ್ದೀರಾ ಎಂದು ಕ್ಲೈಮ್ ಫಾರ್ಮ್ ಈಗ ನಮೂದಿಸಬೇಕಾಗುತ್ತದೆ. ಯಾವ ಅಗತ್ಯಕ್ಕಾಗಿ ನೀವು ಪಿಎಫ್‌ ಕ್ಲೇಮ್ ಮಾಡುತ್ತೀದ್ದಿರಾ ಅನ್ನೊದನ್ನ ನಮೂದಿಸಲು ಲಭ್ಯವಿರುವ ಉದ್ದೇಶಗಳಿಂದ ಆಯ್ಕೆ ಮಾಡಲು 'ಯಾವ ಉದ್ದೇಶಕ್ಕಾಗಿ ಮುಂಗಡ ಅಗತ್ಯವಿದೆ' ಎಂಬ ಶೀರ್ಷಿಕೆಯ ಡ್ರಾಪ್-ಡೌನ್ ಮೆನುವನ್ನು ಇದು ತೋರಿಸುತ್ತದೆ.
ಹಂತ:9 ಕೆಳಗಿನ ಪಠ್ಯ ಪೆಟ್ಟಿಗೆಯಲ್ಲಿ ಅಗತ್ಯವಿರುವ ಮೊತ್ತವನ್ನು ನಮೂದಿಸಿ ಮತ್ತು ನಂತರ ನೌಕರರ ವಿಳಾಸ ವಿಭಾಗದಲ್ಲಿ ನಿಮ್ಮ ಮೇಲಿಂಗ್ ವಿಳಾಸವನ್ನು ನಮೂದಿಸಿ.

Best Mobiles in India

Read more about:
English summary
EPFO members can check their Provident Fund balance via UMANG App SMS, missed call, or official website.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X