ವಾಟ್ಸಾಪ್‌ನಲ್ಲಿ ಬ್ರಾಡ್‌ಕಾಸ್ಟ್‌ ಫೀಚರ್ಸ್‌ ಅನ್ನು ಬಳಸುವುದು ಹೇಗೆ?

|

ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಾಟ್ಸಾಪ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಪ್ರಪಂಚದಾದ್ಯಂತದ ಬಳಕೆದಾರರೊಂದಿಗೆ ಸಂಪರ್ಕ ಸಾಧಿಸಲು ನಮಗೆ ಅನುಮತಿಸುತ್ತದೆ. ಅಲ್ಲದೆ ವಾಟ್ಸಾಪ್‌ ಮೂಲಕ ನೀವು ಇಮೇಜ್‌, ವೀಡಿಯೋಸ್‌ ಮತ್ತು ಆಡಿಯೋಕ್ಲಿಪ್‌ಗಳನ್ನು ಶೇರ್‌ ಮಾಡಲು ಅವಕಾಶ ನೀಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಆಕರ್ಷಕ ಫೀಚರ್ಸ್‌ಗಳ ಮೂಲಕ ಬಳಕೆದಾರರ ನೆಚ್ಚಿನ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ವಾಟ್ಸಾಪ್‌ ಮೂಲಕ ವೀಡಿಯೋ ಕಾಲ್‌, ವಾಯ್ಸ್‌ ಕಾಲ್‌ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಬಹುದಾಗಿದೆ. ಅಲ್ಲದೆ ನಿಮ್ಮ ಕಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವ ಎಲ್ಲ ಜನರಿಗೂ ಎಕಕಾಲದಲ್ಲಿ ಸಂದೇಶವನ್ನು ಕಳುಹಿಸಲು ಬಯಸಿದರೆ ಅದಕ್ಕೂ ಕೂಡ ಅವಕಾಶವಿದೆ. ಇದಕ್ಕಾಗಿ ನೀವು ವಾಟ್ಸಾಪ್‌ನಲ್ಲಿ ಬ್ರಾಡ್‌ಕಾಸ್ಟ್‌ ಲಿಸ್ಟ್‌ ಕ್ರಿಯೆಟ್‌ ಮಾಡಬೇಕಾಗುತ್ತದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಬ್ರಾಡ್‌ಕಾಸ್ಟ್‌ ಲಿಸ್ಟ್‌ ಅನ್ನು ಕ್ರಿಯೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್‌ ಬ್ರಾಡ್‌ಕಾಸ್ಟ್‌ ಲಿಸ್ಟ್‌ ಅನ್ನು ಕ್ರಿಯೆಟ್‌ ಮಾಡುವುದು ಹೇಗೆ?

ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್‌ ಬ್ರಾಡ್‌ಕಾಸ್ಟ್‌ ಲಿಸ್ಟ್‌ ಅನ್ನು ಕ್ರಿಯೆಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಡಿವೈಸ್‌ನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನಂತರ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಡಾಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
ಹಂತ:3 ಇದರಲ್ಲಿ 'ನ್ಯೂ ಬ್ರಾಡ್‌ಕಾಸ್ಟ್‌ ಆಯ್ಕೆ' ಮೇಲೆ ಟ್ಯಾಪ್ ಮಾಡಿ
ಹಂತ:4 ನಂತರ ನಿಮ್ಮ ಬ್ರಾಡ್‌ಕಾಸ್‌ಟ್‌ ಲಿಸ್ಟ್‌ಗೆ ನೀವು ಸೇರಿಸಲು ಬಯಸುವ ಸಂಪರ್ಕಗಳನ್ನು ಆಯ್ಕೆಮಾಡಿ
ಹಂತ:5 ಇಲ್ಲಿ ನಿಮ್ಮಕಂಟ್ಯಾಕ್ಟ್‌ಗಳನ್ನು ಸೇರಿಸಲು ಟಿಕ್ ಮಾರ್ಕ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ
ಹಂತ:6 ಬ್ರಾಡ್‌ಕಾಸ್ಟ್‌ ಲಿಸ್ಟ್‌ ಅನ್ನು ಕ್ರಿಯೆಟ್‌ ಮಾಡಿದ ನಂತರ, ನೀವು ಈಗ ಬ್ರಾಡ್‌ಕಾಸ್ಟ್‌ ಲಿಸ್ಟ್‌ನಲ್ಲಿ ಸಂದೇಶವನ್ನು ಕಳುಹಿಸಬಹುದು.

ಬ್ರಾಡ್‌ಕಾಸ್ಟ್‌

ಬ್ರಾಡ್‌ಕಾಸ್ಟ್‌ ಲಿಸ್ಟ್‌ಗೆ ಸಂದೇಶವನ್ನು ಕಳುಹಿಸುವಾಗ, ನಿಮ್ಮ ಸಂಖ್ಯೆಯನ್ನು ಅವರ ಸಂಪರ್ಕ ಪಟ್ಟಿಯಲ್ಲಿ ಸೇವ್‌ ಲಿಸ್ಟ್‌ನಲ್ಲಿರುವ ಎಲ್ಲಾ ಸ್ವೀಕೃತದಾರರಿಗೆ ಕಳುಹಿಸಲಾಗುತ್ತದೆ. ಯಾರಾದರೂ ಸಂಖ್ಯೆಯನ್ನು ಸೇವ್‌ ಮಾಡದಿದ್ದರೆ, ಅವರು ಬ್ರಾಡ್‌ಕಾಸ್ಟ್‌ ಮೆಸೇಜ್‌ ಅನ್ನು ಸ್ವೀಕರಿಸುವುದಿಲ್ಲ. ಬಳಕೆದಾರರು ಸಾಮಾನ್ಯ ವಾಟ್ಸಾಪ್‌ ಸಂದೇಶದಂತೆ ಸಂದೇಶವನ್ನು ಸ್ವೀಕರಿಸುತ್ತಾರೆ. ಇನ್ನು ನೀವು ರಚಿಸಬಹುದಾದ ಬ್ರಾಡ್‌ಕಾಸ್ಟ್ ಲಿಸ್ಟ್‌ ಸಂಖ್ಯೆಯಲ್ಲಿ ಯಾವುದೇ ಮಿತಿಯಿಲ್ಲ. ಪ್ರತಿ ಬ್ರಾಡ್‌ಕಾಸ್ಟ್ ಲಿಸ್ಟ್‌ನಲ್ಲಿ 256 ಸಂಪರ್ಕಗಳನ್ನು ಆಯ್ಕೆ ಮಾಡಲು ವಾಟ್ಸಾಪ್‌ ತನ್ನ ಬಳಕೆದಾರರಿಗೆ ಅವಕಾಶ ನೀಡಲಿದೆ.

ಬ್ರಾಡ್‌ಕಾಸ್ಟ್‌ ಲಿಸ್ಟ್‌ ಅನ್ನು ಎಡಿಟ್‌ ಮಾಡುವುದು ಹೇಗೆ?

ಬ್ರಾಡ್‌ಕಾಸ್ಟ್‌ ಲಿಸ್ಟ್‌ ಅನ್ನು ಎಡಿಟ್‌ ಮಾಡುವುದು ಹೇಗೆ?

ಹಂತ:1 ನೀವು ಎಡಿಟ್‌ ಮಾಡಲು ಬಯಸುವ ಬ್ರಾಡ್‌ಕಾಸ್ಟ್‌ ಲಿಸ್ಟ್‌ ಮೇಲೆ ಟ್ಯಾಪ್ ಮಾಡಿ.
ಹಂತ:2 ನಿಮ್ಮ ಬ್ರಾಡ್‌ಕಾಸ್ಟ್‌ ಲಿಸ್ಟ್‌ ಸ್ಕ್ರೀನ್‌ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಡಾಟ್ ಮೆನುವಿನಲ್ಲಿ ಟ್ಯಾಪ್ ಮಾಡಿ.
ಹಂತ:3 ಬ್ರಾಡ್‌ಕಾಸ್ಟ್ ಲಿಸ್ಟ್ ಮಾಹಿತಿ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಬ್ರಾಡ್‌ಕಾಸ್ಟ್ ಪಟ್ಟಿ ಮಾಹಿತಿ ಸ್ಕ್ರೀನ್‌ನಲ್ಲಿ ನಿಮ್ಮ ಬ್ರಾಡ್‌ಕಾಸ್ಟ್‌ ಲಿಸ್ಟ್‌ ಹೆಸರನ್ನು ಬದಲಾಯಿಸಲು, ಹೆಚ್ಚು ಸ್ವೀಕರಿಸುವವರನ್ನು ಸೇರಿಸಲು ಮತ್ತು ಸ್ವೀಕರಿಸುವವರನ್ನು ತೆಗೆದುಹಾಕಲು ನಿಮಗೆ ಸಾಧ್ಯವಾಗುತ್ತದೆ.

Best Mobiles in India

English summary
Here's How to create a broadcast list on WhatsApp for Android.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X