ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?
ಮೆಟಾ ಒಡೆತನದ ಇನ್‌ಸ್ಟಾಗ್ರಾಮ್ ಇನ್‌ಸ್ಟಾಗ್ರಾಮ್ ಜನಪ್ರಿಯ ಸೊಶೀಯಲ್ ಮೀಡಿಯಾ ಅಪ್ಲಿಕೇಶನ್ ಎನಿಸಿಕೊಂಡಿದೆ. ಬಳಕೆದಾರರ ನೆಚ್ಚಿನ ಫೋಟೋ ಶೇರಿಂಗ್ ಅಪ್ಲಿಕೇಶನ್ ಆಗಿ ಗುರುತಿಸಿಕೊಂಡಿದೆ. ಈಗಾಗಲೇ ಬಳಕೆದಾರರ ಅನುಕೂಲಕ್ಕಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಜಾಗತಿಕವಾಗಿ ಅತಿ ಹೆಚ್ಚು ಡೌನ್‌ಲೋಡ್ ಆಗಿರುವ ಆಪ್‌ಗಳಲ್ಲಿ ಒಂದಾಗಿರುವ ಇನ್‌ಸ್ಟಾಗ್ರಾಮ್ ತನ್ನ ರೀಲ್ಸ್, ವೀಡಿಯೊಸ್, ಲೈವ್ ವೀಡಿಯೊಸ್ ಮತ್ತು ಫೋಟೋಸ್ ಶೇರ್ ಮಾಡಲು ಅವಕಾಶ ನೀಡಿದೆ.

ಹೌದು, ಇನ್‌ಸ್ಟಾಗ್ರಾಮ್ ಬಳಕೆದಾರರ ನೆಚ್ಚಿನ ಸೊಶೀಯಲ್ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರಿಗೆ ಅನುಕೂಲವಾಗುವ ಹಲವಾರು ಫೀಚರ್ಸ್‌ಗಳಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಆದರೂ ಕೂಡ ಕೆಲವು ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್ ನಿಮಗೆ ಬೇಸರ ಎನಿಸಿ ಅದರಿಂದ ದೂರವಾಗುವ ಆಲೋಚನೆ ಬರಬಹುದು. ಇಂತಹ ಸನ್ನಿವೇಶದಲ್ಲಿ ನಿಮ್ಮ Instagram ಖಾತೆಯನ್ನು ಡಿಆಕ್ಟಿವೇಟ್ ಮಾಡಬಹುದು. ಹಾಗಾದ್ರೆ ಇನ್‌ಸ್ಟಾಗ್ರಾಮ್ ಅಕೌಂಟ್ ಅನ್ನು ನಿಷ್ಕ್ರಿಯಗೊಳಿಸಬಹುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?
ಹಂತ:1 ಮೊದಲನೆಯದಾಗಿ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ instagram.com ಗೆ ಲಾಗ್ ಇನ್ ಮಾಡಿ.
ಹಂತ:2 ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆದ ತಕ್ಷಣ ಮೇಲಿನ ಬಲಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಕ್ಲಿಕ್ ಮಾಡಿ.
ಹಂತ:3 ನಂತರ ನಿಮ್ಮ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ, ಇದರಲ್ಲಿ ಎಡಿಟ್ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ.
ಹಂತ:4 ಈಗ ಕೆಳಗೆ ಸ್ಕ್ರಾಲ್ ಮಾಡಿ, ನಂತರ ಕೆಳಗಿನ ಬಲಭಾಗದಲ್ಲಿರುವ Temporarily disable my account ಕ್ಲಿಕ್ ಮಾಡಿ.
ಹಂತ:5 ಇದರಲ್ಲಿ ನೀವು ನಿಮ್ಮ ಖಾತೆಯನ್ನು ಏಕೆ ನಿಷ್ಕ್ರಿಯಗೊಳಿಸುತ್ತಿದ್ದೀರಿ ಅನ್ನೊದನ್ನ ಡ್ರಾಪ್-ಡೌನ್ ಮೆನುವಿನ ಆಯ್ಕೆಯನ್ನು ಆರಿಸಿ?
ಹಂತ:6 ನಂತರ ನಿಮ್ಮ ಪಾಸ್‌ವರ್ಡ್ ಅನ್ನು ರಿ-ಎಂಟ್ರಿ ಮಾಡಿ. ನೀವು ಮೆನುವಿನಿಂದ ಕಾರಣವನ್ನು ಆಯ್ಕೆಮಾಡಿ ಮತ್ತು ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಿದ ನಂತರವೇ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸುವ ಆಯ್ಕೆಯು ಗೋಚರಿಸುತ್ತದೆ.
ಹಂತ:7 ಇದೆಲ್ಲವೂ ಮುಗಿದ ನಂತರ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿ ಕ್ಲಿಕ್ ಮಾಡಿ.

ನಿಮ್ಮ Instagram ಅಕೌಂಟ್ ಅನ್ನು ಡಿಲೀಟ್ ಮಾಡುವುದು ಹೇಗೆ?
ಹಂತ:1 ಮೊಬೈಲ್ ಬ್ರೌಸರ್ ಅಥವಾ ಲ್ಯಾಪ್‌ಟಾಪ್ ಮೂಲಕ ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಡಿಲೀಟ್ ಪೇಜ್‌ಗೆ ಹೋಗಿ.
ಹಂತ:2 ನಿಮ್ಮ ಅಕೌಂಟ್ ಅನ್ನು ಏಕೆ ಡಿಲೀಟ್ ಮಾಡುತ್ತಿದ್ದೀರಿ ಅನ್ನೊದನ್ನ ಮುಂದಿನ ಡ್ರಾಪ್‌ಡೌನ್ ಮೆನುವಿನಿಂದ ಆಯ್ಕೆಯನ್ನು ಆರಿಸಿ?
ಹಂತ:3 ನಂತರ ನಿಮ್ಮ ಪಾಸ್‌ವರ್ಡ್ ಅನ್ನು ಮರು-ನಮೂದಿಸಿ.
ಹಂತ:4 ಇದಾದ ನಂತರ ನಿಮ್ಮ ಅಕೌಂಟ್ ಡಿಲೀಟ್ ಕ್ಲಿಕ್ ಮಾಡಿ
ನಿಮ್ಮ ಇನ್‌ಸ್ಟಗ್ರಾಮ್ ಅಕೌಂಟ್ ಅನ್ನು ಡಿಲೀಟ್ ಮಾಡಲು ರಿಕ್ವೆಸ್ಟ್ ಕಳುಹಿಸಿದ 30 ದಿನಗಳ ನಂತರ ನಿಮ್ಮ ಅಕೌಂಟ್ ಡಿಲೀಟ್ ಆಗಲಿದೆ. ನಂತರ ನಿಮ್ಮ ಮಾಹಿತಿಯನ್ನು ಹಿಂಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಡಿಲೀಟ್ ಪ್ರಕ್ರಿಯೆ ಆರಂಭವಾದ ದಿನದಿಂದ 90 ದಿನಗಳವರೆಗೆ ತೆಗೆದುಕೊಳ್ಳಬಹುದು.

ಇನ್‌ಸ್ಟಾಗ್ರಾಮ್ ವೀಡಿಯೊಗಳನ್ನು ಡೆಸ್ಕ್‌ಟಾಪ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?
ಒಂದು ವೇಳೆ ನೀವು ನಿಮ್ಮ ಇನ್‌ಸ್ಟಾಗ್ರಾಮ್ ಅಕೌಮಟ್ ಡಿಲೀಟ್ ಮಾಡುವ ಮುನ್ನ ಅದರಲ್ಲಿರುವ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಬಯಸಿದರೆ ಅದಕ್ಕೂ ಅವಕಾಶವಿದೆ. ಇದಕ್ಕಾಗಿ ನೀವು ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳನ್ನು ಬಳಸಬಹುದು. ಈ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಲ್ಲಿ 4 ಕೆ ವಿಡಿಯೋ ಡೌನ್ಲೋಡರ್ ಸರಳ ಸೈಟ್‌ಗಳಲ್ಲಿ ಒಂದಾಗಿದೆ ಇದು ವಿಂಡೋಸ್, ಮ್ಯಾಕೋಸ್ ಅಥವಾ ಲಿನಕ್ಸ್‌ನಲ್ಲಿ ಬಳಸಬಹುದಾಗಿದೆ. ಅದನ್ನು ಹೇಗೆ ಬಳಸುವುದು ಎಂಬುದು ಇಲ್ಲಿದೆ .
ಹಂತ 1- ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ತೆರೆಯಿರಿ, ನೀವು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊದ ಲಿಂಕ್ ಅನ್ನು ಕಾಪಿ ಮಾಡಿ. ಡೆಸ್ಕ್‌ಟಾಪ್‌ನಲ್ಲಿ ಯಾವುದೇ ವೀಡಿಯೊ ಮೇಲೆ ಬಲ ಕ್ಲಿಕ್ ಮಾಡಿ ಮತ್ತು ನಂತರ ಲಿಂಕ್ ಕಾಪಿ ಆಯ್ಕೆಮಾಡಿ.
ಹಂತ 2- ನಂತರ ಬ್ರೌಸರ್‌ನಲ್ಲಿ 4K ವಿಡಿಯೋ ಡೌನ್‌ಲೋಡರ್ ಓಪನ್ ಮಾಡಿ, ಗ್ರಿನ್ ಪೇಸ್ಟ್ ಲಿಂಕ್ ಬಟನ್ ಕ್ಲಿಕ್ ಮಾಡಿ.
ಹಂತ 3- ಫಾರ್ಮ್ಯಾಟ್ ಅನ್ನು ವೀಕ್ಷಿಸಲು ಮತ್ತು ಫೈಲ್ ಸೇವ್ ಮಾಡಲು ಲೊಕೆಶನ ಕೇಳಲು ,ಅಪ್ಲಿಕೇಶನ್ ಸಣ್ಣ ಟೈಲ್ ಅನ್ನು ಪಾಪ್ ಅಪ್ ಮಾಡುತ್ತದೆ.
ಹಂತ 4- ಆಯ್ಕೆ ಮಾಡಿದ ನಂತರ, ಡೌನ್‌ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 5- ಡೌನ್‌ಲೋಡ್ ಪೂರ್ಣಗೊಂಡ ನಂತರ, 4K ವಿಡಿಯೋ ಡೌನ್‌ಲೋಡರ್‌ನಲ್ಲಿನ ವೀಡಿಯೊ ಹೆಸರಿನ ಮೇಲೆ ಬಲ ಕ್ಲಿಕ್ ಮಾಡಿ ಮತ್ತು ವೀಡಿಯೊವನ್ನು ವೀಕ್ಷಿಸಲು ಪ್ಲೇ ಆಯ್ಕೆಮಾಡಿ.


Click it and Unblock the Notifications








