ಟೆಲಿಗ್ರಾಮ್‌ನಲ್ಲಿ ಸೆಂಡ್ ಮಾಡಿದ ಮೆಸೇಜ್ ಎಡಿಟ್ ಮಾಡಲು ಹೀಗೆ ಮಾಡಿ!
ವಾಟ್ಸಾಪ್‌ಗೆ ಪ್ರಬಲ ಪೈಪೋಟಿ ನೀಡುತ್ತಿರುವ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್ ಮುಂಚೂಣಿಯಲ್ಲಿದೆ. ಬಳಕೆದಾರರನ್ನು ತನ್ನತ್ತ ಸೆಳೆಯುವ ಉದ್ದೇಶದಿಂದ ವಾಟ್ಸಾಪ್‌ಗಿಂತ ಭಿನ್ನವಾದ ಹಾಗೂ ಆಕರ್ಷಕ ಫೀಚರ್ಸ್‌ಗಳನ್ನು ನೀಡುತ್ತಾ ಬಂದಿದೆ. ಇದರಲ್ಲಿ ಮೆಸೇಜ್ ಸೆಂಡ್ ಮಾಡಿದ ನಂತರವೂ ಮೆಸೇಜ್ ಎಡಿಟ್ ಮಾಡುವ ಫೀಚರ್ಸ್ ಕೂಡ ಒಂದು. ಈ ಮಾದರಯ ಫೀಚರ್ಸ್ ಇನ್ನು ಕೂಡ ವಾಟ್ಸಾಪ್‌ನಲ್ಲಿ ಲಭ್ಯವಿಲ್ಲ ಅನ್ನೊದು ವಿಶೇಷ.

ಹೌದು, ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿ ನೀವು ಸೆಂಡ್ ಮಾಡಿದ ಸಂದೇಶವನ್ನು ಎಡಿಟ್ ಮಾಡುವುದಕ್ಕೆ ಅವಕಾಶ ನೀಡಿದೆ. ಇದರಿಂದ ನೀವು ಸಂದೇಶವನ್ನು ಕಳುಹಿಸಿದ ನಂತರ ಸಂದೇಶದಲ್ಲಿ ಏನಾದರೂ ಬದಲಾವಣೆ ಮಾಡಬೇಕೆಂದುಕೊಂಡರೆ ಎಡಿಟ್ ಮಾಡಲು ಸಾಧ್ಯವಿದೆ. ನೀವು ಸಂದೇಶವನ್ನು ಕಳುಹಿಸಿದ 48 ಗಂಟೆಗಳ ನಂತರ ಸಂದೇಶವನ್ನು ಎಡಿಟ್ ಮಾಡುವುದಕ್ಕೆ ಅವಕಾಶವನ್ನು ನೀಡಲಿದೆ. ಹಾಗಾದ್ರೆ ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿ ಸೆಂಡ್ ಮಾಡಿದ ಮೆಸೇಜ್ ಅನ್ನು ಎಡಿಟ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್‌ನಲ್ಲಿ ಸೆಂಡ್ ಮಾಡಿದ ಮೆಸೇಜ್ ಅನ್ನು ಎಡಿಟ್ ಮಾಡಲು ಹೀಗೆ ಮಾಡಿ?
ಹಂತ:1 ಮೊದಲಿಗೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಟೆಲಿಗ್ರಾಮ್ ಮೆಸೆಂಜರ್ ತೆರೆಯಿರಿ.
ಹಂತ:2 ಇದರಲ್ಲಿ ಸಂದೇಶವನ್ನು ಎಡಿಟ್ ಮಾಡಲು ಬಯಸುವ ಚಾಟ್ ಅನ್ನು ತೆರೆಯಿರಿ.
ಹಂತ:3 ಇದೀಗ ನೀವು ಎಡಿಟ್ ಮಾಡಲು ಬಯಸುವ ಸಂದೇಶವನ್ನು ಲಾಂಗ್ ಪ್ರೆಸ್ ಮಾಡಿರಿ.
ಹಂತ:4 ನಂತರ ಕಾಣಿಸಿಕೊಳ್ಳುವ ಡೈಲಾಗ್ ಬಾಕ್ಸ್‌ನಲ್ಲಿ ಪಿನ್ ಸಂದೇಶ ಆಯ್ಕೆಯ ಅಡಿಯಲ್ಲಿ ಗೋಚರಿಸುವ ಎಡಿಟ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಇದೀಗ ಸಂದೇಶದಲ್ಲಿ ನೀವು ಬಯಸುವ ಬದಲಾವಣೆಗಳನ್ನು ಮಾಡಿ.
ಹಂತ:6 ಎಡಿಟ್ ಮುಗಿದ ನಂತರ ಸೆಂಡ್ ಬಟನ್ ಅನ್ನು ಟ್ಯಾಪ್ ಮಾಡಿ.

ಟೆಲಿಗ್ರಾಮ್‌ನ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ಸೆಂಡ್ ಮೆಸೇಜ್ ಎಡಿಟ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ನಿಮ್ಮ ವಿಂಡೋಸ್ PC ಅಥವಾ ಮ್ಯಾಕ್‌ನಲ್ಲಿ ಟೆಲಿಗ್ರಾಮ್ ತೆರೆಯಿರಿ.
ಹಂತ:2 ಇದರಲ್ಲಿ ನೀವು ಕಳುಹಿಸಿದ ಸಂದೇಶವನ್ನು ಎಡಿಟ್ ಮಾಡಲು ಬಯಸುವ ಚಾಟ್ ಅನ್ನು ಕ್ಲಿಕ್ ಮಾಡಿ.
ಹಂತ:3 ಎಡಿಟ್ ಮಾಡಲು ಬಯಸುವ ಸೆಂಡ್ ಮಾಡಿದ ಮೆಸೇಜ್ ಮೇಲೆ ರೈಟ್ ಕ್ಲಿಕ್ ಮಾಡಿ.
ಹಂತ:4 ಇದೀಗ ರಿಪ್ಲೇ ಬಟನ್ ಅಡಿಯಲ್ಲಿ ಗೋಚರಿಸುವ ಎಡಿಟ್ ಬಟನ್ ಅನ್ನು ಕ್ಲಿಕ್ ಮಾಡಿ.
ಹಂತ:5 ನಂತರ ನೀವು ಕಳುಹಿಸಿದ ಸಂದೇಶಕ್ಕೆ ಬದಲಾವಣೆಗಳನ್ನು ಮಾಡಿ.
ಹಂತ:6 ಇದೀಗ ಸೆಂಡ್ ಬಟನ್ ಒತ್ತಿರಿ.

ಇದಲ್ಲದೆ ಟೆಲಿಗ್ರಾಮ್ ಇತ್ತೀಚಿಗೆ ತನ್ನ ಹೊಸ ಅಪ್ಡೇಟ್ ಪರಿಚಯಿಸಿದೆ. ಈ ಅಪ್ಡೇಟ್ ಮೂಲಕ ಟೆಲಿಗ್ರಾಮ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅನ್‌ಲಿಮಿಟೆಡ್ ಎಮೋಜಿಗಳನ್ನು ನೀಡುತ್ತಿದೆ. ಇದರಲ್ಲಿ ನೀವು ಸುಲಭವಾಗಿ ಎಮೋಜಿಗಳನ್ನು ಆಯ್ಕೆ ಮಾಡಬಹುದು. ಅಲ್ಲದೆ ಪ್ರತಿ ಸಂದೇಶಕ್ಕೆ ನೀವು ಮೂರು ಎಮೋಜಿ ರಿಯಾಕ್ಷನ್ ಅನ್ನು ನೀಡಬಹುದಾಗಿದೆ. ಈ ಹಿಂದೆ ಟೆಲಿಗ್ರಾಮ್ ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಲಭ್ಯವಿದ್ದ ಈ ಫೀಚರ್ ಅನ್ನು ಇದೀಗ ಟೆಲಿಗ್ರಾಮ್ ಬಳಸುವ ಎಲ್ಲಾ ಬಳಕೆದಾರರು ಬಳಸಬಹುದಾಗಿದೆ. ಇದರಿಂದ ಸಾಕಷ್ಟು ರಿಯಾಕ್ಷನ್ ಎಮೋಜಿಗಳಿಗೆ ಬಳಕೆದಾರರು ಪ್ರವೇಶವನ್ನು ಪಡೆಯಬಹುದಾಗಿದೆ.

ಇದಲ್ಲದೆ ಹೊಸ ಎಮೋಜಿಗಳನ್ನು ಸೆಟ್ ಮಾಡಲು ಮತ್ತು ರಿಯಾಕ್ಷನ್ ಪ್ಯಾನಲ್ ಅನ್ನು ರಿ ಡಿಸೈನ್ ಮಾಡಿದ್ದೇವೆ, ಆದರಿಂದ ಅದನ್ನು ವಿಸ್ತರಿಸಬಹುದಾಗಿದೆ. ಜೊತೆಗೆ ನೀವು ಆಗಾಗ್ಗೆ ಬಳಸುವ ರಿಯಾಕ್ಷನ್‌ಗಳು ಪ್ಲಾಟ್‌ಫಾರ್ಮ್‌ನ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಟೆಲಿಗ್ರಾಮ್ ಹೇಳಿದೆ. ಇನ್ನು ನೀವು ನೀಡುವ ರಿಯಾಕ್ಷನ್‌ಗಳು ಪ್ರಸ್ತುತ ಗುಂಪುಗಳಲ್ಲಿ ಮತ್ತು 1-ಆನ್-1 ಚಾಟ್‌ಗಳಲ್ಲಿ ಲಭ್ಯವಿದೆ. ಹೊಸ ಅಪ್‌ಡೇಟ್ ಮೂಲಕ ಗ್ರೂಪ್ ಅಡ್ಮಿನ್ ತಮ್ಮ ಗ್ರೂಪ್‌ಗಳಿಗೆ ಕಸ್ಟಮ್ ರಿಯಾಕ್ಷನ್‌ಗಳನ್ನು ಬಳಸಬಹುದೇ ಇಲ್ಲವೇ ಅನ್ನೊದನ್ನ ಕಂಟ್ರೋಲ್ ಮಾಡಬಹುದಾಗಿದೆ.


Click it and Unblock the Notifications








