Just In
- 2 hrs ago
ರೈಲ್ವೆ 'ಗ್ರೂಪ್ ಡಿ' ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ 'ವಿ ಟೆಲಿಕಾಂ'ನಿಂದ ಸಿಹಿಸುದ್ದಿ!
- 12 hrs ago
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- 16 hrs ago
ಭಾರತದಲ್ಲಿ ರಿಯಲ್ಮಿ ಟೆಕ್ಲೈಫ್ ಬಡ್ಸ್ T100 ಲಾಂಚ್ ಡೇಟ್ ಫಿಕ್ಸ್!
- 16 hrs ago
ಲಾಂಚ್ಗೆ ಸಜ್ಜಾಗಿದೆ 'ಮೊಟೊರೊಲಾ ರೇಜರ್'!..ಗ್ಯಾಲಕ್ಸಿ Z ಫೋಲ್ಡ್ 4ಗೆ ಟಾಂಗ್!
Don't Miss
- Finance
ವಿಐ App ಬಳಸಿ ರೈಲ್ವೆಯ ಗ್ರೂಪ್ ಡಿ ಪರೀಕ್ಷೆಗೆ ಸಿದ್ಧತೆ ಹೇಗೆ?
- Movies
ಮತ್ತೊಂದು ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ರಕ್ಷಿತ್ ಶೆಟ್ಟಿ
- Lifestyle
ಉಪ್ಪಿನಕಾಯಿ ರುಚಿಗ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಗೊತ್ತಾ!
- News
Breaking: ಭಯೋತ್ಪಾದಕ ದಾಳಿ: ಇಬ್ಬರು ಉಗ್ರರ ಹತ್ಯೆ, ಮೂವರು ಯೋಧರು ಹುತಾತ್ಮ
- Automobiles
ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ
- Sports
ಆ ಇಬ್ಬರು ಸ್ಟಾರ್ಗಳಿಗೆ ಭಾರತ ತಂಡದಲ್ಲಿ ಸ್ಥಾನ ನೀಡಿರುವುದಕ್ಕೆ ಜಯವರ್ಧನೆ ಕಳವಳ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ನಿಮ್ಮ ಪ್ಯಾನ್‌ಕಾರ್ಡ್ ಅಸಲಿ ಅಥವಾ ನಕಲಿ ಎಂದು ಪತ್ತೆ ಹಚ್ಚುವುದು ಹೇಗೆ?
ಇಂದಿನ ದಿನಗಳಲ್ಲಿ ಹೆಚ್ಚಿನ ಹಣಕಾಸು ವರ್ಗಾವಣೆ ಸೇರಿದಂತೆ ಅನೇಕ ಬ್ಯಾಂಕಿಂಗ್ ವಹಿವಾಟುಗಳಿಗೆ ಪ್ಯಾನ್‌ಕಾರ್ಡ್ ಅವಶ್ಯಕವಾಗಿದೆ. ಇದೇ ಕಾರಣಕ್ಕೆ ಪ್ಯಾನ್ ಕಾರ್ಡ್ ಹೊಂದುವುದಕ್ಕೆ ಎಲ್ಲರೂ ಬಯಸುತ್ತಾರೆ. ಆದರೆ ಪ್ಯಾನ್‌ಕಾರ್ಡ್‌ಗಳಲ್ಲಿಯೂ ಕೂಡ ನಕಲಿ ಕಾರ್ಡ್‌ಗಳ ಹಾವಳಿಯನ್ನು ಇಂದು ಕಾಣಬಹುದಾಗಿದೆ. ಆದರಿಂದ ನಕಲಿ ಕಾರ್ಡ್‌ಗಳ ಸಂಖ್ಯೆ ಹೆಚ್ಚಾದ ನಂತರ ಪ್ಯಾನ್ ಕಾರ್ಡ್ ಐಡಿಯಲ್ಲಿ ಕ್ಯೂಆರ್ ಕೋಡ್‌ಗಳನ್ನು ಸೇರಿಸಲು ಪ್ರಾರಂಭಿಸಲಾಗಿದೆ. ಅದರಲ್ಲೂ ಜುಲೈ 2018 ರ ನಂತರ ಮಾಡಿದ ಪ್ಯಾನ್ ಕಾರ್ಡ್ ಹೊಂದಿರುವವರು ಕ್ಯೂಆರ್ ಕೋಡ್ ಅನ್ನು ಎಂಬೆಡ್ ಮಾಡಿದ್ದಾರೆ.

ಹೌದು, ಕರೋನಾ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ನಕಲಿ ಪ್ಯಾನ್‌ಕಾರ್ಡ್‌ಗಳು ಪತ್ತೆಯಾಗಿವೆ. ನಕಲಿ ಪ್ಯಾನ್‌ಕಾರ್ಡ್‌ಗಳನ್ನು ತೋರಿಸುವ ಮೂಲಕ ವಂಚಕರು ನಿಮ್ಮ ಬಳಿ ಹಣಕಾಸು ವಂಚನೆ ಮಾಡುವ ಸಾಧ್ಯತೆ ಇದೆ. ಆದರೆ ಪ್ಯಾನ್ ಕಾರ್ಡ್‌ನಲ್ಲಿರುವ QR ಕೋಡ್ ಮೂಲಕ ಪ್ಯಾನ್ ಕಾರ್ಡ್ ನಕಲಿ ಮತ್ತು ಅಸಲಿ ಅನ್ನೊದನ್ನ ಪತ್ತೆಹಚ್ಚಬಹುದಾಗಿದೆ. ಆದರಿಂದ ನಿಮ್ಮಲ್ಲಿರುವ ಪ್ಯಾನ್ ಕಾರ್ಡ್ ನಿಜವೇ ಅಥವಾ ನಕಲಿಯೇ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಹಾಗಾದ್ರೆ ಪಾನ್ ಕಾರ್ಡ್ ನಕಲಿಯೇ ಅಥವಾ ನಿಜವೇ ಅನ್ನೊದನ್ನ ನೀವು ಮನೆಯಲ್ಲಿ ಕುಳಿತು ಪತ್ತೆ ಹಚ್ಚುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರಸ್ತುತ ನೀವು ಬ್ಯಾಂಕ್ ಖಾತೆ ತೆರೆಯುವುದು, ಆಸ್ತಿಯನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದಕ್ಕೆ ಪ್ಯಾನ್‌ಕಾರ್ಡ್ ಅವಶ್ಯಕವಾಗಿದೆ. ಅಲ್ಲದೆ ಐಟಿಆರ್ ಫೈಲ್ ಮಾಡುವುದು, 2 ಲಕ್ಷ ರೂ.ಗಿಂತ ಹೆಚ್ಚಿನ ಆಭರಣಗಳನ್ನು ಖರೀದಿಸುವುದು ಮುಂತಾದ ಹಲವು ಕೆಲಸಗಳಿಗೆ ಪ್ಯಾನ್ ಕಾರ್ಡ್‌ನ 10 ಅಂಕಿಗಳ ಅತಿ ಅವಶ್ಯಕವಾಗಿದೆ. PAN ಕಾರ್ಡ್ ಯಾವುದೇ ನೇರ ಪ್ರಯೋಜನವಿಲ್ಲದ ಸರ್ಕಾರಿ ದಾಖಲೆಯಾಗಿದ್ದು, ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಮುಖ ದಾಖಲೆಯಾಗಿದೆ. ಹಣಕಾಸಿನ ವಹಿವಾಟಿನಿಂದ ಬ್ಯಾಂಕ್ ಖಾತೆ ತೆರೆಯುವವರೆಗೆ ಪ್ಯಾನ್ ಕಾರ್ಡ್ ಅಗತ್ಯವಿದೆ. ಇದಲ್ಲದೇ, ಆಸ್ತಿ ಖರೀದಿ ಮತ್ತು ಮಾರಾಟ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಸೇರಿದಂತೆ ಹಲವು ಅಗತ್ಯ ಕೆಲಸಗಳಿಗೆ ಪ್ಯಾನ್ ಕಾರ್ಡ್ ಅನ್ನು ಬಳಸಲಾಗುತ್ತದೆ.

ನಿಮ್ಮ ಪ್ಯಾನ್‌ಕಾರ್ಡ್ ಅಸಲಿ ಅಥವಾ ನಕಲಿ ಎಂದು ಪತ್ತೆ ಹಚ್ಚುವುದು ಹೇಗೆ?
ಹಂತ:1 ಮೊದಲಿಗೆ ನೀವು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಬೇಕು.
ಹಂತ:2 ಇದಲ್ಲಿ, ನೀವು ಮೇಲಿನ ಬಲಭಾಗದಲ್ಲಿರುವ 'ನಿಮ್ಮ ಪ್ಯಾನ್ ವಿವರಗಳನ್ನು ಪರಿಶೀಲಿಸಿ' ಲಿಂಕ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಹಂತ:3 ನಂತರ, ಬಳಕೆದಾರರು ಪ್ಯಾನ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
ಹಂತ:4 ಇದರಲ್ಲಿ, ನಿಮಗೆ ಪ್ಯಾನ್ ಸಂಖ್ಯೆ, ಪ್ಯಾನ್ ಕಾರ್ಡ್ ಹೊಂದಿರುವವರ ಪೂರ್ಣ ಹೆಸರು, ಅವರ ಜನ್ಮ ದಿನಾಂಕ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
ಹಂತ:5 ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಭರ್ತಿ ಮಾಡಿದ ಮಾಹಿತಿಯು ನಿಮ್ಮ ಪ್ಯಾನ್ ಕಾರ್ಡ್‌ಗೆ ಹೊಂದಿಕೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬ ಸಂದೇಶವು ಪೋರ್ಟಲ್‌ನಲ್ಲಿ ಬರುತ್ತದೆ.
ಹಂತ:6 ಇದರಿಂದ ನಿಮ್ಮ ಪ್ಯಾನ್ ಕಾರ್ಡ್‌ನ ಅಸಲಿಯತೆ ಏನು ಅನ್ನೊದನ್ನ ಸುಲಭವಾಗಿ ಕಂಡುಹಿಡಿಯಬಹುದು.

ಆಧಾರ್ ಕಾರ್ಡ್ ಮೂಲಕ ತ್ವರಿತ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಹೀಗೆ ಮಾಡಿರಿ:
ಹಂತ 1. ಐಟಿ ಇಲಾಖೆಯ ಅಧಿಕೃತ ಇ-ಫಿಲ್ಲಿಂಗ್ ಮುಖಪುಟಕ್ಕೆ ಭೇಟಿ ನೀಡಿ.
ಹಂತ 2. ಪುಟ ತೆರೆದ ನಂತರ, ಮುಖಪುಟದ 'ಕ್ವಿಕ್ ಲಿಂಕ್‌ಗಳು' ವಿಭಾಗದ ಅಡಿಯಲ್ಲಿ 'ತತ್‌ಕ್ಷಣ ಇ-ಪ್ಯಾನ್' ಆಯ್ಕೆಯನ್ನು ಕ್ಲಿಕ್ ಮಾಡಿ. ಇದು ನಿಮ್ಮನ್ನು ತ್ವರಿತ ಪ್ಯಾನ್ ಹಂಚಿಕೆ ವೆಬ್‌ಪುಟಕ್ಕೆ ಮರುನಿರ್ದೇಶಿಸುತ್ತದೆ.
ಹಂತ 3. ನಂತರ 'ಹೊಸ ಪ್ಯಾನ್ ಪಡೆಯಿರಿ' ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 4. ಮುಂದೆ ಪ್ಯಾನ್ ಹಂಚಿಕೆಗಾಗಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು 'ಮುಂದುವರಿಸಿ' ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ 'ನಾನು ಅದನ್ನು ಖಚಿತಪಡಿಸುತ್ತೇನೆ' ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿ.
ಹಂತ 5. ನಂತರ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಆಧಾರ್ OTP ಅನ್ನು ಸ್ವೀಕರಿಸುತ್ತೀರಿ, ಅಗತ್ಯವಿರುವ ಜಾಗದಲ್ಲಿ ಅದನ್ನು ನಮೂದಿಸಿ ಮತ್ತು 'ಆಧಾರ್ OTP ಅನ್ನು ಮೌಲ್ಯೀಕರಿಸಿ ಮತ್ತು ಮುಂದುವರಿಸಿ' ಬಟನ್ ಅನ್ನು ಕ್ಲಿಕ್ ಮಾಡಿ.

ಹಂತ 6. ಆ ನಂತರ ನಿಮ್ಮನ್ನು OTP ಮೌಲ್ಯೀಕರಣ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ. ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ ಮತ್ತು ಮುಂದುವರಿಸು ಬಟನ್ ಕ್ಲಿಕ್ ಮಾಡಿ.
ಹಂತ 7. ಬಳಿಕ OTP ಅನ್ನು ನಮೂದಿಸಿ, ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಮತ್ತೆ ಮುಂದುವರಿಸಿ ಬಟನ್ ಒತ್ತಿರಿ.
ಹಂತ 8. ನಿಮ್ಮ ಇಮೇಲ್ ಐಡಿ ಮೌಲ್ಯೀಕರಿಸದಿದ್ದಲ್ಲಿ, ನೀವು 'ಇ ಮೇಲ್ ಐಡಿ ಮೌಲ್ಯೀಕರಿಸಿ' ಮೇಲೆ ಕ್ಲಿಕ್ ಮಾಡಿ, ರುಜುವಾತುಗಳನ್ನು ನಮೂದಿಸಿ, ತದನಂತರ ಮುಂದುವರಿಸು ಬಟನ್ ಕ್ಲಿಕ್ ಮಾಡಿ.
ಹಂತ 9. ಒಮ್ಮೆ ನೀವು ಮೌಲ್ಯೀಕರಣಕ್ಕಾಗಿ ನಿಮ್ಮ ಆಧಾರ್ ವಿವರಗಳನ್ನು ಸಲ್ಲಿಸಿದ ನಂತರ ನೀವು ಸ್ವೀಕೃತಿ ಸಂಖ್ಯೆಯನ್ನು ಸ್ವೀಕರಿಸುತ್ತೀರಿ. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೀವು ಪ್ಯಾನ್ ಹಂಚಿಕೆ ಸ್ಥಿತಿಯನ್ನು ವೀಕ್ಷಿಸಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086