ವಾಟ್ಸಾಪ್‌ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್‌ ಮಾಡಿದ್ದರೆ ತಿಳಿಯುವುದು ಹೇಗೆ?

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿದೆ. ಇನ್ನು ಬಳಕೆದಾರರ ಅನುಕೂಲಕ್ಕಾಗಿ ವಾಟ್ಸಾಪ್‌ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಕಂಟ್ಯಾಕ್ಟ್‌ ಬ್ಲಾಕ್‌ ಮಾಡುವ ಫೀಚರ್ಸ್‌ ಕೂಡ ಸೇರಿದೆ. ವಾಟ್ಸಾಪ್‌ನಲ್ಲಿ ನಿಮಗೆ ಇಷ್ಟವಾಗದ ಸಂಪರ್ಕವನ್ನು ಬ್ಲಾಕ್‌ ಮಾಡಬಹುದು. ಒಂದು ವೇಳೆ ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿ ಯಾರಾದರೂ ನಿಮ್ಮನ್ನು ಬ್ಲಾಕ್‌ ಲಿಸ್ಟ್‌ಗೆ ಸೇರಿಸಿದ್ದರೆ ಅದನ್ನು ಕೂಡ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನಲ್ಲಿ ನಿಮಗೆ ತಳಿಯದೆ ನಿಮ್ಮ ಕಂಟ್ಯಾಕ್ಟ್‌ ಅನ್ನು ಬ್ಲಾಕ್‌ ಮಾಡಿದ್ದರೆ ಅದನ್ನು ಸುಲಭವಾಗಿ ತಿಳಿಯಬಬಹುದಾಗಿದೆ. ಬಳಕೆದಾರರ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ವಾಟ್ಸಾಪ್ ತನ್ನ ಬಳಕೆದಾರರನ್ನು ನಿರ್ಬಂಧಿಸಲಾಗಿದೆಯೆ ಎಂದು ಹೇಳುವ ಬಗ್ಗೆ ಅಸ್ಪಷ್ಟವಾಗಿದೆ. ನೀವು ಯಾರನ್ನಾದರೂ ನಿರ್ಬಂಧಿಸಿದ್ದರೆ ವಾಟ್ಸಾಪ್‌ ಅಪ್ಲಿಕೇಶನ್ ನಿಮಗೆ ಸ್ಪಷ್ಟವಾಗಿ ಹೇಳುವುದಿಲ್ಲ. ಆದರೆ ಯಾರಾದರೂ ನಿಮ್ಮನ್ನು ನಿರ್ಬಂಧಿಸಿದ್ದಾರೆ ಎಂದು ತಿಳಿಯಲು ಒಂದೆರಡು ಸೂಚಕಗಳಿವೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ನಿಮ್ಮನ್ನು ನಿರ್ಬಂಧಿಸಲಾಗಿದೆಯೇ ಎಂದು ಕಂಡುಹಿಡಿಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್‌ ಮಾಡಿದ್ದರೆ ತಿಳಿಯುವುದು ಹೇಗೆ?

ವಾಟ್ಸಾಪ್‌ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್‌ ಮಾಡಿದ್ದರೆ ತಿಳಿಯುವುದು ಹೇಗೆ?

ಆನ್‌ಲೈನ್ ಸ್ಟೇಟಸ್‌ ಚೆಕ್‌ ಮಾಡಿ

ಚಾಟ್ ವಿಂಡೋದಲ್ಲಿ ಅವರ ಕೊನೆಯದಾಗಿ ನೋಡಿದ ಅಥವಾ ಆನ್‌ಲೈನ್ ಸ್ಥಿತಿಯನ್ನು ಹುಡುಕುವ ಮೂಲಕ ನೀವು ಬ್ಲಾಕ್‌ ಆಗಿದ್ದೀರಾ ಇಲ್ಲವಾ ಎಂದು ತಿಳಿಯಬಹುದು. ಆದಾಗ್ಯೂ, ಅವರು ಅದನ್ನು ಸೆಟ್ಟಿಂಗ್‌ಗಳಿಂದ ನಿಷ್ಕ್ರಿಯಗೊಳಿಸಿರುವ ಕಾರಣ ಲಾಸ್ಟ್‌ ಸೀನ್‌ ನೋಡದೇ ಇರಬಹುದು.

ಪ್ರೊಫೈಲ್ ಫೋಟೋ

ಪ್ರೊಫೈಲ್ ಫೋಟೋ

ಒಬ್ಬ ವ್ಯಕ್ತಿಯು ನಿಮ್ಮನ್ನು ವಾಟ್ಸಾಪ್‌ನಲ್ಲಿ ನಿರ್ಬಂಧಿಸಿದರೆ, ಅವರ ಪ್ರೊಫೈಲ್ ಚಿತ್ರವನ್ನು ವೀಕ್ಷಿಸಲು ನಿಮಗೆ ಸಾಧ್ಯವಾವುದಿಲ್ಲ. ಒಂದು ವೇಳೆ ನೀವು ವ್ಯಕ್ತಿಯ ಪ್ರೊಫೈಲ್ ಚಿತ್ರವನ್ನು ವೀಕ್ಷಿಸಲು ಸಮರ್ಥರಾಗಿದ್ದರೆ. ಅವರು ನವೀಕರಿಸಿದ ಪ್ರೊಫೈಲ್ ಚಿತ್ರವನ್ನು ನಿಮಗೆ ನೋಡಲು ಸಾಧ್ಯವಾಗವುದಿಲ್ಲ.

ಮೆಸೇಜ್‌ ಮಾಡಿ

ಮೆಸೇಜ್‌ ಮಾಡಿ

ನಿಮ್ಮನ್ನು ನಿರ್ಬಂಧಿಸಿದ ಸಂಪರ್ಕಕ್ಕೆ ನೀವು ಸಂದೇಶವನ್ನು ಕಳುಹಿಸಿದರೆ, ಡಬಲ್ ಚೆಕ್‌ಮಾರ್ಕ್‌ಗಳು ಅಥವಾ ನೀಲಿ ಡಬಲ್ ಚೆಕ್‌ಮಾರ್ಕ್‌ಗಳಿಗೆ (ಅಕಾ ರೀಡ್ ರಶೀದಿಗಳು) ವಿರುದ್ಧವಾಗಿ ನೀವು ಸಂದೇಶದಲ್ಲಿ ಒಂದೇ ಚೆಕ್‌ಮಾರ್ಕ್ ಅನ್ನು ಮಾತ್ರ ನೋಡಲು ಸಾಧ್ಯವಾದರೆ ಅವರು ನಿಮ್ಮನ್ನ ಬ್ಲಾಕ್‌ ಮಾಡಿದ್ದರೆ ಅನ್ನೊದು ಖಚಿತವಾಗುತ್ತದೆ.

ವಾಟ್ಸಾಪ್‌ ಕಾಲ್‌ ಮಾಡಿ

ವಾಟ್ಸಾಪ್‌ ಕಾಲ್‌ ಮಾಡಿ

ನೀವು ಯಾವುದೇ ವ್ಯಕ್ತಿಗೆ ವಾಟ್ಸಾಪ್‌ ಕಾಲ ಮಾಡಿದಾಗ ಆತ ಒದು ವೇಳೆ ನಿಮ್ಮನ್ನು ಬ್ಲಾಕ್‌ ಮಾಡಿದ್ದರೆ ಕೇವಲ ಕಾಲಿಂಗ್‌ ಅನ್ನೊದನ್ನ ಮಾತ್ರ ಕಾಣುತ್ತಿರಿ. ಕರೆ ಕನೆಕ್ಟ್‌ ಆಗುವುದಿಲ್ಲ. ಕೆಲವು ವೇಳೆ ನೆಟ್‌ವರ್ಕ್‌ ಇಲ್ಲದೆ ಹೋದರೂ ಈ ರೀತಿ ಆಗಲಿದೆ.

Most Read Articles
Best Mobiles in India

English summary
For WhatsApp users, there are certain ways to figure out if someone has blocked you on the instant messaging app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X