ಲ್ಯಾಪ್‌ಟಾಪ್‌ ನಲ್ಲಿ ವೈಫೈ ಪಾಸ್‌ವರ್ಡ್ ಕಂಡುಹಿಡಿಯುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ವೈಫೈ ಇಂಟರ್‌ನೆಟ್‌ ಸಾಕಷ್ಟು ಜ ನಪ್ರಿಯತೆ ಪಡೆದುಕೊಂಡಿದೆ. ನಿಮ್ಮ ಲ್ಯಾಪ್‌ಟಾಪ್‌ ನೆಟ್‌ವರ್ಕ್‌ಗೆ ಮನೆಯಲ್ಲಿ ನಿಮ್ಮ ಸ್ಮಾರ್ಟ್‌ಡಿವೈಸ್‌ಗಳಿಗೆ ವೈಫೈ ಇಂಟರ್‌ನೆಟ್‌ ಅವಶ್ಯಕವಾಗಿದೆ. ನ್ನು ವೈಫೈ ಇಂಟರ್‌ನೆಟ್‌ ಎಲ್ಲರಿಗೂ ಕನೆಕ್ಟ್‌ ಆಗಬಾರದು ಎಂಬ ಕಾರಣಕ್ಕೆ ಕೆಲವರು ಅಗತ್ಯ ಪಾಸ್‌ವರ್ಡ್‌ ಅನ್ನು ಸೆಟ್‌ ಮಾಡಿರುತ್ತಾರೆ. ಇದರಿಂದ ನೀವು ಬೇರೊಂದು ಡಿವೈಸ್‌ಗೆ ವೈಫೈ ಇಂಟರ್‌ನೆಟ್‌ ಕನೆಕ್ಟ್‌ ಮಾಡಬೇಕಾದರೆ ಪಾಸ್‌ವರ್ಡ್‌ ನಮೂದಿಸುವುದು ಅತ್ಯಗತ್ಯವಾಗಿರುತ್ತದೆ.

ಲ್ಯಾಪ್‌ಟಾಪ್‌

ಹೌದು, ನಿಮ್ಮ ಲ್ಯಾಪ್‌ಟಾಪ್‌ಗೆ ವೈಫೈ ನೆಟ್‌ವರ್ಕ್‌ಗೆ ಸಂಪರ್ಕಿಸಬೇಕಾದರೆ ಪಾಸ್‌ವರ್ಡ್ ಅವಶ್ಯಕವಾಗಿರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ನೀವು ಪಾಸ್‌ವರ್ಡ್‌ ಮರೆತುಹೋದರೆ ವೈಫೈ ಕನೆಕ್ಟ್‌ ಮಾಡುವುದು ಕಿರಿಕಿರಿ ಎನಿಸಿಬಿಡುತ್ತದೆ. ಆದರಿಂದ ವೈಫೈ ಪಾಸ್‌ವರ್ಡ್‌ ಅನ್ನು ಪತ್ತೆ ಹಚ್ಚುವುದಕ್ಕೆ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ನೀವು ಲ್ಯಾಪ್‌ಟಾಪ್ ಬಳಸುವಾಗ ನಿಮ್ಮ ವೈಫೈ ಪಾಸ್‌ವರ್ಡ್‌ ಕಂಡುಹಿಡಿಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಂಡೋಸ್ ಲ್ಯಾಪ್‌ಟಾಪ್‌ ನಲ್ಲಿ ವೈಫೈ ಪಾಸ್‌ವರ್ಡ್ ಕಂಡುಹಿಡಿಯುವುದು ಹೇಗೆ?

ವಿಂಡೋಸ್ ಲ್ಯಾಪ್‌ಟಾಪ್‌ ನಲ್ಲಿ ವೈಫೈ ಪಾಸ್‌ವರ್ಡ್ ಕಂಡುಹಿಡಿಯುವುದು ಹೇಗೆ?

ಹಂತ:1 ಮೊದಲಿಗೆ ಸ್ಟಾರ್ಟ್‌ ಬಟನ್ ಕ್ಲಿಕ್ ಮಾಡಿ ಮತ್ತು ನಂತರ ಕಂಟ್ರೊಲ್‌ ಪ್ಯಾನಲ್‌ಗೆ ಹೋಗಿ.
ಹಂತ:2 ಈಗ ನಿಮ್ಮ ನೆಟ್‌ವರ್ಕ್ ಮತ್ತು ಇಂಟರ್ನೆಟ್ ಸೆಟ್ಟಿಂಗ್‌ಗಳಿಗೆ ಹೋಗಿ.
ಹಂತ:3 ನಂತರ ನೀವು ವಿಂಡೋಸ್‌ 11 ಲ್ಯಾಪ್‌ಟಾಪ್‌ ಬಳಸುತ್ತಿದ್ದರೆ, ನೆಟ್‌ವರ್ಕ್ ಮತ್ತು ಶೇರಿಂಗ್‌ ಸೆಂಟರ್‌ ಅನ್ನು ನೋಡಿ.
ಹಂತ:4 ಈಗ, ಸಂಪರ್ಕಗಳಿಗೆ ಹೋಗಿ ಮತ್ತು ನಿಮ್ಮ ವೈ-ಫೈ ನೆಟ್‌ವರ್ಕ್ ಅನ್ನು ಕ್ಲಿಕ್ ಮಾಡಿ.
ಹಂತ:5 ನಂತರ ಹೊಸ ಪೇಜ್‌ ತೆರೆಯುತ್ತದೆ. ಇದರಲ್ಲಿ, ವೈರ್‌ಲೆಸ್ ಪ್ರಾಪರ್ಟೀಸ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು, ನಂತರ ಸೆಕ್ಯುರಿಟಿ ಟ್ಯಾಬ್‌ನಲ್ಲಿ ಕ್ಲಿಕ್ ಮಾಡಿ.
ಹಂತ:6 ಇದಾದಮೇಲೆ ನಿಮ್ಮ ವೈ-ಫೈ ನೆಟ್‌ವರ್ಕ್‌ನ ಪಾಸ್‌ವರ್ಡ್ ತೋರಿಸಲು ಶೋ ವರ್ಡ್ಸ್‌ ಪಕ್ಕದಲ್ಲಿರುವ ಬಾಕ್ಸ್ ಅನ್ನು ಪರಿಶೀಲಿಸಬೇಕಾಗುತ್ತದೆ.

ಮ್ಯಾಕೋಸ್‌ ಲ್ಯಾಪ್‌ಟಾಪ್‌ನಲ್ಲಿ ವೈಫೈ ಪಾಸ್‌ವರ್ಡ್ ಕಂಡುಹಿಡಿಯುವುದು ಹೇಗೆ?

ಮ್ಯಾಕೋಸ್‌ ಲ್ಯಾಪ್‌ಟಾಪ್‌ನಲ್ಲಿ ವೈಫೈ ಪಾಸ್‌ವರ್ಡ್ ಕಂಡುಹಿಡಿಯುವುದು ಹೇಗೆ?

ಹಂತ:1 ಮೊದಲಿಗೆ ಕೀಚೈನ್ ಆಕ್ಸಸ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಸೈಡ್‌ಬಾರ್‌ನಲ್ಲಿ ಸಿಸ್ಟಮ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:3 ನಂತರ ವಿಂಡೋದ ಮೇಲ್ಭಾಗದಲ್ಲಿರುವ ಪಾಸ್‌ವರ್ಡ್‌ಗಳ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:4 ಇದರಲ್ಲಿ, ನೀವು ಪಾಸ್‌ವರ್ಡ್ ಬಯಸುವ ವೈ-ಫೈ ನೆಟ್‌ವರ್ಕ್ ಅನ್ನು ಸರ್ಚ್‌ ಮಾಡಿ ಮತ್ತು ಡಬಲ್ ಕ್ಲಿಕ್ ಮಾಡಿ.
ಹಂತ:5 ಇದೀಗ ಶೋ ಪಾಸ್‌ವರ್ಡ್ ಆಯ್ಕೆಯ ಪಕ್ಕದಲ್ಲಿರುವ ಬಾಕ್ಸ್ ಅನ್ನು ಪರಿಶೀಲಿಸಿ.
ಹಂತ:6 ಪ್ರಾಂಪ್ಟ್ ಮಾಡಿದಾಗ ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಿ.
ಹೀಗೆ ಮಾಡುವ ಮೂಲಕ ನಿಮ್ಮ ವೈಫೈ ನೆಟ್‌ವರ್ಕ್‌ಗೆ ಲಾಗ್ ಇನ್ ಮಾಡಲು ಬಳಸಿದ ಪಾಸ್‌ವರ್ಡ್ ಅನ್ನು ಸ್ವಯಂಚಾಲಿತವಾಗಿ ತೋರಿಸುತ್ತದೆ.

ವೈಫೈ ಪಾಸ್ ವರ್ಡ್ ಬದಲಾವಣೆ

ವೈಫೈ ಪಾಸ್ ವರ್ಡ್ ಬದಲಾವಣೆ

ವೈಫೈ ಪಾಸ್ ವರ್ಡ್ ಬದಲಾವಣೆ ಮಾಡುವುದರಿಂದ ಅನಗತ್ಯವಾಗಿ ಯಾರೋ ನಿಮ್ಮ ಡಾಟಾವನ್ನು ಬಳಕೆ ಮಾಡುವುದನ್ನು ತಪ್ಪಿಸಬಹುದು ಮತ್ತು ನಿಮ್ಮ ಡಾಟಾಗಳು ಸುರಕ್ಷಿತವಾಗಿರುವಂತೆ ಮಾಡಬಹುದು. ಪಾಸ್ ವರ್ಡ್ ಗಳನ್ನು ನೆನಪಿಟ್ಟುಕೊಳ್ಳಲು ಕೆಲವರು ತಮ್ಮ ಮೊಬೈಲ್ ,ಸ್ಮಾರ್ಟ್ ಟಿವಿ ಮತ್ತು ಇತರೆ ಡಿವೈಸ್ ಗಳನ್ನು ಬಳಕೆ ಮಾಡುತ್ತಾರೆ. ಆದರೆ ಪಾಸ್ ವರ್ಡ್ ಗಳನ್ನು ಸೆಕ್ಯೂರ್ ಆಗಿ ಇಟ್ಟುಕೊಳ್ಳಬೇಕು ಎಂದರೆ ಅದಕ್ಕಿರುವ ಏಕೈಕ ಮಾರ್ಗವೆಂದರೆ ಆಗಾಗ ಪಾಸ್ ವರ್ಡ್ ಗಳನ್ನು ಬದಲಾವಣೆ ಮಾಡುತ್ತಾ ಇರುವುದು.

Best Mobiles in India

English summary
Here's How to find WiFi password when using a Windows PC?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X