ಒಂದೇ ನಂಬರ್‌ನಲ್ಲಿ ನಿಮ್ಮ ಕುಟುಂಬದ ಆಧಾರ್‌ ಪಿವಿಸಿ ಕಾರ್ಡ್‌ ಪಡೆಯಲು ಹೀಗೆ ಮಾಡಿ?

|

ಇಂದಿನ ದಿನಗಳಲ್ಲಿ ಸರ್ಕಾರದ ಯಾವುದೇ ಸೌಲಭ್ಯ ಪಡೆದುಕೊಳ್ಳಬೇಕಾದರೂ ಆಧಾರ್‌ ಕಾರ್ಡ್‌ ಅವಶ್ಯಕತೆ ಇದೆ. ದೇಶದ ನಾಗರಿಕರಿಗೆ ತಮ್ಮ ಗುರುತನ್ನು ಸಾಬೀತುಪಡಿಸುವ ದಾಖಲೆಗಳಲ್ಲಿ ಆಧಾರ್‌ ಕಾರ್ಡ್‌ ಕೂಡ ಪ್ರಮುಖವಾಗಿದೆ. ಇನ್ನು ಸರ್ಕಾರ ಕೂಡ ಆಧಾರ್‌ ಕಾರ್ಡ್‌ ಅನ್ನು ಪ್ರತಿಯೊಬ್ಬ ನಾಗರಿಕನು ಹೊಂದುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ ಆಧಾರ್‌ ಕಾರ್ಡ್‌ ಸ್ಟೇಟಸ್‌, ಆನ್‌ಲೈನ್‌ ಡೌನ್‌ಲೋಡ್‌ ಮಾಡುವುದಕ್ಕೂ ಕೂಡ ಅವಕಾಶ ನೀಡಿದೆ. ಅಲ್ಲದೆ ಇತ್ತೀಚಿಗೆ ಆಧಾರ್‌ ಪಿವಿಸಿ ಕಾರ್ಡ್‌ ಅನ್ನು ಕೂಡ ಪರಿಚಯಿಸಿದೆ. ಇದರಿಂದ ಆಧಾರ್‌ ಕಾರ್ಡ್‌ ಅನ್ನು ಎಲ್ಲಿಗೆ ಬೇಕಾದರೂ ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ.

ಆಧಾರ್ PVC ಕಾರ್ಡ್

ಹೌದು, ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಆಧಾರ್ PVC ಕಾರ್ಡ್ ನೀಡುತ್ತದೆ. ಆನ್‌ಲೈನ್‌ನಲ್ಲಿ ಆಧಾರ್‌ ಪಿವಿ ಕಾರ್ಡ್‌ ಅನ್ನು ಆರ್ಡರ್‌ ಮಾಡಬಹುದಾಗಿದೆ. ಪಿವಿಸಿ ಕಾರ್ಡ್‌ ಮೇಲೆ ಆಧಾರ್ ಮುದ್ರಿಸಿ ಕೊಡಲಿದೆ. ಇನ್ನು ಆಧಾರ್‌ ಪಿವಿಸಿ ಕಾರ್ಡ್‌ ಪಡೆಯುವುದಕ್ಕೆ ಆನ್‌ಲೈನ್‌ನಲ್ಲಿಯೇ ನಿಗದಿತ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಇನ್ನು ಪಿವಿಸಿ ಕಾರ್ಡ್‌ ಆರ್ಡರ್‌ ಮಾಡುವುದಕ್ಕೆ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಇದಲ್ಲದೆ ಕೇವಲ ನಿಮ್ಮ ಒಂದು ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಇಡೀ ಕುಟುಂಬಕ್ಕೆ ಆಧಾರ್‌ ಪಿವಿಸಿ ಕಾರ್ಡ್‌ ಆರ್ಡರ್ ಮಾಡಬಹುದಾಗಿದೆ. ಹಾಗಾದ್ರೆ ಒಂದೇ ನಂಬರ್‌ ಮೂಲಕ ನಿಮ್ಮ ಕುಟುಂಬದ ಆಧಾರ್‌ ಪಿವಿಸಿ ಕಾರ್ಡ್‌ ಪಡೆಯವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಧಾರ್ ಪಿವಿಸಿ ಕಾರ್ಡ್‌

ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ ನಿಮ್ಮ ಆಧಾರ್‌ನೊಂದಿಗೆ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಮಾತ್ರವಲ್ಲದೆ OTP ದೃಡೀಕರಣಕ್ಕಾಗಿ ಯಾವುದೇ ಮೊಬೈಲ್ ಸಂಖ್ಯೆಯನ್ನು ಬಳಸಬಹುದು ಎಂದಿದೆ. ಆದ್ದರಿಂದ, ನಿಮ್ಮ ನಂಬರ್‌ ಅನ್ನು ಬಳಸಿಕೊಂಡು ನಿಮ್ಮ ಇಡೀ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಆಧಾರ್ ಪಿವಿಸಿ ಕಾರ್ಡ್‌ಗಳನ್ನು ಆರ್ಡರ್ ಮಾಡಬಹುದು ಎಂದು ಯುಐಡಿಎಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮೆನ್ಶನ್‌ ಮಾಡಿದೆ.

ಪಿವಿಸಿ ಆಧಾರ್ ಕಾರ್ಡ್ ಎಂದರೇನು?

ಪಿವಿಸಿ ಆಧಾರ್ ಕಾರ್ಡ್ ಎಂದರೇನು?

ಪಿವಿಸಿ ಆಧಾರ್ ಕಾರ್ಡ್ ಎಂದರೆ ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಕಾರ್ಡ್ ಎಂದರ್ಥ. ಅಂದರೆ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್‌ನಂತೆಯೇ, ನಿಮ್ಮ ಪರ್ಸ್‌ನಲ್ಲಿ ಪಿವಿಸಿ ಆಧಾರ್ ಕಾರ್ಡ್ ಇರಲಿದೆ. ಇದನ್ನು ನೀವು ಸುಲಭವಾಗಿ ಕ್ಯಾರಿ ಮಾಡಲು ಸಾಧ್ಯವಾಗಲಿದೆ. ಈ ಆಧಾರ್ ಕಾರ್ಡ್ ಡಿಜಿಟಲ್ ಸಹಿ ಮಾಡಿದ ಸುರಕ್ಷಿತ ಕ್ಯೂಆರ್ ಕೋಡ್, ಹೊಲೊಗ್ರಾಮ್, ಘೋಸ್ಟ್ ಇಮೇಜ್, ಗಿಲ್ಲೋಚೆ ಪ್ಯಾಟರ್ನ್ ಇತ್ಯಾದಿ ಸೆಕ್ಯುರಿಟಿ ಫೀಚರ್ಸ್‌ ಅನ್ನು ಒಳಗೊಂಡಿದೆ.

ಆನ್‌ಲೈನ್‌ನಲ್ಲಿ ಆಧಾರ್ PVC ಕಾರ್ಡ್ ಅನ್ನು ಪಡೆಯುವುದು ಹೇಗೆ?

ಆನ್‌ಲೈನ್‌ನಲ್ಲಿ ಆಧಾರ್ PVC ಕಾರ್ಡ್ ಅನ್ನು ಪಡೆಯುವುದು ಹೇಗೆ?

ಇನ್ನು ಆಧಾರ್‌ ಪಿವಿಸಿ ಕಾರ್ಡ್ ಅನ್ನು ಆನ್‌ಲೈನ್ uidai.gov.in ಅಥವಾ ರೆಸಿಡೆಂಟ್.uidai.gov.in ನಲ್ಲಿ ಆಧಾರ್ ಸಂಖ್ಯೆ, ವರ್ಚುವಲ್ ಐಡಿ ಅಥವಾ ದಾಖಲಾತಿ ಐಡಿ ಬಳಸಿ ಆರ್ಡರ್ ಮಾಡಬಹುದು. ನೀವು ಆನ್‌ಲೈನ್‌ನಲ್ಲಿ ಆಧಾರ್ ಪಿವಿಸಿ ಕಾರ್ಡ್ ಅನ್ನು ಪಡೆಯುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ:1 ಮೊದಲಿಗೆ ಅಧಿಕೃತ UIDAI ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ https://uidai.gov.in ಎಂದು ಟೈಪ್ ಮಾಡಿ
ಹಂತ:2 'ಆರ್ಡರ್ ಆಧಾರ್ PVC ಕಾರ್ಡ್' ಸೇವೆಯನ್ನು ಟ್ಯಾಪ್ ಮಾಡಿ.
ಹಂತ:3 ಇದರಲ್ಲಿ ನಿಮ್ಮ 12 ಅಂಕಿಗಳ ಅನನ್ಯ ಆಧಾರ್ ಸಂಖ್ಯೆ (UID) ಅಥವಾ 28 ಅಂಕಿಗಳ ದಾಖಲಾತಿಯನ್ನು ನಮೂದಿಸಿ.
ಹಂತ:4 ನಂತರ ಸೆಕ್ಯುರಿಟಿ ಕೋಡ್ ಅನ್ನು ನಮೂದಿಸಿ ಮತ್ತು ನಂತರ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
ಹಂತ:5 ಇದೀಗ ನೀವು ನೋಂದಾಯಿಸಿದ/ಇಲ್ಲವೇ ಪರ್ಯಾಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಹಂತ:6 ನಂತರ ‘ಸೆಂಡ್ ಒಟಿಪಿ' ಕ್ಲಿಕ್ ಮಾಡಿ.
ಹಂತ:7 ‘ನಿಯಮಗಳು ಮತ್ತು ಷರತ್ತುಗಳು' ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
ಹಂತ:8 OTP ಪರಿಶೀಲನೆಯನ್ನು ಪೂರ್ಣಗೊಳಿಸಲು 'ಸಬ್ಮಿಟ್‌' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:9 ನಂತರ ‘ಪಾವತಿ ಮಾಡು' ಕ್ಲಿಕ್ ಮಾಡಿ. ಕ್ರೆಡಿಟ್/ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು UPI ಯಂತಹ ಪಾವತಿ ಆಯ್ಕೆಗಳೊಂದಿಗೆ ಪಾವತಿ ಗೇಟ್‌ವೇ ಪುಟಕ್ಕೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ.
ಹಂತ:10 ಶುಲ್ಕ ಪಾವತಿ ಯಶಸ್ವಿಯಾದ ನಂತರ, ಡಿಜಿಟಲ್ ಸಹಿಯೊಂದಿಗೆ ರಶೀದಿಯನ್ನು ನೀಡಲಾಗುತ್ತದೆ.

ನಂತರ ಒಂದು ವಾರದ ಅವಧಿಯಲ್ಲಿ ಆಧಾರ್‌ ಪಿವಿಸಿ ಕಾರ್ಡ್ ಅನ್ನು ಸ್ಪೀಡ್ ಪೋಸ್ಟ್ ಮೂಲಕ ನಿವಾಸಿಗಳ ವಿಳಾಸಕ್ಕೆ ತಲುಪಿಸಲಾಗುತ್ತದೆ.

ಡಿಜಿಟಲ್‌ ಆಧಾರ್ ಕಾರ್ಡ್‌ ಡೌನ್‌ಲೋಡ್‌ ಮಾಡುವುದು ಹೇಗೆ?

ಡಿಜಿಟಲ್‌ ಆಧಾರ್ ಕಾರ್ಡ್‌ ಡೌನ್‌ಲೋಡ್‌ ಮಾಡುವುದು ಹೇಗೆ?

* ಮೊದಲಿಗೆ ಆಧಾರ್‌ ವೆಬ್‌ಸೈಟ್‌ uidai.gov.in ಬೇಟಿ ನೀಡಿರಿ.
* ನಂತರ Get Aadhaar' ವಿಭಾಗದ ಅಡಿಯಲ್ಲಿ ಬಳಕೆದಾರರು 'ಆಧಾರ್ ಡೌನ್‌ಲೋಡ್' ಆಯ್ಕೆ ಮಾಡಬೇಕಾಗುತ್ತದೆ.
* ಈಗ ಆಧಾರ್ ಸಂಖ್ಯೆ (ಯುಐಡಿ) ದಾಖಲಾತಿ ಐಡಿ (ಇಐಡಿ) ವರ್ಚುವಲ್ ಐಡಿ (ವಿಐಡಿ) ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿರಿ
* ನಂತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಹಾಗೂ "ಸೆಂಡ್‌ ಒಟಿಪಿ" ಬಟನ್‌ ಕ್ಲಿಕ್ ಮಾಡಬೇಕು.
* ಆಧಾರ್-ನೋಂದಾಯಿತ ಮೊಬೈಲ್‌ಗೆ ಒಟಿಪಿ ಬರಲಿದೆ ಅದನ್ನು ನಿಗಧಿತ ಸ್ಥಳದಲ್ಲಿ ನಮೂದಿಸಬೇಕು.
* ನಂತರ "ಪರಿಶೀಲಿಸಿ ಮತ್ತು ಡೌನ್‌ಲೋಡ್" ಆಯ್ಕೆಯನ್ನು ಕ್ಲಿಕ್ ಮಾಡಿರಿ.
ಈ ಎಲ್ಲಾ ಪ್ರಕ್ರಿಯೆಯನ್ನು ಯಶಸ್ವಿಯಾದ ನಂತರ ನಿಮ್ಮ ಡಿಜಿಟಲ್‌ ಆಧಾರ್ ಕಾರ್ಡ್‌ ಡೌನ್‌ಲೋಡ್‌ ಆಗಲಿದೆ.

ಡಿಜಿಟಲ್‌

ಇನ್ನು ಡಿಜಿಟಲ್‌ ಆಧಾರ್‌ ಕಾರ್ಡ್‌ PDF ಫೈಲ್‌ ಸ್ವರೂಪದಲ್ಲಿರಲಿದೆ. ಇದನ್ನು ಪಾಸ್‌ವರ್ಡ್‌ನಿಂದ ಪ್ರೊಟೆಕ್ಟ್‌ ಮಾಡಲಾಗಿರುತ್ತದೆ. ಇದರ ಪಾಸ್‌ವರ್ಡ್ ಬಳಕೆದಾರರ ಹೆಸರಿನ ಮೊದಲ ನಾಲ್ಕು ಅಕ್ಷರಗಳ ದೊಡ್ಡ ಅಕ್ಷರಗಳ ಸಂಯೋಜನೆಯಾಗಿದ್ದು, ನಂತರ ಬಳಕೆದಾರರ ಜನ್ಮ ವರ್ಷವನ್ನು YYYY ಸ್ವರೂಪದಲ್ಲಿ UIDAI ವೆಬ್‌ಸೈಟ್ ತಿಳಿಸಿದೆ. ಹೀಗೆ ನೀವು ಪಾಸ್‌ವರ್ಡ್‌ ಅನ್ನು ನಮೂದಿಸಿದ ನಂತರ ಡಿಜಿಟಲ್‌ ಆಧಾರ್‌ ಕಾರ್ಡ್‌ ಅನ್ನು ಬಳಸಬಹುದು. ಇದಲ್ಲದೆ ಡಿಜಿಟಲ್‌ ಆಧಾರ್‌ನಲ್ಲಿ ಮಾಸ್ಕ್ಡ ಆಧಾರ್ ನಕಲು ಬಯಸುತ್ತದೆಯೇ ಎಂದು ಬಳಕೆದಾರರು ಆಯ್ಕೆ ಮಾಡಬಹುದು. ಮಾಸ್ಕ್ಡ ಆಧಾರ್ ಆವೃತ್ತಿಯಲ್ಲಿ, ಸಂಪೂರ್ಣ ಯುಐಡಿ ಗೋಚರಿಸುವುದಿಲ್ಲ.

Best Mobiles in India

English summary
The Aadhaar PVC card can be ordered online uidai.gov.in or resident.uidai.gov.in using an Aadhaar number, Virtual ID, or Enrolment ID.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X