Home
ಸುದ್ದಿಜಾಲ

ನಿಮ್ಮ ಫೋನ್‌ನಲ್ಲಿರುವ ಖಾಸಗಿ ಫೋಟೋಗಳು ಯಾರಿಗೂ ಕಾಣದಂತೆ ಮಾಡಲು ಹೀಗೆ ಮಾಡಿ!

ಸಾಮಾನ್ಯವಾಗಿ ಬೇರೆಯವರ ಕೈಗೆ ನಮ್ಮ ಫೋನ್‌ ಕೊಟ್ಟಾಗ ಒಂದು ಆತಂಕ ಇದ್ದೆ ಇರುತ್ತದೆ. ಎಲ್ಲಿ ನಮ್ಮ ಪರ್ಸನಲ್‌ ಫೋಟೋಗಳನ್ನು ನೋಡಿಬಿಡುತ್ತಾರೋ ಅನ್ನೋ ಭಯ ಕಾಡುತ್ತದೆ. ಹೀಗೆ ನಿಮ್ಮ ಪರ್ಸನಲ್‌ ಫೋಟೋಗಳು ನಿಮಗೆ ಬಿಟ್ಟು ಬೇರೆಯವರಿಗೆ ಕಾಣದಂತೆ ಮಾಡಲು ಫೋಟೋಗಳನ್ನು ಹೈಡ್‌ ಮಾಡುವುದು ಸೂಕ್ತವಾಗಿದೆ.

ಹೌದು, ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ಪರ್ಸನಲ್‌ ಫೋಟೋಗಳನ್ನು ಯಾರಿಗೂ ಕಾಣದಂತೆ ಹೈಡ್‌ ಮಾಡಬಹುದಾಗಿದೆ. ಇದರಿಂದ ನಿಮ್ಮ ಪ್ರೈವೆಸಿಗೆ ಆಗುವ ದಕ್ಕೆಯನ್ನು ತಪ್ಪಿಸಬಹುದಾಗಿದೆ. ಹಾಗಾದ್ರೆ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ಪರ್ಸನಲ್‌ ಫೋಟೋಗಳು ಯಾರಿಗೂ ಸಿಗದಂತೆ ಹೈಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಫೋನ್‌ನಲ್ಲಿರುವ ಖಾಸಗಿ ಫೋಟೋಗಳು ಯಾರಿಗೂ ಕಾಣದಂತೆ ಮಾಡಲು ಹೀಗೆ ಮಾಡಿ!

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಪರ್ಸನಲ್‌ ಫೋಟೋಗಳನ್ನು ಹೈಡ್‌ ಮಾಡುವ ಮೂಲಕ ಅದು ಬೇರೆಯವರ ಕಣ್ಣಿಗೆ ಬೀಳದಂತೆ ರಕ್ಷಣೆ ಮಾಡಬಹುದಾಗಿದೆ. ಇದಕ್ಕಾಗಿ ನೀವು ಗೂಗಲ್‌ ಫೋಟೋಸ್‌ ಅಪ್ಲಿಕೇಶನ್‌ ಅನ್ನು ಬಳಸಬೇಕಾಗುತ್ತದೆ. ಇದರಲ್ಲಿ ನಿಮಗೆ ಸ್ಕ್ರೀನ್‌ಲಾಕ್‌ನಿಂದ ಪ್ರೊಟೆಕ್ಟ್‌ ಆಗಿರುವ ಫೋಲ್ಡರ್‌ಗೆ ಪರ್ಸನಲ್‌ ಫೋಟೋಗಳು ಮತ್ತು ವೀಡಿಯೊಗಳನ್ನು ಸ್ಟೋರೇಜ್‌ ಮಾಡಲು ಅವಕಾಶ ಸಿಗಲಿದೆ. ನೀವು ಲಾಕ್‌ ಮಾಡಿದ ಫೋಲ್ಡರ್‌ನಲ್ಲಿರುವ ಫೊಟೋಗ ಮತ್ತು ವೀಡಿಯೊಗಳು ನಿಮ್ಮ ಫೋಟೋ ಆಲ್ಬಮ್‌ನಲ್ಲಿ ಕಾಣುವುದಿಲ್ಲ. ಆದರಿಂದ ನಿಮ್ಮ ಫೋನ್‌ ಅನ್ನು ಬೇರೆಯವರಿಗೆ ನೀಡಿದ ಸಂದರ್ಭದಲ್ಲಿಯೂ ಯಾವುದೇ ಆತಂಕವಿಲ್ಲದೆ ಕಾಲ ಕಳೆಯಬಹುದು.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಲಾಕ್‌ ಮಾಡಿದ ಫೋಲ್ಡರ್‌ ಅನ್ನು ಸೆಟ್‌ ಮಾಡುವುದು ಹೇಗೆ?

* ಮೊದಲಿಗೆ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಫೋಟೋಸ್‌ ಅಪ್ಲಿಕೇಶನ್‌ ತೆರೆಯಿರಿ.
* ನಂತರ ಲೈಬ್ರರಿಗೆ ತೆರೆದು ನಂತರ ಯುಟಿಲಿಟೀಸ್ ಆಯ್ಕೆಗೆ ಹೋಗಿ.
* ಇದರಲ್ಲಿ ನೀವು ಲಾಕ್ಡ್ ಫೋಲ್ಡರ್ ಆಯ್ಕೆ ತೆರೆಯಿರಿ
* ಇದೀಗ ನೀವು ಲಾಕ್‌ ಮಾಡಿದ ಫೋಲ್ಡರ್‌ ಅನ್ನು ಸೆಟ್‌ ಮಾಡಿ ಎಂದು ಹೇಳುವ ಆಯ್ಕೆಯನ್ನು ಟ್ಯಾಪ್‌ ಮಾಡಿ.
* ಇದಾದ ನಂತರ ನಿಮ್ಮ ಡಿವೈಸ್‌ ಅನ್ನು ಅನ್‌ಲಾಕ್‌ ಮಾಡಲು ಆನ್‌ ಸ್ಕ್ರೀನ್‌ನಲ್ಲಿ ಬರುವ ಸೂಚನೆಗಳನ್ನು ಅನುಸರಿಸಬೇಕಾಗುತ್ತದೆ.

ಒಂದು ವೇಳೆ ನಿಮ್ಮ ಫೋಲ್ಡರ್‌ ಖಾಲಿಯಾಗಿದ್ದರೆ ಇದರಲ್ಲಿ ಇನ್ನೂ ಏನೂ ಇಲ್ಲ ಎಂದು ಹೇಳುವ ಸಂದೇಶವನ್ನು ಕೂಡ ಕಾಣಬಹುದಾಗಿದೆ.

ನಿಮ್ಮ ಫೋನ್‌ನಲ್ಲಿರುವ ಖಾಸಗಿ ಫೋಟೋಗಳು ಯಾರಿಗೂ ಕಾಣದಂತೆ ಮಾಡಲು ಹೀಗೆ ಮಾಡಿ!

ಲಾಕ್‌ ಮಾಡಿದ ಪೋಲ್ಡರ್‌ಗೆ ನಿಮ್ಮ ಪರ್ಸನಲ್‌ ಫೋಟೋ ಮತ್ತು ವೀಡಿಯೊವನ್ನು ಸ್ಟೋರೇಜ್‌ ಮಾಡುವುದು ಹೇಗೆ?

* ಮೊದಲಿಗೆ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಫೋಟೋಸ್‌ ಅಪ್ಲಿಕೇಶನ್‌ ತೆರೆಯಿರಿ.
* ಇದೀಗ ನೀವು ಲಾಕ್‌ ಫೊಲ್ಡರ್‌ನಲ್ಲಿ ಸೇರ್ಪಡೆ ಮಾಡಲು ಬಯಸುವ ಫೋಟೋ ಮತ್ತು ವೀಡಿಯೊಗಳನ್ನು ಆಯ್ಕೆ ಮಾಡಿ.
* ನಂತರ ಮೇಲಿನ ಬಲಭಾಗದಲ್ಲಿ ಕಾಣುವ ಮೋರ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
* ಇದೀಗ ಮೂವ್ ಟು ಲಾಕ್ಡ್ ಫೋಲ್ಡರ್ ಆಯ್ಕೆಯನ್ನು ಆರಿಸಿ.
* ನಂತರ ಮೂವ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಮೇಲಿನ ಎಲ್ಲಾ ಸೂಚನೆಗಳನ್ನು ಪಾಲಿಸಿದ ನಂತರ ನಿಮ್ಮ ಪರ್ಸನಲ್‌ ಫೋಟೋಸ್‌ ಮತ್ತು ವೀಡಿಯೊಗಳನ್ನು ಯಶಸ್ವಿಯಾಗಿ ಲಾಕ್‌ ಮಾಡಿದ ಫೋಲ್ಡರ್‌ನಲ್ಲಿ ಸ್ಟೋರೇಜ್‌ ಮಾಡಬಹುದು.

ನಿಮ್ಮ ಫೋನ್‌ನಲ್ಲಿರುವ ಖಾಸಗಿ ಫೋಟೋಗಳು ಯಾರಿಗೂ ಕಾಣದಂತೆ ಮಾಡಲು ಹೀಗೆ ಮಾಡಿ!

ಗೂಗಲ್‌ ಪಿಕ್ಸೆಲ್‌ 7 ಮತ್ತು ಪಿಕ್ಸೆಲ್‌ 7 ಪ್ರೊ ನಲ್ಲಿ ಪರ್ಸನಲ್‌ ಫೋಟೋ ಲಾಕ್‌ ಪೋಲ್ಡರ್‌ನಲ್ಲಿಡುವುದು ಹೇಗೆ?

* ನಿಮ್ಮ ಪಿಕ್ಸೆಲ್ ಸ್ಮಾರ್ಟ್‌ಫೋನ್‌ನಲ್ಲಿ ಕ್ಯಾಮರಾ ಅಪ್ಲಿಕೇಶನ್ ತೆರೆಯಿರಿ.
* ಶಟರ್‌ನ ಬಲಕ್ಕೆ, ನೀವು ತೆಗೆದ ಕೊನೆಯ ಫೋಟೋವನ್ನು ತೋರಿಸುವ ಸರ್ಕಲ್‌ ಮೇಲೆ ಲಾಂಗ್‌ ಪ್ರೆಸ್‌ ಮಾಡಿರಿ.
* ನಂತರ ಕಾಣಿಸುವ ಪಾಪ್‌ಅಪ್‌ನಲ್ಲಿ, ಲಾಕ್ ಮಾಡಿದ ಫೋಲ್ಡರ್ ಆಯ್ಕೆಯನ್ನು ಟ್ಯಾಪ್ ಮಾಡಿ.

Best Mobiles in India

English summary
Here's How to hide your personal photos on your smartphone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+