ನಿಮ್ಮ ಮೊಬೈಲ್ ಕದ್ದ ಕಳ್ಳ ಆ ಫೋನ್ ಅನ್ನು ಬಳಸದಂತೆ ಮಾಡುವುದು ಹೇಗೆ?
ನಿಮ್ಮ ಫೋನ್ ಕಳ್ಳತನವಾಗಿದೆಯಾ? ಕದ್ದ ಮೊಬೈಲ್‌ನಿಂದ ಕಳ್ಳರಿಗೆ ಯಾವುದೇ ರೀತಿಯ ಉಪಯೋಗವಾಗದಂತೆ ಮಾಡಬೇಕು ಅನ್ನೊ ಆಲೋಚನೆ ಬಂದಿದೆಯಾ? ಹಾಗಾದ್ರೆ ಇನ್ಯಾಕೆ ತಡ ನಿಮ್ಮಿಂದ ಮೊಬೈಲ್ ಕದ್ದ ಕಳ್ಳ ಆ ಫೋನ್ ಅನ್ನು ಉಪಯೋಗಿಸದಂತೆ ಮಾಡಲು ಅವಕಾಶವಿದೆ. ಆದರೆ ಇದಕ್ಕಾಗಿ ನೀವು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ಹೌದು, ಕಳ್ಳತನವಾದ ನಿಮ್ಮ ಮೊಬೈಲ್ ಬೇರೆಯವರು ಉಪಯೋಗಿಸದಂತೆ ಮಾಡಲು ಅವಕಾಶವಿದೆ. ಇದಕ್ಕಾಗಿ ಸರ್ಕಾರ ಇತ್ತೀಚಿಗೆ ಪರಿಚಯಿಸಿರುವ ಸಂಚಾರ್ ಸಾಥಿ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ಈ ಸೇವೆಯು ನಿಮ್ಮ ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡಲಿದೆ. ಇದರಿಂದ ನಿಮ್ಮ ಮೊಬೈಲ್ ಕಳ್ಳನ ಹತ್ತಿರ ಇದ್ದಾಗಲೂ ಬಳಕೆಗೆ ಬಾರದೇ ಹೋಗಲಿದೆ. ಹಾಗಾದ್ರೆ ನಿಮ್ಮ ಮೊಬೈಲ್ ಕಳ್ಳತನವಾದಾಗ ಆ ಫೋನ್ ಅನ್ನು ಕಳ್ಳ ಬಳಸದಂತೆ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ದೂರಸಂಪರ್ಕ ಇಲಾಖೆಯು ಇತ್ತೀಚಿಗೆ ಪರಿಚಯಿಸಿದ ಸಂಚಾರ್ ಸಾಥಿ ಸೇವೆಯು ನಿಮ್ಮ ಕಳೆದು ಫೋನ್‌ಗಳನ್ನು ಬ್ಲಾಕ್ ಮಾಡಲಿದೆ. ಈ ಮೊಬೈಲ್‌ಗಳಿಗೆ ಯಾವುದೇ ಹೊಸ ಸಿಮ್ ಹಾಕಿದರೂ ಕೂಡ ಕಾರ್ಯನಿರ್ವಹಿಸುವಿದಲ್ಲ. ಅಲ್ಲದೆ ನಿಮ್ಮ ಮೊಬೈಲ್ ಎಲ್ಲಿದೆ ಅನ್ನೊದನ್ನ ಟ್ರ್ಯಾಕ್ ಮಾಡಲಿದೆ ಎಂದು ಹೇಳಲಾಗಿದೆ. ಈ ಸೇವೆಯ ಮೂಲಕ ನಿಮ್ಮ ಫೋನ್ ಅನ್ನು ನೀವು ಬ್ಲಾಕ್ ಮಾಡಬಹುದು. ಇದರಿಂದ ನಿಮ್ಮ ಫೋನ್ ಕದ್ದ ಕಳ್ಳನಿಗೆ ನಿಮ್ಮ ಮೊಬೈಲ್ ಬಳಸಲು ಸಾದ್ಯವಾಗುವುದಿಲ್ಲ.
ಕಳೆದುಹೋದ ಮೊಬೈಲ್ ಬಳಕೆಯಾಗದಂತೆ ಮಾಡುವುದು ಹೇಗೆ ?
ಮೊಬೈಲ್ ಚಂದಾದಾರರಿಗೆ ಸಹಾಯ ಮಾಡಲು ದೂರಸಂಪರ್ಕ ಇಲಾಖೆ ಸಂಚಾರ್ ಸಾಥಿ ವೆಬ್‌ಸೈಟ್ ಅನ್ನು ಲಾಂಚ್ ಮಾಡಿದೆ. ಅದರಂತೆ CEIR ಮೂಲಕ ನೀವು ನಿಮ್ಮ ಕಳೆದುಹೋದ/ಕಳುವಾದ ಮೊಬೈಲ್ ಆಯ್ಕೆಯನ್ನು ಬ್ಲಾಕ್ ಮಾಡುವ ಆಯ್ಕೆಯನ್ನು ಪೋರ್ಟಲ್ ಒಳಗೊಂಡಿದೆ. ಈ ಸೇವೆಯ ಭಾಗವಾಗಿ, ಬಳಕೆದಾರರು ತಮ್ಮ ಡಿವೈಸ್‌ನ IMEI ಸಂಖ್ಯೆಯನ್ನು ಬಳಸಿಕೊಂಡು ಕಳೆದುಹೋದ ಸ್ಮಾರ್ಟ್‌ಫೋನ್‌ಗಳನ್ನು ರಿಪೋರ್ಟ್ ಮಾಡಬಹುದು ಅಲ್ಲದೆ ಬ್ಲಾಕ್ ಮಾಡಬಹುದಾಗಿದೆ.
ಇನ್ನು ಈ ವೆಬ್‌ಸೈಟ್ ಮೂಲಕ ನಿಮ್ಮ ಮೊಬೈಲ್ ಅನ್ನು ಒಂದು ಬಾರಿ ಬ್ಲಾಕ್ ಮಾಡಿದರೆ ಅದು ನಿಷ್ಪ್ರಯೋಜಕವಾಗುತ್ತದೆ. ಅಲ್ಲದೆ ಭಾರತದಾದ್ಯಂತ ಯಾವುದೇ ಕಂಪೆನಿಯ ಸಿಮ್‌ನಲ್ಲಿಯೂ ಕೂಡ ಕಾರ್ಯನಿರ್ವಹಿಸುವುದಿಲ್ಲ.

ಸಂಚಾರ ಸಾಥಿ ಪೋರ್ಟಲ್ ಮೂಲಕ ಮೊಬೈಲ್ ಬ್ಲಾಕ್ ಮಾಡಲು ಹೀಗೆ ಮಾಡಿ!
* ಮೊದಲಿಗೆ https://sancharsaathi.gov.in/ ಮೂಲಕ ಸಂಚಾರ ಸಾಥಿ ಪೋರ್ಟಲ್‌ಗೆ ಭೇಟಿ ನೀಡಿ
* ವೆಬ್‌ಸೈಟ್‌ನಲ್ಲಿ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ನಾಗರಿಕರ ನಾಗರಿಕ ಕೇಂದ್ರಿತ ಸೇವೆಗಳ ವಿಭಾಗದ ಅಡಿಯಲ್ಲಿ ನಿಮ್ಮ ಕಳೆದುಹೋದ/ಕದ್ದ ಮೊಬೈಲ್ ಅನ್ನು ನಿರ್ಬಂಧಿಸು ಕ್ಲಿಕ್ ಮಾಡಿ
* ನಂತರ ಕೆಂಪು ಬಟನ್‌ಗೆ ಹೋಗಿ ಸ್ಟೋಲನ್/ಲಾಸ್ಟ್ ಮೊಬೈಲ್ ಅನ್ನು ಬ್ಲಾಕ್ ಮಾಡಿ
* ಇದರಲ್ಲಿ ತೆರೆಯುವ ಹೊಸ ಪೇಜ್‌ನಲ್ಲಿ ನಿಮ್ಮ ವಿವರಗಳನ್ನು ಭರ್ತಿ ಮಾಡಿ
* ಅದರಂತೆ ನಿಮ್ಮ ಸಾಧನ ಮಾಹಿತಿ, ಕಳೆದುಹೋದ ಮಾಹಿತಿ ಮತ್ತು ಮೊಬೈಲ್ ಮಾಲೀಕರ ವೈಯಕ್ತಿಕ ಮಾಹಿತಿ ತುಂಬಬೇಕು.
* ಇನ್ನು ನೀವು ಈ ಫಾರ್ಮ್ ಅನ್ನು ಭರ್ತಿ ಮಾಡುವಾಗ ನಿಮ್ಮ ಮೊಬೈಲ್ ಕಳೆದುಹೋದ ಬಗ್ಗೆ ನೀವು ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿ ಪ್ರತಿಯನ್ನು ಲಗತ್ತಿಸಬೇಕು
* ಜೊತೆಗೆ ಫೋನ್‌ನ ಎರಡೂ IMEI ಸಂಖ್ಯೆ ಮತ್ತು ನಿಮ್ಮ ಮತ್ತೊಂದು ಮೊಬೈಲ್ ನಂಬರ್‌ಗೆ ಬರುವ OTP ನಂಬರ್ ಅನ್ನು ಭರ್ತಿ ಮಾಡಿ
* ನೀವು ಈ ಫಾರ್ಮ್ ಅನ್ನು ಪೂರ್ಣಗೊಳಿಸಿದ ನಂತರ, ಘೋಷಣೆಯನ್ನು ಸ್ವೀಕರಿಸಿ ಮತ್ತು ಸಲ್ಲಿಸು ಬಟನ್ ಒತ್ತಿರಿ.

ಕದ್ದ ಮೊಬೈಲ್ ಅನ್ನು ಬೇರೆಯವರು ಪ್ರವೇಶಿದಂತೆ ಹೇಗೆ ತಡೆಯಲಿದೆ?
ಈಗಾಗಲೇ ಹೇಳಿದಂತೆ, ಸಂಚಾರ್ ಸಾರಥಿಯಲ್ಲಿ ಒಮ್ಮೆ ನಿಮ್ಮ ಡಿವೈಸ್ ಅನ್ನು ಬ್ಲಾಕ್ ಮಾಡಿದರೆ ದೇಶಾದ್ಯಂತ ಯಾವುದೇ SIM ಕಾರ್ಡ್‌ನೊಂದಿಗೆ ಕಾರ್ಯನಿರ್ವಹಿಸುವುದಿಲ್ಲ. ಅಂದರೆ, ಕಳ್ಳನು ನಿಮ್ಮ ಸಿಮ್ ಕಾರ್ಡ್ ಅನ್ನು ಎಸೆದು ಹೊಸ ಸಿಮ್ ಅನ್ನು ಬಳಸಿದರೂ ಕೂಡ ಮೊಬೈಲ್ ಕಾರ್ಯನಿರ್ವಹಿಸುವುದಿಲ್ಲ ಎನ್ನಲಾಗಿದೆ. ಒಂದು ವೇಳೆ ನಿಮ್ಮ ಮೊಬೈಲ್ ನಿಮಗೆ ವಾಪಾಸ್ ಸಿಕ್ಕಿದ ನಂತರ ಬ್ಲಾಕ್ ಮಾಡಲಾದ ಫೋನ್ ಅನ್ನು ಅನ್‌ಬ್ಲಾಕ್ ಮಾಡುವುದಕ್ಕೆ ಕೂಡ ಅವಕಾಶವಿದೆ.


Click it and Unblock the Notifications








