ಟ್ರೂ ಕಾಲರ್‌ ಅಪ್ಲಿಕೇಶನ್‌ ಮೂಲಕ ಕಾಲ್‌ ರೆಕಾರ್ಡ್‌ ಮಾಡುವುದು ಹೇಗೆ?

|

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಒಳಗೊಂಡಿರುವ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಟ್ರೂ ಕಾಲರ್‌ ಕೂಡ ಒಂದಾಗಿದೆ. ಹೆಚ್ಚಿನ ಜನರು ಅಪರಿಚಿತ ಕರೆಯ ಸಂಖ್ಯೆ ಯಾರದು ಎಂದು ತಿಳಿಯಲು ಟ್ರೂ ಕಾಲರ್‌ ಅಪ್ಲಿಕೇಶನ್‌ ಬಳಸುತ್ತಾರೆ. ಆದರೆ ಟ್ರೂ ಕಾಲರ್‌ ಅಪ್ಲಿಕೇಶನ್‌ ಕೇವಲ ಫೋನ್‌ ನಂಬರ್‌ ಬಳಸುವವರ ಹೆಸರನ್ನು ಪತ್ತೆ ಹಚ್ಚುವುದು ಮಾತ್ರವಲ್ಲ ಇತರೆ ಕಾರ್ಯಗಳನ್ನು ಸಹ ಮಾಡಲಿದೆ. ಇದರಲ್ಲಿ ಪ್ರಮುಖವಾಗಿ ಟ್ರೂ ಕಾಲರ್‌ ರೆಕಾರ್ಡಿಂಗ್‌ ಫೀಚರ್ಸ್‌ ಅನ್ನು ಕೂಡ ಒಳಗೊಂಡಿದೆ.

ಕಾಲರ್‌

ಹೌದು, ಟ್ರೂ ಕಾಲರ್‌ ಅಪ್ಲಿಕೇಶನ್‌ ಮೂಲಕ ನಿಮ್ಮ ಒಳಬರುವ ಮತ್ತು ಹೊರಹೋಗುವ ಕರೆಗಳನ್ನು ರೆಕಾರ್ಡ್‌ ಮಾಡಲು ಅನುಮತಿಸುವ ಫೀಚರ್ಸ್‌ ಪರಿಚಯಿಸಿದೆ. ಇದಕ್ಕಾಗಿ ಲೋಕಲ್‌ ಕಾಲ್‌ ರೆಕಾರ್ಡಿಂಗ್‌ ಫೀಚರ್ಸ್‌ ಪರಿಚಯಿಸಿದೆ. ಟ್ರೂಕಾಲರ್ ನಿಮ್ಮ ಫೋನ್ ಸ್ಟೋರೇಜ್‌ನಲ್ಲಿ ಕಾಲ್‌ ರೆಕಾರ್ಡಿಂಗ್‌ಗಳನ್ನು ಸಂಗ್ರಹಿಸುತ್ತದೆ. ಅಲ್ಲದೆ ರೆಕಾರ್ಡಿಂಗ್‌ಗಳನ್ನು ಆಫ್‌ಲೈನ್‌ನಲ್ಲಿ ಸಂಗ್ರಹಿಸಿರುವುದರಿಂದ, ನೀವು ಯಾವುದೇ ಸಮಯದಲ್ಲಿ ಅವುಗಳನ್ನು ಆಲಿಸಬಹುದಾಗಿದೆ. ಹಾಗಾದ್ರೆ ಟ್ರೂ ಕಾಲರ್‌ನಲ್ಲಿ ನಿಮ್ಮಕರೆಗಳನ್ನು ರೆಕಾರ್ಡಿಂಗ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕಾಲರ್‌

ಟ್ರೂ ಕಾಲರ್‌ ಬಳಕೆದಾರರ ಕರೆಗಳನ್ನು ರೆಕಾರ್ಡ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಇಂಟರ್‌ನೆಟಟ್‌ ಇಲ್ಲದೆ ಹೋದರೂ ಕೂಡ ನಿಮ್ಮ ಕರೆಗಳನ್ನು ಟ್ರೂ ಕಾಲರ್‌ನಲ್ಲಿ ರೆಕಾರ್ಡ್‌ ಮಾಡಬಹುದಲ್ಲದೆ, ಬೇರೆಯವರೊಂದಿಗೆ ನಿಮ್ಮ ಕಾಲ್‌ ರೆಕಾರ್ಡಿಂಗ್‌ಗಳನ್ನು ಶೇರ್‌ ಮಾಡಬಹುದಾಗಿದೆ. ಟ್ರೂ ಕಾಲರ್‌ ಅಪ್ಲಿಕೇಶನ್‌ ಮೊದಲ ಬಾರಿಗೆ 2018 ರಲ್ಲಿಯೇ ಕಾಲ್‌ ರೆಕಾರ್ಡಿಂಗ್‌ ಫೀಚರ್ಸ್‌ ಅನ್ನು ಪರಿಚಯಿಸಿತ್ತು, ಆದರೆ ಆಗ ಈ ಫೀಚರ್ಸ್‌ ಪಾವತಿಸಿದ ಚಂದಾದಾರರಿಗೆ ಮಾತ್ರ ಲಭ್ಯವಿತ್ತ. ಇದೀಗ ತನ್ನ ಎಲ್ಲಾ ಬಳಕೆದಾರರಿಗೆ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಟ್ರೂಕಾಲರ್‌

ಟ್ರೂಕಾಲರ್‌ನಲ್ಲಿ ಹೊಸ ಕರೆ ರೆಕಾರ್ಡಿಂಗ್ ಫೀಚರ್ಸ್‌ ಇದೀಗ ಆಂಡ್ರಾಯ್ಡ್ 5.1 ಮತ್ತು ಹೊಸ ಆಪರೇಟಿಂಗ್‌ ಸಿಸ್ಟಂಗಳಲ್ಲಿ ಲಭ್ಯವಾಗಲಿದೆ. ಸದ್ಯ ಈ ಫೀಚರ್ಸ್‌ ಇತ್ತಿಚಿನ ಪಬ್ಲಿಕ್‌ ಬೀಟಾ ಆವೃತ್ತಿಯಲ್ಲಿ 100% ಬಳಕೆದಾರರಿಗೆ ಮತ್ತು ಸ್ಥಿರ ಆವೃತ್ತಿಗಳಲ್ಲಿ 5% ಬಳಕೆದಾರರಿಗೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಪ್ರಾರಂಬಿಕವಾಗಿ ಇದು ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ. ಎರಡು ಮೂರು ವಾರಗಳ ನಂತರ ಎಲ್ಲಾ ಬಳಕೆದಾರರಿಗೆ ಲಬ್ಯವಾಗಲಿದೆ ಎನ್ನಲಾಗಿದೆ.

ಟ್ರೂ ಕಾಲರ್‌

ಇನ್ನು ಟ್ರೂ ಕಾಲರ್‌ನಲ್ಲಿ ಕಾಲ್‌ ರೆಕಾರ್ಡಿಂಗ್‌ ಮಾಡುವುದಕ್ಕೆ ಯಾವುದೇ ರೀತಿಯ ಶುಲ್ಕ ಆವತಿಸಬೇಕಾದ ಅಗತ್ಯವಿಲ್ಲ ಎನ್ನಲಾಗಿದೆ. ಹಾಗಂತ ಎಲ್ಲಾ ಕರೆಗಳನ್ನು ನೀವು ರೆಕಾರ್ಡ್‌ ಮಾಡುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಕೆಲವು ರಾಷ್ಟ್ರಗಳಲ್ಲಿ ಕಾಲ್‌ ರೆಕಾರ್ಡ್‌ ಮಾಡುವುದು ನಿಷೇದ ಇರಲಿದೆ. ಆದರಿಂದ ಲೋಕಲ್‌ ಕಾಲ್‌ಗಳಿಗೆ ಮಾತ್ರ ಕಾಲ್‌ ರೆಕಾರ್ಡ್‌ಮಾಡಬಹುದು ಎಂದು ಹೇಳಲಾಗಿದೆ. ಇನ್ನು ನೀವು ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಟ್ರೂಕಾಲರ್‌ ಮೂಲಕ ಕಾಲ್‌ ರೆಕಾರ್ಡಿಂಗ್‌ ಮಾಡಲು ಹಲವು ಹಂತಗಳನ್ನು ಬಳಸಬೇಕು. ಟ್ರೂ ಕಾಲರ್‌ ಮೂಲಕ ಕಾಲ್‌ ರೆಕಾರ್ಡ್‌ ಮಾಡುವುದಕ್ಕೆ ಕೆಳಗಿನ ಹಂತಗಳನ್ನು ಅನುಸರಿಸಿರಿ.

ಟ್ರೂ ಕಾಲರ್‌ ಅಪ್ಲಿಕೇಶನ್‌ ಮೂಲಕ ಕಾಲ್‌ ರೆಕಾರ್ಡ್ ಮಾಡುವುದು ಹೇಗೆ?

ಟ್ರೂ ಕಾಲರ್‌ ಅಪ್ಲಿಕೇಶನ್‌ ಮೂಲಕ ಕಾಲ್‌ ರೆಕಾರ್ಡ್ ಮಾಡುವುದು ಹೇಗೆ?

ಮೊದಲಿಗೆ ನೀವು ನಿಮ್ಮ ಡಿವೈಸ್‌ನಲ್ಲಿ ಸೆಟ್ಟಿಂಗ್ಸ್‌ನಲ್ಲಿ > Truecaller ಕಾಲ್‌ ರೆಕಾರ್ಡಿಂಗ್‌ಗೆ ಪ್ರವೇಶಿಸುವಿಕೆ ಅನುಮತಿಯನ್ನು ನೀಡಿ. ನಂತರ ನೀವು ಕರೆ ಸ್ವೀಕರಿಸಿದಾಗ ಅಥವಾ ಅದರ ಆಡಿಯೊವನ್ನು ರೆಕಾರ್ಡ್ ಮಾಡಲು ಹೊಸ ಕರೆಯನ್ನು ಮಾಡಿದಾಗ ಕಾಲರ್ ಐಡಿ ಪರದೆಯಿಂದ ರೆಕಾರ್ಡ್ ಬಟನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ನೀವು ಕರೆ ರೆಕಾರ್ಡಿಂಗ್ ಫೀಚರ್ಸ್‌ ಅನ್ನು ನಿಷ್ಕ್ರಿಯಗೊಳಿಸಲು ಬಯಸಿದರೆ ಅದಕ್ಕೂ ಕೂಡ ಅವಕಾಶ ನೀಡಲಾಗಿದೆ. ಇದಕ್ಕಾಗಿ ನೀವು ಟ್ರೂಕಾಲರ್ ಅಪ್ಲಿಕೇಶನ್‌ನ ಮೇಲಿನ ಎಡ ಮೂಲೆಯಲ್ಲಿರುವ ಹ್ಯಾಂಬರ್ಗರ್ ಬಟನ್ ಅನ್ನು ಪ್ರೆಸ್‌ ಮಾಡುವ ಮೂಲಕ ಸೈಡ್ ಮೆನುಗೆ ಹೋಗಿ, ಕಾಲ್‌ ರೆಕಾರ್ಡಿಂಗ್‌ಗಳನ್ನು ಟ್ಯಾಪ್ ಮಾಡುವ ಮೂಲಕ 'ಕಾಲ್ ರೆಕಾರ್ಡಿಂಗ್' ಆಯ್ಕೆಯನ್ನು ಆಫ್ ಮಾಡಬೇಕಾಗುತ್ತದೆ.

ಟ್ರೂಕಾಲರ್

ಟ್ರೂಕಾಲರ್ ನಿಮ್ಮ ಫೋನ್ ಸ್ಟೋರೇಜ್‌ನಲ್ಲಿ ರೆಕಾರ್ಡ್ ಮಾಡಿದ ಕಾಲ್‌ ರೆಕಾರ್ಡ್‌ಗಳನ್ನು ಸೇವ್‌ ಮಾಡುತ್ತದೆ. ಆದರಿಂದ ನೀವು ಟ್ರೂ ಕಾಲರ್‌ನಲ್ಲಿ ನಿಮ್ಮ ಕಾಲ್‌ ರೆಕಾರ್ಡಿಂಗ್‌ಗಳನ್ನು ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲದೇ ಕೇಳಬಹುದು. ಟ್ರೂಕಾಲರ್ ಅಪ್ಲಿಕೇಶನ್‌ನಲ್ಲಿ ಕಾಲ್ ರೆಕಾರ್ಡಿಂಗ್ ಸೆಟ್ಟಿಂಗ್‌ಗೆ ಹೋಗುವ ಮೂಲಕ ನೀವು ಹಿಂದೆ ರೆಕಾರ್ಡ್ ಮಾಡಿದ ಕರೆಗಳನ್ನು ತೆರಯಬಹುದಾಗಿದೆ. ಅಲ್ಲದೆ ನೀವು ರೆಕಾರ್ಡ್‌ ಮಾಡಿದ ಕಾಲ್‌ ರೆಕಾರ್ಡಿಂಗ್‌ಗಳನ್ನು ನಿಮ್ಮ ಕಂಟ್ಯಾಕ್ಟ್‌ಗಳೊಂದಿಗೆ ಶೇರ್‌ ಮಾಡಬಹುದಾಗಿದೆ. ನಿಮ್ಮ ಫೋನ್‌ನಲ್ಲಿರುವ ಡೀಫಾಲ್ಟ್ ಫೈಲ್ ಮ್ಯಾನೇಜರ್ ಅಪ್ಲಿಕೇಶನ್ ಮೂಲಕ ಕೂಡ ಕಾಲ್‌ ರೆಕಾರ್ಡಿಂಗ್ ಫೈಲ್‌ಗಳನ್ನು ಹಸ್ತಚಾಲಿತವಾಗಿ ಪ್ರವೇಶಿಸಬಹುದಾಗಿದೆ.

Best Mobiles in India

Read more about:
English summary
Here's how to record calls using Truecaller for your Android smartphone.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X