IRCTC ಖಾತೆಯ ಲಾಗ್‌ಇನ್‌ ಪಾಸ್‌ವರ್ಡ್ ಮರೆತುಹೋದರೆ ಮರಳಿ ಪಡೆಯುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದೇ ಕಾರಣಕ್ಕೆ ಹಲವು ಸೇವೆಗಳನ್ನು ತನ್ನ IRCTC ವೆಬ್‌ಸೈಟ್‌ ಮೂಲಕ ನೀಡುತ್ತಿದೆ. ಇದರಲ್ಲಿ ಪ್ರಯಾಣಿಕರು ರೈಲು ಟಿಕೆಟ್‌ ಅನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡುವುದು ಕೂಡ ಸೇರಿದೆ. ಇನ್ನು IRCTC ಮೂಲಕ ಟಿಕೆಟ್‌ ಬುಕ್‌ ಮಾಡುವುದು, ಕಾಯ್ದಿರಿಸುವುದು ಮಾಡಬಹುದು. ಆದರೆ IRCTC ವೆಬ್‌ಸೈಟ್‌ ಬಳಸುವ ಮುನ್ನ ನಿಮ್ಮದೇ ಆದ ಅಕೌಂಟ್‌ ಅನ್ನು ಕ್ರಿಯೆಟ್‌ ಮಾಡಬೇಕು. ಹಾಗೂ ಲಾಗ್‌ಇನ್‌ ಪಾಸ್‌ವರ್ಡ್‌ ಸೆಟ್‌ ಮಾಡಬೇಕಿರುತ್ತದೆ.

IRCTC

ಹೌದು, ಭಾರತೀಯ ರೈಲ್ವೆ ಇಲಾಖೆಯ IRCTC ವೆಬ್‌ಸೈಟ್‌ನಲ್ಲಿ ಟಿಕೆಟ್‌ ಕಾಯ್ದಿರಿಸಬೇಕಾದರೆ ಲಾಗ್‌ಇನ್‌ ಪಾಸ್‌ವರ್ಡ್‌ ಬಹುಮುಖ್ಯವಾಗಿದೆ. IRCTCಯಲ್ಲಿ ನಿಮ್ಮ ಖಾತೆಗೆ ಲಾಗ್ ಇನ್ ಆಗಲು ನಿಮ್ಮ IRCTC ಖಾತೆಯ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಒಂದು ವೇಳೆ ನೀವು ನಿಮ್ಮ ಲಾಗ್‌ಇನ್‌ ಪಾಸ್‌ವರ್ಡ್‌ ಅನ್ನು ಮರೆತುಹೋದರೆ IRCTC ಖಾತೆಯನ್ನು ಬಳಸುವುದಕ್ಕೆ ಕಷ್ಟವಾಗಲಿದೆ. ಹಾಗಾದ್ರೆ IRCTC ವೆಬ್‌ಸೈಟ್‌ ಲಾಗ್‌ಇನ್‌ ಪಾಸ್‌ವರ್ಡ್‌ ಮರೆತುಹೋದರೆ ನಿಮ್ಮ ಪಾಸ್‌ವರ್ಡ್ ಮರಳಿ ಪಡೆಯಲು ನೀವು ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

IRCTC ಖಾತೆಯ ಲಾಗ್‌ಇನ್‌ ಪಾಸ್‌ವರ್ಡ್ ಮರಳಿ ಪಡೆಯುವುದು ಹೇಗೆ?

IRCTC ಖಾತೆಯ ಲಾಗ್‌ಇನ್‌ ಪಾಸ್‌ವರ್ಡ್ ಮರಳಿ ಪಡೆಯುವುದು ಹೇಗೆ?

ಹಂತ:1 ಮೊದಲಿಗೆ IRCTC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ IRCTC ಖಾತೆ ಲಾಗಿನ್ ಐಡಿಯನ್ನು ನಮೂದಿಸಿ.
ಹಂತ:2 ಇದಾದ ನಂತರ, 'Forgot Password' ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:3 ಇದೀಗ ನೀವು ನಿಮ್ಮ ನೋಂದಾಯಿತ ಇಮೇಲ್ ವಿಳಾಸ, IRCTC ಬಳಕೆದಾರ ID, ಜನ್ಮ ದಿನಾಂಕ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
ಹಂತ:4 ನಂತರ IRCTC ನಿಮ್ಮ ನೋಂದಾಯಿತ ಇಮೇಲ್ ವಿಳಾಸದಲ್ಲಿ ನಿಮಗೆ ವಿವರಗಳನ್ನು ಕಳುಹಿಸುತ್ತದೆ. ಇದರ ಮೂಲಕ ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ನೀವು ಸುಲಭವಾಗಿ ಮರಳಿ ಪಡೆಯಬಹುದಾಗಿದೆ.
ಹಂತ:5 ಒಮ್ಮೆ ನೀವು ನಿಮ್ಮ IRCTC ಖಾತೆಗೆ ಲಾಗ್ ಇನ್ ಮಾಡಿದರೆ, ನಿಮ್ಮ IRCTC ಖಾತೆಯ ಪಾಸ್‌ವರ್ಡ್ ನೆನಪಿನಲ್ಲಿಡುವುದು ಸುಲಭವಿದೆ. ಇದಕ್ಕಾಗಿ IRCTC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಂತರ 'Forgot Password' ಪೇಜ್‌ ತೆರೆಯಿರಿ.
ಹಂತ:6 ಹೊಸದಾಗಿ ರಚಿಸಲಾದ ಪಾಸ್‌ವರ್ಡ್ ಅನ್ನು ನಿಮ್ಮ ಹಳೆಯ ಪಾಸ್‌ವರ್ಡ್‌ನಂತೆ ನಮೂದಿಸಿ. ಇದರಲ್ಲಿ ನಿಮ್ಮ ಆಯ್ಕೆಯ ಹೊಸ ಪಾಸ್‌ವರ್ಡ್ ಅನ್ನು ಸೆಟ್‌ಮಾಡಿ.

IRCTC ವೆಬ್‌ಸೈಟ್‌ನಲ್ಲಿ ಅಕೌಂಟ್‌ ಕ್ರಿಯೆಟ್‌ ಮಾಡುವುದು ಹೇಗೆ?

IRCTC ವೆಬ್‌ಸೈಟ್‌ನಲ್ಲಿ ಅಕೌಂಟ್‌ ಕ್ರಿಯೆಟ್‌ ಮಾಡುವುದು ಹೇಗೆ?

IRCTC ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸುಲಭವಾಗಿ ಅಕೌಂಟ್‌ ಅನ್ನು ಕ್ರಿಯೆಟ್‌ ಮಾಡಬಹುದು. ಇದಕ್ಕಾಗಿ ನೀವು ನಿಮ್ಮ ಸಂಪರ್ಕ ಸಂಖ್ಯೆ, ನಿಮ್ಮ ಇಮೇಲ್ ಐಡಿ, ಪಾಸ್‌ವರ್ಡ್ ಮತ್ತು ಇತರ ವಿಷಯಗಳ ಜೊತೆಗೆ ಸೆಕ್ಯುರಿಟಿ ವಿಚಾರಗಳನ್ನು ಒದಗಿಸಬೇಕು. IRCTC ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಒಮ್ಮೆ ನೀವು ಖಾತೆಯನ್ನು ರಚಿಸಿದ ನಂತರ, ನೀವು ಸುಲಭವಾಗಿ ನಿಮ್ಮ ಖಾತೆಗೆ ಲಾಗ್ ಇನ್ ಮಾಡಬಹುದು ಮತ್ತು ದೇಶದಲ್ಲಿ ರೈಲು ಸಂಚರಿಸುವ ಯಾವುದೇ ಸ್ಥಳಕ್ಕೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ರೈಲು ಟಿಕೆಟ್‌ಗಳನ್ನು IRCTC ಮೂಲಕ ಮೊಬೈಲ್‌ನಲ್ಲಿ ಬುಕ್ ಮಾಡುವುದು ಹೇಗೆ?

ರೈಲು ಟಿಕೆಟ್‌ಗಳನ್ನು IRCTC ಮೂಲಕ ಮೊಬೈಲ್‌ನಲ್ಲಿ ಬುಕ್ ಮಾಡುವುದು ಹೇಗೆ?

ಹಂತ: 1 ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ IRCTC ರೈಲ್‌ ಕನೆಕ್ಟ್‌ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿ. ನೀವೇ ನೋಂದಾಯಿಸಿ. ಹೊಸದಾಗಿ ರಚಿಸಲಾದ ರುಜುವಾತುಗಳನ್ನು ಬಳಸಿಕೊಂಡು ಲಾಗಿನ್ ಮಾಡಿ.
ಹಂತ: 2 ಮುಖಪುಟದಲ್ಲಿ ಪ್ಲಾನ್ ಮೈ ಬುಕಿಂಗ್ ಕ್ಲಿಕ್ ಮಾಡಿ. ನಿರ್ಗಮನ ನಿಲ್ದಾಣ ಮತ್ತು ಹುದ್ದೆ ನಿಲ್ದಾಣದ ಮಾಹಿತಿಯನ್ನು ನಮೂದಿಸಿ, ನೀವು ಪ್ರಯಾಣಿಸಲು ಬಯಸುವ ದಿನಾಂಕ ಮತ್ತು ಸರ್ಚ್‌ ರೈಲ್ಸ್‌ ಮೇಲೆ ಕ್ಲಿಕ್ ಮಾಡಿ.
ಹಂತ: 3 ರೈಲುಗಳ ಪಟ್ಟಿ, ಅವು ನಿರ್ಗಮಿಸುವ ಸಮಯ ಮತ್ತು ಲಭ್ಯವಿರುವ ಮಾಹಿತಯನ್ನು ಉಲ್ಲೇಖಿಸಲಾಗುತ್ತದೆ.
ಹಂತ: 4 ನಂತರ ಸ್ಲೀಪರ್ ವರ್ಗ, ಎ / ಸಿ ಮತ್ತು ಹೆಚ್ಚಿನ ಕ್ಲಾಸ್‌ಗಳ ಆಧಾರದ ಮೇಲೆ ಲಭ್ಯತೆಯನ್ನು ಪ್ರತ್ಯೇಕಿಸಲಾಗುತ್ತದೆ.
ಹಂತ: 5 ನೀವು ಆಯ್ಕೆ ಮಾಡಿದ ಕ್ಲಾಸ್‌ ಮೇಲೆ ಕ್ಲಿಕ್ ಮಾಡುವುದರಿಂದ ಟಿಕೆಟ್‌ನ ಬೆಲೆ ಬಹಿರಂಗವಾಗುತ್ತದೆ. ನೀವು ರೈಲು ಮತ್ತು ವರ್ಗವನ್ನು ನಿರ್ಧರಿಸಿದ ನಂತರ, ಪ್ರಯಾಣಿಕರ ವಿವರಗಳ ಮೇಲೆ ಕ್ಲಿಕ್ ಮಾಡಿ.
ಹಂತ: 6 ನೀವು ಒಂದು ಬುಕಿಂಗ್‌ನಲ್ಲಿ ಗರಿಷ್ಠ ಆರು ವಯಸ್ಕರು ಮತ್ತು ಇಬ್ಬರು ಶಿಶುಗಳನ್ನು ಸೇರಿಸಿ ಬುಕ್ಕಿಂಗ್‌ ಮಾಡಲು ಅವಕಾಶವಿದೆ. ಗಮ್ಯಸ್ಥಾನ ವಿಳಾಸವನ್ನೂ ಐಆರ್‌ಸಿಟಿಸಿ ಕೇಳುತ್ತದೆ. ಚೆಕ್ ಬಾಕ್ಸ್‌ಗಳನ್ನು ಕ್ಲಿಕ್ ಮಾಡುವುದರ ಮೂಲಕ ವಿವರಗಳನ್ನು ಭರ್ತಿ ಮಾಡಿ ಮತ್ತು ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸಿ. ರಿವ್ಯೂ ಜರ್ನಿ ವಿವರಗಳ ಮೇಲೆ ಕ್ಲಿಕ್ ಮಾಡಿ.
ಹಂತ: 7 ರೈಲು ಮಾಹಿತಿ, ವರ್ಗ ಕಾಯ್ದಿರಿಸಿದ ಮತ್ತು ಪ್ರಯಾಣಿಕರ ಮಾಹಿತಿಯ ಮೂಲಕ ಸ್ಕ್ಯಾನ್ ಮಾಡಿ. ನೀವು ಎಲ್ಲಾ ವಿವರಗಳೊಂದಿಗೆ ತೃಪ್ತರಾಗಿದ್ದರೆ, ಪುಟದ ಕೆಳಭಾಗದಲ್ಲಿರುವ ಕ್ಯಾಪ್ಚಾ ಕೋಡ್‌ನಲ್ಲಿ ಸಲ್ಲಿಸಿದ ನಂತರ ಮುಂದುವರೆಯಲು ಕ್ಲಿಕ್ ಮಾಡಿ.
ಹಂತ: 8 ನಿಮ್ಮ ಮೊಬೈಲ್ ವ್ಯಾಲೆಟ್‌ಗಳು, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಿ ಪಾವತಿಸಿ. ಪಾವತಿ ಮುಗಿದ ನಂತರ, ಬಳಕೆದಾರರು ತಮ್ಮ ಟಿಕೆಟ್‌ಗಳನ್ನು ಟ್ರಾನ್ಸಕ್ಷನ್‌ ಹಿಸ್ಟರಿಯಲ್ಲಿ ಕಾಣಬಹುದು.

Best Mobiles in India

English summary
Travelling on trains is always pleasurable. However, you will face a nightmare if you lose your account password.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X