ಐಫೋನ್‌ನಲ್ಲಿ ಡಿಲೀಟ್‌ ಆದ ಸ್ಕ್ರೀನ್‌ಶಾಟ್‌ಗಳನ್ನು ರಿಸ್ಟೋರ್‌ ಮಾಡುವುದು ಹೇಗೆ?

|

ಸ್ಮಾರ್ಟ್‌ಫೋನ್‌ ಬಳಕೆದಾರರು ಸಾಮಾನ್ಯವಾಗಿ ತಮಗೆ ಬೇಕಾದ ಬಹು ಮುಖ್ಯ ಮಾಹಿತಿಯನ್ನು ಪೈಲ್‌ ರೂಪದಲ್ಲಿ ಸ್ಟೋರೇಜ್‌ ಮಾಡಿರುತ್ತಾರೆ. ಇನ್ನು ಕೆಲವು ಸಂದರ್ಭದಲ್ಲಿ ಕೆಲವು ವಿಷಯಗಳನ್ನು ಒಳಗೊಂಡಿರುವ ಮಾಹಿತಿಯನ್ನು ಸ್ಕ್ರೀನ್‌ಶಾಟ್‌ ತೆಗೆದುಕೊಂಡಿರುತ್ತಾರೆ. ಆದರೆ ಕೆಲವು ಸನ್ನಿವೇಶಗಳಲ್ಲಿ ನಿಮ್ಮ ಐಫೋನ್‌ನಲ್ಲಿ ಸ್ಟೋರೇಜ್‌ ಸ್ಪೇಸ್‌ಗಾಗಿ ಅನಗತ್ಯ ಫೈಲ್‌ಗಳನ್ನು ಡಿಲೀಟ್‌ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಮಗೆ ಬೇಕಾದ ಪ್ರಮುಖ ಸ್ಕ್ರೀನ್‌ಶಾಟ್‌ಗಳನ್ನು ಅನಿರೀಕ್ಷಿತವಾಗಿ ಡಿಲೀಟ್‌ ಆಗಿಬಿಡುವ ಸಾಧ್ಯತೆ ಕೂಡ ಉಂಟು. ಹಾಗಂತ ಚಿಂತಿಸುವ ಅಗತ್ಯವಿಲ್ಲ.

ಐಫೋನ್‌

ಹೌದು, ನಿಮ್ಮ ಐಫೋನ್‌ನಲ್ಲಿ ಅನಿರೀಕ್ಷಿತವಾಗಿ ನಿಮ್ಮ ಸ್ಕ್ರೀನ್‌ಶಾಟ್‌ಗಳನ್ನು ಡಿಲೀಟ್‌ ಮಾಡಿದ್ದರೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ನೀವು ಡಿಲೀಟ್‌ ಮಾಡಿರುವ ಸ್ಕ್ರೀನ್‌ಶಾಟ್‌ಗಳನ್ನು ರಿಸ್ಟೋರ್‌ ಮಾಡಲು ಅವಕಾಶವಿದೆ. ಅದರಲ್ಲೂ ಐಫೋನ್ ನಲ್ಲಿ ನೀವು ಸ್ಕ್ರೀನ್‌ಶಾಟ್‌ಗಳನ್ನು ಶಾಶ್ವತವಾಗಿ ಡಿಲೀಟ್‌ ಮಾಡಿದ್ದರೂ 30 ದಿನಗಳ ಒಳಗೆ ಮರಳಿ ಪಡೆಯಲು ಅವಕಾಶವಿದೆ. ಹಾಗಾದ್ರೆ ನಿಮ್ಮ ಐಫೋನ್‌ನಲ್ಲಿ ಡಿಲೀಟ್‌ ಮಾಡಲಾದ ಸ್ಕ್ರೀನ್‌ಶಾಟ್‌ಗಳನ್ನು ಮರಳಿ ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್‌ನಲ್ಲಿ ಡಿಲೀಟ್‌ ಮಾಡಲಾದ ಸ್ಕ್ರೀನ್‌ಶಾಟ್‌ಗಳನ್ನು ರಿಸ್ಟೋರ್‌ ಮಾಡುವುದು ಹೇಗೆ?

ಐಫೋನ್‌ನಲ್ಲಿ ಡಿಲೀಟ್‌ ಮಾಡಲಾದ ಸ್ಕ್ರೀನ್‌ಶಾಟ್‌ಗಳನ್ನು ರಿಸ್ಟೋರ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಐಫೋನ್‌ನಲ್ಲಿ ಫೋಟೋಗಳ ಅಪ್ಲಿಕೇಶನ್ ತೆರೆಯಿರಿ
ಹಂತ:2 ನ್ಯಾವಿಗೇಟ್ ಮಾಡಿ ಮತ್ತು ಇತ್ತೀಚೆಗೆ ಡಿಲೀಟ್‌ ಆದ ಆಯ್ಕೆಯನ್ನು ನೋಡಿ.
ಹಂತ:3 ಕಳೆದ 30 ದಿನಗಳಲ್ಲಿ ಡಿಲೀಟ್‌ ಮಾಡಲಾದ ಎಲ್ಲಾ ಫೋಟೋಗಳನ್ನು ಇಲ್ಲಿ ಕಾಣಬಹುದಾಗಿದೆ.
ಹಂತ:4 ಫೋಟೋವನ್ನು ಸ್ವಯಂಚಾಲಿತವಾಗಿ ತೆಗೆದುಹಾಕುವ ಮೊದಲು ಎಷ್ಟು ದಿನಗಳು ಉಳಿದಿವೆ ಎಂಬುದನ್ನು ಸಹ ಇದು ತೋರಿಸುತ್ತದೆ.
ಹಂತ:5 ಈಗ ನೀವು ಹಿಂಪಡೆಯಲು ಬಯಸುವ ಚಿತ್ರದ ಮೇಲೆ ಟ್ಯಾಪ್ ಮಾಡಿ, ತದನಂತರ 'ರಿಸ್ಟೋರ್‌' ಅನ್ನು ಟ್ಯಾಪ್ ಮಾಡಿ.
ಹೀಗೆ ಮಾಡಿದರೆ ನಿಮ್ಮ ಸ್ಕ್ರೀನ್‌ಶಾಟ್‌ ರಿಸ್ಟೋರ್‌ ಆಗಲಿದೆ.

ನಿಮ್ಮ ಫೋನ್‌ನಲ್ಲಿ ನೀವು ಡಿಲೀಟ್‌ ಮಾಡಿದ ಫೋಟೋಗಳನ್ನು ರಿಸ್ಟೋರ್‌ ಮಾಡುವುದು ಹೇಗೆ?

ನಿಮ್ಮ ಫೋನ್‌ನಲ್ಲಿ ನೀವು ಡಿಲೀಟ್‌ ಮಾಡಿದ ಫೋಟೋಗಳನ್ನು ರಿಸ್ಟೋರ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಫೋಟೋಸ್‌ ಅಪ್ಲಿಕೇಶನ್ ಅನ್ನು ತೆರೆಯಿರಿ.
ಹಂತ:2 ನಂತರ ಆಲ್ಬಮ್‌ಗಳ ಮೇಲೆ ಟ್ಯಾಪ್ ಮಾಡಿ ಮತ್ತು ಮೆನುವಿನ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ.
ಹಂತ:3 ಇದರಲ್ಲಿ ನೀವು ರಿಸೆಂಟ್ಲಿ ಡಿಲಿಟೇಡ್‌ ಮೇಲೆ ಟ್ಯಾಪ್ ಮಾಡಿ.
ಹಂತ:4 ಈಗ ನೀವು ರಿಸ್ಟೋರ್‌ ಮಾಡಲು ಬಯಸುವ ಇಮೇಜ್‌ ಅನ್ನು ನೋಡಿ.
ಹಂತ:5 ಇಮೇಜ್‌‌ ಮೇಲೆ ಟ್ಯಾಪ್‌ ಮಾಡುವ ಮೂಲಕ ರಿಸ್ಟೋರ್‌ ಮಾಡಿ
ಹಂತ:6 ನಂತರ ಪರಿಶೀಲನೆ ಬಟನ್ ಕಾಣಿಸಿಕೊಳ್ಳುತ್ತದೆ, ದೃಢೀಕರಿಸಲು ಫೋಟೋವನ್ನು ರಿಸ್ಟೋರ್‌ ಆಯ್ಕೆಮಾಡಿ.

ಗೂಗಲ್‌

ಇದಲ್ಲದೆ ಗೂಗಲ್‌ ಡ್ರೈವ್‌ ಹಾಗೂ ಗೂಗಲ್‌ ಫೋಟೋಸ್‌ನಲ್ಲಿ ಡಿಲೀಟ್‌ ಮಾಡಿದ ಫೋಟೋ, ಫೈಲ್‌ಗಳನ್ನು ರಿಸ್ಟೋರ್‌ ಮಾಡಲು ಅವಕಾಶವಿದೆ. ನೀವು ಫೈಲ್ ಅನ್ನು ಅಳಿಸಿದಾಗ, ಗೂಗಲ್‌ ಮೆಸೇಜ್‌ಅನ್ನು ಪ್ರದರ್ಶಿಸುತ್ತದೆ. ಅದು ನಿಮ್ಮ ಚಿತ್ರವನ್ನು 30 ದಿನಗಳ ನಂತರ ಶಾಶ್ವತವಾಗಿ ಅಳಿಸಲಾಗುತ್ತದೆ ಎಂದು ಹೇಳುತ್ತದೆ. ಆದ್ದರಿಂದ, 30-ದಿನದ ಸಮಯದ ವಿಂಡೋದ ಮೊದಲು ನಿಮ್ಮ ಟ್ರಾಶ್ ನಿಂದ ನೀವು ಫೈಲ್‌ಗಳನ್ನು ರಿಕವರಿ ಮಾಡಬಹುದು. ಆದರೆ ಗೂಗಲ್‌ ಫೋಟೋಸ್‌ನಲ್ಲಿ ನಿಮಗೆ 60 ದಿನಗಳ ಸಮಯವನ್ನು ನೀಡಲಿದೆ.

ಗೂಗಲ್‌ ಡ್ರೈವ್‌ನಲ್ಲಿ ಡಿಲೀಟ್‌ ಮಾಡಲಾದ ಫೋಟೋಗಳನ್ನು ರಿಕವರಿ ಮಾಡುವುದು ಹೇಗೆ?

ಗೂಗಲ್‌ ಡ್ರೈವ್‌ನಲ್ಲಿ ಡಿಲೀಟ್‌ ಮಾಡಲಾದ ಫೋಟೋಗಳನ್ನು ರಿಕವರಿ ಮಾಡುವುದು ಹೇಗೆ?

ಹಂತ 1: ಗೂಗಲ್‌ ಡ್ರೈವ್ ಅಪ್ಲಿಕೇಶನ್ ತೆರೆಯಿರಿ ಮತ್ತು 'ಟ್ರಾಶ್' ಫೋಲ್ಡರ್‌ಗೆ ನ್ಯಾವಿಗೇಟ್ ಮಾಡಿ
ಹಂತ 2: ಟ್ರಾಶ್ ಫೋಲ್ಡರ್‌ನಲ್ಲಿ, ನಿಮ್ಮ ಇತ್ತೀಚೆಗೆ ಅಳಿಸಲಾದ ಎಲ್ಲಾ ಫೈಲ್‌ಗಳನ್ನು ನೀವು ಕಾಣಬಹುದು. ಇವುಗಳನ್ನು ರಿಸ್ಟೋರ್‌ ಮಾಡಲು, ನೀವು ಕಂಪ್ಯೂಟರ್‌ನಲ್ಲಿರುವ ಫೈಲ್ ಮೇಲೆ ರೈಟ್-ಕ್ಲಿಕ್ ಮಾಡಬೇಕಾಗುತ್ತದೆ.
ಹಂತ 3: ಫೈಲ್ ಅನ್ನು ಮರುಪಡೆಯಲು, ನೀವು ರಿಸ್ಟೋರ್‌ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದು ಫೈಲ್ ಅನ್ನು ಅದರ ಮೂಲ ಸ್ಥಳಕ್ಕೆ ಹಿಂದಿರುಗಿಸುತ್ತದೆ.

ಗೂಗಲ್‌ ಫೋಟೋಸ್‌ನಿಂದ ಅಳಿಸಲಾದ ಫೋಟೋಗಳನ್ನು ರಿಕವರಿ ಮಾಡುವುದು ಹೇಗೆ?

ಗೂಗಲ್‌ ಫೋಟೋಸ್‌ನಿಂದ ಅಳಿಸಲಾದ ಫೋಟೋಗಳನ್ನು ರಿಕವರಿ ಮಾಡುವುದು ಹೇಗೆ?

ನೀವು ಒಮ್ಮೆ ಡಿಲೀಟ್‌ ಮಾಡಿದ ಫೊಟೋಸ್‌ಗಳನ್ನು ರಿಕವರಿ ಮಾಡಲು ಗೂಗಲ್‌ ಫೋಟೋಸ್‌ 60 ದಿನಗಳ ಸಮಯ ವಿಂಡೋವನ್ನು ನೀಡುತ್ತವೆ. ಏಕೆಂದರೆ ಫೋಟೋಗಳು ಹೆಚ್ಚು ಮಹತ್ವದ್ದಾಗಿರುತ್ತವೆ ಮತ್ತು ಮೆಮೊರಿಯಂತೆ ಕಾರ್ಯನಿರ್ವಹಿಸುತ್ತವೆ. ಆದರೆ, ಮರುಪಡೆಯುವಿಕೆ ಆಯ್ಕೆಯು ತಕ್ಷಣವೇ ಗೋಚರಿಸುವುದಿಲ್ಲ. ನೀವು ಫೋಟೋಗಳನ್ನು ಮರುಸ್ಥಾಪಿಸಲು ಬಯಸಿದರೆ, ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ನಿಮ್ಮ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ, ಗೂಗಲ್ ಫೋಟೋಸ್ ಆಪ್ ತೆರೆಯಿರಿ.
ಹಂತ:2 ಪರದೆಯ ಕೆಳಭಾಗದಲ್ಲಿ, 'ಲೈಬ್ರರಿ' ಟ್ಯಾಬ್ ಇದೆ, ಅದರ ಮೇಲೆ ಟ್ಯಾಪ್ ಮಾಡಿ.
ಹಂತ:3 ನಂತರ ನೀವು ಮೇಲ್ಭಾಗದಲ್ಲಿ 'ಟ್ರಾಶ್' ಫೋಲ್ಡರ್ ಅನ್ನು ಕಾಣಬಹುದು. ನಿಮ್ಮ ಎಲ್ಲಾ ಅಳಿಸಿದ ಫೋಟೋಗಳನ್ನು ಪರೀಕ್ಷಿಸಲು ಅದರ ಮೇಲೆ ಟ್ಯಾಪ್ ಮಾಡಿ.
ಹಂತ:4 ನೀವು ರಿಸ್ಟೋರ್‌ ಮಾಡಲು ಬಯಸಿದರೆ, ಫೋಟೋ ಅಥವಾ ವೀಡಿಯೊವನ್ನು ಟಚ್‌ ಮಾಡಿ ಮತ್ತು ಪ್ರೆಸ್‌ ಮಾಡಿ. ನಂತರ, ರಿಸ್ಟೋರ್‌ ಟ್ಯಾಪ್ ಮಾಡಿ. ಫೋಟೋ ಅಥವಾ ವಿಡಿಯೋ ಮರಳಿ ಬರುತ್ತದೆ.

Best Mobiles in India

English summary
In case you are not aware of how to recover deleted screenshots on your iPhone, here's are four simple steps that you should follow.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X